• Home
  • »
  • News
  • »
  • state
  • »
  • Rain Damage: ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಸೊಯಾಬೀನ್ ಬೆಳೆದ ರೈತ ಕಂಗಾಲು 

Rain Damage: ಅಕಾಲಿಕ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಸೊಯಾಬೀನ್ ಬೆಳೆದ ರೈತ ಕಂಗಾಲು 

ಬೆಳೆ ಹಾಳಾಗಿರುವುದು

ಬೆಳೆ ಹಾಳಾಗಿರುವುದು

ಅಕಾಲಿಕ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿದ್ದರ ಪರಿಣಾಮ ಬೆಳೆದ ಬೆಳೆ ಕೈಗೆ ಸಿಗದೆ ಹಾಳಾಗಿವೆ. ಇನ್ನೇನೂ ಕಟಾವು ಮಾಡಬೇಕಾದ ಸೋಯಾ ಬೀನ್ ಬೆಳೆಯೂ ಕೂಡಾ ಕಪ್ಪು ಬಣ್ಣಕ್ಕೆ ತಿರುಗಿವೆ

  • Share this:

ಬೆಳಗಾವಿ (ಆ. 27): ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿದ ಪರಿಣಾಮ ಕಟಾವಿಗೆ ಬಂದ ಸೋಯಾ ಬೀನ್ ರೈತರ ಕೈಗೆ ಸಿಗುತ್ತಿಲ್ಲ. ಬೆಳೆದ ಬೆಳೆ ಇನ್ನೇನು ರಾಶಿ ಮಾಡಬೇಕೆನ್ನುವಷ್ಟರಲ್ಲಿ ಅಕಾಲಿಕವಾಗಿ ಮಳೆ ಸುರಿದ ಪರಿಣಾಮ‌ ಜಮೀನಿನಲ್ಲಿ ನೀರು ನಿಂತು ಬೆಳೆಗಳೆಲ್ಲವೂ ಹಾಳಾಗಿದೆ. ಇದರಿಂದ ಗಡಿ ಭಾಗದ ರೈತರು ಕಂಗಾಲಾಗಿದ್ದಾರೆ. ಹೌದು ಕಳೆದ ಎರಡು ವರ್ಷಗಳಿಂದಲೂ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಾಗೂ ದೂದಗಂಗಾ ನದಿ ತೀರದ ರೈತರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. 2019 ರಲ್ಲಿ ಬಂದ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗಿ ಸಾಕಷ್ಟು ಹಾಣಿಯನ್ನ ರೈತರು ಅನುಭವಿಸಿದ್ದರು. ಈ ವರ್ಷವಾದರು ಒಳ್ಳೆ ಬೆಳೆ ಬೆಳೆದು ತಮ್ನ ಕಷ್ಟಗಳನ್ನ ಕಡಿಮೆ ಮಾಡಿಕೊಳ್ಳೊನ ಅಂತ ಅಂದುಕೊಂಡಿದ್ದ ರೈತರಿಗೆ ಅಕಾಲಿಕ ಮಳೆ ರೈತರನ್ನ ಮತ್ತೆ ಸಂಕಷ್ಟ ದೂಡಿದೆ.


ಮೊದ ಮೊದಲು ಬಿತ್ತನೆ ಸಮಯದಲ್ಲಿ ಕಳಪೆ ಬೀಜಗಳು ರೈತರನ್ನ ಕಾಡಿತ್ತು ಜಿಲ್ಲೆಯಲ್ಲಿ ಶೇ 30 ರಷ್ಟು ರೈತರಿಗೆ ಕಳಪೆ ಬಿತ್ತನೆ ಬೀಜಗಳನ್ನ ಇಲಾಖೆ ನೀಡಿತ್ತು. ಬಿತ್ತಿದ ಸೋಯಾಬೀನ್‌ ಬೀಜಗಳು ಸಮರ್ಪಕವಾಗಿ ಮೊಳಕೆ ಬಾರದೆ ನಷ್ಟ ಅನುಭವಿಸಿದ ರೈತರಿಗೆ ಮೂರು ತಿಂಗಳಾದರೂ ಕೃಷಿ ಇಲಾಖೆಯಿಂದ ಪರಿಹಾರ ದೊರೆತಿಲ್ಲ. ಪರಿಹಾರ ಕೊಡುತ್ತವೆ ಬೇರೆ ಬೆಳೆ ಬೆಳೆಯಿರಿ ಎಂದು ಹೇಳಿದ್ದ ಕೃಷಿ ಇಲಾಖೆ ಇವತ್ತಿಗೂ ಸುಮ್ಮನಾಗಿ ಕುಳಿತಿದೆ. ಇನ್ನು ಬೇರೆ ವಿಧಿಯಿಲ್ಲದೆ ಸಾಲ ಶೂಲ ಮಾಡಿ ಬೇರೆ ಬೆಳೆಯನ್ನ ಬೆಳೆದಿದ್ದ ರೈತರು ಇನ್ನೆನು ಉತ್ತಮ ಇಳುವರಿ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದರು.


ಇದನ್ನು ಓದಿ: ಬಂಡೀಪುರ ಹೆದ್ದಾರಿ ಅಗಲೀಕರಣಕ್ಕೆ ಅನುಮತಿ ನೀಡಲ್ಲ: ಅರಣ್ಯ ಸಚಿವ ಉಮೇಶ್ ಕತ್ತಿ


ಆದರೆ ಅಕಾಲಿಕ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿದ್ದರ ಪರಿಣಾಮ ಬೆಳೆದ ಬೆಳೆ ಕೈಗೆ ಸಿಗದೆ ಹಾಳಾಗಿವೆ. ಇನ್ನೇನೂ ಕಟಾವು ಮಾಡಬೇಕಾದ ಸೋಯಾ ಬೀನ್ ಬೆಳೆಯೂ ಕೂಡಾ ಕಪ್ಪು ಬಣ್ಣಕ್ಕೆ ತಿರುಗಿವೆ. ಸೋಯಾಬೀನ್ ಕಾಳುಗಳು ಅಕಾಲಿಕ ಮಳೆಯ ಪರಿಣಾಮ ಗದ್ದೆಯಲ್ಲಿ ಮೊಳಕೆ ಬಂದು ಕೊಳೆತು ಹೋಗುವ ಸ್ಥಿತಿಗೆ ತಪುಪಿವೆ ಜಿಲ್ಲೆಯಲ್ಲಿ14598  ಸಾವಿರ ಹೆಕ್ಟೇರ್ ಗೂ ಅಧಿಕ ಪ್ರಮಾಣದ ಸೊಯಾ ಸಂಪೂರ್ಣ ಹಾಳಾಗಿದೆ.


ಇನ್ನು ಬಾರದ ಪರಿಹಾರ
ಇನ್ನು ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ರೈತರು ಕಷ್ಟದಲ್ಲಿದ್ದರು ಸರ್ಕಾರ ಮಾತ್ರ ರೈತರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಯಾ ಬೆಳೆಯಲು ಒಂದು ಎಕರೆ ಪ್ರದೇಶದಕ್ಕೆ ಸುಮಾರು 30 ರಿಂದ 40 ಸಾವಿರ ಹಣ ಖರ್ಚಾಗುತ್ತದೆ ಆದ್ರೆ ಸರ್ಕಾರ ಮಾತ್ರ ನಮಗೆ ಪರಿಹಾರ ಅಂತ ನೀಡುವುದು ಕೇವಲ  3 ರಿಂದ  4 ಸಾವಿರ ಪ್ರತಿ ಎಕರೆಗೆ ಇದು ಯಾವುದಕ್ಕೂ ಸಾಲದು ಸರ್ಕಾರದ ಈ ನೀತಿಯಿಂದಾಗಿ ರೈತ ತನ್ನ ಕಷ್ಟಗಳಿಂದ ಮೇಲೆ ಬರಲಾಗದೆ ಒದ್ದಾಡುವಂತಾಗಿದೆ. ಇನ್ನು ಈಗಲೂ ಸಹ ಸರ್ವೆ ಕೆಲಸ ಸಂಪೂರ್ಣ ಮುಗಿದಿಲ್ಲಾ ಸರ್ವೆ ಕಾರ್ಯವನ್ನ ಬೇಗ ಮುಗಿಸಿ ಸರ್ಕಾರ ಈ ಬಾರಿ ಪೂರ್ಣ ಪ್ರಮಾಣದ ಬೆಳೆ ಹಾಣಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

Published by:Seema R
First published: