Rajakaluve: ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾದ ಬಿಬಿಎಂಪಿ; ದಿಢೀರ್ ಹೇಳಿಕೆ ಬದಲಿಸಿದ ಆಯುಕ್ತರು

ಈ ಹಿಂದೆ ಒತ್ತುವರಿ ತೆರವಿಗೆ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ತುಷಾರ್ ಗಿರಿ ನಾಥ್ ಹೇಳಿಕೆ ನೀಡಿದ್ದರು. ಇದೀಗ ನೋಟಿಸ್ ನೀಡುವ ಅನಿವಾರ್ಯತೆ ಇದೆ ಎಂದು ಉಲ್ಟಾ ಹೊಡೆದಿದ್ದಾರೆ.

ರಾಜಕಾಲುವೆ ಒತ್ತುವರಿ

ರಾಜಕಾಲುವೆ ಒತ್ತುವರಿ

  • Share this:
ಕಳೆದ ಒಂದು ತಿಂಗಳಿನಿಂದ ಸುರಿದ ಮಳೆಗೆ ರಾಜಧಾನಿಯ (Bengaluru Flood) ಹಲವು ಪ್ರತಿಷ್ಠಿತ ಬಡಾವಣೆ (Layout), ವಿಲ್ಲಾ (Villa) ಮತ್ತು ಪ್ರಮುಖ ರಸ್ತೆಗಳು (Main Roads) ಜಲಾವೃತಗೊಂಡಿದ್ದವು. ಇದೀಗ ಮಳೆ (Rain) ಪ್ರಮಾಣ ತಗ್ಗಿದ್ದು, ನೀರು ಇಳಿಕೆಯಾಗಿದೆ. ಇತ್ತ ಪ್ರವಾಹದಿಂದ ಎಚ್ಚೆತ್ತಿರುವ ಬಿಬಿಎಂಪಿ (BBMP) ರಾಜಕಾಲುವೆ ಒತ್ತುವರಿ ತೆರವಿಗೆ (Encroachment of Rajkaluve) ಮುಂದಾಗಿದೆ. ಇಂದು ಬೆಳಗ್ಗೆ ನಗರದ ಹಲವೆಡೆ ಬುಲ್ಡೋಜರ್ ಸದ್ದು ಮಾಡಿವೆ. ಮಹಾದೇವಪುರದ ಚಿನ್ನಪ್ಪನಹಳ್ಳ ಭಾಗದಲ್ಲಿ ಒತ್ತುವರಿ ತೆರವಿಗೆ ತೆರವಿಗೆ ಪಾಲಿಕೆ ಮುಂದಾಗಿದೆ. ಅಕ್ರಮವಾಗಿ ನಿರ್ಮಿಸಿದ ಕಾಂಪೌಂಡ್ ವಾಲ್ ತೆರವು ಮಾಡಲಾಗುತ್ತಿದೆ. ಚಲಘಟ್ಟದಲ್ಲಿ ಅಕ್ರಮವಾಗಿ ಕಟ್ಟಲಾದ ಗೋಡೆ ಹೊಡೆದುರುಳಿಸಲಾಗಿದೆ.

ಇತ್ತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿ ನಾಥ್ ತಮ್ಮ ಹೇಳಿಕೆ ಬದಲಿಸಿದ್ದಾರೆ. ಈ ಸಂಬಂಧ ಪ್ರಶ್ನೆ ಮಾಡಿದ ಮಾಧ್ಯಮಗಳ ಮೇಲೆ ತುಷಾರ್ ಗಿರಿ ನಾಥ್ ಸಿಡಿಮಿಡಿಗೊಂಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ರಾಜಕಾಲುವೆ ತೆರವು ವಿಚಾರವಾಗಿ ಬಿಬಿಎಂಪಿ ಹಿಟ್ ಆಂಡ್ ರನ್ ಮಾಡ್ತಿದೆಯಾ ಅನ್ನೋ ಅನುಮಾನಗಳು ವ್ಯಕ್ತವಾಗಿವೆ.

ಹೇಳಿಕೆ ಬದಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ

ಈ ಹಿಂದೆ ಒತ್ತುವರಿ ತೆರವಿಗೆ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ತುಷಾರ್ ಗಿರಿ ನಾಥ್ ಹೇಳಿಕೆ ನೀಡಿದ್ದರು. ಇದೀಗ ನೋಟಿಸ್ ನೀಡುವ ಅನಿವಾರ್ಯತೆ ಇದೆ ಎಂದು ಉಲ್ಟಾ ಹೊಡೆದಿದ್ದಾರೆ.

ರಾಜಕಾಲುವೆ, ಕೆರೆ ಜಾಗ ಕಂದಾಯ ಇಲಾಖೆಗೆ ಸೇರಿದ್ದು ನಮಗೆ ಸೇರಿದ್ದಲ್ಲ. ಕಂದಾಯ ಇಲಾಖೆಗೆ ಸೇರಿದ್ದರಿಂದ ಅವರು ನೋಟಿಸ್ ಕೊಡ್ತಾರೆ. ಎನ್​ಜಿಟಿ ಕಾಯ್ದೆ ಎನ್ ಹೇಳುತ್ತೆ ಅನ್ನೋದನ್ನ ಓದಿಕೊಂಡು ಬನ್ನಿ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ  ಹಾಕಿದರು.

Bengaluru Flood Man swims in living room of luxurious villa mrq
ಬೆಂಗಳೂರು ವಿಲ್ಲಾ ಜಲಾವೃತ


36 ಕಡೆ ತೆರವು ಕಾರ್ಯಾಚರಣೆ

ಕೆರೆ, ರಾಜಕಾಲುವೆಯ ಪೂರ್ಣ ಮಾಲೀಕತ್ವ ಕಂದಾಯ ಇಲಾಖೆಯದ್ದು. ತಹಶೀಲ್ದಾರ್ ನೋಟಿಸ್ ನೀಡುವ ಕೆಲಸ ಮಾಡ್ತಾರೆ ಮತ್ತು ನಾವು ತೆರವು ಮಾಡ್ತೀವಿ. ಈಗಾಗಲೇ 36 ಕಡೆಗಳಲ್ಲಿ ತೆರವು ಕಾರ್ಯಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ:  Milk Price Hike: ಮತ್ತೆ ಹಾಲಿನ ದರ ಏರಿಕೆ, ಕಾಫಿ-ಟೀ ಕುಡಿಯೋದೂ ಕಷ್ಟ ಗುರೂ!

ಬೇರೊಬ್ಬರ ಆಸ್ತಿಯಲ್ಲ ಸರ್ವೆ ಮಾಡುವಾಗ ಕೋರ್ಟ್ ಅನುಮತಿ ಪಡೆಯುವ ಅಗತ್ಯವಿದೆ. ಕೋರ್ಟ್​ಗೆ ಕಾಲ ಕಾಲಕ್ಕೆ ಮಾಹಿತಿ ನೀಡುತ್ತಾ ಬರುತ್ತಿದ್ದೇವೆ. ಬಿಬಿಎಂಪಿಗೆ ಕೇವಲ ಫುಟ್​​ಪಾತ್, ರಸ್ತೆ ಒತ್ತುವರಿ ಅಗಿದ್ರೆ ಮಾತ್ರ ತೆರವಿಗೆ ಅವಕಾಶವಿದೆ ಎಂದು ಆಯುಕ್ತರು ತಿಳಿಸಿದರು.

ಹಲವರ ವಿರುದ್ಧ ಕ್ರಿಮಿನಲ್ ಕೇಸ್

ಒತ್ತುವರಿ ಆಗಿರೋ ಲೇಔಟ್​​ಗಳಿಗೆ ನೋಟಿಸ್ ನೀಡುವ ಕೆಲಸ ಕಂದಾಯ ಇಲಾಖೆ ಮಾಡುತ್ತದೆ. ನೋಟಿಸ್ ಕೊಟ್ಟು ತೆರವು ಮಾಡ್ತೀವಿ ನಿಮಗೆ ಚಿಂತೆಬೇಡ ಎಂದು ತುಷಾರ್ ಗಿರಿ ನಾಥ್​ ಹೇಳಿದರು. ನೋಟಿಸ್ ಕೊಟ್ಟು ತೆರವಿಗೆ ನ್ಯಾಯಾಲದಿಂದ ಸ್ಟೇ ತರುವ ಸಾಧ್ಯತೆ ಎನ್ನುವ ಮಾತನ್ನ ಒಪ್ಪದ ತುಷಾರ್ ಗಿರಿನಾಥ್, ಭೂ ಕಬಳಿಕೆ ಪ್ರಕರಣದಲ್ಲಿ ಕಂದಾಯ ಇಲಾಖೆ ಹಲವರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಿದೆ ಎಂದು ಹೇಳಿದರು.

ಪ್ರತಿಷ್ಠಿತ ವಿಲ್ಲಾದಲ್ಲಿ ಈಜಾಡಿದ ವ್ಯಕ್ತಿ

ವ್ಯಕ್ತಿಯೊಬ್ಬರು ವಿಲ್ಲಾದ ಲಿವಿಂಗ್ ರೂಮ್​ನಲ್ಲಿ ಈಜಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮನೆಯಲ್ಲಿ ಹಲವು ವಸ್ತುಗಳು ಜಲಾವೃತ ಆಗಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮನೆಯಲ್ಲಿದ್ದ ಪಿಯಾನೋ ಸಂಪೂರ್ಣವಾಗಿ ಜಲಾವೃತವಾಗಿದೆ.

ಇದನ್ನೂ ಓದಿ:  BJP vs Congress: ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಡಿಕೆಶಿ, ಖರ್ಗೆ, ಪರಮೇಶ್ವರ್‌: ಬಿಜೆಪಿ ಟ್ವೀಟ್

[caption id="attachment_831490" align="alignnone" width="1200"]BBMP serve notice to rainbow layout villa residence mrq ರೈನ್​​ಬೋ ಲೇಔಟ್[/caption]

ಮತ್ತೊಂದು ವಿಡಿಯೋದಲ್ಲಿ ವಿಲ್ಲಾದ ನಿವಾಸಿಗಳು ಟ್ರ್ಯಾಕ್ಟರ್​​ಗಳಲ್ಲಿ ಕುಳಿತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ವಿಲ್ಲಾ ಮುಂದೆ ನಿಲ್ಲಿಸಲಾಗಿರುವ ಐಷಾರಾಮಿ ಕಾರ್​ಗಳು ನೀರಿನಲ್ಲಿ ನಿಂತಿರೋದನ್ನು ಗಮನಿಸಬಹುದಾಗಿದೆ. ಕೋಟಿ ಕೋಟಿ ಹಣ ನೀಡಿ ವಿಲ್ಲಾ ಖರೀದಿಸಿದ್ರೂ ಜನರು ಈಗ ಎಲ್ಲವನ್ನೂ ತೊರೆದು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ.
Published by:Mahmadrafik K
First published: