ಬೆಂಗಳೂರು(ಅ.08): ದಿನದಿಂದ ದಿನಕ್ಕೆ ರಾಜರಾಜೇಶ್ವರಿ ಮತ್ತು ಶಿರಾ ಉಪಚುನಾವಣೆ ಕಣ ರಂಗೇರುತ್ತಿದೆ. ಆರ್.ಆರ್. ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ರವಿ ಪತ್ನಿ ಕುಸುಮಾ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ಚುನಾವಣಾ ಕಣ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ. ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ, ಕಾಂಗ್ರೆಸ್ನಿಂದ ಅಧಿಕೃತ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ರಾಜ್ಯ ಹಾಗೂ ಹೈ ಕಮಾಂಡ್ ನಾಯಕರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಮುಂದುವರೆದ ಅವರು, ನನಗೇನು ರಾಜಕೀಯ ಹೊಸದೇನು ಇಲ್ಲ. ನಮ್ಮ ತಂದೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅವಾಗ ಅವರ ಚಟುವಟಿಕೆಗಳನ್ನು ನಾನು ನೋಡಿದ್ದೇನೆ ಎಂದರು.
ಪ್ರೊಫೆಸರ್ ಆಗಿ ವಿದ್ಯಾರ್ಥಿಗಳಿಗೆ ಕೆಲಸ ಮಾಡಿದ್ದೇನೆ. ಇವಾಗ ಜನರ ಸೇವೆಗೆ ಅವಕಾಶ ಸಿಕ್ಕಿದೆ. ಈ ಅವಕಾಶದ ಮೂಲಕ ಮತ್ತಷ್ಟು ಕೆಲಸ ಮಾಡುತ್ತೇನೆ. ನನಗೇನು ಆರ್ ಆರ್ ನಗರ ಹೊಸದೇನು ಅಲ್ಲ. ನಾನು ಆರ್ ಆರ್ ನಗರದ ಹೆಣ್ಣು ಮಗಳು. ಆರ್ ಆರ್ ನಗರ ಕ್ಷೇತ್ರದ ಜನರ ಸಮಸ್ಯೆ ನನಗೆ ಗೊತ್ತು ಎಂದು ಕುಸುಮಾ ಹೇಳಿದರು.
Coronavirus India Updates: ಭಾರತದಲ್ಲಿ 68 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ಇದೇ ವೇಳೆ, ನನಗೆ ರಾಜಕೀಯ ವ್ಯಾಪಾರ ಅಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ನಾನು ವ್ಯಾಪಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ನನಗೆ ಜನರ ಸೇವೆ ಮಾಡಬೇಕು ಅನ್ನೋದು ಅಷ್ಟೇ ಮುಖ್ಯ. ನನ್ನ ವಿರೋಧಿಯಾಗಿ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದು ಮುಖ್ಯ ಅಲ್ಲ. ನನ್ನ ಮುಖ್ಯ ಧ್ಯೇಯ ನಾನು ಗೆಲ್ಲೋದು ಅಷ್ಟೇ ಎಂದು ಹೇಳುವ ಮೂಲಕ ಕುಸುಮಾ ಬಿಜೆಪಿಯ ಮುನಿರತ್ನಗೆ ತಿರುಗೇಟು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ