ಬೆಂಗಳೂರು: ರಾಜಧಾನಿಯಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ (Bengaluru Rain) ಆರ್ಭಟ ಜೋರಾಗಿದ್ದು, ಜನರು ಪರದಾಡುವಂತಾಗಿದೆ. ನಗರದ ಮಲ್ಲೇಶ್ವರಂ, ಸದಾಶಿವನಗರ, ಮೆಜೆಸ್ಟಿಕ್, ಹೆಬ್ಬಾಳದಲ್ಲಿ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇತ್ತ, ಕಾರ್ಪೊರೇಷನ್, ವಿಧಾನಸೌಧ ಸುತ್ತಮುತ್ತ ಹಾಗೂ ಶಿವಾನಂದ ಸರ್ಕಲ್ ಮಳೆ ಸುರಿದಿದ್ದು, ರೈಲ್ವೇ ಅಂಡರ್ಪಾಸ್ಗೂ ನೀರು ನುಗ್ಗಿ ಅವಾಂತವಾಗಿದೆ. ಕೆ.ಆರ್ ಸರ್ಕಲ್ (KR Circle) ಬಳಿ ಅವಾಂತರ ಹಿನ್ನೆಲೆ ವ್ಯಕ್ತಿಯೋರ್ವ ಅಂಡರ್ ಪಾಸ್ ಬಳಿ ನಿಂತು ವಾಹನಗಳನ್ನ ಬೇರೆ ಕಡೆ ಹೋಗಲು ಸೂಚನೆ ನೀಡಿದ್ದಾರೆ.
ಬಿಟಿಎಂ ಲೇಔಟ್ನಲ್ಲಿ ಸುರಿದ ಮಳೆಯಿಂದಾಗಿ ಜನರು ಪರದಾಡಿದ್ದಾರೆ. ದೇವರ ಚಿಕ್ಕನಹಳ್ಳಿ ವಿಜಯ್ ಬ್ಯಾಂಕ್ ಲೇಔಟ್ ಬಳಿ ರಾಜಕಾಲುವೆ ಕಾಮಗಾರಿ ಹಿನ್ನೆಲೆ ರಸ್ತೆ ಮೇಲೆಲ್ಲ ಮಳೆ ನೀರು ನಿಂತಿದ್ದು, ಬೈಕ್, ಕಾರು ಮಳೆ ನೀರಲ್ಲಿ ಮುಳುಗಿದ್ದು, ದೇವರಚಿಕ್ಕನಹಳ್ಳಿಯ ಹತ್ತಕ್ಕೂ ಹೆಚ್ಚು ರಸ್ತೆ ಜಲಾವೃತವಾಗಿದೆ.
ಮನೆಗಳಿಗೆ ನುಗ್ಗಿದ ನೀರು
ಅಪಾರ್ಟ್ಮೆಂಟ್ ಬೇಸ್ಮೆಂಟ್ ಹಾಗೂ ಎರಡ್ಮೂರು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಕೆರೆಯಂತಾಗಿದೆ. ಇನ್ನು ಕಾಮಗಾರಿ ನಿರ್ಲಕ್ಷ್ಯ ಹಿನ್ನೆಲೆ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.
ಮತ್ತೆ ಅನುಗ್ರಹ ಲೇಔಟ್ ಜಲಾವೃತ
ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ಮಳೆಯಿಂದಾಗಿ ಜಲಾವೃತವಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ತಗ್ಗುಪ್ರದೇಶದಲ್ಲಿರೋ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡಿದ್ದಾರೆ. ಮೂರ್ನಾಲ್ಕು ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಮನೆಯ ಮೆಟ್ಟಿಲವರೆಗೂ ನೀರು ನಿಂತಿದೆ.
ಇನ್ನೂ ಎರಡು ದಿನ ಮಳೆ ಅಲರ್ಟ್
ಬೆಂಗಳೂರಿನಲ್ಲಿ ಇನ್ನು ಎರಡ್ಮೂರು ದಿನ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲಿ ಮಿಂಚು, ಗುಡುಗು ಸಹಿತ ಮಳೆ ಆಗಲಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Train Missing: ಬುಕ್ ಆಗಿರೋ ಟ್ರೇನ್ ಮಿಸ್ ಆಯ್ತಾ? ಈ ಸಿಂಪಲ್ ಟಿಪ್ಸ್ ಮೂಲಕ ಹಣ ರೀಫಂಡ್ ಮಾಡಿಕೊಳ್ಳಿ
ರಾಜ್ಯದ ಹಲವೆಡೆ ಮಳೆ ಬೀಳಲಿದೆ. ಇನ್ನು ನಾಲ್ಕು ದಿನ ಬೆಂಗಳೂರಿನಲ್ಲಿ ನೆಲಗಾಳಿ ಸಹಿತ ಮಳೆ ಬೀಳುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ