Belagavi: ‘ರಾಜಕುಮಾರ ಟಾಕಳೆ ನನ್ನ ಗಂಡ’, ಆಕೆಯಿಂದಲೇ ಅತ್ಯಾಚಾರದ ಕೇಸ್ ಹಾಕೋ ಬೆದರಿಕೆ; ಅಧಿಕಾರಿ ದೂರು

ರಾಜಕುಮಾರ ಟಾಕಳೆ ನನ್ನ ಗಂಡ. ಇಬ್ಬರೂ ಮದುವೆ ಆಗಿದ್ದೇವೆ. ರಾಜಕುಮಾರ ಟಾಕಳೆಯಿಂದ ನನಗೆ ಅನ್ಯಾಯವಾಗಿದೆ. ನನಗೆ ಮೋಸ ಮಾಡಿ ಈಗ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಾ ಆರೋಪಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ

ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ

  • Share this:
ಬೆಳಗಾವಿ (ಜು.19): ಕಳೆದ ಒಂದು ವಾರದಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತೆ ನವ್ಯ ಶ್ರೀ ಆರ್ (Social activist Navya Shri R) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿವೆ. ಈ ವಿಡಿಯೋಗೂ ಬೆಳಗಾವಿಗೂ ಲಿಂಕ್ ಇದೆ ಎಂಬ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆದಿತ್ತು. ಇದೆಲ್ಲದರ ಮಧ್ಯೆ ವಿಡಿಯೋದಲ್ಲಿ ಇದ್ದ ನವ್ಯಾ ಶ್ರೀ ವಿರುದ್ಧ ಪ್ರಕರಣ ದಾಖಲಾಗಿದೆ. ದೂರು (Complaint) ಕೊಟ್ಟವರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ (Rajkumar Takale). ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ (APMC Station) ಪ್ರಕರಣ ದಾಖಲಾಗಿದ್ದು ಹಲವು ಸಂಗತಿಗಳನ್ನು ಟಾಕಳೆ ಉಲ್ಲೇಖಿಸಿದ್ದಾರೆ.

ತೋಟಗಾರಿಕೆ ಇಲಾಖೆ ಅಧಿಕಾರಿ ದೂರು

ಚನ್ನಪಟ್ಟಣದ ಯುವತಿಯೊಬ್ಬರು ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ. 50 ಲಕ್ಷ ನೀಡದಿದ್ದರೆ ಅತ್ಯಾಚಾರ, ಸುಲಿಗೆ ಮಾಡಿದ  ಪ್ರಕರಣ ದಾಖಲಿಸುವುದಾಗಿ ಪದೇ ಪದೇ ಪೀಡಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು. ನವ್ಯಾ ಶ್ರೀ  ಹಾಗೂ ಅವರ ಸ್ನೇಹಿತ ತಿಲಕರಾಜ್ ಡಿ.ಟಿ. ಎನ್ನುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನವ್ಯಶ್ರೀ ಅವರದ್ದು ಎನ್ನಲಾದ ಅತ್ಯಂತ ಖಾಸಗಿಯ ಕೆಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸುಳ್ಳು ಅತ್ಯಾಚಾರ ಕೇಸ್​ ಬೆದರಿಕೆ

ಇದನ್ನು ಅಸ್ತ್ರವಾಗಿ ಇಟ್ಟುಕೊಂಡು ನನ್ನ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಡಿಸೆಂಬರ್ 2020ರಲ್ಲಿ ನಾನು ಬೆಂಗಳೂರಲ್ಲಿ ಕೆಲಸ ಮಾಡುವಾಗ ನವ್ಯಶ್ರೀ ಪರಿಚಯವಾಯಿತು. ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡು ಸ್ನೇಹ  ಬೆಳೆಸಿದ್ದರು.

ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ನಾವು 'ಸೇರಿದ್ದು' ನಿಜ

ಚನ್ನಪಟ್ಟಣದಲ್ಲಿ ನವ್ಯ ಫೌಂಡೇಷನ್ ಹೆಸರಿನ ಎನ್‌ಜಿಒ ನಡೆಸುವುದಾಗಿ ತಿಳಿಸಿದ್ದರು. ನನಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂದು ಗೊತ್ತಿದ್ದರೂ ನನ್ನೊಂದಿಗೆ 'ಸಲುಗೆ'  ಬೆಳೆಸಿಕೊಂಡರು ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ಒಂದೂವರೆ ವರ್ಷದ ಪರಿಚಯದಲ್ಲಿ ಬೆಳಗಾವಿಯೂ ಸೇರಿದಂತೆ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ನಾವು 'ಸೇರಿದ್ದು' ನಿಜ ಎಂದೂ ರಾಜಕುಮಾರ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Husband Torture: ಪ್ರೀತಿಸಿ ಮದುವೆಯಾಗಿ ಅಶ್ಲೀಲ ಚಿತ್ರ ತೋರಿಸಿ ಟಾರ್ಚರ್; 5 ಬಾರಿ ಗರ್ಭಪಾತ ಮಾಡಿಸಿ ಹಿಂಸೆ ಕೊಟ್ಟ ಪಾಪಿ!

2021ರ ಡಿಸೆಂಬರ್ 24ರಂದು ನವ್ಯಶ್ರೀ ನನಗೆ ಕರೆ ಮಾಡಿ ಬೆದರಿಕೆ ಹಾಕಿದರು. ನವ್ಯಶ್ರೀ ಹಾಗೂ ನಾನು ಆತ್ಮೀಯವಾಗಿ ಇರುವ ವಿಡಿಯೊ ಇಟ್ಟುಕೊಂಡು 'ಬ್ಲ್ಯಾಕ್ ಮೇಲ್' ಮಾಡಿದರು. ಅವರ ಜತೆಗೆ ತಿಲಕರಾಜ ಕೂಡ ಬೆದರಿಕೆ ಒಡ್ಡಿದರು. 50 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ನನ್ನ ಪತ್ನಿ, ಸಂಬಂಧಿಕರಿಗೆ ಖಾಸಗಿತನದ ವಿಡಿಯೊ ತೋರಿಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಮಾಡುವುದಾಗಿ  ಹೆದರಿಸಿದ್ದಾರೆ ಎಂದೂ ತಿಳಿಸಿದ್ದಾರೆ.

Rajkumar takale is my husband social worker navya sree pvn
ಸಾಮಾಜಿಕ ಕಾರ್ಯಕರ್ತೆ ನವ್ಯಾ


ದೂರು ಕೊಡ್ತಿದ್ದಂತೆ ಬೆಳಗಾವಿಯಲ್ಲಿ ಯುವತಿ ಪ್ರತ್ಯಕ್ಷ

ರಾಜಕುಮಾರ ದೂರು ದಾಖಲಿಸುತ್ತಿದ್ದಂತೆ ಯುವತಿ  ಬೆಳಗಾವಿಗೆ ಧಾವಿಸಿದ್ದಾಳೆ. ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ರಾಜಕುಮಾರ ಟಾಕಳೆ ನನ್ನ ಗಂಡ. ನಾನು 15 ದಿನಗಳಿಂದ ವಿದೇಶ ಪ್ರವಾಸದಲ್ಲಿದ್ದೆ. ಮಂಗಳವಾರ ಬೆಳಿಗ್ಗೆ ಮರಳಿದ್ದೇನೆ. ನಾನು ವಿದೇಶಿ ಪ್ರವಾಸದಲ್ಲಿದ್ದಾಗ ಅಶ್ಲೀಲ ವಿಡಿಯೊ ಹರಿಬಿಡಲಾಗಿದೆ. ರಾಜಕುಮಾರ ಟಾಕಳೆ ಜೊತೆಗಿನ ನನ್ನ ಅಶ್ಲೀಲ ವಿಡಿಯೊ ವೈರಲ್ ಮಾಡಲಾಗಿದೆ.

ರಾಜಕುಮಾರ ಟಾಕಳೆ ನನ್ನ ಗಂಡ

ರಾಜಕುಮಾರ ಟಾಕಳೆ ನನ್ನ ಗಂಡ. ಇಬ್ಬರೂ ಮದುವೆ ಆಗಿದ್ದೇವೆ. ರಾಜಕುಮಾರ ಟಾಕಳೆಯಿಂದ ನನಗೆ ಅನ್ಯಾಯವಾಗಿದೆ. ನನಗೆ ಮೋಸ ಮಾಡಿ ಈಗ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ.  ಅವರು ನನ್ನ ಗಂಡ. ಮೋಸ ಮಾಡಿದ ಬಗ್ಗೆ ಬೆಳಗಾವಿ ನಗರ ಪೊಲೀಸರ್ ಕಮಿಷನರ್ ಅವರಿಗೆ ದೂರು ನೀಡಲು ಬಂದಿದ್ದೇನೆ. ಬಳಿಕ ಎಲ್ಲ ಸಂಗತಿಗಳನ್ನು ಮಾಧ್ಯಮಗಳ ಮುಂದೆಯೂ ಇಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Student Arrest: ಎಕ್ಸಾಂ ಮುಂದೂಡಲು ಬಾಂಬ್​ ಬೆದರಿಕೆ; ಅದೇ ಶಾಲೆಯ ಬಾಲಕ ಪೊಲೀಸ್​ ವಶಕ್ಕೆ

ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುವುದಾಗಿ ಹೇಳಿ ಹೋಟೆಲ್‌‌ನಿಂದ ನವ್ಯಶ್ರೀ ತೆರಳಿದರು. ಬಳಿಕ ಕಮೀಷನರ್ ಕಚೇರಿಗೆ ಭೇಟಿ ನೀಡದೇ  ಅಜ್ಞಾತ ಸ್ಥಳಕ್ಕೆ ಹೋದರು. ಮಧ್ಯಾಹ್ನದವರೆಗೂ ಕಮಿಷನರ್ ಕಚೇರಿಯಲ್ಲಿ ಅವರ ಯಾವುದೇ ದೂರು ದಾಖಲಾಗಿಲ್ಲ. ನವ್ಯಶ್ರೀ ನಡೆಯೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
Published by:Pavana HS
First published: