• Home
  • »
  • News
  • »
  • state
  • »
  • Rajinikanth: ಅಪ್ಪು ದೇವರ ಮಗು ಎಂದ ರಜನಿಕಾಂತ್, ವೇದಿಕೆ ಮೇಲೆ ರಾಜ್‌ ಸ್ಮರಿಸಿಕೊಂಡ ಸೂಪರ್ ಸ್ಟಾರ್

Rajinikanth: ಅಪ್ಪು ದೇವರ ಮಗು ಎಂದ ರಜನಿಕಾಂತ್, ವೇದಿಕೆ ಮೇಲೆ ರಾಜ್‌ ಸ್ಮರಿಸಿಕೊಂಡ ಸೂಪರ್ ಸ್ಟಾರ್

ಅಪ್ಪು ಹೊಗಳಿದ ರಜನಿಕಾಂತ್

ಅಪ್ಪು ಹೊಗಳಿದ ರಜನಿಕಾಂತ್

"ಪುನೀತ್ ರಾಜ್‌ಕುಮಾರ್ ಎಲ್ಲಿಯೂ ಹೋಗಿಲ್ಲ. ಅಪ್ಪು ದೇವರ ಮಗು. ಆ ದೇವರ ಮಗು ನಮ್ಮ ಜೊತೆ ಬಂದು, ಸ್ವಲ್ಪ ದಿನ ಆಟ ಆಡಿ, ತನ್ನ ಲೀಲೆಯನ್ನು ತೋರಿ ಮತ್ತೆ ದೇವರ ಬಳಿಯೇ ಹೋಗಿದೆ" ಅಂತ ರಜನಿಕಾಂತ್ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕದವರೇ (Karnataka) ಆದ ಸೂಪರ್ ಸ್ಟಾರ್ ರಜಿನಿಕಾಂತ್ (Super Star Rajinikanth) ಕರುನಾಡು ಮತ್ತು ಕನ್ನಡದ (Kannada) ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ಅವರ ಬಗ್ಗೆ ರಜನಿ ಮನ ದುಂಬಿ ಹಾರೈಸಿದ್ದಾರೆ. “ಅಪ್ಪು ದೇವರ ಮಗು, (Appu is Gods Child) ಆತ ಎಲ್ಲೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾರೆ” ಅಂತ ರಜನಿಕಾಂತ್ ಸ್ಮರಿಸಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್ (Dr. Rajkumar) ಹಾಗೂ ಅವರ ಕುಟುಂಬಸ್ಥರ (Dr. Raj’s Family) ಬಗ್ಗೆಯೂ ರಜನಿ ಹೊಗಳಿಕೆಯ ಮಾತನ್ನಾಡಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರಜನಿಕಾಂತ್, ಅಪ್ಪು ಜೊತೆಗಿನ ಒಡನಾಟ ನೆನಪಿಸಿಕೊಂಡರು.


"ಬಾಲ್ಯದಿಂದಲೂ ನಾನು ಪುನೀತ್‌ರನ್ನು ಬಲ್ಲೆ"


ಹಿಂದೆ ಡಾ. ರಾಜ್‌ಕುಮಾರ್ ಹಾಗೂ ಅವರ ಸಂಗಡಿಗರು ಅಯ್ಯಪ್ಪ ಸ್ವಾಮಿ ಯಾತ್ರೆಗೆ ಹೋಗುತ್ತಿದ್ದರು. ಆಗ ಪುನೀತ್‌ ರಾಜ್‌ಕುಮಾರ್‌ಗೆ 4 ವರ್ಷ ಆಗಿತ್ತು. ನಾನು ಮೊದಲು ನೋಡಿದಾಗ ಪುಟ್ಟ ಮಗುವಾಗಿದ್ದ ಅಪ್ಪು, ರಾಜ್‌ ಜೊತೆಯೇ ಇದ್ದರು ಅಂತ ಸ್ಮರಿಸಿಕೊಂಡರು.




"ಅಪ್ಪು ಸಿನಿಮಾ ನೋಡಿ ಆಶೀರ್ವಾದ ಮಾಡಿದ್ದೆ"


ಅಪ್ಪು ಸಿನಿಮಾ ಬಂದಾಗ ನಾನು ಡಾ, ರಾಜ್‌ಕುಮಾರ್‌ ಅವರ ಮನೆಗೆ ಹೋಗಿದ್ದೆ. ಆಗ ರಾಜ್‌ ಕುಮಾರ್ ಕೇಳಿದ್ರು, ನನ್ನ ಮಗ ಹೀಗೊಂದು ಸಿನಿಮಾ ಮಾಡಿದ್ದಾನೆ. ನೀವು ನೋಡ್ತೀರಾ ಅಂತ ಕೇಳಿದ್ರು. ನಾನು ಖಂಡಿತ ನೋಡ್ತೀನಿ ಅಂತ ಹೇಳಿದ್ದೆ, ಸಿನಿಮಾ ನೋಡಿದ್ದೆ ಕೂಡ. ಡ್ಯಾನ್ಸ್, ಫೈಟ್, ಅಭಿನಯ ಎಲ್ಲಾ ಚೆನ್ನಾಗಿ ಮಾಡಿದ್ದಾನೆ. 100 ಡೇಸ್ ಪಕ್ಕಾ ಅಂತ ನಾನು ಆಗಲೇ ಭವಿಷ್ಯ ನುಡಿದಿದ್ದೆ ಅಂತ ರಜನಿಕಾಂತ್ ಹೇಳಿದ್ದಾರೆ.


ಇದನ್ನೂ ಓದಿ: Puneeth Rajkumar: ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ, ರಜನಿಕಾಂತ್​ ಸಮ್ಮುಖದಲ್ಲಿ ಗೌರವ


"ಅಪ್ಪು ಸಿನಿಮಾ 100 ಡೇಸ್ ಸೆಲಬ್ರೇಷನ್‌ಗೆ ನಾನೇ ಬಂದಿದ್ದೆ"


ಅಂದೇ ಡಾ ರಾಜ್‌ಕುಮಾರ್ ನನಗೆ ಹೇಳಿದ್ದರು. ಅಪ್ಪು ಸಿನಿಮಾ 100 ದಿನ ಓಡಿದ್ರೆ ಸೆಲಬ್ರೇಷನ್‌ಗೆ ನೀವೇ ಬರಬೇಕು ಅಂತ ರಾಜ್‌ಕುಮಾರ್ ಹೇಳಿದ್ದರು. ಖಂಡಿತಾ ಬರ್ತೀನಿ ಅಣ್ಣ ಅಂತ ಹೇಳಿದ್ದೆ. ಅದರಂತೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ 100 ದಿನದ ಸಂಭ್ರಮಾಚರಣೆಗೆ ಬಂದು, ಪುನೀತ್‌ ರಾಜ್‌ಕುಮಾರ್ ಅವರನ್ನು ಆಶೀರ್ವದಿಸಿದ್ದಾಗಿ ರಜನಿಕಾಂತ್ ನೆನಪಿಸಿಕೊಂಡರು.


ಅಪ್ಪು ಎಂದಿಗೂ ಅಮರ


ಪುನೀತ್ ರಾಜ್‌ಕುಮಾರ್ ಎಲ್ಲಿಯೂ ಹೋಗಿಲ್ಲ. ಅಪ್ಪು ದೇವರ ಮಗು. ಆ ದೇವರ ಮಗು ನಮ್ಮ ಜೊತೆ ಬಂದು, ಸ್ವಲ್ಪ ದಿನ ಆಟ ಆಡಿ, ತನ್ನ ಲೀಲೆಯನ್ನು ತೋರಿ ಮತ್ತೆ ದೇವರ ಬಳಿಯೇ ಹೋಗಿದೆ. ಆತ ಎಲ್ಲಿಯೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾನೆ. ಆ ತನ್ನ ಸಿನಿಮಾದ ಮೂಲಕ, ತನ್ನ ಸಮಾಜ ಸೇವೆ ಮೂಲಕ ಅಮರರಾಗಿ ಇರುತ್ತಾನೆ ಅಂತ ರಜನಿ ಶ್ಲಾಘಿಸಿದರು.


ಡಾ. ರಾಜ್‌ಕುಮಾರ್ ವರನಟ ಅಂತ ಹೊಗಳಿದ ಸೂಪರ್ ಸ್ಟಾರ್


ಇನ್ನು ವೇದಿಕೆಯ ಮೇಲೆ ರಜನಿಕಾಂತ್ ಅವರು ಡಾ. ರಾಜ್‌ಕುಮಾರ್ ಅವರ ಬಗ್ಗೆಯೂ ಹೊಗಳಿದರು. ನಾವೆಲ್ಲ ರಾಜ್‌ಕುಮಾರ್ ಸಿನಿಮಾ ನೋಡಿಯೇ ಬೆಳೆದಿದ್ದು. ರಾಜ್‌ಕುಮಾರ್‌ ನಿರ್ವಹಿಸಿದ್ದು ಒಂದೊಂದು ಪಾತ್ರಗಳೂ ಒಂದೊಂದು ರೀತಿಯದ್ದು. ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸೇ ಅವರು ನಟಸಾರ್ವಭೌಮ ಆಗಿದ್ದು, ವರನಟನಾಗಿದ್ದು.


ಇದನ್ನೂ ಓದಿ: Puneeth Rajkumar: ನಗು ಮುಖದಲ್ಲೇ ಇಡೀ ರಾಜ್ಯ ಗೆದ್ದ ರಾಜ ಅಪ್ಪು, ಗೆಳೆಯನ ನೆನೆದು Jr NTR ಭಾವುಕ!


ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ರಜನಿಕಾಂತ್ ಮೆಚ್ಚುಗೆ


ಇನ್ನು ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆಯೂ ರಜನಿಕಾಂತ್ ಹೊಗಳಿದ್ರು. ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿದ್ದಾರೆ. ಆದರೆ ಅವರಿಗೆ ನಾನು ಇದೀಗ ಸಾಂತ್ವನ ಹೇಳುತ್ತಿದ್ದೇನೆ ಅಂತ ಹೇಳಿದ್ರು.

Published by:Annappa Achari
First published: