Karnataka Weather Report: ಹವಾಮಾನ ಇಲಾಖೆ ನೀಡಿರುವ ಮಳೆಯ ಅಲರ್ಟ್ (Rain Alert) ಇನ್ನೆರಡು ದಿನ ಇದೆ. ಈಗಾಗಲೇ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ (Rainfall) ಜನರು ಹೈರಾಣು ಆಗಿದ್ದಾರೆ. ತಾಲೂಕಿನಲ್ಲಿ ಮಳೆಯ ಪ್ರಮಾಣ ನೋಡಿಕೊಂಡು ಅಲ್ಲಿಯ ತಹಶೀಲ್ದಾರ ಮತ್ತು ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಶಾಲಾ –ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿದ್ದಾರೆ. ಕೊಡಗು(Kodagu Rains) ಜಿಲ್ಲೆಯಲ್ಲಿ ಮತ್ತೆ ಜಲಸ್ಫೋಟವಾಗಿದ್ದು, ಮುಂದೇನು ಮತ್ಯಾವ ಅನಾಹುತ ಉಂಟಾಗುತ್ತೆ ಅನ್ನೋ ಆತಂಕದಲ್ಲಿ ಜನರು ದಿನ ಕಳೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಮಳೆ ಮುಂದುವರಿದಿದೆ. ಇಂದು ಗರಿಷ್ಠ 24 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)
ಬೆಂಗಳೂರು 24-19, ಮೈಸೂರು 24-20, ಚಾಮರಾಜನಗರ 24-21, ರಾಮನಗರ 26-21, ಮಂಡ್ಯ 25-21, ಬೆಂಗಳೂರು ಗ್ರಾಮಾಂತರ 25-19, ಚಿಕ್ಕಬಳ್ಳಾಪುರ 26-20, ಕೋಲಾರ 26-21, ಹಾಸನ 24-19, ಚಿತ್ರದುರ್ಗ 26-21, ಚಿಕ್ಕಮಗಳೂರು 23-18, ದಾವಣಗೆರೆ 27-22, ಶಿವಮೊಗ್ಗ 26-21, ಕೊಡಗು 21-18, ತುಮಕೂರು 26-20, ಉಡುಪಿ 27-24
ಮಂಗಳೂರು 27-24, ಉತ್ತರ ಕನ್ನಡ 26-21, ಧಾರವಾಡ 27-21, ಹಾವೇರಿ 27-22, ಹುಬ್ಬಳ್ಳಿ 27-21, ಬೆಳಗಾವಿ 27-20, ಗದಗ 27-21, ಕೊಪ್ಪಳ 28-22, ವಿಜಯಪುರ 27-22, ಬಾಗಲಕೋಟ 28-22, ಕಲಬುರಗಿ 29-23, ಬೀದರ್ 27-22, ಯಾದಗಿರಿ 30-24, ರಾಯಚೂರ 30-23 ಮತ್ತು ಬಳ್ಳಾರಿ 29-23
ಸುಳ್ಯ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ,ಕಡಬ ತಾಲೂಕಿನಲ್ಲಿ ಮಳೆ ಮುಂದುವರಿದ ಪರಿಣಾಮ ಇಂದು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ರಜೆ ಘೋಷಣೆ ಮಾಡಿದ್ದಾರೆ. ಇನ್ನೂ ಕಡಬ ತಾಲೂಕಿನ ಪರಿಸ್ಥಿತಿ ನೋಡಿ ರಜೆ ನೀಡಲು ತಹಶೀಲ್ದಾರ್, ಬಿಇಓಗೆ ಅವರಿಗೆ ಸೂಚನೆ ನೀಡಲಾಗಿದೆ.
ಜನವಸತಿ ಪ್ರದೇಶಗಳು ಜಲಾವೃತ
ಬಾಗಲಕೋಟೆ ಜಿಲ್ಲೆಯಲ್ಲಿಯೂ ಮಳೆ ಮುಂದುವರಿದಿದೆ. ಬುಧವಾರ ಸಂಜೆ ಬಾದಾಮಿ ತಾಲೂಕಿನಾದ್ಯಂತೆ ಜೋರು ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಚಿಮ್ಮನಕಟ್ಟಿ, ಗೋವನಕೊಪ್ಪ & ಕುಳಗೇರಿ ಕ್ರಾಸ್ ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಳೆಯ ನಡುವೆಯೇ ಜನರು ಮನೆಯ ವಸ್ತುಗಳನ್ನು ಬೇರೆಡೆ ಸ್ಥಳಾಂತರಿಸುವ ದೃಶ್ಯ ಕಂಡು ಬಂತು. ಚಿಮ್ಮನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಆವರಣ ಜಲಾವೃತಗೊಂಡಿದೆ.
ಕೆಸರಿನಲ್ಲಿ ಸಿಲುಕಿದ ಬಸ್
ಕೊಪ್ಪಳದಲ್ಲೂ ಮಳೆಯಾಗುತ್ತಿದ್ದು ಬಸ್ ಒಂದು ಕೆಸರಿನಲ್ಲಿ ಸಿಲುಕಿ ವಿದ್ಯಾರ್ಥಿಗಳು ಪರದಾಡುವಂತಾಯ್ತು. ನಂತರ ಕ್ರೇನ್ ಮೂಲಕ ಬಸ್ನ್ನು ಕೆಸರಿನಿಂದ ಹೊರತೆಗೆಯಲಾಯ್ತು.
ಮಂಡ್ಯದಲ್ಲಿ ಮಳೆ ಹಿನ್ನೆಲೆ ಕೆ.ಆರ್.ಪೇಟೆ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಂಡ್ಯದಲ್ಲಿ ಮಳೆ ನಡುವೆ ಈಗ ಹಾವುಗಳ ಕಾಟ ಶುರುವಾಗಿದೆ. ಪೊಲೀಸ್ ವಸತಿ ಗೃಹದ ಸುತ್ತ ಹಾವುಗಳು ಪ್ರತ್ಯಕ್ಷವಾಗಿದೆ. ಮಂಡ್ಯದಲ್ಲಿ ಮಳೆ ಹಿನ್ನೆಲೆ ಬೆಂಗಳೂರು- ಮೈಸೂರು ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ.
ಸಂಪಾಜೆಯಲ್ಲಿ ನಿಲ್ಲದ ಮಳೆ ತುಂಬಿ ಹರಿಯುತ್ತಿರುವ ಪಯಶ್ವಿನಿ
ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿಡುವುದು ನೀಡಿದ್ದ ಮಳೆ ಸೋಮವಾರ ಸಂಜೆಯಿಂದ ತಡರಾತ್ರಿವರೆಗೆ ಭಾರೀ ಪ್ರಮಾಣದಲ್ಲಿ ಸುರಿದಿದೆ. ಪರಿಣಾಮವಾಗಿ ಪಯಶ್ವಿನಿ ನದಿ (River) ಉಕ್ಕಿ ಹರಿದು ಕೊಯಿನಾಡು ಮತ್ತು ಕಲ್ಲುಗುಂಡಿಗಳಲ್ಲಿ ಪ್ರವಾಹದಿಂದ (Flood) ಹತ್ತಾರು ಮನೆಗಳು ತೀವ್ರ ಮುಳುಗಡೆಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.
ಇದನ್ನೂ ಓದಿ: Rain Update: ರಾಜ್ಯದಲ್ಲಿ ನಿಲ್ಲದ ಮಳೆಯಬ್ಬರ, ಹಲವೆಡೆ ಅವಾಂತರ - ಎಲ್ಲೆಲ್ಲಿ ಏನಾಯ್ತು?
ಸಂಪಾಜೆ ಭಾಗದಲ್ಲಿ ಮಳೆಯಾಗುತ್ತಿದ್ದು, ಪಯಶ್ವಿನಿ ನದಿ ಉಕ್ಕಿ ಹರಿದಿದ್ದ ಹಿನ್ನೆಲೆಯಲ್ಲಿ ಮೇಲ್ಭಾಗದಿಂದ ನದಿಯಲ್ಲಿ (River) ತೇಲಿ ಬಂದ ಬಾರಿ ಗಾತ್ರದ ನೂರಾರು ಮರಗಳು ಕೊಯಿನಾಡಿನ ಕಿಂಡಿ ಅಣೆಕಟ್ಟೆಯಲ್ಲಿ (Dam) ಸಿಲುಕಿಕೊಂಡಿದ್ದವು.
ಭಟ್ಕಳದ ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಮನೆಯಲ್ಲಿದ್ದ ನಾಲ್ವರು ಧಾರುಣವಾಗಿ ಸಾವು ಕಂಡಿದ್ದಾರೆ. ಮೃತರು ನಾರಾಯಣ್ ನಾಯ್ಕ್ (60), ಮಗಳು ಲಕ್ಷ್ಮೀ ನಾರಾಯಣ್ ನಾಯ್ಕ್ (45), ಮಗ ಅನಂತ ನಾರಾಯಣ್ ನಾಯ್ಕ್ (38), ಇವರ ಸಂಬಂಧಿ ಪ್ರವೀಣ್ ರಾಮಕೃಷ್ಣ ನಾಯ್ಕ್ (16) ಸಾವು ಕಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ