HOME » NEWS » State » RAJASHEKAR MULALI REACTION ON RAMESH JARKIHOLI CD CASE SAKLB SESR

ಉತ್ತರ ಕರ್ನಾಟಕದ ರಾಜಕಾರಣಿಗಳು ಬಹಳ ಮುಗ್ಧರು; ಸ್ಮಾರ್ಟ್ ಇಲ್ಲದಿರೋದಕ್ಕೆ ಷಡ್ಯಂತ್ರಕ್ಕೆ ಬಲಿ; ರಾಜಶೇಖರ ಮುಲಾಲಿ

ನಮ್ಮ ಭಾಗದ ಮುಗ್ಧ ರಾಜಕಾರಣಿಗಳ ವಿರುದ್ಧ ಷಡ್ಯಂತ್ರ ಮಾಡಲಾಗ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ರಾಜಕಾರಣಿಗಳನ್ನು ಗುರಿ ಮಾಡಲಾಗುತ್ತಿದೆ.

news18-kannada
Updated:March 6, 2021, 9:13 PM IST
ಉತ್ತರ ಕರ್ನಾಟಕದ ರಾಜಕಾರಣಿಗಳು ಬಹಳ ಮುಗ್ಧರು; ಸ್ಮಾರ್ಟ್ ಇಲ್ಲದಿರೋದಕ್ಕೆ ಷಡ್ಯಂತ್ರಕ್ಕೆ ಬಲಿ; ರಾಜಶೇಖರ ಮುಲಾಲಿ
ರಾಜಶೇಖರ ಮುಲಾಲಿ
  • Share this:
ಕಲಬುರ್ಗಿ (ಮಾ. 6): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತ, ಅಣ್ಣಾ ಫೌಂಡೇಶನ್ ಮುಖಂಡ ರಾಜಶೇಖರ ಮುಲಾಲಿ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ರಾಜಕಾರಣಿಗಳು ಬಹಳ ಮುಗ್ಧರು. ಇಲ್ಲಿನ ರಾಜಕಾರಣಿಗಳು ಸ್ಮಾರ್ಟ್ ಇರೋದಿಲ್ಲ. ಅವರ ಮಗ್ಧತೆ ಬಳಸಿಕೊಂಡು ಖೆಡ್ಡಾ ತೋಡಲಾಗ್ತಿದೆ. ವಿನಾಕಾರಣ ನಮ್ಮ ಭಾಗದ ಮುಗ್ಧ ರಾಜಕಾರಣಿಗಳ ವಿರುದ್ಧ ಷಡ್ಯಂತ್ರ ಮಾಡಲಾಗ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ರಾಜಕಾರಣಿಗಳನ್ನು ಗುರಿ ಮಾಡಲಾಗುತ್ತಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ರಾಜಕಾರಣಿಗಳು ಈ ವಿಷಯದಲ್ಲಿ ಮೈ ಮರೆಯಬಾರದು. ಇನ್ನು ಮುಂದಾದರೂ ಎಚ್ಚರಿಕೆಯಿಂದ ಇರಬೇಕೆಂದು ಎಚ್ಚರಿಕೆ ನೀಡಿದರು. 

ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸಿಡಿ ಅದು ಅಸಲಿಯೋ, ನಕಲಿಯೋ ಎನ್ನುವುದು ತನಿಖೆಯಿಂದ ಗೊತ್ತಾಗಲಿದೆ. ರಮೇಶ್ ಜಾರಕಿಹೊಳಿ ಪ್ರಕರಣದ ನಂತರ ಬೇರೆಯವರಲ್ಲಿಯೂ ನಡುಕ ಶುರುವಾಗಿದೆ. ಅದರಲ್ಲಿಯೂ ಜಾರಕಿಹೊಳಿ ಅವರೊಂದಿಗೆ ಪಕ್ಷಾಂತರ ಮಾಡಿ, ಸಚಿವರಾಗಿರೋರಿಗೆ ಭೀತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿಯೇ ತಮ್ಮ ವಿರುದ್ಧದ ಯಾವುದೇ ವೀಡಿಯೋ ಪ್ರದರ್ಶಿಸಲು ಅವಕಾಶ ನೀಡಬಾರದೆಂದು ಕೋರ್ಟ್ ಮೊರೆ ಹೋಗಿರಬೇಕು. ಉತ್ತರ ಕರ್ನಾಟಕದ ರಾಜಕಾರಣಿಗಳು ಮೋಸ ಮಾಡೋರಿಗೆ ಬೇಗನೇ ಮೋಸ ಹೋಗ್ತಿದಾರೆ. ರಾಜ್ಯದಲ್ಲಿ ರಾಜಕಾರಣಿಗಳನ್ನೆ ಟಾರ್ಗೆಟ್ ಮಾಡೋ ದೊಡ್ಡ ಜಾಲವಿದೆ. ಅದರಿಂದ ಎಚ್ಚರಿಕೆ ವಹಿಸೋದು ಅಗತ್ಯವಿದೆ. ಇಲ್ಲದಿದ್ದರಿಂದ ನಮ್ಮ ಮಾನದ ಜೊತೆಗೆ ಇಡೀ ಕುಟುಂಬದ ಮಾನವೂ ಹರಾಜಾಗಲಿದೆ. ರಾಜಕಾರಣಿಗಳು ಅತ್ಯಂತ ಎಚ್ಚರಿಕೆಯಿಂದ ಇರೋದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧೆ

ಕನ್ನಡ ಸಾಹಿತ್ಯ ಪರಿಷತ್ ನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದವರು ಹೆಚ್ಚಾಗಿ ಪರಿಷತ್ ಗೆ ಆಯ್ಕೆಯಾಗಿಲ್ಲ. ಸಾಹಿತ್ಯ ಪರಿಷತ್ ನಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷ ಪಾತ ಹೆಚ್ಚಾಗಿದೆ. ಭ್ರಷ್ಟಚಾರ ಮುಕ್ತ, ಪಾರದರ್ಶಕ ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣ ಮಾಡುವುದನ್ನು ಗುರಿಯಾಗಿಸಿಕೊಂಡಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕವನ್ನೂ ಪ್ರಾರಂಭಿಸಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಡಲಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ಸರ್ವಾಂಗೀಣ ಅಭಿವೃದ್ಧಿಗಾಗಿ, ಕರ್ನಾಟಕದ ಗಡಿ ಭಾಗಗಳ ಹಾಗೂ ಏಕೀಕರಣಕ್ಕಾಗಿ ಹೋರಾಡಿದ ಹುತಾತ್ಮರ ಸ್ಮರಣೆಯಲ್ಲಿ ಕಿರು ಪುಸ್ತಕ ಮಾಲೆ ಪ್ರಾರಂಭಿಸೋ ಗುರಿ ಹೊಂದಲಾಗಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವುದು ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಗಾಗಿ ಒತ್ತಾಯಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಗೆ ಡಿಜಿಟಲ್ ಸ್ಪರ್ಷ ನೀಡಿ, ಸರ್ವ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿ ನೀಡುವ, ಸಮ್ಮೇಳನಗಳಿಗೆ ಹಾಜರಾಗುವ ವಾಹನಗಳಿಗೆ ಉಚಿತ ಟೋಲ್ ವ್ಯವಸ್ಥೆ ಇತ್ಯಾದಿ ಕಲ್ಪಿಸೋ ಗುರಿ ಹೊಂದಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

(ವರದಿ - ಶಿವರಾಮ ಅಸುಂಡಿ)
Published by: Seema R
First published: March 6, 2021, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories