• Home
  • »
  • News
  • »
  • state
  • »
  • Anekal: ಆಮೆಗತಿಯಲ್ಲಿ ಹುಸ್ಕೂರು ಅಂಡರ್ ಪಾಸ್ ಕಾಮಗಾರಿ; ಮಳೆ ಬಂದ್ರೆ ಕೆರೆಯಂತಾಗುವ ರಸ್ತೆ

Anekal: ಆಮೆಗತಿಯಲ್ಲಿ ಹುಸ್ಕೂರು ಅಂಡರ್ ಪಾಸ್ ಕಾಮಗಾರಿ; ಮಳೆ ಬಂದ್ರೆ ಕೆರೆಯಂತಾಗುವ ರಸ್ತೆ

ಕಾಮಗಾರಿ ನಡೆಯುತ್ತಿರುವ ದೃಶ್ಯ

ಕಾಮಗಾರಿ ನಡೆಯುತ್ತಿರುವ ದೃಶ್ಯ

ರೈಲ್ವೆ ಅಂಡರ್ ಪಾಸ್ ಕಾಮಗಾರಿ ವಿಳಂಬದಿಂದ ವಾಹನ ಸವಾರರು ಹತ್ತಾರು  ಕಿಲೋ ಮೀಟರ್ ಬಳಸಿಕೊಂಡು ಸಾಗಬೇಕಿದ್ದು, ರೈಲ್ವೆ ಅಧಿಕಾರಿಗಳು ಶೀಘ್ರ ಕಾಮಗಾರಿ ಮುಗಿಸಬೇಕು ಎಂದು ಸ್ಥಳೀಯ ವೆಂಕಟೇಶ್ ಆಗ್ರಹಿಸಿದ್ದಾರೆ.

  • Share this:

ಅದು ಎಲೆಕ್ಟ್ರಾನಿಕ್ ಸಿಟಿಯಿಂದ ಸರ್ಜಾಪುರ  (Electronic City To Sarjapura) ಮಾರ್ಗವಾಗಿ ಕೋಲಾರಕ್ಕೆ (Kolar) ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಮಾರ್ಗ ಮಧ್ಯದಲ್ಲಿನ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ (Railway Underpass Construction) ಕಳೆದ ಎರಡು ವರ್ಷಗಳಿಂದ ಪ್ರಗತಿಯಲ್ಲಿದೆ. ರೈಲ್ವೆ ಅಧಿಕಾರಿಗಳ (Railway Department) ಆಮೆ ಗತಿಯ ಕಾಮಗಾರಿಗೆ ಸುತ್ತಮುತ್ತಲಿನ ವಾಸಿಗಳು ಕಂಗಲಾಗಿದ್ದಾರೆ. ಆತ್ತ ರೈಲ್ವೆ ಅಂಡರ್ ಪಾಸ್ ಮಾರ್ಗವಿಲ್ಲದೆ ಹತ್ತಾರು ಕಿಲೋ ಮೀಟರ್ ಬಳಸಿಕೊಂಡು ತಲುಪಬೇಕಿದೆ .ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹುಸ್ಕೂರು ಸರ್ಜಾಪುರ ರಸ್ತೆಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿ ವಿಳಂಬದಿಂದ ಡಾಂಬರು ಕಾಣದೇ ರಸ್ತೆ ಕಂದಕದಂತಿದ್ದು,  ದೊಡ್ಡ ದೊಡ್ಡ ಗುಂಡಿಗಳಾಗಿವೆ.


ಗುಂಡಿಗಳ ನಡುವೆ ವಾಹನ ಸವಾರರು ಹರಸಾಹಸಪಟ್ಟು ಸಾಗವಂತಾಗಿದೆ. ಹೊಸೂರು ಮುಖ್ಯ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಶಾರ್ಟ್ ಕಟ್ ರಸ್ತೆಯೆಂದು ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ, ಆನೇಕಲ್ ಮತ್ತು ಹೊಸೂರು ಕಡೆಯಿಂದ ನಿತ್ಯ ಸಾವಿರಾರು ಮಂದಿ ಕೋಲಾರ, ವೈಟ್ ಫೀಲ್ಡ್, ಹೊಸಕೋಟೆ, ಮಾಲೂರು ಕಡೆ ಸಂಚರಿಸುತ್ತಾರೆ. ಆದ್ರೆ ಒಮ್ಮೆ ಬಂದವರು ಮತ್ತೆ ಈ ರಸ್ತೆಯಲ್ಲಿ ಸಂಚರಿಸಲು ಹೆದರುತ್ತಾರೆ.


ಮಳೆ ಬಂದ್ರೆ ಕೆರೆಯಂತಾಗುವ ರಸ್ತೆ


ರಸ್ತೆಯಲ್ಲಿ ಗುಂಡಿಗಳೇ ತುಂಬಿದೆ. ಮಳೆ ಬಂದರಂತೂ ರಸ್ತೆ ಕೆರೆಯಾಗುತ್ತದೆ. ಆಗ ಸ್ವಲ್ಪ ಯಾಮಾರಿದ್ರು ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಾರೆ.


ಕಾಮಗಾರಿ ನಡೆಯುತ್ತಿರುವ ದೃಶ್ಯ


ಇದನ್ನೂ ಓದಿ:  Karnataka Weather Report: ನಿಲ್ಲದ ಜಲಸ್ಫೋಟ, ಭೂಕುಸಿತ; ಇಂದು ಈ ಭಾಗದಲ್ಲಿ ವರುಣನ ಅಬ್ಬರ


ರೈಲ್ವೆ ಅಂಡರ್ ಪಾಸ್ ಕಾಮಗಾರಿ ವಿಳಂಬದಿಂದ ವಾಹನ ಸವಾರರು ಹತ್ತಾರು  ಕಿಲೋ ಮೀಟರ್ ಬಳಸಿಕೊಂಡು ಸಾಗಬೇಕಿದ್ದು, ರೈಲ್ವೆ ಅಧಿಕಾರಿಗಳು ಶೀಘ್ರ ಕಾಮಗಾರಿ ಮುಗಿಸಬೇಕು ಎಂದು ಸ್ಥಳೀಯ ವೆಂಕಟೇಶ್ ಆಗ್ರಹಿಸಿದ್ದಾರೆ.


ಕಳೆದೊಂದು ವರ್ಷದಿಂದ ಕೆಟ್ಟಿರುವ ರಸ್ತೆ


ಇನ್ನೂ ಸಣ್ಣ ಮಳೆ ಸುರಿದರು ಸಾಕು ಅವಲಹಳ್ಳಿ ರಸ್ತೆಯಲ್ಲಿ ವಾಹನ ಸಂಚರಿಸುವುದು ಬಹಳ ಕಷ್ಟ. ಜನರು ಸಹ ಮಳೆ ಸುರಿದ ಸಂದರ್ಭದಲ್ಲಿ ಓಡಾಡಲು ಆಗುವುದಿಲ್ಲ. ಅಂತಹುದರಲ್ಲಿ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಿದರೆ ಪರದಾಡಬೇಕಾಗುತ್ತದೆ.


ಕಳೆದೊಂದು ವರ್ಷದಿಂದ ರಸ್ತೆ ಹದಗೆಟ್ಟಿದೆ. ರಸ್ತೆ ಅಭಿವೃದ್ಧಿ ಬಗ್ಗೆ ಯಾರು ಸಹ ಗಮನ ಹರಿಸುತ್ತಿಲ್ಲ. ರಸ್ತೆ ಅವ್ಯವ್ಯಸ್ಥೆಯಿಂದಾಗಿ ಸುತ್ತಮುತ್ತಲಿನ ಹಳ್ಳಿ ಜನಕ್ಕೆ ಬಹಳ ತೊಂದರೆಯಾಗಿದೆ.


ಸುತ್ತಿ ಬಳಸಿ ಬರುವ ಅನಿವಾರ್ಯತೆ


ರೈಲ್ವೆ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ . ಮಾತ್ರವಲ್ಲದೆ ಹತ್ತಾರು ಮೈಲಿಗಳ ದೂರ ಬಳಸಿಕೊಂಡು ಸಾಗಬೇಕಿದ್ದು, ವಾಹನ ಸವಾರರಿಗೆ ನಷ್ಟವಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ತಿಳಿಸಿದ್ದಾರೆ.


ಒಟ್ಟಿನಲ್ಲಿ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಗಳು ಸಂಭವಿಸುತ್ತವೆ. ಕೆಲವೊಮ್ಮೆ ರಸ್ತೆಯಲ್ಲಿನ ಗುಂಡಿಗಳು ವಾಹನ ಸವಾರರ ಪ್ರಾಣಕ್ಕೂ ಎರವಾಗುತ್ತವೆ. ಇದನ್ನು ಅರಿತು ರೈಲ್ವೆ ಅಧಿಕಾರಿಗಳು, ಇನ್ನಾದರೂ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕಿದೆ.


ಕಾಮಗಾರಿ ನಡೆಯುತ್ತಿರುವ ದೃಶ್ಯ


ಇದನ್ನೂ ಓದಿ:  BBMP Election: ಬೆಂಗಳೂರಿನ ಎಲ್ಲಾ ವಾರ್ಡ್​ಗಳಲ್ಲೂ AAP ಸ್ಪರ್ಧೆ ಫಿಕ್ಸ್​; ಅಭ್ಯರ್ಥಿಗಳಿಗೆ ಆಹ್ವಾನ


Bengaluru News: ಬಸ್ಸಿನಡಿ ಬಿದ್ದರೂ ಬದುಕುಳಿದ ಯುವಕ


ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು. ಈ ವೀಡಿಯೋದಲ್ಲಿ ಯುವಕನೊಬ್ಬ ಬಸ್ಸಿನಡಿಗೆ ಬಿದ್ದರೂ ಅವನು ಉತ್ತಮವಾದ ಹೆಲ್ಮೆಟ್ ಧರಿಸಿರುವದರಿಂದ ಅಪಾಯದಿಂದ ಪಾರಾಗಿರುವ ದೃಶ್ಯವನ್ನು ಗಮನಿಸಬಹುದಾಗಿದೆ. ವೈರಲ್ ಆಗುತ್ತಿದ್ದ ಈ ವೀಡಿಯೋವನ್ನು ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಕಮಿಷನರ್ ಡಾ ಬಿ ಆರ್ ರವಿಕಾಂತೆ ಗೌಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Published by:Mahmadrafik K
First published: