Karnataka Weather: ಇಂದು ಗುಡುಗು ಸಹಿತ ಮಳೆ; ಈ ಭಾಗದಲ್ಲಿರಲಿದೆ ವರುಣನ ಅಬ್ಬರ

ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಹಾಗೂ ತುಮಕೂರು, ಚಿತ್ರದುರ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗದಲ್ಲಿ ಇನ್ನೆರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ (Karnataka Rains) ಜೋರು ಮಳೆಯಾಗುತ್ತಿದೆ. ಅದರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಸಂಜೆಯ ನಂತರ ಸುರಿಯುವ ಮಳೆಗೆ ವಾಹನ ಸವಾರರು ಹೈರಾಣು ಆಗ್ತಿದ್ದಾರೆ. ಶನಿವಾರ ಸಂಜೆಯ ನಂತರ ಬೆಂಗಳೂರಿನ ಮೆಜೆಸ್ಟಿಕ್, ಕಾರ್ಪೋರೇಷನ್, ಶಾಂತಿ ನಗರ, ರಾಜಾಜಿ ನಗರ, ಕೆಆರ್ ಮಾರ್ಕೆಟ್, ಯಶವಂತಪುರ, ಜಾಲಹಳ್ಳಿ, ಆರ್ ಟಿ ನಗರ ಸುತ್ತಮುತ್ತ ಮಿಂಚು ಗುಡುಗು (Lighting And Thundering) ಸಹಿತ ಮಳೆಯಾಗಿದೆ. ಇಂದು ಸಹ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಯಾವುದೇ ಅಲರ್ಟ್ ಘೋಷಣೆ ಮಾಡಿಲ್ಲ. ಇನ್ನುಳಿದಂತೆ ಮಂಗಳೂರು, ಉಡುಪಿ, ಹಾಸನ, ಶಿವಮೊಗ್ಗ ಭಾಗದಲ್ಲಿಯೂ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿಯೂ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಿದ್ದು, ಚದುರಿದ ರೀತಿಯಲ್ಲಿ ಮಳೆಯಾಗಿದೆ.  

ಇಂದು ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 28 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 28-21, ಮೈಸೂರು 27-21, ಚಾಮರಾಜನಗರ 29-21, ರಾಮನಗರ 28-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 28-21, ಚಿಕ್ಕಬಳ್ಳಾಪುರ 29-20, ಕೋಲಾರ 29-22, ಹಾಸನ 27-19, ಚಿತ್ರದುರ್ಗ 29-19, ಚಿಕ್ಕಮಗಳೂರು 26-19, ದಾವಣಗೆರೆ 29-22, ಶಿವಮೊಗ್ಗ 29-22, ಕೊಡಗು 24-18, ತುಮಕೂರು 27-21

ಉಡುಪಿ 29-25, ಮಂಗಳೂರು 29-24, ಉತ್ತರ ಕನ್ನಡ 29-22, ಧಾರವಾಡ 29-21, ಹಾವೇರಿ 30-22, ಹುಬ್ಬಳ್ಳಿ 30-22, ಬೆಳಗಾವಿ 28-21, ಗದಗ 29-22, ಕೊಪ್ಪಳ 30-23, ವಿಜಯಪುರ 29-22, ಬಾಗಲಕೋಟ 30-23 , ಕಲಬುರಗಿ 30-23, ಬೀದರ್ 28-22, ಯಾದಗಿರಿ 31-24 ಮತ್ತು ರಾಯಚೂರ 32-24 ಬಳ್ಳಾರಿ 31-24ಜಲವ್ಯೂಹದಲ್ಲಿ ಮಂಗಳೂರು ನಗರ

ಮಂಗಳೂರು ಸಿಟಿ, ಶಿವನಗರ ಪಣಂಬೂರ್, ಬಜ್ಪೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಮಳೆ ಶುರುವಾಗಿದೆ. ಪಂಡವೇಶ್ವರ ಬಳಿ ಇರುವ ಶಿವನಗರ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಇನ್ನೂ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಆಡಿಟೋರಿಯಂ ಒಳಗಡೆ ನೀರು ನುಗ್ಗಿದೆ. ಅಡಿಟೋರಿಯಂ ಪುಟ್ಟ ಈಜುಕೊಳ ನಿರ್ಮಾಣವಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಂಗಳೂರು, ಉಳ್ಳಾಲ, ಬಂಟ್ಬಾಳ, ಮೂಲ್ಕಿ-,ಮೂಡುಬಿದಿರೆ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು.

ಇದನ್ನೂ ಓದಿ:  Heavy Rain: ವರುಣನ ಅಬ್ಬರಕ್ಕೆ ಸೇತುವೆ ಜಲಾವೃತ ಸಂಪರ್ಕ ಕಡಿತ, ಅಪಾರ ಪ್ರಮಾಣದ ಬೆಳೆ ನೀರುಪಾಲು

ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಹಾಗೂ ತುಮಕೂರು, ಚಿತ್ರದುರ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗದಲ್ಲಿ ಇನ್ನೆರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯಾದಗಿರಿಯಲ್ಲಿ ಮಳೆ, ಸೇತುವೆಗಳು ಜಲಾವೃತ

ಯಾದಗಿರಿ (Yadagiri) ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ (Heavy Rain) ಸುರಿದಿದ್ದು ಮಳೆಗೆ ಜನರು (People) ಸಂಕಷ್ಟ ಎದುರಿಸುವಂತಾಗಿದೆ.

Heavy Rainfall in Mangaluru Highway submerges in rain water mrq
ಮಂಗಳೂರು


ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ ಹೊರಭಾಗದಲ್ಲಿರುವ ಹೆಡಗಿಮದ್ರಾ ಹಾಗೂ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ.ಸೇತುವೆ ಮುಳುಗಡೆಯಾದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಜನರು ಊರಿಗೆ ತೆರಳಲು ಪರದಾಡುವಂತಾಗಿದೆ. ನಂತರ ನೀರಿನ ಹರಿವು ಕಡಿಮೆಯಾದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟು ವಿದ್ಯಾರ್ಥಿಗಳು ಹರಿಯುವ ನೀರಿನಲ್ಲಿಯೇ ಸೇತುವೆ ಮೂಲಕ ಶಾಲೆ ಹಾಗೂ ಕಾಲೇಜುಗೆ ತೆರಳಿದರು.

ಇದನ್ನೂ ಓದಿ:  Mangaluru Rains: ಮತ್ತೆ ಮಂಗಳೂರಿನಲ್ಲಿ ಮಳೆ ಆರಂಭ; ಹೊಳೆಯಂತಾದ ರಾಷ್ಟ್ರೀಯ ಹೆದ್ದಾರಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ

ಮನೆಗಳಿಗೆ ನುಗ್ಗಿದ್ದ ಮಳೆ ನೀರು!

ಮಳೆ ಅಬ್ಬರಕ್ಕೆ ಗುರುಮಿಠಕಲ್ ತಾಲೂಕಿನ ಪರಮೇಶಪಲ್ಲಿ, ನಂದೆಪಲ್ಲಿ ಸೇರಿದಂತೆ ಮೊದಲಾದ ಕಡೆ ಮನೆಯೊಳಗೆ ನೀರು ನುಗ್ಗಿದ್ದು ನೀರು ಹೊರಹಾಕಲು ಗ್ರಾಮಸ್ಥರು ಪರದಾಡುವಂತಾಗಿದೆ. ಪರಮೇಶಪಲ್ಲಿಯಲ್ಲಿ 20 ಕ್ಕು ಹೆಚ್ಚು ಮನೆ ಹಾಗೂ ನಂದೆಪಲ್ಲಿಯಲ್ಲಿ 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿವೆ. ನಂದೆಪಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡು  ಸೇತುವೆಗಳು ಜಲಾವೃತವಾಗಿವೆ. ಸೇತುವೆ ಮುಳುಗಡೆಯಾದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.
Published by:Mahmadrafik K
First published: