ರಾಜನಾಥ್ ಸಿಂಗ್ ಕರೆ ಮಾಡಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಬೆಂಬಲ ಕೇಳಿದ್ದರು: ಉರಿಲಿಂಗಿಪೆದ್ದಿ ಮಠದ ಶ್ರೀ

ಆರೆಸ್ಸೆಸ್​ಗೆ ನೂರು ವರ್ಷ ತುಂಬುವುದರೊಳಗೆ ಭಾರತ ಹಿಂದೂ ರಾಷ್ಟ್ರ ಆಗಬೇಕು ಎಂದು ಗೋಳ್ವಾಳ್ಕರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇನ್ನು 3 ವರ್ಷ ಕಳೆದರೆ ನೂರು ವರ್ಷ ತುಂಬುವ ಹಿನ್ನೆಲೆಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದ್ಧಾರೆ.

news18
Updated:February 3, 2020, 5:50 PM IST
ರಾಜನಾಥ್ ಸಿಂಗ್ ಕರೆ ಮಾಡಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಬೆಂಬಲ ಕೇಳಿದ್ದರು: ಉರಿಲಿಂಗಿಪೆದ್ದಿ ಮಠದ ಶ್ರೀ
ಉರಿಲಿಂಗಿಪೆದ್ದಿ ಮಠದ ಶ್ರೀಗಳು
  • News18
  • Last Updated: February 3, 2020, 5:50 PM IST
  • Share this:
ಚಾಮರಾಜ‌ಗರ: ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರ ಮಾಡುವುದೇ ಸಿಎಎ, ಎನ್​ಪಿಆರ್ ಹಾಗು ಎನ್​ಆರ್​ಸಿ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ನನಗೆ ಕರೆ ಮಾಡಿದ್ದರು ಎಂದು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಹುಜನ ವಾಲೆಂಟಿಯರ್ ಫೋರ್ಸ್ ನಿನ್ನೆ ಭಾನುವಾರ ಇಲ್ಲಿ ಆಯೋಜಿಸಿದ್ದ “ಪೌರತ್ವ ಪರೀಕ್ಷೆ: ಏನಿದರ ಮರ್ಮ?” ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕರೆ ಮಾಡಿದ್ದರು. ಮುಸ್ಲಿಮರಿಗೆ ಬೇರೆ ಬೇರೆ ದೇಶಗಳಿವೆ, ಕ್ರೈಸ್ತರಿಗೂ ಹಲವಾರು ದೇಶಗಳಿವೆ. ಹಿಂದೂಗಳಿಗೂ ಒಂದು ರಾಷ್ಟ್ರ ಬೇಡವೇ ಎಂದು ಕೇಳಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: ಅನಂತ​ಕುಮಾರ್ ಹೆಗಡೆಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ; ಸಿದ್ದರಾಮಯ್ಯ ಆಕ್ರೋಶ

ನೀವ್ಯಾಕೆ ನಮ್ಮ ವಿರುದ್ದ ಹೋರಾಟ ಮಾಡುತ್ತಿದ್ದೀರಿ? ನಮ್ಮ ಜೊತೆ ಕೈಜೋಡಿಸಿ ಎಂದು ರಾಜನಾಥ್ ಸಿಂಗ್ ನಮ್ಮನ್ನು ಕೇಳಿಕೊಂಡರು. ಆದರೆ, ಮೊದಲು ಹಿಂದುಗಳು ಅಂದರೆ ಯಾರು ಎಂದು ಪಟ್ಟಿ ಮಾಡಿ ಎಂದವರನ್ನು ಕೇಳಿದ್ಧಾಗಿ ಸ್ವಾಮೀಜಿ ಹೇಳಿದರು.

ಈ ದೇಶದಲ್ಲಿ ದಲಿತರು ಸತ್ತರೆ ಹೂಳಲು ಜಾಗವಿಲ್ಲ. ಹಾವು ಸತ್ತರೆ ಹೂಳಲು ಜಾಗ ಕೊಡುತ್ತಾರೆ. ಕೋತಿ ಸತ್ತರೆ ದೇವಸ್ಥಾನವನ್ನೇ ಕಟ್ಟಿಸುತ್ತಾರೆ. ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ 40 ಲಕ್ಷ ರೂಪಾಯಿ ಖರ್ಚು ಮಾಡಿ ಸತ್ತ ಕೋತಿಗೆ ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಆದರೆ ದಲಿತರಿಗೆ ಮಾತ್ರ ಈ ದೇಶದಲ್ಲಿ ಜಾಗವೇ ಇಲ್ಲ ಎಂದು ಉರಿಲಿಂಗಿಪೆದ್ದಿ ಮಠದ ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: Coronavirus: ಹುಬ್ಬಳ್ಳಿಯಲ್ಲಿ ಕೊರೊನಾ ವೈರಸ್‌ ಭೀತಿ- ಅವಳಿ ನಗರದ ಜನರಲ್ಲಿ ಹೆಚ್ಚಿದ ಆತಂಕ

ಆರ್.ಎಸ್.ಎಸ್.ನ ಸಾರ್ವಕರ್ ಹಾಗು ಗೋಳ್ವಾಳ್ಕರ್ ಅವರ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿತ್ತು. ಆರ್.ಎಸ್.ಎಸ್.ಗೆ ನೂರು ವರ್ಷ ತುಂಬುವ ಸಂದರ್ಭದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇನ್ನು, ಮೂರು ವರ್ಷ ಕಳೆದರೆ ಆರ್.ಎಸ್.ಎಸ್. ಗೆ ನೂರು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಅವರ ಉದ್ದೇಶವನ್ನು ಬಿಜೆಪಿ ಸಾಕಾರಗೊಳಿಸಲು ಹೊರಟಿದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದರು.ಈಗಾಗಲೇ ಜಾರಿಯಲ್ಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕವಾಗಿ ಶೋಷಣೆಗೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿಯ ಅಲ್ಪಸಂಖ್ಯಾತರಿಗೆ ಪೌರತ್ವದ ಅವಕಾಶ ಒದಗಿಸುತ್ತದೆ. ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಹೊರತುಪಡಿಸಿರುವುದು ಭಾರತೀಯ ಸಂವಿಧಾನಕ್ಕೆ ಮಾಡಿದ ಅಪಚಾರ ಎಂಬುದು ವಿಪಕ್ಷಗಳ ಆಕ್ಷೇಪವಾಗಿದೆ. ಹಾಗೆಯೇ, ಸಿಎಎ ಜೊತೆಗೆ ಎನ್​ಆರ್​ಸಿ ಮೂಲಕ ಭಾರತೀಯ ಮುಸ್ಲಿಮರನ್ನು ಹತ್ತಿಕ್ಕುವ ಹುನ್ನಾರ ನಡೆದಿದೆ ಎಂಬುದು ವಿಪಕ್ಷಗಳ ಶಂಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮುಸ್ಲಿಮರ ಜೊತೆ ವಿಪಕ್ಷಗಳೂ ಕೂಡ ಸೇರಿಕೊಂಡು ಸಿಎಎ-ಎನ್​ಆರ್​ಸಿ ವಿರುದ್ಧ ನಿರಂತರ ಪ್ರತಿಭಟನೆಗಳ್ನು ನಡೆಸುತ್ತಿದ್ದಾರೆ.

(ವರದಿ: ನಂದೀಶ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 3, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading