Puneeth Rajkumar: ಅಪ್ಪು ಸಮಾಧಿ ಸ್ಥಳ ಅಭಿವೃದ್ಧಿಗೆ ಚಿಂತನೆ; ಸಿಎಂ ಭೇಟಿಯಾಗಿ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘಣ್ಣ ಚರ್ಚೆ

ರಾಘವೇಂದ್ರ ರಾಜ್​ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್ ಹಾಗೂ ಯುವ ರಾಜಕುಮಾರ್ ಅವರು ರೇಸ್ ಕೋರ್ಸ್​ ನಿವಾಸದಲ್ಲಿರೋ ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಭೇಟಿ ನೀಡಿದ್ದರು. ಅಪ್ಪು ಸಮಾಧಿ ಸ್ಥಳ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತುಕತೆ ನಡೆಸಿದ್ದಾರೆ. 

ಸಿಎಂ ಭೇಟಿಯಾದ ರಾಘಣ್ಣ, ಅಶ್ವಿನಿ ಪುನೀತ್​ ರಾಜ್​ ಕುಮಾರ್​

ಸಿಎಂ ಭೇಟಿಯಾದ ರಾಘಣ್ಣ, ಅಶ್ವಿನಿ ಪುನೀತ್​ ರಾಜ್​ ಕುಮಾರ್​

  • Share this:
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಮ್ಮನ್ನು ಅಗಲಿ 10 ತಿಂಗಳು ಕಳೆದಿದೆ. ಆದ್ರೂ ಅವರ ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸಿನಲ್ಲಿದ್ದಾರೆ. ಇನ್ನು ಪುನೀತ್ ​ಅವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ (Basavara Bommai) ಅವರು ಕರ್ನಾಟಕ ರತ್ನ ಘೋಷಣೆ ಮಾಡಿದ್ರು. ರಾಜ್ ಕುಟುಂಬದವರ ಜೊತೆಯೂ ಸಿಎಂ ಉತ್ತಮ ಒಡನಾಟ ಹೊಂದಿದ್ದಾರೆ. ಪುನೀತ್ ಅವರನ್ನು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದಾರೆ ಸಿಎಂ. ಹಾಗಾಗಿ ಅಪ್ಪು (Appu) ಎಂದರೆ ಅವರಿಗೆ ಅಪಾರ ಪ್ರೀತಿ. ಇದನ್ನು ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಈಗಲೂ ಪುನೀತ್​ ರಾಜ್​ ಕುಮಾರ್ ಅವರ ಬಗ್ಗೆ ಮಾತಾಡಿದ್ರೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭಾವುಕರಾಗ್ತಾರೆ. ಇದೀಗ ಪುನೀತ್​ ರಾಜ್ ಕುಮಾರ್​ ಕುಟುಂಬಸ್ಥರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ.

ಸಮಾಧಿ ಜಾಗ ಅಭಿವೃದ್ಧಿಗೆ ಚಿಂತನೆ

ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಸಮಾಧಿ ,ಪುನೀತ್ ರಾಜ್ ಕುಮಾರ್ ಸಮಾಧಿ ಮತ್ತು ಪಾರ್ವತಮ್ಮ ಸಮಾಧಿ ಇದೆ. ಈ ಸ್ಥಳವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಒಂದೇ ಸ್ಥಳದಲ್ಲಿ ರಾಜ್‌ಕುಟುಂಬದ ಮೂವರ ಸಮಾಧಿ ಇದೆ. ಹಾಗಾಗಿ ಈ ಜಾಗದ ಅಭಿವೃದ್ಧಿಗೆ ರಾಜ್‌ಕುಟುಂಬ ಮುಂದಾಗಿದ್ದು, ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದಾರೆ.

ಸಿಎಂ ಮನೆಯಲ್ಲಿ ಕೆಲಕಾಲ ಚರ್ಚೆ

ರಾಘವೇಂದ್ರ ರಾಜ್​ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್ ಹಾಗೂ ಯುವ ರಾಜಕುಮಾರ್ ಅವರು ರೇಸ್ ಕೋರ್ಸ್​ ನಿವಾಸದಲ್ಲಿರೋ ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಭೇಟಿ ನೀಡಿದ್ದರು. ಅಪ್ಪು ಸಮಾಧಿ ಸ್ಥಳ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತುಕತೆ ನಡೆಸಿದ್ದಾರೆ.

ಪಿಪಿಟಿ ವೀಕ್ಷಣೆ ಮಾಡಿದ ಸಿಎಂ

ಕಂಠೀರವ ಸ್ಟುಡಿಯೋದಲ್ಲಿನ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಸಮಾಧಿ ಸ್ಥಳವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜ್ ಕುಟುಂಬದಿಂದ ಸಿದ್ದಪಡಿಸಿದ ಪಿಪಿಟಿಯನ್ನು ಕೂಡ ಸಿಎಂ ವೀಕ್ಷಣೆ ಮಾಡಿದ್ದಾರೆ. ಪಿಡಬ್ಲ್ಯುಡಿ ಇಲಾಖೆಯಿಂದ ಈ ಯೋಜನೆಗೆ ಅಂದಾಜು ಮೊತ್ತ ತರಿಸಲು ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. PWD ಇಲಾಖೆಯಿಂದ ಯೋಜನೆಯ ರೂಪುರೇಷ ತಯಾರದ ಬಳಿಕ ಮತ್ತೊಂದು ಸುತ್ತಿನ ಸಭೆ ಮಾಡೋವುದಾಗಿ ಸಿಎಂ ಬೊಮ್ಮಾಯಿ‌ ತಿಳಿಸಿದ್ದಾರೆ.

ಇದನ್ನೂ ಓದಿ: Gaalipata 2: ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಹಾರಾಡ್ತಿದೆ ಗಾಳಿಪಟ-2; 3ನೇ ದಿನವೂ ಭರ್ಜರಿ ಕಲೆಕ್ಷನ್​ಅಪ್ಪು ಸಮಾಧಿ ನೋಡಲು ಜನಸಾಗರ

ರಾಜ್​ ಕುಟುಂಬಸ್ಥರಿಗೆ ರಾಜ್ಯಾದ್ಯಂತ ಅಭಿಮಾನಿ ಬಳಗವಿದೆ. ಕಂಠೀರವ ಸ್ಟುಡಿಯೋದಲ್ಲಿ ಮೊದಲು ರಾಜ್‌ಕುಮಾರ್ ಸಮಾಧಿಗೆ ಹಲವಾರು ಮಂದಿ ಭೇಟಿ ನೀಡುತ್ತಿದ್ದರು. ಈಗ ನಟ ಪುನೀತ್ ರಾಜ್‌ಕುಮಾರ್ ಸಮಾಧಿಗೆ ನಮಿಸಲು ಪ್ರತಿನಿತ್ಯವೂ ಜನ ಸಾಗರ ಹರಿದು ಬರ್ತಿದೆ. ಅಲ್ಲೇ ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿ ಕೂಡ ಇದೆ. ಅಪ್ಪು ಆರಾಧಕರು ನಿತ್ಯವೂ ಸಮಾಧಿಗೆ ನಮಿಸೋದ್ರಿಂದ ಇದು ದೇವಸ್ಥಾನದ ರೀತಿ ಮಾರ್ಪಾಡಾಗಿದೆ. ಹೀಗಾಗಿ ಈ ಜಾಗವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ರಾಜ್‌ಕುಟುಂಬ ಮುಂದಾಗಿದೆ.

Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

ಪುನೀತ್ ಕಂಚಿನ ಪುತ್ಥಳಿ ಅನಾವರಣ

ಕನ್ನಡ ಚಿತ್ರರಂಗದ ಖ್ಯಾತ ನಟ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಹೊಸಪೇಟೆಯಲ್ಲಿ ವಿಶೇಷ ಅಭಿಮಾನಿಗಳ ಬಳಗವಿದೆ. ಅಕಾಲಿಕ ಅಗಲಿಕೆಯಿಂದ ದಿಗ್ಗಾಂತರಾಗಿದ್ದ ಅಭಿಮಾನಿಗಳು ಇದೀಗ ಅಪ್ಪು ನೆನಪಿಗಾಗಿ ನಗರದ ಹೃದಯಭಾಗದ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಲು ಯೋಚಿಸಿ ಅಂದುಕೊಂಡಂತೆ ಪುತ್ಥಳಿ ಪ್ರತಿಮೆ ಸ್ಪಾಪನೆ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನ ಹೆಸರನ್ನು ಜಿಲ್ಲಾಕ್ರೀಡಾಂಗಣ ವೃತ್ತಕ್ಕೆ ನಾಮಕರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇದೇ ವೃತ್ತದಲ್ಲಿ ಪುನೀತ್ ಕಂಚಿನ ಪುತ್ಥಳಿ ಅನಾವರಣ ಇವುಗಳಿಗೆ ಕಳಶಪ್ರಾಯವಾಗಿದೆ.
Published by:Pavana HS
First published: