ಕಲಬುರ್ಗಿಯಲ್ಲಿ ಕೆಲವೆಡೆ ಮಳೆ ; ಸಿಡಿಲಿಗೆ ಮೂವರ ಸಾವು

ಮೃತರನ್ನು ಸುಭಾಷ್ ಹಳಕೇರಿ(35) ಹಾಗೂ ಕುಪ್ಪಣ್ಣ ನವಲೆ(58) ಹಾಗೂ ಅನೀಲ್ ಭೋವಿ(22) ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲಬುರ್ಗಿ(ಏ.28): ಜಿಲ್ಲೆಯಲ್ಲಿ ಕೆಲವೆಡೆ ಮಳೆ ಸುರಿದ್ದು, ಸಿಡಿಲಿಗೆ ಮೂವರು ಮೃತಪಟ್ಟಿರುವ ಘಟನೆ  ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಭುಂಯ್ಯಾರ್ ಮತ್ತು ಚಿಂಚೋಳಿ ತಾಲೂಕಿನ ಕೋಡ್ಲಿ ಗ್ರಾಮಗಳಲ್ಲಿ ಘಟನೆ ನಡೆದಿದೆ. 

  ಭುಂಯ್ಯಾರ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಸುಭಾಷ್ ಹಳಕೇರಿ(35) ಹಾಗೂ ಕುಪ್ಪಣ್ಣ ನವಲೆ(58) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೋಡ್ಲಿ ಗ್ರಾಮದಲ್ಲಿ ಜೆಸಿಬಿಯಿಂದ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಅನೀಲ್ ಭೋವಿ(22) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

  ಇದನ್ನೂ ಓದಿ : ಕಲಬುರ್ಗಿಯಲ್ಲಿ 44ಕ್ಕೇರಿದ ಕೊರೋನಾ - ಸೋಂಕಿತನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಆರೋಪ

  ಘಟನೆ ಸಂಬಂಧ ಕಮಲಾಪುರ, ರಟಕಲ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
  First published: