Karnataka Rains: ತಡರಾತ್ರಿ ಮಳೆಗೆ ಜನರು ಹೈರಾಣು, ಯಾದಗಿರಿಯಲ್ಲಿ ಲಾರಿ ಚಾಲಕನ ಹುಚ್ಚಾಟ

ಕೋಲಾರರದಲ್ಲಿ ತಡರಾತ್ರಿ ಸುರಿದ ಮಳೆಯಿಂದಾಗಿ ಕೋಲಾರಮ್ಮ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.  ರಾಜಕಾಲುವೆ ಅಕ್ಕ ಪಕ್ಕ ತೋಟಗಳಿಗೆ ಮಳೆ ನೀರು ನುಗ್ಗಿದೆ. ರೈಲ್ವೆ ಸ್ಟೇಷನ್ ಪಕ್ಕದ ನಾರಾಯಣಪ್ಪ ಎಂಬವರಿಗೆ  ಸೇರಿದ ಕೊತ್ತಂಬರಿ, ಬಿಟ್ರೂಟ್ ಬೆಳೆ ನಾಶವಾಗಿದೆ. ನಗರದ ಆರ್.ಟಿ.ಒ ಕಚೇರಿ ಸುತ್ತಲೂ ಮಳೆ ನೀರು ನಿಂತಿದೆ.

ಮುಗುಚಿದ ಲಾರಿ

ಮುಗುಚಿದ ಲಾರಿ

  • Share this:
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು (Karnataka Rainfall), ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂದು ಸಹ ರಾಜ್ಯದ ಬಹುತೇಕ ಭಾಗಗಳಲ್ಲಿ ವರುಣರಾಯ (Rainfall) ಅಬ್ಬರಿಸಲಿದ್ದಾನೆ. ಇನ್ನುಳಿದಂತೆ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣಗೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆ ಶುರುವಾಗಿದ್ದು, ಟ್ರಾಫಿಕ್ (Bengaluru Traffic) ಉಂಟಾಗುತ್ತಿದೆ. ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಮಂಡ್ಯ, ಹಾಸನ, ಕೊಡಗು, ಶಿವಮೊಗ್ಗ, ವಿಜಯಪುರದಲ್ಲಿ ಮಳೆಯಾಗುತ್ತಿರುವ ವರದಿಗಳು ಬರುತ್ತಿವೆ. ಬೆಂಗಳೂರಿನ ಲಾಲ್​ಬಾಗ್, ಸೌಂತ್ ಎಂಡ್ ಸರ್ಕಲ್, ಜೆ ಸಿ ರಸ್ತೆ, ಜಯನಗರ, ಶಾಂತಿನಗರ ಸುತ್ತಮುತ್ತ ವರುಣ ಅಬ್ಬರಿಸಿದ್ದಾನೆ. ಒಂದು ಗಂಟೆ ಸುರಿದ ಮಳೆಯಿಂದ ಕೆಲವು ಕಡೆ ರಸ್ತೆಗಳ ಮೇಲೆ ಮೂರರಿಂದ ನಾಲ್ಕು ಅಡಿಗಳಷ್ಟು ನೀರು ಶೇಖರಣೆಗೊಂಡಿದೆ.

ಕೋಲಾರ: ದೇವಸ್ಥಾನ ಜಲಾವೃತ

ಕೋಲಾರರದಲ್ಲಿ ತಡರಾತ್ರಿ ಸುರಿದ ಮಳೆಯಿಂದಾಗಿ ಕೋಲಾರಮ್ಮ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.  ರಾಜಕಾಲುವೆ ಅಕ್ಕ ಪಕ್ಕ ತೋಟಗಳಿಗೆ ಮಳೆ ನೀರು ನುಗ್ಗಿದೆ. ರೈಲ್ವೆ ಸ್ಟೇಷನ್ ಪಕ್ಕದ ನಾರಾಯಣಪ್ಪ ಎಂಬವರಿಗೆ  ಸೇರಿದ ಕೊತ್ತಂಬರಿ, ಬಿಟ್ರೂಟ್ ಬೆಳೆ ನಾಶವಾಗಿದೆ. ನಗರದ ಆರ್.ಟಿ.ಒ ಕಚೇರಿ ಸುತ್ತಲೂ ಮಳೆ ನೀರು ನಿಂತಿದೆ. ಆರ್.ಟಿ.ಒ ಕಚೇರಿ ಪಕ್ಕದ ಗಣೇಶ ದೇಗುಲ ಜಲಾವೃತಗೊಂಡಿದ್ದು, ನೀರಿನಲ್ಲಿ ನಡೆದುಕೊಂಡೇ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಕೋಲಾರಮ್ಮ ಕೆರೆ ಕೋಡಿ ಹರಿದು ನೀರು ಹರಿದು ಹೋಗುತ್ತಿದೆ.

ಇದನ್ನೂ ಓದಿ:  Bengaluru Rains: ತಡರಾತ್ರಿ ಮಳೆ, ಕೆರೆಗಳಂತಾದ ರಸ್ತೆಗಳು; ಜೀವ ಕೈಯಲ್ಲಿ ಹಿಡಿದು ವಾಹನ ಸವಾರರ ಸಂಚಾರ

ಮಂಡ್ಯ : ರಾತ್ರಿ ಸುರಿದ ಧಾರಾಕಾರ‌ ಮಳೆಗೆ ಉಕ್ಕಿ ಹರಿದ ನಾಲೆ..

ರಾತ್ರಿ ಸುರಿದ ಮಳೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಕೆರೆಯ ಕೋಡಿಬಿದ್ದು ನೀರು ಹರಿದಿದೆ. ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಕಳೆದ ದಿನಗಳ ಹಿಂದೆ ನಾಟಿ ಮಾಡಿದ್ದ ಭತ್ತದ ಪೈರು ನಾಶವಾಗಿದೆ. ಸರ್ಕಾರ ಪರಿಹಾರ ನೀಡಬೇಕೆಂದು ಅನ್ನದಾತರು ಆಗ್ರಹಿಸಿದ್ದಾರೆ.

Bengaluru Rains Roads are submerged
ಸಾಂದರ್ಭಿಕ ಚಿತ್ರ


ಬೆಳಗಾವಿಯ ಕಿತ್ತೂರಿನಲ್ಲಿ ಮಳೆ

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣ, ಸುತ್ತಮುತ್ತ ಜೋರು ಮಳೆಯಾದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ತಗ್ಗು  ಪ್ರದೇಶಗಳಿಗೆ ನೀರು ನುಗ್ಗಿದೆ.  ಪಟ್ಟಣದ ಮುಸ್ಲಿಂ ಗಲ್ಲಿಯಲ್ಲಿರುವ ಇರ್ಷಾದ್ ತಾಳಿಕೋಟಿ ಎಂಬವರ ನಿವಾಸಕ್ಕೆ ಮಳೆ ನೀರು ನುಗ್ಗಿದೆ. ಪೀಠೋಪಕರಣ ಸೇರಿದಂತೆ ಮನೆಯ ವಸ್ತುಗಳೆಲ್ಲಾ ಜಲಾವೃತಗೊಂಡಿವೆ. ಮಳೆ ನೀರು ಹೊರ ಹಾಕಲು ಇರ್ಷಾದ್ ಕುಟುಂಬಸ್ಥರು ಹರಸಾಹಸಪಟ್ಟರು.

15 ಸಾವಿರ ಕೋಳಿಗಳು ನೀರುಪಾಲು

ಕೆರೆ ಕೋಡಿ ಹರಿದು ಕೋಳಿ ಫಾರ್ಮ್​ಗೆ ನೀರು ನುಗ್ಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮಾರು 15 ಸಾವಿರಕ್ಕೂ ಅಧಿಕ ಕೋಳಿಗಳು ನೀರುಪಾಲಾಗಿದೆ.  ರಾಜಕಾಲುವೆಗಳು ಒತ್ತುವರಿಯಾಗಿರುವವ ರೈತರ ಜಮೀನುಗಳಲ್ಲಿ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ.

ಮುಗುಚಿ ಬಿದ್ದ ಲಾರಿ, ಸಹಾಯಕ್ಕಾಗಿ ಚಾಲಕನ ಮೊರೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಮದರಕಲ್ ಗ್ರಾಮದ ಬಳಿಯ ಹಳ್ಳ ಉಕ್ಕಿ ಹರಿಯುತ್ತಿತ್ತು. ಆದ್ರೆ ಸಿಮೆಂಟ್ ತುಂಬಿಕೊಂಡು ಬಂದಿದ್ದ ಲಾರಿ ಚಾಲಕ ಹುಚ್ಚಾಟ ಪ್ರದರ್ಶಿಸಿದ್ದಾನೆ. ಹಳ್ಳ ದಾಟುತ್ತಿರುವ ಸಂದರ್ಭದಲ್ಲಿ ಲಾರಿ ಮುಗುಚಿ ಬಿದ್ದಿದೆ. ಲಾರಿ ಬೀಳುತ್ತಿದ್ದಂತೆ ಮೇಲ್ಭಾಗದಲ್ಲಿ ನಿಂತಿರುವ ಚಾಲಕ ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾನೆ. ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ಈ ಮಾಹಿತಿ ನೀಡಿದ್ದಾರೆ.

Rain creates havoc in karnataka several parts mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Karnataka Weather Report: ಮುಂದುವರಿದ ಮಳೆ, ತಗ್ಗು ಪ್ರದೇಶಗಳಿಗೆ ನೀರು; ಇಂದಿನ ಹವಾಮಾನ ವರದಿ ಇಲ್ಲಿದೆ

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಯಾದಗಿರಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ.ಚಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ ಹಿನ್ನೆಲೆ ಮನೆಗೆ ನೀರು ನುಗ್ಗಿದೆ ಎಂದುಮ ಗ್ರಾಮಸ್ಥರು ಆರೋಪಿಸಿದ್ದಾರೆ.  ಚರಂಡಿ ನೀರಿನಲ್ಲೇ ಗ್ರಾಮಸ್ಥರ ಓಡಾಟ ನಡೆಸುತ್ತಿದ್ದಾರೆ, ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
Published by:Mahmadrafik K
First published: