Karnataka Rains: ರಾಜ್ಯದಲ್ಲಿ ಮುಂದುವರಿದ ಮಳೆ, ಹೆಬ್ಬಾಳೆ ಸೇತುವೆ ಮುಳುಗಡೆ, ಈ ಭಾಗದ ಶಾಲೆಗಳಿಗೆ ರಜೆ

ಕಳೆದ ವರ್ಷ ಇದೇ ಸಮಯಕ್ಕೆ 946.74 ಮಿಲಿ ಮೀಟರ್ ಮಳೆಯಾಗಿತ್ತು. ಆದ್ರೆ ಈ ಈ ಬಾರಿ ಮಳೆಯಾಗಿದ್ದು ಕೇವಲ 779.73 ಮಿಲಿ ಮೀಟರ್. ಕಳೆದ ವರ್ಷದ ಅಷ್ಟು ಮಳೆಯಾಗಿದ್ರೆ ಈ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿರಲಿಲ್ಲ

ಮಳೆ

ಮಳೆ

  • Share this:
ಕೊಡಗು ಜಿಲ್ಲೆಯಲ್ಲಿ (Kodagu District) ರಾತ್ರಿ ಇಡೀ ಮಳೆ (Rainfall) ಸುರಿದ ಪರಿಣಾಮ ಭಾಗಮಂಡಲದಲ್ಲಿ (Bhagamandala) ನೀರಿನ ಪ್ರಮಾಣ ಹೆಚ್ಚಳವಾಗಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದ್ದು, ಮಳೆ ತೀವ್ರಗೊಂಡಲ್ಲಿ ಭಾಗಮಂಡಲ ಮತ್ತು ಮಡಿಕೇರಿ ಸಂಪರ್ಕ (Bhagamandal To Madikeri)ಕಡಿತವಾಗುವ ಸಾಧ್ಯತೆಗಳಿವೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇತ್ತ ಚೆಂಬು ಮತ್ತು ಪೆರಾಜೆಯಲ್ಲಿ ಭಾನುವಾರ ಮತ್ತೆ ಲಘು ಭೂಕಂಪದ (Earthquake)ಅನುಭವ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ರಾತ್ರಿ ಸುಮಾರು 9.20 ಗಂಟೆಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದರಿಂದ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ. ಪದೇ ಪದೇ ಭೂಕಂಪನದಿಂದ ಮನೆಯಲ್ಲಿರಲು ಭಯ ಆಗ್ತಿದೆ ಎಂದು ಪೆರಾಜ್ ಚೆಂಬು ಗ್ರಾಮದ ನಿವಾಸಿಗಳು ಹೇಳುತ್ತಿದ್ದಾರೆ.

ಕೊಡಗಿನಲ್ಲಿ ಮೂರೇ ದಿನದ ಮಳೆಗೆ ಭೂಕುಸಿತ ಆಗುತ್ತಿರುವುದೇಕೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ನಿಜವಾಗಲೂ ಕೊಡಗಿನಲ್ಲಿ ಭೂಕುಸಿತವಾಗುವಷ್ಟು ಮಳೆ ಸುರಿದಿದೆಯಾ ಎಂದು ಸ್ಥಳೀಯರು ತಮ್ಮನ್ನ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಮಳೆ ಕಡಿಮೆಯಾಗಿದೆ.

ಈ ಬಾರಿ 779.73 ಮಿ.ಮೀ . ಮಳೆ

ಕಳೆದ ವರ್ಷ ಇದೇ ಸಮಯಕ್ಕೆ 946.74 ಮಿಲಿ ಮೀಟರ್ ಮಳೆಯಾಗಿತ್ತು. ಆದ್ರೆ ಈ ಈ ಬಾರಿ ಮಳೆಯಾಗಿದ್ದು ಕೇವಲ 779.73 ಮಿಲಿ ಮೀಟರ್. ಕಳೆದ ವರ್ಷದ ಅಷ್ಟು ಮಳೆಯಾಗಿದ್ರೆ ಈ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿರಲಿಲ್ಲ. ಈ ಬಾರಿ ಜೂನ್ 23 ರಿಂದ ಜಿಲ್ಲೆಯಲ್ಲಿ ನಿರಂತರ ಭೂಕಂಪನವಾಗಿದೆ.

ಇದನ್ನೂ ಓದಿ:  Congress ಹಿರಿಯ ನಾಯಕರ ಹೇಳಿಕೆಗಳು ಪಕ್ಷಕ್ಕೆ ಇರುಸು ಮುರುಸು ತರುತ್ತಿದೆ; ಡಿಕೆ ಸುರೇಶ್ ಅಸಮಾಧಾನ

ಒಟ್ಟು ಎಂಟು ಬಾರಿ ಭೂಕಂಪನ

ಮಡಿಕೇರಿ ತಾಲ್ಲೂಕಿನ ಚೆಂಬು, ಕರಿಕೆ ಗ್ರಾಮಗಳ ಸಮೀಪ ಭೂಕಂಪನವಾಗಿತ್ತು. ಪರಿಣಾಮ ಮಡಿಕೇರಿ ತಾಲ್ಲೂಕಿನಾದ್ಯಂತ ಭೂಮಿ ಕಂಪಿಸಿತ್ತು. 23 ನೇ ತಾರೀಖಿನಿಂದ ಜುಲೈ 1 ರವವರೆಗೆ 8 ಬಾರಿ ಭೂಕಂಪನವಾಗಿತ್ತು. ಇದೀಗ ಮಡಿಕೇರಿಯಲ್ಲೇ ಭೂಕುಸಿತ ಆಗುತ್ತಿರೋದಕ್ಕೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಕರಿಕೆ, ಚೆಂಬು ಮತ್ತು ಮದೆನಾಡು ಸುತ್ತಮುತ್ತವೇ ಸಣ್ಣ ಪ್ರಮಾಣದ ಭೂಕುಸಿತವಾಗುತ್ತಿದೆ.

2018ರಲ್ಲಿನ ಇದೇ ರೀತಿ ಆಗಿತ್ತು

ಇದೇ ಸ್ಥಿತಿ 2018 ರಲ್ಲೂ ಆಗಿತ್ತು. 2018 ರ ಜುಲೈ 7 ರಂದು ಮಡಿಕೇರಿ ತಾಲ್ಲೂಕಿನಲ್ಲಿ ಭೂಕಂಪನವಾಗಿತ್ತು. ಬಳಿಕ ಆರಂಭವಾದ ಮಳೆಗೆ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತವಾಗಿತ್ತು. ಈಗಲೂ ಯತಾವಥ್ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತವಾಗುತ್ತಿದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಏನು ಆಗಲ್ಲ ಎನ್ನುತ್ತಿದ್ದಾರೆ. ಭೂಕಂಪನ ಇದೆಲ್ಲಾ ಪ್ರಕೃತಿಯ ನೈಸರ್ಗಿಕ ಕ್ರಿಯೆ ಎನ್ನುತ್ತಿದ್ದಾರೆ. ಭೂಮಿ ಎಲ್ಲೂ ಬಿರುಕು ಬಿಟ್ಟಿಲ್ಲ. ಹೀಗಾಗಿ ಯಾವುದೇ ಆತಂಕ ಬೇಡ ಎನ್ನುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಶಾಲೆಗಳಿಗೆ ರಜೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಅಂಕೋಲಾ, ಕುಮಟಆ, ಅಂಕೋಲಾ ಮತ್ತು ಕಾರವಾರ ಭಾಗದಲ್ಲಿ ಎರಡು ದಿನಗಳ ಬಳಿಕ ಮತ್ತೆ ಮಳೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದೆ. ಭಾರೀ ಮಳೆಯಾಗುತ್ತಿರುವ ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಣ್ಣೆ ನಗರಿ ದಾವಣಗೆರೆಯಲ್ಲಿ ವರುಣನ ಅಬ್ಬರ

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬೆಳಗ್ಗೆ 6.30ರಿಂದ ಮಳೆಯಾಗುತ್ತಿದೆ. ಮಳೆಯಿಂದ ಶಾಲೆ-ಕಾಲೇಜಿಗೆ, ಕೆಲಸಕ್ಕೆ ಹೋಗುವವರ ಪರದಾಟ ನಡೆಸುವಂತಾಯ್ತು. ಇತ್ತ ಮಳೆ ಆಗಮನದಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಇದನ್ನೂ ಓದಿ:  Mahadayi Issue: ಮಹದಾಯಿ ನೀರು ಪಡೆಯಲು ಸರ್ಕಾರದ ಮಾಸ್ಟರ್ ಪ್ಲಾನ್; ಕಾಂಗ್ರೆಸ್ ಪಾದಯಾತ್ರೆಗೂ ಮುನ್ನ ಘೋಷಣೆ

ಚಿಕ್ಕಮಗಳೂರಿನಲ್ಲಿಯೂ ಮಳೆ

ಕಾಫಿನಾಡು ಕುದುರೆಮುಖ ಸುತ್ತಮುತ್ತ ಇಡೀ ರಾತ್ರಿ ಮಳೆಯಾಗಿದ್ದು, ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ಗು, ಕಳಸ- ಹೊರನಾಡು ದೇವಸ್ಥಾನ ಸಂಪರ್ಕ ಕಡಿತವಾಗಿದೆ. ಸೇತುವೆ ಮೇಲೆ ಎರಡು ಅಡಿ ನೀರು ಹರಿಯುತ್ತಿದೆ. ಪ್ರತಿ ಮಳೆಗಾಲದಲ್ಲಿಯೂ ಹೆಬ್ಬಾಳೆ ಸೇತುವೆ ಮುಳಗಡೆ ಆಗುತ್ತದೆ.
Published by:Mahmadrafik K
First published: