ಬೆಂಗಳೂರಿನ ಈ 7 ಕಾಲೇಜುಗಳು ಬ್ಯಾನ್​?; ಪೋಷಕರೇ ಎಚ್ಚರ!

ರಾಜೀವ್​ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಅನುಮತಿ ಪಡೆದು ನೋಟಿಸ್ ನೀಡಲಾಗಿದ್ದು, ಈ ವರ್ಷದ ಕಾಲೇಜುಗಳ ಪ್ರವೇಶಾತಿಗೆ ತಡೆಯೊಡ್ಡಲಾಗಿದೆ. ಇದರಿಂದಾಗಿ ರಾಜೀವ್​ ಗಾಂಧಿ ವಿಶ್ವವಿದ್ಯಾಲಯದ ಸುಮಾರು 350 ಸೀಟ್​ಗಳು ಕಡಿತಗೊಳ್ಳಲಿವೆ

sushma chakre | news18
Updated:January 24, 2019, 4:20 PM IST
ಬೆಂಗಳೂರಿನ ಈ 7 ಕಾಲೇಜುಗಳು ಬ್ಯಾನ್​?; ಪೋಷಕರೇ ಎಚ್ಚರ!
ಸಾಂದರ್ಭಿಕ ಚಿತ್ರ
sushma chakre | news18
Updated: January 24, 2019, 4:20 PM IST
ಲೋಕೇಶ್​

ಬೆಂಗಳೂರು (ಜ. 24): ಅಕ್ರಮ ಪ್ರವೇಶಾತಿ, ದಾಖಲೆ ತಿದ್ದುಪಡಿ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಬೆಂಗಳೂರಿನ 7 ಕಾಲೇಜುಗಳಿಗೆ ಪಬ್ಲಿಕ್ ನೋಟಿಸ್ ಜಾರಿ ಮಾಡಲಾಗಿದೆ.

ಪರೀಕ್ಷಾ ಕಾರ್ಯದಲ್ಲಿ ಅಕ್ರಮ ನಡೆಸಿದ್ದ ಮಾಹಿತಿ ದೊರೆತಿದ್ದರಿಂದ ಕಳೆದ ಜೂನ್​ ತಿಂಗಳಲ್ಲಿ 7 ಕಾಲೇಜುಗಳ ಮೇಲೆ ವಿಶ್ವವಿದ್ಯಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಹಾಲ್ ಟಿಕೆಟ್ ಗೋಲ್​ಮಾಲ್, ನಕಲು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ಕಂಡುಬಂದ ಹಿನ್ನಲೆಯಲ್ಲಿ ಶೋಕಾಸ್ ನೋಟಿಸ್ ನೀಡಲಾಗಿತ್ತು.

ಸದ್ಯ ಪ್ರಕರಣ ಸಂಬಂಧ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿಯ ಮುಂದಿಟ್ಟು ಕಾಲೇಜುಗಳಿಗೆ ಪ್ರವೇಶಾತಿ ಪಡೆಯದಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪಬ್ಲಿಕ್ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ವಿಧಾನಸೌಧದ ಸಿಎಂ ಎಚ್​ಡಿಕೆ, ಬಿಎಸ್​ವೈ ಕೊಠಡಿಗಳನ್ನು ಬಾಡಿಗೆ ಕೇಳಿ ಸ್ಪೀಕರ್​ಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ

7 ಕಾಲೇಜುಗಳು ಯಾವುವು?:

ಬೆಂಗಳೂರಿನ ಬೆಥೆಲ್ ಕಾಲೇಜ್ ಗ್ರೂಪ್, ಹಾಸ್​ಮ್ಯಾಟ್​ ಹಾಸ್ಟಿಟಲ್ ಆ್ಯಂಡ್​ ಎಜುಕೇಷನಲ್​ ಇನ್​ಸ್ಟಿಟ್ಯೂಷನ್ಸ್​, ಗಾಯತ್ರಿ ದೇವಿ ಕಾಲೇಜ್ ಆಫ್ ನರ್ಸಿಂಗ್, ಪ್ಯಾನ್​ ಏಷ್ಯಾ ಕಾಲೇಜ್ ಆಫ್ ನರ್ಸಿಂಗ್, ​ಬೆಥೆಲ್ ಕಾಲೇಜ್​ ಆಫ್​ ಫಿಸಿಯೋಥೆರಪಿ, ಹಾಸ್​ಮ್ಯಾಟ್​ ಕಾಲೇಜ್​ ಆಫ್​ ಫಿಸಿಯೋಥೆರಪಿ, ಹಾಸ್​ಮ್ಯಾಟ್​ ಕಾಲೇಜ್​ ಆಫ್​ ನರ್ಸಿಂಗ್ ಸಂಸ್ಥೆಗಳು ಗೋಲ್​ಮಾಲ್​ ಮಾಡಿರುವುದು ಧೃಡಪಟ್ಟಿದೆ.

ರಾಜೀವ್​ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಅನುಮತಿ ಪಡೆದು ನೋಟಿಸ್ ನೀಡಲಾಗಿದ್ದು, ಈ ವರ್ಷದ ಕಾಲೇಜುಗಳ ಪ್ರವೇಶಾತಿಗೆ ತಡೆಯೊಡ್ಡಲಾಗಿದೆ. ಇದರಿಂದಾಗಿ ರಾಜೀವ್​ ಗಾಂಧಿ ವಿಶ್ವವಿದ್ಯಾಲಯದ ಸುಮಾರು 350 ಸೀಟ್ ಗಳು ಕಡಿತಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಲು ವಿವಿ ಚಿಂತನೆ ನಡೆಸಿದೆ.

First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...