Bengaluru: ಜೈಲು ಸೇರಿದ BBMP ಜಂಟಿ ಆಯುಕ್ತ; ಮುಂದುವರಿಯಲಿದೆ ಒತ್ತುವರಿ ತೆರವು ಕಾರ್ಯಾಚರಣೆ; ಬಿಬಿಎಂಪಿ ಮೇಲಿದ್ಯಾ ರಾಜಕೀಯ ಒತ್ತಡ

ಮಲ್ಲೇಶ್ವರಂ ಬಿಬಿಎಂಪಿ ಕಚೇರಿ (BBMP Office, Malleshwaram) ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ SP ಶ್ರೀನಾಥ್ ಮಹದೇವ ಜೋಶಿ, ಜಂಟಿ ಆಯುಕ್ತ ಮತ್ತು ಆಪ್ತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಗ್ಯ ತಪಾಸಣೆ ಬಳಿಕ ಜಡ್ಜ್​​ ಮುಂದೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial Custody) ಕಳುಹಿಸಲಾಗಿದೆ.

ಬೆಂಗಳೂರು ಪ್ರವಾಹ

ಬೆಂಗಳೂರು ಪ್ರವಾಹ

  • Share this:
ಆರು ವರ್ಷಗಳ ಬಳಿಕ ಭ್ರಷ್ಟ ಸರ್ಕಾರಿ ನೌಕರರ ಬೇಟೆ ಆರಂಭಿಸಿರುವ ಲೋಕಾಯುಕ್ತ ಪೊಲೀಸರ (Lokayukta Police) ಬಲೆಗೆ ಲಂಚ (Bribe) ಸ್ವೀಕರಿಸುತ್ತಿದ್ದ ಕೆಎಎಸ್‌ ಅಧಿಕಾರಿ (KAS Officer) ಬಿದ್ದಿದ್ದಾರೆ.  BBMP ಖಾತೆ ಬದಲಾವಣೆಗೆ ಜಂಟಿ ಆಯುಕ್ತರು ಆಪ್ತ ಸಹಾಯಕನ ಮೂಲಕ 4 ಲಕ್ಷ ಡೀಲ್​​ ಮಾಡಿದ್ರು ಅನ್ನೋ ದೂರಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್​ (Lokayukta Raid) ಮಾಡಿ ರೆಡ್​ ಹ್ಯಾಂಡಾಗಿ ಲಾಕ್​ ಮಾಡಿದ್ದಾರೆ. ಬಿಬಿಎಂಪಿ ಪಶ್ಚಿಮ ವಿಭಾಗ ಜಂಟಿ ಆಯುಕ್ತ ಶ್ರೀನಿವಾಸ್, ಪಿಎ ಉಮೇಶ್ ಮೂಲಕ ಹಣ ಪಡೆಯುತ್ತಿದ್ದಾಗ ಬಂಧನ ಮಾಡಲಾಗಿದೆ. ಮಂಜುನಾಥ್​ ಎಂಬುವರ ಬಳಿ ಹಣ (money) ಕೇಳಿದ್ರಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ರು. ಸೈಟುಗಳ ಖಾತೆ ಬದಲಾವಣೆಗೆ 12 ಲಕ್ಷ ಲಂಚ ಕೇಳ್ತಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು.

ಮಲ್ಲೇಶ್ವರಂ ಬಿಬಿಎಂಪಿ ಕಚೇರಿ (BBMP Office, Malleshwaram) ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ SP ಶ್ರೀನಾಥ್ ಮಹದೇವ ಜೋಶಿ, ಜಂಟಿ ಆಯುಕ್ತ ಮತ್ತು ಆಪ್ತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಗ್ಯ ತಪಾಸಣೆ ಬಳಿಕ ಜಡ್ಜ್​​ ಮುಂದೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial Custody) ಕಳುಹಿಸಲಾಗಿದೆ.

rajakaluve encroachment continues today
ಲಂಚ ಪಡೆಯುತ್ತಿರುವ ಅಧಿಕಾರಿ


ಒತ್ತುವರಿ ತೆರವು ಕಾರ್ಯಾಚರಣೆ

ಬೆಂಗಳೂರಿನ ಮಹಾದೇವಪುರದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ಆದ್ದರಿಂದ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವಿಗೆ ಕಾರ್ಯಾಚರಣೆ ನಡೆಸ್ತಿದ್ದಾರೆ.  ಬಸವಣ್ಣ ನಗರದಲ್ಲಿರುವ ಮಹಾವೀರ್ ರೀಗಲ್ ಅಪಾರ್ಟ್​ಮೆಂಟ್​ ಬಳಿ ಕಾರ್ಯಾಚರಣೆ ನಡೆಯಿತು. ಆದ್ರೆ ಬಿಬಿಎಂಪಿ ಕಾರ್ಯಚರಣೆಗೆ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ರು.

ಸ್ಥಳೀಯರ ಕಣ್ಣೀರು

150 ಮನೆಗಳಿರುವ ಮಹಾವೀರ್ ರೀಗಲ್ ಅಪಾರ್ಟ್‌ಮೆಂಟ್​ನ 24 ಅಡಿ ಜಾಗವನ್ನು ಡೆಮಾಲಿಷನ್‌ ಮಾಡಲು ಗುರುತು ಹಾಕಲಾಗಿದೆ. ಅಪಾರ್ಟ್ಮೆಂಟ್‌ನ ಕಾಂಪೌಂಡ್ ಕೆಡವಲಾಗ್ತಿದೆ. ಆದ್ದರಿಂದ ಕಾರ್ಯಾಚರಣೆ ನಡೆಸದಂತೆ ನಿವಾಸಿಗಳು ಕಣ್ಣೀರು ಹಾಕಿದರು.

ಮಹಾದೇವಪುರಲ್ಲಿರೋ ಗೋಪಾಲನ್ ಕಾಲೇಜು ಕ್ರೀಡಾಂಗಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಗೋಪಾಲನ್ ಕಾಲೇಜಿನವರೂ ಕೂಡಾ ಏಳೂವರೆ ಮೀಟರ್ ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಎಂದು ಒತ್ತುವರಿ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.

ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ

ಒತ್ತುವರಿ ತೆರವಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಬಂದಿರುವ ಅನುಮಾನ ವ್ಯಕ್ತವಾಗಿದೆ. ಬಾಗ್ಮನೆ ಟೆಕ್‌ಪಾರ್ಕ್‌ನಲ್ಲಿ ಒತ್ತುವರಿ ತೆರವಿಗೆ ಮಾರ್ಕ್​ ಮಾಡಲಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಅಧಿಕಾರಿಗಳು, 2.4 ಮೀಟರ್ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕಿತ್ತು. ಆದ್ರೆ ಅದ್ಯಾವ್ದೋ ಫೋನ್ ಬಂದಾಕ್ಷಣ ಅಧಿಕಾರಿಗಳು ವಾಪಾಸ್ ಹೋಗಿದ್ದಾರೆ ಎನ್ನಲಾಗಿದೆ.

ಘರ್ಜಿಸಿದ ಬಿಬಿಎಂಪಿ ಜೆಸಿಬಿಗಳು

ಮಹಾದೇವಪುರ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಕಂದಾಯ ಇಲಾಖೆ ಮಾಡಿದ ಮಾರ್ಕಿಂಗ್​ನಂತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಸೋಮವಾರ ಮಹದೇವಪುರ ವಲಯ ವ್ಯಾಪ್ತಿಯಲ್ಲಿ 15 ವಿವಿಧ ಸ್ಥಳಗಳಲ್ಲಿ ಒತ್ತುವರಿ ಕಾರ್ಯಾಚರಣೆ ನಡೆದಿತ್ತು.

ಮಹದೇವಪುರ ವಲಯ ವ್ಯಾಪ್ತಿಯದ ಚೆಲ್ಲಘಟ್ಟ, ಚಿನ್ನಪ್ಪನ ಹಳ್ಳಿ, ಬಸವಣ್ಣನಗರ, ಸ್ಪೈಸಿ ಗಾರ್ಡನ್ ಹಾಗೂ ಬಸವನಪುರ ವಾರ್ಡ್ ಎಸ್.ಆರ್. ಲೇಔಟ್ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ ನಡೆದ ತೆರವು ಕಾರ್ಯಾಚರಣೆ ನಡೆಸಲಾಗಿತ್ತು.

ಇದನ್ನೂ ಓದಿ:  Bank Fraud: ಬ್ಯಾಂಕ್‌ನ 2 ಕೋಟಿ ಹಣ ಹೆಂಡ್ತಿ ಅಕೌಂಟ್‌ಗೆ ಟ್ರಾನ್ಸ್‌ಫರ್! ವಂಚಕ ಅಸಿಸ್ಟೆಂಟ್ ಮ್ಯಾನೇಜರ್ ಎಸ್ಕೇಪ್

ತೆರವು ಕಾರ್ಯಾಚರಣೆ

ಮಹದೇವಪುರ ವಲಯದಲ್ಲಿ ಚಿನ್ನಪ್ಪನಹಳ್ಳಿಯಿಂದ ಮುನ್ನೇಕೊಳಾಳ ಕೆರೆಯ ನಡುವೆ ಎಇಸಿಎಸ್ ಲೇಔಟ್ ವ್ಯಾಪ್ತಿಯಲ್ಲಿ ಸಾಯಿ ಕಣ್ಣಿನ ಆಸ್ಪತ್ರೆಯ ಕಾಂಪೌಂಡ್ ಗೋಡೆ, ರಾಘವ್ ಸೂಪರ್ ಮಾರ್ಕೆಟ್ ಮುಂಭಾಗದ ಒಳ ಹರಿವಿನ ಕಾಲುವೆ ಸೇರಿದಂತೆ ಅತಿಕ್ರಮಿಸಿದ್ದ 3 ಕಟ್ಟಡಗಳು,4 ಕಾಂಪೌಂಡ್ ಗೋಡೆ ಹಾಗೂ ರಸ್ತೆಯ ತೆರವು

ಚೆಲ್ಲಘಟ್ಟ ವ್ಯಾಪ್ತಿಯಲ್ಲಿ ಪ್ರಸ್ಟೀಜ್ ನ ಖಾಲಿ ಜಾಗ, ಕಾಂಪೌಂಡ್ ಗೋಡೆ, ಹೂಡಿ ಬಳಿ ಗೋಪಾಲನ್ ಶಾಲೆ ಹಾಗೂ ಮಹಾವೀರ್ ಅಪಾರ್ಟ್ಮ್ಮೆಂಟ್ ನ ಕಾಂಪೌಂಡ್ ಗೋಡೆ ಸೇರಿದಂತೆ 3 ಕಾಂಪೌಂಡ್ ಗೋಡೆ ತೆರವು ಕಾರ್ಯಾಚರಣೆ ನಡೆದಿದೆ.

ಸ್ಪೈಸಿ ಗಾರ್ಡನ್(ಮುನ್ನೆಕೊಳಳು) ಬಳಿ 4 ಕಾಂಪೌಂಡ್ ಗೋಡೆಗಳು ಹಾಗೂ ರಸ್ತೆ ತೆರವು ಮಾಡಲಾಗಿದೆ. ಕೆ.ಆರ್.ಪುರದ ಬಸವನಪುರ ವಾರ್ಡ್ ಎಸ್.ಆರ್. ಲೇಔಟ್ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ 77 ಮೀಟರ್ ಉದ್ದ ಹಾಗೂ 2.6 ಮೀಟರ್ ಅಗಲದ ಮಲೆ ನೀರುಗಾಲುವೆಯ ಒತ್ತುವರಿ ತೆರವು ಆಗಿದೆ.

ಇದನ್ನೂ ಓದಿ:  Karnataka Politics: ನನ್ನನ್ನು ಲೂಟಿ ಅನ್ನೋ ಇವ್ರೇನು ಸತ್ಯಹರಿಶ್ಚಂದ್ರನ ಮಕ್ಕಳಾ? ಸಿಟಿ ರವಿ, ಸಿದ್ದು ನಡುವೆ ಟಾಕ್​ ವಾರ್!

ಇಂದು ಸಹ ಮುಂದುವರಿಯಲಿದೆ ತೆರವು ಕಾರ್ಯ

ಪಾಲಿಕೆ ಇಂಜಿನಿಯರ್ಸ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ತೆರವು ವೇಳೆ ಮಾರ್ಷಲ್‌ಗಳು, ಪೊಲೀಸರಿಂದ ಬಂದೋಬಸ್ತ್ ಕಲ್ಪಿಸಲಾಗಿದೆ. ಇಂದೂ ಸಹ 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೆಯಲಿದೆ.

Can we construct house near rajakaluve, What is meant by rajakaluve, How do I check my lake encroachment, How to find lake encroachment in Bangalore, ರಾಜಕಾಲುವೆ ಒತ್ತುವರಿ, ರಾಜಕಾಲುವೆ ಎಂದರೇನು, Kannada News, Karnataka News
ರಾಜಕಾಲುವೆ ಒತ್ತುವರಿ


ಇಂದು ಎಲ್ಲೆಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ?

1. ಶಾಂತಿನಿಕೇತನ ಲೇಔಟ್
2. ಸ್ಪೈಸಿ ಗಾರ್ಡನ್
3. ಪಾಪಯ್ಯ ರೆಡ್ಡಿ ಲೇಔಟ್
4. ಚೆಲ್ಲಘಟ್ಟದ ಬಳಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ
Published by:Mahmadrafik K
First published: