Karnataka Weather Today: ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ: ಎಲ್ಲೆಲ್ಲಿ ಮಳೆ?

ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ ವಾಯುಭಾರ ಕುಸಿತ (Low Pressure) ಹಿನ್ನೆಲೆ ಕಳೆದ ಮೂರ್ನಾಲ್ಕು ದಿನಗಳಿಂದ  ರಾಜ್ಯದ (Karnataka) ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇಂದು ಸಹ ಮೋಡ ಮತ್ತು ಸೂರ್ಯನ ನಡುವೆ ಈ ಆಟ ನಡೆಯಲಿದೆ.

ಸಾಂದರರ್ಭಿಕ ಚಿತ್ರ

ಸಾಂದರರ್ಭಿಕ ಚಿತ್ರ

  • Share this:
ಬೆಂಗಳೂರು: ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ ವಾಯುಭಾರ ಕುಸಿತ (Low Pressure) ಹಿನ್ನೆಲೆ ಕಳೆದ ಮೂರ್ನಾಲ್ಕು ದಿನಗಳಿಂದ  ರಾಜ್ಯದ (Karnataka) ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇಂದು ಸಹ ಮೋಡ ಮತ್ತು ಸೂರ್ಯನ ನಡುವೆ ಈ ಆಟ ನಡೆಯಲಿದೆ. ಬೆಂಗಳೂರು (Bengaluru Rainfall)ಸೇರಿದಂತೆ ಮೈಸೂರು ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಮತ್ತು ಒಳನಾಡಿನಲ್ಲಿ ಮಳೆಯ ಸಣ್ಣ ಸಿಂಚನ (Rain) ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್, ಮಂಗಳೂರು 31-25, ಉಡುಪಿ 32-25, ಚಿಕ್ಕಮಗಳೂರು 26-19, ಹಾಸನ 26-19, ಕೋಲಾರ 24-20, ಶಿವಮೊಗ್ಗ 31-22, ದಾವಣಗೆರೆ 31-22, ಧಾರವಾಡ 31-22, ವಿಜಯಪುರ 32-22, ರಾಯಚೂರು 31-23, ಬಳ್ಳಾರಿ 31-23, ಕಲಬುರಗಿ 32-22, ಬೀದರ್ 30-19ರಷ್ಟು ತಾಪಮಾನ ಇರಲಿದೆ.

ಕರ್ನಾಟಕದ ಡ್ಯಾಂಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.  ಈ ಹಿನ್ನೆಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:  Astrology: ಈ ರಾಶಿಯವರಿಗೆ ದೊಡ್ಡ ವ್ಯಕ್ತಿಯ ಬೆಂಬಲದಿಂದ ಕೆಲಸಗಳು ಸುಲಭವಾಗುತ್ತವೆ; 12 ರಾಶಿಗಳ ದಿನ ಭವಿಷ್ಯ ಹೀಗಿದೆ

11 ವರ್ಷಗಳ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಭರ್ತಿ

11 ವರ್ಷಗಳ ಬಳಿಕ  ಅಕ್ಟೋಬರ್ ಅಂತ್ಯದಲ್ಲಿ  ಕೆಆರ್ ಎಸ್ (KRS Dam) ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ನಲ್ಲಿಯೇ ಕೆಆರ್ ಎಸ್ ಭರ್ತಿಯಾಗುತ್ತಿತ್ತು. 2009ರಲ್ಲಿ ಅಕ್ಟೋಬರ್ 28ರಂದು ತುಂಬಿತ್ತು. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆ (Monsoon Rains) ಸುರಿಯದ ಕಾರಣ ನೀರು ಹರಿದು ಬಂದಿರಲಿಲ್ಲ. ಡ್ಯಾಂ ಭರ್ತಿಯಾಗದ ಹಿನ್ನೆಲೆ ರೈತರಲ್ಲಿ ಆತಂಕ ಮನೆ ಮಾಡಿತ್ತು . ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಶುರುವಾಗಿತ್ತು.

ಕೇರಳದಲ್ಲಿ ಮಂಗಳವಾರದವರೆಗೆ ಆರೆಂಜ್ ಅಲರ್ಟ್

ಕಳೆದ ನಾಲ್ಕೈದು ದಿನಗಳಿಂದ ಕೇರಳದ 12 ಜಿಲ್ಲೆಗಳಲ್ಲಿ ಯೆಲ್ಲೂ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈಗ ಜಿಲ್ಲೆಗಳಲ್ಲಿ ಸಂಖ್ಯೆ 5ಕ್ಕೆ ಇಳಿದಿದ್ದು, ಈ ವ್ಯಾಪ್ತಿಯಲ್ಲಿಯೇ ಮಂಗಳವಾರದವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:  Kalaburagi Crime News: ತಂಗಿಯನ್ನು ಓಡಿಸಿಕೊಂಡು ಹೋಗಿದವನ ಹೆಣ ಕೆಡವಿದ್ದ ಅಣ್ಣ; ಆರೋಪಿಗಳು ಅಂದರ್

ತಿರುವನಂತಪುರ, ಕೊಟ್ಟಾಯಂ, ಇದುಕ್ಕಿ, ಪಥನಂಮಿಟ್ಟಾ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಅಂದಾಜು 11-20 ಸೆಂ.ಮೀ.ವರೆಗೆ ಮಳೆಯಾಗಲಿದೆ. ಈ ಐದು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ಅಲ್ಲಪೂಜಾ, ಎರ್ನಾಕುಲಂ, ತ್ರಿಶೂರ್, ಪಾಲಕಡ್ ಮತ್ತು ಮಲ್ಲಪುರಂನಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.

ತಮಿಳುನಾಡು ಮತ್ತು ಶ್ರೀಲಂಕಾ ಕರಾವಳಿ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಿದ್ದು, ಸಮುದ್ರ ಮಟ್ಟದಿಂದ 3.1 ಕಿಲೋ ಮೀಟರ್ ವರೆಗೆ ಚಂಡಮಾರುತದ ಪರಿಚಲನೆ ವಿಸ್ತರಿಸಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಚಂಡಮಾರುತ ಪಶ್ಚಿಮದತ್ತ ನಿಧಾನವಾಗಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ

ಶನಿವಾರ ಹಾಸನದಲ್ಲಿ ಜೋರು ಮಳೆ

ಶನಿವಾರ ಸಂಜೆ ಆರು ಗಂಟೆಯಿಂದಲೇ ಹಾಸನ ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸಂಜೆ ಆರಂಭವಾದ ಮಳೆಗೆ ವ್ಯಾಪಾರಸ್ಥರು ಸೇರಿದಂತೆ ಜನರು ಹೈರಾಣದರು. ರಸ್ತೆಗಳಲ್ಲಿ ನೀರು ನದಿಗಳಂತೆ ಹರಿದ ದೃಶ್ಯಗಳು ಕಂಡು ಬಂದವು. ಹಾಸನದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ.

ಉಡುಪಿ, ಮಂಗಳೂರು ಮತ್ತು ಉತ್ತರ  ಕನ್ನಡ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ ಹಾಗಾಗಿ ಸಮುದ್ರ ತೀರದ ಮತ್ತು ಮೀನುಗಾರರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ
Published by:Mahmadrafik K
First published: