ಮಲೆನಾಡಿನಲ್ಲಿ ವರುಣನ ಆರ್ಭಟ; ಮತದಾರರಿಗೆ ತಂಪೆರೆದ ಮಳೆರಾಯ

ಬಿಸಿಲ ಝಳಕ್ಕೆ ತತ್ತರಿಸಿದ್ದ ಶಿವಮೊಗ್ಗ, ಭದ್ರಾವತಿ, ಉತ್ತರ ಕನ್ನಡದ ಹಲವೆಡೆ ಇಂದು ಮಧ್ಯಾಹ್ನ ವರುಣ ಸಿಂಚನವಾಗಿದೆ. ಮತದಾನದ ಮಧ್ಯಾಹ್ನ ಸುರಿದ ಮಳೆಗೆ ಹಲವೆಡೆ ಮತದಾನಕ್ಕೆ ಅಡ್ಡಿಯಾಗಿದೆ

Seema.R | news18
Updated:April 23, 2019, 6:08 PM IST
ಮಲೆನಾಡಿನಲ್ಲಿ ವರುಣನ ಆರ್ಭಟ; ಮತದಾರರಿಗೆ ತಂಪೆರೆದ ಮಳೆರಾಯ
ಮಳೆ ಚಿತ್ರ
  • News18
  • Last Updated: April 23, 2019, 6:08 PM IST
  • Share this:
ಶಿವಮೊಗ್ಗ (ಏ.23): ಬಿಸಿಲ ಬೇಗೆಯಲ್ಲಿ ಚುನಾವಣಾ ಪ್ರಚಾರದಿಂದ ಕಾವು ಪಡೆದಿದ್ದ ಮಲೆನಾಡಿಗೆ ಮತದಾನದಂದು ಮಳೆರಾಯ ತಂಪೆರೆದಿದ್ದಾನೆ.

ಬಿಸಿಲ ಝಳಕ್ಕೆ ತತ್ತರಿಸಿದ್ದ ಶಿವಮೊಗ್ಗ, ಭದ್ರಾವತಿ, ಉತ್ತರ ಕನ್ನಡದ ಹಲವೆಡೆ ಇಂದು ಮಧ್ಯಾಹ್ನ ವರುಣ ಸಿಂಚನವಾಗಿದೆ. ಮತದಾನದ ಮಧ್ಯಾಹ್ನ ಸುರಿದ ಮಳೆಗೆ ಹಲವೆಡೆ ಮತದಾನಕ್ಕೆ ಅಡ್ಡಿಯಾಗಿದೆ.

ಶಿವಮೊಗ್ಗದಲ್ಲಿ ಸುರಿದ ಭಾರೀ ಮಳೆಗೆ  ಅನೇಕ ಕಡೆ ಮರಗಳು ನೆಲಕ್ಕೆ ಉರುಳಿವೆ. ಅಲ್ಲದೇ ವಿದ್ಯುತ್​ ಕಡಿತದಿಂದಾಗಿ ಬಹುತೇಕ ಮತಗಟ್ಟೆಯಲ್ಲಿ ತೊಂದರೆಯಾಗಿದೆ. ​ಭದ್ರಾವತಿಯ
ಹುತ್ತಾಕಾಲೋನಿ, ನ್ಯೂಟೌನ್, ಜನ್ನಾಪುರ, ವಿಐಎಸ್​ಎಲ್, ಎಂಪಿಎಂ, ಓಲ್ಡ್ ಟೌನ್, ರಂಗಪ್ಪ ಸರ್ಕಲ್, ಹೊಸಮನೆ, ಮಾಧವಾಚಾರ್ ಸರ್ಕಲ್, ಜಯಶ್ರೀ ಸರ್ಕಲ್, ಸಿದ್ದಾರೂಢ ನಗರ, ಗಾಂಧೀನಗರ, ಅನ್ವರ್ ಕಾಲೋನಿ, ಇಂದಿರಾನಗರ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಿದೆ. ಬಿಸಿಲಿನಿಂದ ತತ್ತರಿಸಿದ್ದ ಮನಸ್ಸಗಳಿಗೆ ಮಳೆ ತಣ್ಣನೆಯ ಅನುಭವ ನೀಡಿದೆ.ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಶಿರಸಿಯಲ್ಲಿ ಮಳೆಯ ಆರ್ಭಟ ತೋರಿದ್ದಾನೆ. ಗುಡುಗು ಸಹಿತ ಸುರಿದ ಭಾರೀ ಮಳೆಯಿಂದ ಮತದಾನಕ್ಕೆ ಅಡ್ಡಿಯಾಗಿದೆ. ಮತದಾನ ಮುಕ್ತಾಯಕ್ಕೆ ಕೆಲವೇ ಗಂಟೆಗಳಿರುವಾಗ ಮಳೆಯಾಗಿದೆ. ಇದರಿಂದ ಶೇಕಡಾವಾರು ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನು ಓದಿ: ಮೊದಲ ಬಾರಿ ಮತ ಚಲಾಯಿಸಿದ ಸಂತಸದಲ್ಲಿ ಜನಾರ್ದನ​​ ರೆಡ್ಡಿ ಮಗ ಕಿರೀಟಿ; ಮತದಾನಕ್ಕಾಗಿ ಲಂಡನ್​ನಿಂದ ಆಗಮನಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ವರುಣನ ಅಬ್ಬರ ಮುಂದುವರೆದಿದ್ದು, ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಮೂಡಿಗೆರೆಯ ಕಳಸ, ಎನ್.ಆರ್.ಪುರದ ಬಾಳೆಹೊನ್ನೂರು ಸುತ್ತಮುತ್ತ ಭಾರೀ ಮಳೆಯಾಗಿದೆ. ಗುಡುಗು- ಮಿಂಚು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರಣಬಿಸಿಲಿಗೆ ಬೇಸತ್ತಿದ್ದ ಮಲೆನಾಡಿಗರಲ್ಲಿ ಸಂತಸ ಮೂಡಿದೆ.

 

ಗೋಕರ್ಣ, ಮುರುಡೇಶ್ವರ ಮತ್ತು ಚಿಕ್ಕಮಗಳೂರಿ ಹಾಗೂ ಕರಾವಳಿ ಸೇರಿದಂತೆ ಅನೇಕ ಕಡೆ ಭಾರೀ ಮಿಂಚು ಮತ್ತು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

First published: April 23, 2019, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading