Kolar Rain: 34 ಸಾವಿರ ಹೆಕ್ಟೇರ್ ರಾಗಿ ಬೆಳೆ ನೀರು ಪಾಲು, ಇಬ್ಬರ ಸಾವು: ಕಾಣೆಯಾದ ಜನಪ್ರತಿನಿಧಿಗಳು

ಮಳೆಯಿಂದಾಗಿ 9 ಮನೆಗಳು ಕುಸಿದಿದ್ದು, 306 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು  34 ಸಾವಿರ ಹೆಕ್ಟೇರ್ ಪ್ರದೇಶದ ರಾಗಿ, 6,900 ಎಕರೆ ಪ್ರದೇಶದ ತೋಟಗಾರಿಕಾ ಬೆಳೆಗಳು ಮಳೆಯಿಂದಾಗಿ ನಾಶವಾಗಿದೆ

ಕೋಲಾರ ಮಳೆ

ಕೋಲಾರ ಮಳೆ

  • Share this:
ಕೋಲಾರ ಜಿಲ್ಲೆಯಾದ್ಯಂತ ಮಳೆರಾಯ  (Kolar Rainfall)ಅಬ್ಬರಿಸಿ ಬೊಬ್ಬೆರೆಯುತ್ತಿದ್ದು, ಜಿಲ್ಲೆಯ ಹಲವೆಡೆ ಪ್ರವಾಹ (Flood) ಪರಿಸ್ಥಿತಿ ಉಂಟಾಗಿದೆ, ಶ್ರೀನಿವಾಸಪುರ, ಕೋಲಾರ ಹಾಗು ಬಂಗಾರಪೇಟೆ (Srinivasapira, Kolar And Bangarapete) ತಾಲೂಕಿನ ಹಲವೆಡೆ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ,  ಜಿಲ್ಲೆಯಾದ್ಯಂತ ಕಳೆದ ಎರಡದು 120 ಮಿಲಿ ಮೀಟರ್ ಗೂ ಹೆಚ್ಚು ದಾಖಲೆಯ ಮಳೆಯಾಗಿದೆಯೆಂದು ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ ಮಾಹಿತಿ ನೀಡಿದ್ದಾರೆ. ಮಳೆಹಾನಿ ಬಗ್ಗೆ ಮಾತನಾಡಿದ ಡಿಸಿ ಸೆಲ್ವಮಣಿ ಅವರು, ಮಳೆಯಿಂದಾಗಿ 9 ಮನೆಗಳು ಕುಸಿದಿದ್ದು, 306 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು  34 ಸಾವಿರ ಹೆಕ್ಟೇರ್ ಪ್ರದೇಶದ ರಾಗಿ, 6,900 ಎಕರೆ ಪ್ರದೇಶದ ತೋಟಗಾರಿಕಾ ಬೆಳೆಗಳು ಮಳೆಯಿಂದಾಗಿ ನಾಶವಾಗಿದೆ ಎಂದು ತಿಳಿಸಿದ್ದಾರೆ. ಮಳೆಯಿಂದಾಗಿ ಶ್ರೀನಿವಾಸಪುರ ತಾಲೂಕಿನ ಕೂರಿಗೆಪಲ್ಲಿ ಬಳಿ ಒರ್ವ ಮಹಿಳೆ ಅಮರಾವತಿ ಕೊಚ್ಚಿ ಹೋಗಿದ್ದು, ಶವವಾಗಿ ಪತ್ತೆಯಾಗಿದ್ದಾರೆ.

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಪ್ರಭಾಕರ್ ಎನ್ನುವರು ಸಾವನ್ನಪ್ಪಿದ್ದು, ಮಳೆಗೆ ಇಬ್ಬರು ಅಸುನೀಗಿದ್ದಾರೆ, ಉಳಿದಂತೆ ಗೌನಿಪಲ್ಲಿ ಗ್ರಾಮದಲ್ಲಿ ಮಳೆ ನೀರು ಆವರಿಸಿದ್ದು ಜನರು ಮನೆಗಳಲ್ಲಿ ಆಹಾರ ಮಾಡಿಕೊಳ್ಳಲಾಗದೆ ಮನೆಗಳನ್ನ ಬಿಟ್ಟು ಬೇರೆಡೆ ಹೋಗಿ ದಿನ ಕಳೆಯುತ್ತಿದ್ದಾರೆ.

ಇದನ್ನೂ ಓದಿ: Karnataka Weather Today: ಇಂದು, ನಾಳೆಯೂ ಮುಂದುವರಿಯಲಿದೆ ವರುಣನ ಅಬ್ಬರ

ಇದರ ಜೊತೆಗೆ ಇಲ್ಲಿಯವರೆಗೂ 3 ಜಾನುವಾರುಗಳು  ಮಳೆಯಿಂದಾಗಿ ಸಾವನ್ನಪ್ಪಿದ್ದು, ಕೆರೆ ಕಟ್ಟೆಗಳ ಬಳಿ ಯಾರೂ ತೆರಳದಂತೆ ಜಿಲ್ಲಾಧಿಕಾರಿ ಡಾ ಆರ್  ಸೆಲ್ವಮಣಿ ಎಚ್ಚರಿಕೆ ನೀಡಿದ್ದಾರೆ.

ಕೋಲಾರ ನಗರದಲ್ಲಿ ಮಳೆರಾಯನ ರುದ್ರ ನರ್ತನ

ಕೋಲಾರದಲ್ಲಿ ಗುರುವಾರ ರಾತ್ರಿ  ಸುರಿದ ಮಳೆಗೆ  ಪ್ರತಿಷ್ಟಿತ ಬಡಾವಣೆಗಳು ಜಲಾವೃತ್ತಗೊಂಡಿದೆಣ ನಗರದ ಭೈರೇಗೌಡ ಲೇಔಟ್, ಬೆಮಲ್ ಲೇಔಟ್, ಕೋಟೆ ಬಡಾವಣೆ ಹಾಗು ಶಂಕರ ವಿದ್ಯಾಲಯ ಶಾಲೆ ಸುತ್ತಲೂ ಮಳೆ ನೀರು ಆವರಿಸಿದೆ.

ಎಲ್ಲಾ ಬಡಾವಣೆಯು ಕೋಲಾರಮ್ಮ ಕರೆಗೆ ಹೊಂದಿಕೊಂಡಿದ್ದು, ಕೆರೆಗೆ ಅಪಾರ ಪ್ರಮಾಣದ ನೀರು ಬರುತ್ತಿರುವ ಕಾರಣ ಕಾಲುವೆಗಳಲ್ಲಿನ ನೀರು ಮನೆಗಳು ಹಾಗು ರಸ್ತೆಗಳನ್ನ ಆವರಿಸಿದೆ. ಮಳೆಯ ಆರ್ಭಟಕ್ಕೆ ಗೌರಿಪೇಟೆ ಬಡಾವಣೆಯಲ್ಲಿ ಮನೆ ಕುಸಿತವಾಗಿದ್ದು, ಮನೆಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್, ಕಾರ್

ಗದ್ದೆ ಕಣ್ಣೂರು ಗ್ರಾಮದಲ್ಲೂ  ಒಂದು ಮನೆ ಕುಸಿತವಾಗಿ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮಳೆಯಿಂದಾಗಿ ಕೆರೆಗಳ ಒಳಹರಿವು ಹೆಚ್ಚಾಗಿ ಹೊರ ಹರಿವು ಭಾರೀ ಪ್ರಮಾಣದಲ್ಲಿದೆ. ಕೆರೆ ಕೋಡಿ ನೀರು ಹರಿಯುತ್ತಿರುವ ರಸ್ತೆ ದಾಟುವಾಗ ನೀರಲ್ಲಿ  ಕಾರು ಹಾಗೂ ಎರಡು ಬೈಕ್ ಗಳು ಕೊಚ್ಚಿ ಹೋಗಿವೆ.

ಇದನ್ನೂ ಓದಿ:  Farm Laws Repeal: ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ ಜನಶಕ್ತಿಯ ಎದುರು ಆತ ಮಣಿಯಲೇ ಬೇಕು: ಸಿದ್ದರಾಮಯ್ಯ

ಕೋಲಾರ ತಾಲೂಕಿನ  ಕೋರಗೊಂಡಹಳ್ಳಿ ಗ್ರಾಮದ ಕೆರೆ ಕೋಡಿ ಬಳಿ ಘಟನೆ ನಡೆದಿದ್ದು, ಕೋರಗೊಂಡಹಳ್ಳಿ ಕೆರೆ ನೀರು, ಜೋರಾಗಿ ಹರಿಯುತ್ತಿರುವ ಕಾರಣ,  ಕೋರಗೊಂಡಹಳ್ಳಿ ಹಾಗು ಕೋಲಾರಕ್ಕೆ ಸಂಪರ್ಕಿಸುವ ರಸ್ತೆ ಮಾರ್ಗ ಬಂದ್ ಆಗಿದೆ.

ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ದಾಟಲು ಪ್ರಯತ್ನಿಸಿದ ಕಾರು ಚಾಲಕ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಇಬ್ಬರು ಬೈಕ್ ಸವಾರರು ರಸ್ತೆ ದಾಟಲು ಪ್ರಯತ್ನಿಸಿ ತಮ್ಮ ಬೈಕ್ ಗಳನ್ನ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ  ಭೇಟಿ ನೀಡಿದ ಅಗ್ನಿಶಾಮಕ ದಳ ಸಿಬ್ಬಂದಿ, ಕಾರು ಹಾಗೂ ಎರಡು ಬೈಕ್ ಗಳನ್ನ  ಹೊರತೆಗೆದು ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ.

ಯರಗೋಳ ಡ್ಯಾಂಗೆ ಮೊದಲ ಬಾರಿಗೆ ಒಳಹರಿವು 

ಕೋಲಾರದಲ್ಲಿ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದರೂ, ಜನರ ಜೀವನಾಡಿಯಾಗಿರುವ ಕೆರೆ ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿದೆ. ಇದೇ ಮೊದಲ ಬಾರಿಗೆ ಯರಗೋಳ ಡ್ಯಾಂ ಗೆ ದೊಡ್ಡ ಪ್ರಮಾಣದ ಒಳ ಹರಿವು  ಕಂಡುಬಂದಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ ಡ್ಯಾಂ,  ಸುಮಾರು 100 ಅಡಿ ಎತ್ತರವಿದ್ದು, ಮಳೆಯಿಂದ  ಡ್ಯಾಂನಲ್ಲಿ 60 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.  ಡ್ಯಾಂ ನಿರ್ಮಾಣ ಮುಗಿದು ಒಂದು ವರ್ಷದಲ್ಲೆ ಭರ್ಜರಿ ಮಳೆಯಿಂದಾಗಿ ಒಳ ಹರಿವು ಹೆಚ್ವಳವಾಗಿದ್ದು, ಡ್ಯಾಂ ವೀಕ್ಷಿಸಲು  ಸುತ್ತಮುತ್ತಲಿನ ಗ್ರಾಮಸ್ತರು ತಂಡೋಪ ತಂಡವಾಗಿ ಸ್ಥಳೀಯ ಬಿಜೆಪಿ ನಾಯಕರು ಸಂಸದರಿಗೆ ಸಾಥ್ ‌ನೀಡಿದರು.

ಡ್ಯಾಂ ತುಂಬಿದಲ್ಲಿ ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಸೇರಿ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಹಕಾರಿ ಆಗಲಿದ್ದು,  315 ಕೋಟಿ ಖರ್ಚು ಮಾಡಿ ಡ್ಯಾಂ ನಿರ್ಮಿಸಲಾಗಿದೆ‌.

ಜಿಲ್ಲೆಯತ್ತ ಮುಖ ಮಾಡದ ಉಸ್ತುವಾರಿ ಸಚಿವ ಮುನಿರತ್ನ

ಜಿಲ್ಲೆಯಲ್ಲೆ ಮಳೆಯಿಂದಾಗಿ ಇಷ್ಟೆಲ್ಲಾ ಅನಾಹುತ ಸಂಭವಿಸಿದರೂ ಯಾವೊಬ್ಬ ಶಾಸಕ, ಸಂಸದರು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಯೇ ಇಲ್ಲ. ಇಂತಹ ಸಮಯದಲ್ಲಿ ರೈತರ ಬೆನ್ನಿಗೆ ನಿಂತು ಧೈರ್ಯ ಹೇಳಬೇಕಿದ್ದ ಜನಪ್ರತಿನಿಧಿಗಳು ಮಳೆಯ ಚಳಿಗೆ ನಡುಗಿಹೋಗಿ ಮನೆಗಳಲ್ಲೆ ವಾಸ್ತವ್ಯ ಹೂಡಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸಹ ಜಿಲ್ಲೆಯತ್ತ ಮುಖಮಾಡದೆ ಜನಾಕ್ರೋಶಕ್ಕೆ ಕಾರಣವಾಗಿದ್ದಾರೆ.
Published by:Mahmadrafik K
First published: