Rain Disaster: ಬೆಳಗಾವಿಯಲ್ಲಿ ಮಳೆ ಅವಾಂತರ; ಒಂದೇ ವಾರದಲ್ಲಿ ‌ಮೂವರು ಬಲಿ!

ಗಡಿ ಜಿಲ್ಲೆ ಬೆಳಗಾವಿಯಲ್ಲಿ ವರುಣನ ಆರ್ಭಟಿಸುತ್ತಿದ್ದಾನೆ.‌ ಜಿಲ್ಲೆಯ 3 ಜಲಾಶಯಗಳು ಭರ್ತಿ ಆಗಿವೆ. ಸಪ್ತ ನದಿಗಳು ಭೋರ್ಗರೆಯುತ್ತಿವೆ. ನದಿ ಪಾತ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಮಳೆ ಅವಾಂತರಕ್ಕೆ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಬೆಳಗಾವಿಯಲ್ಲಿ ಮಳೆಯ ಅವಾಂತರ

ಬೆಳಗಾವಿಯಲ್ಲಿ ಮಳೆಯ ಅವಾಂತರ

  • Share this:
ಬೆಳಗಾವಿ (ಸೆ.14):  ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ (Heavy Rain) ಬೆಳಗಾವಿಯ (Belagavi) ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ.  ಹೀಗಾಗಿ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇತ್ತ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ (Rain) ಒಂದೇ ವಾರದ ಅಂತರದಲ್ಲಿ ಮೂವರು ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬೆಳಗಾವಿಯಲ್ಲಿ ಬಿಟ್ಟೂಬಿಡದೇ ಮಳೆ ಸುರಿಯುತ್ತಿದೆ. ಮಳೆಗೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ.

ಮರ ಬಿದ್ದು ಯುವಕ ಸಾವು

ಮಳೆಯಿಂದ 90 ವರ್ಷದ ಮರವೊಂದು ನೆಲಕ್ಕೆ ಅಪ್ಪಳಿಸಿದೆ. ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಮರ ಧರೆಗುರಳಿದೆ. ಸಂಗೊಳ್ಳಿರಾಯಣ್ಣ ವೃತ್ತದಿಂದ ಚೆನ್ನಮ್ಮ ‌ವೃತ್ತದ ಕಡೆಗೆ ಬೈಕ್ ಮೇಲೆ ತೆರಳುತ್ತಿದ್ದ ಯುವಕ ಮರಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಗೋಕಾಕ್ ತಾಲೂಕಿನ ಸಿದ್ದನಹಳ್ಳಿ ಗ್ರಾಮದ ರಾಕೇಶ್ ಸುಲಧಾಳ (26) ಮೃತ ದುರ್ದೈವಿ.

ಮಳೆ, ಗಾಳಿಗೆ ಧರೆಗುರುಳಿದ ಮರಗಳು

ಮಳೆ, ಗಾಳಿಯಿಂದ ಹಲವೆಡೆ ಮರಗಳು ಧರೆಗುರುಳುತ್ತಿದೆ. ಉದ್ಯಮ ಭಾಗದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ರಾಕೇಶ ಇಂದು ಬೈಕ್ ಮೇಲೆ ಕೆಲಸಕ್ಕೆ ಹೊರಟಿದ್ದ. ಆದರೆ ಯುವಕನ ಮೇಲೆಯೇ ಬೃಹತ್ ಮರ ಅಪ್ಪಳಿಸಿದೆ. ಖಾಸಗಿ ಕಂಪನಿ ಉದ್ಯೋಗಿ ಸ್ಥಳದಲ್ಲೇ ಅಸುನೀಗಿದ್ರೆ ಮತ್ತೋರ್ವ ಸವಾರ ಪವಾಡ ಅದೃಶ್ಯವಾಗಿ ಪಾರಾಗಿದ್ದಾನೆ.

ಹಳ್ಳದಲ್ಲಿ ಕೊಚ್ಚಿ ಹೋದ ಯುವಕ ಸಾವು

ಗಡಿ ಜಿಲ್ಲೆ ಬೆಳಗಾವಿಯಲ್ಲಿ ವರುಣನ ಆರ್ಭಟಿಸುತ್ತಿದ್ದಾನೆ.‌ ಜಿಲ್ಲೆಯ 3 ಜಲಾಶಯಗಳು ಭರ್ತಿ ಆಗಿವೆ. ಸಪ್ತ ನದಿಗಳು ಭೋರ್ಗರೆಯುತ್ತಿವೆ. ನದಿ ಪಾತ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಮಳೆ ಅವಾಂತರಕ್ಕೆ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂವರು ಪ್ರಾಣತೆತ್ತಿದ್ದಾರೆ. ಸೆ. 9 ರಂದು ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಳವಿ‌ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಸೆ. 9 ರಂದು ಮಳೆಯ ರಕ್ಷಣೆಗೆಂದು  ದಂಡಪ್ಪಾ ಬಸಪ್ಪ ಮಾಲದಿನ್ನಿ (25) ಹಳ್ಳದ ಪಕ್ಕದ ಮರದ ಕೆಳಗೆ ನಿಂತಿದ್ದ. ದಿಢೀರ್ ಮಳೆಯಿಂದ ಹಳ್ಳದ ನೀರಿನ ರಭಸಕ್ಕೆ ಯುವಕ‌ ಕೊಚ್ಚಿಕೊಂಡು ಹೋಗಿದ್ದ. ಸೆ. 11 ರಂದು ದಂಡಪ್ಪಾ ಶವವಾಗಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರಲ್ಲಿ ರಸ್ತೆ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದು ಯುವತಿ ಸಾವು

ಮನೆ ಗೋಡೆ ಕುಸಿದು ಮಹಿಳೆ ಸಾವು

ಮನೆ ಗೋಡೆ ಕುಸಿದು ಮಹಿಳೆ ಸಾವನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಸೆ. 12 ರಂದು‌‌ ನಡೆದಿತ್ತು. ಹೂಲಿಕಟ್ಟಿ ಗ್ರಾಮದ ಗಂಗವ್ವ ರಾಮಣ್ಣ ಮೂಲಿಮನಿ‌ (55) ಮೃತ ದುರ್ದೈವಿ.‌ ಮನೆ ಗೋಡೆ ಕುಸಿದು ಗಂಗವ್ವ ಗಂಭೀರ ಗಾಯಗೊಂಡಿದ್ರು. ಆದ್ರೆ ಚಿಕಿತ್ಸೆ ‌ಫಲಿಸದೇ ಗಂಗವ್ವ ‌ಮೃತರಾಗಿದ್ರು.

ಒಂದು ವಾರದಲ್ಲಿ ಮೂವರ ಸಾವು

ಇಂದು ಖಾಸಗಿ ಕಂಪನಿ ಉದ್ಯೋಗಿಯೂ ಪ್ರಾಣ ಚೆಲ್ಲಿದ್ದಾನೆ. ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ‌ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇಂದಿನಿಂದ ಮಳೆಯ ಪ್ರಮಾಣ ಕುಡಿಮೆ ಆಗಿದೆ. ಜನರು ಸುರಕ್ಷತೆಯಿಂದ ಇರಬೇಕು. ಕೋಯ್ನಾ, ಘಟಪ್ರಭ, ಮಲಪ್ರಭ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Chikkamagaluru Rains: ಭಾರೀ ಮಳೆ, 391 ಕೋಟಿ ರೂ ನಷ್ಟ; ಜಿಲ್ಲಾಡಳಿತದಿಂದ ಸರ್ಕಾರ ವರದಿ ಸಲ್ಲಿಕೆ; ಪರಿಹಾರ ಯಾವಾಗ?

ತಗ್ಗಿದ ಮಳೆಯ ಪ್ರಮಾಣ

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದ ಮಳೆ ಪ್ರಮಾಣ ‌ಕಡಿಮೆ ಆಗಿದೆ. ಮುಳುಗಡೆ ‌ಆಗಿರುವ ಸೇತುವೆಗಳು ಸಂಜೆ ವೇಳೆಗೆ ಸಂಚಾರಕ್ಕೆ ‌ಮುಕ್ತವಾಗಲಿವೆ. ಸಂತ್ರಸ್ತರಿಗೆ ಅಗತ್ಯ ಪರಿಹಾರ ಕೊಡುವ ನಿಟ್ಟಿನಲ್ಲಿ ‌ಜಿಲ್ಲಾಡಳಿತ‌ ಕ್ರಮ ವಹಿಸಬೇಕು.
Published by:ಪಾವನ ಎಚ್ ಎಸ್
First published: