Karnataka Weather Report: ಇಂದು ಮತ್ತು ನಾಳೆ ರಾಜ್ಯದ ಈ ಭಾಗದಲ್ಲಿ ಮಳೆ, ಕೆಲವು ಕಡೆ ಒಣಹವೆ

ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಯ ಒಂದೆರಡು ಕಡೆ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Report: ಇಂದು  ರಾಜ್ಯದ ಕೆಲವು  ಭಾಗಗಳಲ್ಲಿ ಒಣ ಹವೆ ಇರಲಿದ್ದು, ಮಲೆನಾಡು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣದ (Cloudy Weather) ಜೊತೆಗೆ ತುಂತುರು (Rain) ಮಳೆಯಾಗಲಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ದಾವಣಗೆರೆ, ಮೈಸೂರು ಭಾಗದಲ್ಲಿ ಮಳೆಯ ಸಿಂಚನ ಆಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಯಚೂರು ಮತ್ತು ಬಳ್ಳಾರಿಯಲ್ಲಿ ಬಿಸಿಲು ಪ್ರಖರವಾಗಲಿದೆ. ಮಳೆ ಪ್ರಮಾಣ ಕಡಿಮೆಯಾದರೂ ಕೃಷ್ಣಾ ನದಿ (Krishna River) ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾಗುತ್ತಿರುವ (Maharashtra Rain) ಹಿನ್ನೆಲೆ ಕೃಷ್ಣೆಗೆ ನೀರು ಹರಿದು ಬರುತ್ತಿದೆ. ಆದ್ದರಿಂದ ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.

ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜಲಾವೃತಗೊಂಡಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಮಳೆ ನಿಂತ ಬಳಿಕವೂ ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಉಂಟಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿಂದು (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)

ಬೆಂಗಳೂರು 27-19, ಮೈಸೂರು 28-20, ಚಾಮರಾಜನಗರ 28-21, ರಾಮನಗರ 28-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-19, ಚಿಕ್ಕಬಳ್ಳಾಪುರ 27-19, ಕೋಲಾರ 28-21, ಹಾಸನ 26-18, ಚಿತ್ರದುರ್ಗ 27-21, ಚಿಕ್ಕಮಗಳೂರು 24-18, ದಾವಣಗೆರೆ 28-21, ಶಿವಮೊಗ್ಗ 27-21, ಕೊಡಗು 23-17, ತುಮಕೂರು 27-20

ಉಡುಪಿ- 28-24 , ಮಂಗಳೂರು 28-24, ಉತ್ತರ ಕನ್ನಡ 26-21, ಧಾರವಾಡ 27-21, ಹಾವೇರಿ 28-21, ಹುಬ್ಬಳ್ಳಿ 27-21, ಬೆಳಗಾವಿ 24-20, ಗದಗ 28-21, ಕೊಪ್ಪಳ 29-22, ವಿಜಯಪುರ 28-21, ಬಾಗಲಕೋಟ 29-22, ಕಲಬುರಗಿ 28-22, ಬೀದರ್ 27-21, ಯಾದಗಿರಿ 29-23, ರಾಯಚೂರ 30-23 ಮತ್ತು ಬಳ್ಳಾರಿ 31-23

ಇದನ್ನೂ ಓದಿ:  Belagavi ಕಾಂಗ್ರೆಸ್​ನಲ್ಲಿ ಜಾರಕಿಹೊಳಿ v/s ಸೇಠ್ ಬಣ ರಾಜಕೀಯ! 

ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಯ ಒಂದೆರಡು ಕಡೆ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಕೆಲವು ಕಡೆ ಸಾಧಾರಣ ಮಳೆ

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮುಂದಿನ 48 ಗಂಟೆಗಳು ಹವಾಮಾನದಲ್ಲಿ ಗಮನಾರ್ಹವಾದ ಬದಲಾವಣೆಯಿಲ್ಲ ಎಂದು ಇಲಾಖೆ ಹೇಳಿದೆ. ಈ ಬಾರಿ ಯಾವುದೇ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿಲ್ಲ .

ತಜ್ಞರಿಂದ ಅಧ್ಯಯನ

ಕೊಡಗು (Kodagu) ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಮೆಹುಲ್ಲು ಕಜೆ ಎಂಬಲ್ಲಿ ಭೀಕರ ಜಲಸ್ಫೋಟವಾಗಿರುವುದಕ್ಕೆ ಸಂಬಂಧಿಸಿದಂತೆ ನುರಿತ ತಜ್ಞರಿಂದ ಅಧ್ಯಯನ (Skilled Experts) ಮಾಡಿಸಲಾಗುವುದು ಎಂದು ಕೊಡಗು ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ (B.C Nagesh) ಅವರು ತಿಳಿಸಿದ್ದಾರೆ.

ವಿವಿಧೆಡೆ ಮಳೆಯಿಂದ ಆಗಿರುವ ಹಾನಿ ಪ್ರದೇಶ ಮತ್ತು ಭೂಕುಸಿತವಾಗಿರುವ (Landslide) ಪ್ರದೇಶಗಳಿಗೆ ಭಾನುವಾರ  ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಸೀಮೆಹುಲ್ಲುಕಜೆಯಲ್ಲಿ ಆಗಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು ಸ್ಥಳೀಯ ಜನರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದರು.

2018 ರಲ್ಲೂ ಇದೇ ರೀತಿ ಜಲಸ್ಫೋಟದಿಂದ ಭೂಕುಸಿತವಾಗಿತ್ತು. ಈಗ ಮತ್ತೆ ರಾಮಕೊಲ್ಲಿ ಮತ್ತು ಸೀಮೆಹುಲ್ಲು ಕಜೆಯಲ್ಲಿ ಭೂಕುಸಿತವಾಗಿದೆ.

ಇದನ್ನೂ ಓದಿ:  Hubballi: ಕಾರ್ಖಾನೆಯಲ್ಲಿ ಸ್ಫೋಟ ಕೇಸ್​; ಮೂವರು ಸಾವು, ಮಾಲೀಕರ ವಿರುದ್ಧ ಸಚಿವ ಹಾಲಪ್ಪ ಗರಂ

ಭೂಕುಸಿತ ಆಗಿರುವುದಕ್ಕೆ ವೈಜ್ಞಾನಿಕ ಕಾರಣ ಏನು?

ಅಧ್ಯಯನ ಮಾಡಿಸಲು ಸರ್ಕಾರ ಸ್ವತಃ ತುಂಬಾ ಕಾಳಜಿ ವಹಿಸಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಈ ಕುರಿತು ಅಧ್ಯಯನ ಮಾಡಿಸಲಾಗುವುದು ಎಂದಿದ್ದಾರೆ. ಇನ್ನು ಭೂಕುಸಿತ ಆಗಿರುವುದಕ್ಕೆ ವೈಜ್ಞಾನಿಕ ಕಾರಣ ಏನು ಎಂಬುದರ ಅಧ್ಯಯನ ಆಗಬೇಕು ಎಂದು ಗೀತಾ ಮಿಶ್ರಾ ಎಂಬ ಸಾಮಾಜಿಕ ಕಾರ್ಯಕರ್ತೆ ಅವರು ಕೋರ್ಟ್ ಮೆಟ್ಟಿಲೇರಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ. ಸಿ. ನಾಗೇಶ್ ಭೂಮಿ ಕಂಪಿಸಿದ ಸಂದರ್ಭದಲ್ಲಿಯೇ ವೈಜ್ಞಾನಿಕ ಅಧ್ಯಯನ ಮಾಡಿಸಲಾಗಿದೆ. ಅವರ ಪ್ರಕಾರ ಅದು ಭೂಕಂಪನವೇ ಅಲ್ಲ ಎಂದಿದ್ದಾರೆ.
Published by:Mahmadrafik K
First published: