ಪಕ್ಷದ ಸಿದ್ದಾಂತ ಒಪ್ಪಿ ಯಾರು ಬೇಕಾದರೂ ಬರಲಿ; ರಾಜು ಕಾಗೆಯನ್ನು ಕಾಂಗ್ರೆಸ್​ಗೆ ಪರೋಕ್ಷವಾಗಿ ಸ್ವಾಗತಿಸಿದ ಸಿದ್ದರಾಮಯ್ಯ

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಪೈಕಿ 8 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿ ಘೋಷಣೆ ಮಾಡಿದೆ. ಉಳಿದ 7 ಕ್ಷೇತ್ರಗಳಿಗೆ ಯಾರ ಹೆಸರನ್ನು ಸೂಚಿಸಲಾಗುತ್ತದೆ ಎನ್ನುವ ಕುರಿತು ಸಿದ್ದರಾಮಯ್ಯ ಮಾತನಾಡಿದ್ದಾರೆ.

Rajesh Duggumane | news18-kannada
Updated:November 10, 2019, 4:08 PM IST
ಪಕ್ಷದ ಸಿದ್ದಾಂತ ಒಪ್ಪಿ ಯಾರು ಬೇಕಾದರೂ ಬರಲಿ; ರಾಜು ಕಾಗೆಯನ್ನು ಕಾಂಗ್ರೆಸ್​ಗೆ ಪರೋಕ್ಷವಾಗಿ ಸ್ವಾಗತಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ-ರಾಜುಕಾಗೆ
  • Share this:
ಬೆಂಗಳೂರು (ನ.10): ಕಾಗವಾಡ ವಿಧಾನಸಭಾ ಚುನಾವಣೆಯಲ್ಲಿ ಶ್ರೀಮಂತ್​ ಪಾಟೀಲ್​ ವಿರುದ್ಧ ಬಿಜೆಪಿ ನಾಯಕ ರಾಜು ಕಾಗೆ ಸೋತಿದ್ದರು. ಕಾಂಗ್ರೆಸ್​ನಿಂದ ಅನರ್ಹಗೊಂಡಿರುವ ಶ್ರೀಮಂತ್​ ಪಾಟೀಲ್​ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ರಾಜು ಕಾಗೆ ಕಾಂಗ್ರೆಸ್​ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ, ಪಕ್ಷದ ಸಿದ್ದಾಂತ ಒಪ್ಪಿ ಯಾರು ಬೇಕಾದರೂ ಬರಲಿ ಎಂದಿದ್ದಾರೆ.

ಕಾಂಗ್ರೆಸ್​ ಟ್ರಬಲ್​ ಶೂಟರ್​ ಡಿಕೆ ಶಿವಕುಮಾರ್ ಮತ್ತು ರಾಜು ಕಾಗೆ ಭೇಟಿ ಮಾಡಿದ್ದರು. ಕಾಂಗ್ರೆಸ್ ವೀಕ್ಷಕರ ಸಭೆ ಮುಕ್ತಾಯಗೊಂಡ ನಂತರ ಈ ಬಗ್ಗೆ ಅವರಲ್ಲಿ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, “ಪಕ್ಷದ ಸಿದ್ದಾಂತ ಒಪ್ಪಿ ಯಾರು ಬೇಕಾದರೂ ಬರಲಿ. ಮೊದಲು ಪಕ್ಷದ ತತ್ವ-ಸಿದ್ದಾಂತ ಒಪ್ಪಬೇಕು. ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ತೆಗದುಕೊಳ್ಳಲಿದೆ,” ಎಂದರು. ಈ ಮೂಲಕ ಕಾಂಗ್ರೆಸ್​ ಸೇರಲು ರಾಜು ಕಾಗೆಗೆ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಪೈಕಿ 8 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿ ಘೋಷಣೆ ಮಾಡಿದೆ. ಉಳಿದ 7 ಕ್ಷೇತ್ರಗಳಿಗೆ ಯಾರ ಹೆಸರನ್ನು ಸೂಚಿಸಲಾಗುತ್ತದೆ ಎನ್ನುವ ಕುರಿತು ಸಿದ್ದರಾಮಯ್ಯ ಮಾತನಾಡಿದ್ದಾರೆ. “8 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದ 7 ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಇವತ್ತು ಚರ್ಚೆಯಾಗಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನ ಅಂತಿಮ ಮಾಡುತ್ತೇವೆ,” ಎಂದರು.

ಇದನ್ನೂ ಓದಿ: ಅತೃಪ್ತರಿಗೆ ಟಿಕೆಟ್ ಹೇಳಿಕೆಯಿಂದ ಬೇಸರಗೊಂಡು ಬಿಜೆಪಿಗೆ ರಾಜೀನಾಮೆ ನೀಡಲು ಮಾಜಿ ಶಾಸಕ ರಾಜು ಕಾಗೆ ನಿರ್ಧಾರ?

ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಸಿದ್ದು ಕಿಡಿ:

ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. “ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ. ಖಾಸಗಿಯಾಗಿ ಜಯಂತಿ ಆಚರಣೆ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಆಯಾ ಜಿಲ್ಲೆಗಳಲ್ಲಿ ಜಯಂತಿ ಆಚರಣೆ ಮಾಡಲಾಗುತ್ತೆ. ಪಕ್ಷದ ವತಿಯಿಂದ ಆಚರಣೆ ಮಾಡುವ ಬಗ್ಗೆ ನಮ್ಮ ಅಧ್ಯಕ್ಷರು ಹೇಳುತ್ತಾರೆ,” ಎಂದು ಸಿದ್ದರಾಮಯ್ಯ ಹೇಳಿದರು.

ಗುಂಡೂರಾವ್​ ಏನಂದ್ರು?:ಕಾಂಗ್ರೆಸ್​ ವೀಕ್ಷಕರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಪಾಲ್ಗೊಂಡಿದ್ದರು. ಸಭೆ ನಂತರ ಮಾತನಾಡಿದ ಅವರು, “ಅಭ್ಯರ್ಥಿ ಘೋಷಣೆ ಬಾಕಿ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾಳೆ ಬೆಳಗ್ಗೆ ಹಿರಿಯ ನಾಯಕರ ಸಭೆ ಕೂಡಾ ನಡೆಯಲಿದೆ. ಎಲ್ಲಾ ನಾಯಕರು ಕೂಡಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 13ನೇ ತಾರೀಕು ಬೆಳಗ್ಗೆ ಅನರ್ಹ ಶಾಸಕರ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ. ಇದೇ ದಿನ ಸಂಜೆ ನಾವು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲು ಉದ್ದೇಶಿಸಿದ್ದೇವೆ,” ಎಂದರು.

ಇದನ್ನೂ ಓದಿ: ಕಾಗವಾಡ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಡಿ, ಇಲ್ಲಾ ಕಾಂಗ್ರೆಸ್​ಗೆ ಹೋಗ್ತೀನಿ; ಬಿಜೆಪಿ ನಾಯಕ ರಾಜು ಕಾಗೆ

First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading