Hubballi: ಮಳೆಯಿಂದ ರಾಜ್ಯದಲ್ಲಿ ತೀವ್ರ ಹಾನಿ! ಕೆಲವೇ ದಿನಗಳಲ್ಲಿ ಕೇಂದ್ರಕ್ಕೆ ವರದಿ

ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ಒಂದೆರಡು ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲಿರುವುದಾಗಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಲ್ಲಿ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ಒಂದೆರಡು ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲಿರುವುದಾಗಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಲ್ಲಿ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು ಒಂದೆರಡು ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲಿರುವುದಾಗಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಲ್ಲಿ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • Share this:
ಹುಬ್ಬಳ್ಳಿ(ಜು.17): ರಾಜ್ಯದಲ್ಲಿ ನೆರೆಯಿಂದ ಭಾರಿ ಹಾನಿಯಾಗಿದ್ದು, ಒಂದೆರಡು ದಿನದಲ್ಲಿ ಕೇಂದ್ರಕ್ಕೆ ಹಾನಿಯ ವರದಿ ಸಲ್ಲಿಸಲಿರೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ. ಹುಬ್ಬಳ್ಳಿಗೆ  (Hubballi)ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಪ್ರವಾಹ ಪರಿಸ್ಥಿತಿ ಬಗ್ಗೆ ವರದಿ ತರಸಿಕೊಂಡಿದ್ದೇನೆ. ನದಿ ಪಾತ್ರದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಮಹಾರಾಷ್ಟ್ರದ (Maharastra) ಅಧಿಕಾರಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಲ್ಲಿನ ಡ್ಯಾಮ್ ಲೇವಲ್ ಗಳ (Dam Level) ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ. ಮನೆ ಬಿದ್ದವರಿಗೆ ತಕ್ಷಣ ಕೂಡಲೇ 10 ಸಾವಿರ,‌ ಬಳಿಕ‌ 95 ಸಾವಿರ ಕೊಡಲು ತಿರ್ಮಾನ ಮಾಡಲಾಗಿದೆ. ಪೂರ್ಣ ಪ್ರಮಾಣದ ಮನೆಗಳಿಗೆ ಮೊದಲು 20 ಸಾವಿರ, ನಂತರ ಐದು ಲಕ್ಷ ನೀಡಲು ತೀರ್ಮಾನಿಸಿದ್ದೇವೆ. ಬೆಳೆ ಹಾನಿ ಜಂಟಿ ಸರ್ವೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ.

ಕೇಂದ್ರ ಸರ್ಕಾರದ ಪರಿಹಾರದ ಜೊತೆ ರಾಜ್ಯದ ಪರಿಹಾರ ಸೇರಿಸಿ ನೀಡಲಾಗುವುದು. ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳ ಡಿಸಿ ಗಳ ಜೊತೆ ಸಭೆ ನಡೆಸಿದ್ದೇನೆ. ಮಹಾರಾಷ್ಟ್ರ ಹಾಗೂ ನಮ್ಮ ರಾಜ್ಯದ ಡಿಸಿಗಳು ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ. ನದಿಗಳ ಪ್ರವಾಹಕ್ಕೆ ಶಾಶ್ವತ ಪರಿಹಾರ ನೀಡಲು ಚಿಂತನೆ ನಡೆದಿದೆ. ನೀರಿನ ಪ್ರಮಾಣಕ್ಕೆ ತಕ್ಕಂತೆ ಬಳಕೆಗೆ ಕುರಿತು ಯೋಜನೆ ರೂಪಿಸಲಾಗುತ್ತಿದೆ.

ಎರಡೂವರೇ ಲಕ್ಷ ಮನೆ ಮಂಜೂರಾತಿ ವಿಳಂಬ

ತಾಂತ್ರಿಕ ದೋಷದಿಂದ ಎರಡೂವರೇ ಲಕ್ಷ ಮನೆ ಮಂಜೂರಾತಿ ವಿಳಂಬವಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಕಚ್ಚಾ ಮನೆಗಳನ್ನು ಪಕ್ಕಾ ಮಾಡಲು ಚಿಂತನೆ ನಡೆದಿದೆ. ಈಗಾಗಲೇ ಎಲ್ಲಾ ಉಸ್ತುವಾರಿಗಳು ಅವರಿಗೆ ಸಂಬಂಧಪಟ್ಟ ಜಿಲ್ಲೆಯಲ್ಲಿ ಕಾರ್ಯೋನ್ಮುಖರಾಗಿ ನೆರೆಪೀಡಿತರ ಸಮಸ್ಯೆಗಳಿಗೆ ಸ್ಪಂದಿಸ್ತಿದಾರೆ. ಅವರ ಜೊತೆ  ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಮಹಿಳೆಗೆ ಗಾಯ

ಜಿಟಿ ಜಿಟಿ ಮಳೆಗೆ ಮನೆಯೊಂದು ನೆಲ ಕಚ್ಚಿದ್ದು, ಮಹಿಳೆಗೆ ಗಾಯವಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಸುರಿದ‌ ಮಳೆಗೆ ಮನೆ ಕುಸಿತವಾಗಿದೆ. ಮಹಿಳೆ ತಲೆಗೆ ಗಾಯವಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾಳೆ. ಮನೆ ಕುಸಿತಗೊಂಡಾಗ ಮಹಿಳೆ ಮನೆಯಲ್ಲಿಯೇ ಮಲಗಿದ್ದಳು.ಅದೃಷ್ಟವಶಾತ್ ಪ್ರಾಣಹಾನಿಯಾಗಿಲ್ಲ. ತಡರಾತ್ರಿ‌ ಮನೆ ಬಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಇಲ್ಲಿಯವರೆಗೂ ಮನೆಗೆ ಭೇಟಿ ನೀಡಿ ಜನಪ್ರತಿನಿಧಿಗಳು‌ ಸಾಂತ್ವನ ಹೇಳಿಲ್ಲ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ಸಿಎಂ ಬೊಮ್ಮಾಯಿಯಿಂದ ಸಮ್ಮೇಳನ ಉದ್ಘಾಟನೆ

ಹುಬ್ಬಳ್ಳಿಯ ಡೆನಿಸನ್ ಹೋಟೆಲ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಖಾಸಗೀಕರಣ, ಉದಾರೀಕರಣ ಜಾಗತೀಕರಣದ ನಡುವೆ ಅಂತಃಕರಣ ಮರಿತಾ ಇದ್ದೇವೆ. ಅಂತಃಕರಣ ಪುನರ್ ಸ್ಥಾಪನೆ ಮಾಡುವುದು ಅವಶ್ಯವಿದೆ ಎಂದರು.

ಇದನ್ನೂ ಓದಿ: Karnataka Weather Report: ಮುಂದಿನ ಮೂರು ಈ ಭಾಗದಲ್ಲಿ ಮಳೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ

ಸಮ್ಮೇಳನ ಮಾಡ್ತಿರೋದು ಖುಷಿಯ ವಿಷಯ. 21 ನೇ ಶತಮಾನದಲ್ಲಿ ಬದಲಾವಣೆ ಬೇಕಾಗಿದೆ. ಆರ್ಥಿಕತೆ ಎಂಜಿನ್ ಎಂಬುದು ದೇಶದ ಬೆನ್ನೆಲುಬು. ಇತ್ತಿಚೆಗೆ ಅದರ ಪರಿಭಾಷೆ ಬದಲಾಗಿದೆ. ಸರ್ಕಾರದ ಚಿಂತನೆ ಬದಲಾವಣೆ ಆಗಿದೆ. ಮಾರ್ಕೆಟ್‌ ಟೆಕ್ನಾಲಜಿ ಒಪ್ಪಿಕೊಂಡ ಮೇಲೆ ಹಲವಾರು ರೀತಿಯ ಬದಲಾವಣೆ ಆಗಿವೆ. ನಾವು ಕೇವಲ ಲಾಭ ನಷ್ಟದ ಬಗ್ಗೆ ವಿಚಾರ ಮಾಡದೇ ಬಡಜನರ ಬಗ್ಗೆ ಕೂಡಾ ಯೋಚನೆ ಮಾಡುವ ಕಾಲ ಬಂದಿದೆ.

ಟೂ ಟೈರ್ ಸಿಟಿಯಲ್ಲೂ ಅಭಿವೃದ್ಧಿ

ಬಹಳಷ್ಟು ಕಂಪನಿಗಳು ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಕಾರ್ಯ ಮಾಡುತ್ತವೆ. ಅದು ಕಂಪನಿಯ ಮುಖ್ಯಸ್ಥರ ಮನಃಶಾಂತಿಗಾಗಿ. ಇದೀಗ ಜಾಗತಿಕ ಜಗತ್ತು ಬದಲಾವಣೆ ಆಗತ್ತಾ ಇದೆ. ಟೂ ಟೈರ್ ಸಿಟಿಯಲ್ಲೂ ಅಭಿವೃದ್ಧಿ ಆಗತ್ತಾ ಇವೆ. ಸರ್ಕಾರ ಮತ್ತು ಕಂಪನಿಗಳು ಒಂದು ಗೂಡಿ ಕೆಲಸ‌ ಮಾಡಬೇಕು. ದುಡ್ಡೇ ದೊಡ್ಡಪ್ಪ ಅನ್ನೋ ಬದ್ಲಿಗೆ ದುಡಿಮೆಯೇ ದೊಡ್ಡಪ್ಪ ಆಗಬೇಕಿದೆ. ಸಣ್ಣ ಕೈಗಾರಿಕೆ, ಬೃಹತ್ ಕೈಗಾರಿಕೆ ಅಂತ ಪ್ರತ್ಯೇಕಿಸಬಾರದು. ಎರಡನ್ನೂ ಒಂದುಗೂಡಿಸಿ ಕೈಗಾರಿಕೆ ಅಂತಷ್ಟೇ ಮಾಡಬೇಕಿದೆ.

ಇದನ್ನೂ ಓದಿ: ಭಾನುವಾರವೂ ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್! ಇಂದು ಮತ್ತು ನಾಳೆ ಈ ಪ್ರದೇಶಗಳಲ್ಲಿ ಪವರ್ ಕಟ್

ನಮ್ಮ ಮೈಂಡ್ ಸೆಟ್ ಬದಲಾಗಬೇಕಿದೆ. ಹಾಗಾದಾಗ ಮಾತ್ರ ನಾವೂ ಬದಲಾಗುತ್ತೇವೆ, ನಮ್ಮ ಆರ್ಥಿಕತೆಯೂ ಬದಲಾಗುತ್ತೆಎಂದು ಬೊಮ್ಮಾಯಿ ತಿಳಿಸಿದರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಜವಳಿ ಖಾತೆ, ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ, ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳು ಭಾಗಿಯಾಗಿದ್ದರು.
Published by:Divya D
First published: