Railways: ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಪ್ರಾರಂಭಿಸಲು ನಿರ್ಧರಿಸಿದ ರೈಲ್ವೆ ಇಲಾಖೆ

ರಾಜ್ಯದಲ್ಲಿ ವರುಣನ ಆರ್ಭಟದಿಂದ ಹಲವೆಡೆ ಗುಡ್ಡ ಕುಸಿತ, ಭೂ ಕುಸಿತದಂತಹ ಪ್ರಕರಣಗಳು ಕಂಡು ಬರುತ್ತಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನೂ ಬೆಂಗಳೂರಿನಿಂದ ಮಂಗಳೂರು ಕಡೆ ಹೋಗುವ ರಸ್ತೆಗಳಂತೂ ಸಂಚಾರಕ್ಕೆ ಕಷ್ಟಸಾಧ್ಯವಾಗಿವೆ. ಆದ್ದರಿಂದ ಪದೇ ಪದೇ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲುಗಳ ವ್ಯವಸ್ಥೆ ಕಲ್ಪಿಸಲು ನೈಋತ್ಯ ರೈಲ್ವೆ ನಿರ್ಧರಿಸಿ ರೈಲ್ವೆ ಇಲಾಖೆ ಮುಂದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ರಾಜ್ಯದಲ್ಲಿ ವರುಣನ ಆರ್ಭಟದಿಂದ ಹಲವೆಡೆ ಗುಡ್ಡ ಕುಸಿತ, ಭೂ ಕುಸಿತದಂತಹ (landslide) ಪ್ರಕರಣಗಳು ಕಂಡು ಬರುತ್ತಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನೂ ಬೆಂಗಳೂರಿನಿಂದ ಮಂಗಳೂರು (Mangaluru) ಕಡೆ ಹೋಗುವ ರಸ್ತೆಗಳಂತೂ ಸಂಚಾರಕ್ಕೆ ಕಷ್ಟಸಾಧ್ಯವಾಗಿವೆ. ಆದ್ದರಿಂದ ಪದೇ ಪದೇ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲುಗಳ ವ್ಯವಸ್ಥೆ ಕಲ್ಪಿಸಲು ನೈಋತ್ಯ ರೈಲ್ವೆ (South Western Railway) ನಿರ್ಧರಿಸಿ ರೈಲ್ವೆ ಇಲಾಖೆ ಮುಂದಾಗಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಜುಲೈ 26 ರಿಂದ ಕಾರ್ಯನಿರ್ವಹಿಸಲಿದೆ. ಈ ಮೂಲಕ ಘಾಟ್ ಸಂಪರ್ಕ ಕಡಿತಗೊಂಡಿದ್ದರೂ ಬೆಂಗಳೂರು- ಮಂಗಳೂರು ಪ್ರಯಾಣಿಕರು ರೈಲಿನ (Train) ಮೂಲಕ ಸಂಚರಿಸಬಹುದಾಗಿದೆ.

ಶಿರಾಡಿ ಘಾಟ್ ಮಾರ್ಗದಲ್ಲಿ ಭೂ ಕುಸಿತ, ಹೆಚ್ಚುವರಿ ರೈಲಿಗೆ ಒತ್ತಾಯ
ರಾಷ್ಟ್ರೀಯ ಹೆದ್ದಾರಿ-75 ರ ಶಿರಾಡಿ ಘಾಟ್ ಮಾರ್ಗದಲ್ಲಿ ಪದೇ ಪದೇ ಭೂಕುಸಿತಗಳು ಸಂಭವಿಸುತ್ತಿದ್ದು, ಸಂಚಾರದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮಂಗಳೂರು ನಡುವೆ ಪ್ರತಿ ವಾರ ಮೂರು ಜೋಡಿ ಹೆಚ್ಚುವರಿ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ಮಾರ್ಗದಲ್ಲಿ ರಸ್ತೆ ಕುಸಿತವಾಗಿತ್ತು, ಹೀಗಾಗಿ ಸಾರ್ವಜನಿಕರು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು ಹೆಚ್ಚುವರಿ ರೈಲುಗಳನ್ನು ಬಿಡುವಂತೆ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದರು.

ಜುಲೈ 26 ರಿಂದ ಆಗಸ್ಟ್ 31 ರವರೆಗೆ ಹೆಚ್ಚುವರಿ ರೈಲು ಸೇವೆ
ಈ ಹೆಚ್ಚುವರಿ ರೈಲು ಸೇವೆ ನಾಳೆಯಿಂದ ಆರಂಭವಾಗಲಿದ್ದು, ಆಗಸ್ಟ್ ಕೊನೆಯವರೆಗೂ ಲಭ್ಯವಿರಲಿದೆ. ಜುಲೈ 26 ರಿಂದ ಆಗಸ್ಟ್ 31 ರವರೆಗೆ ಮೈಸೂರು ಮೂಲಕ ಮಂಗಳೂರು ಸೆಂಟ್ರಲ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಹೆಚ್ಚುವರಿ ರೈಲುಗಳು ಪ್ರತಿ ವಾರ ಮೂರು ದಿನಗಳ ಕಾಲ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.

ಇದನ್ನೂ ಓದಿ: Karnataka Weather Report: ನಿಮ್ಮ ಜಿಲ್ಲೆಯಲ್ಲಿಂದು ಮಳೆಯಾಗುತ್ತಾ? ಇಲ್ಲಿದೆ ಇವತ್ತಿನ ಹವಾಮಾನ ವರದಿ

ರೈಲುಗಳ ವೇಳಾಪಟ್ಟಿ
ರೈಲು ಸಂಖ್ಯೆ 06547 ಬೆಂಗಳೂರಿನಿಂದ ರಾತ್ರಿ 8.30 ಕ್ಕೆ ಹೊರಟು ಬೆಳಿಗ್ಗೆ 9.05 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲು ಬೆಳಗ್ಗೆ 6.10ಕ್ಕೆ ಸುಬ್ರಹ್ಮಣ್ಯ ರಸ್ತೆ, 7ಕ್ಕೆ ಕಬಕ ಪುತ್ತೂರು, 7.30ಕ್ಕೆ ಬಂಟ್ವಾಳ, 8.13ಕ್ಕೆ ಮಂಗಳೂರು ಜಂಕ್ಷನ್ ಮತ್ತು 9.05ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲು ಸೇವೆಗಳು ಜುಲೈ 26 ರಿಂದ ಆಗಸ್ಟ್ 31ರವೆಗೆ ಎಲ್ಲಾ ದಿನವು ಲಭ್ಯವಿರುವುದಿಲ್ಲ. ವಾರದಲ್ಲಿ ಮಂಗಳವಾರ, ಗುರುವಾರ ಮತ್ತು ಭಾನುವಾರದಂದು ಮಾತ್ರ ಚಲಿಸುತ್ತವೆ.

ಇನ್ನು ಮತ್ತೊಂದು ರೈಲು, ಸಂಖ್ಯೆ 06548 ಮಂಗಳೂರಿನಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದ ಚಲಿಸುತ್ತದೆ. ಮಂಗಳೂರಿನಿಂದ ಸಂಜೆ 6.35ಕ್ಕೆ ಹೊರಟು ಮರುದಿನ ಬೆಳಗ್ಗೆ 6.48ಕ್ಕೆ ಬೆಂಗಳೂರು ತಲುಪಲಿದೆ. ಈ ವಿಶೇಷ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಎರಡು 2 ಟೈರ್ ಎಸಿ, ಎರಡು 3 ಟೈರ್ ಎಸಿ, ಒಂಬತ್ತು ಎರಡನೇ ದರ್ಜೆಯ ಸ್ಲೀಪರ್ ಮತ್ತು ಎರಡು ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳನ್ನು ಹೊಂದಿರಲಿದೆ.

ಇದನ್ನೂ ಓದಿ:  Viral Video: ಮೆಟ್ರೋದಲ್ಲಿ ಫ್ರೀ ಎಂಟರ್ಟೈನ್ಮೆಂಟ್ ಕೊಟ್ಟ ಹುಡುಗಿ! ಜನ ಖುಷಿ ಪಡಲಿಲ್ಲ

ಪಿಟಿಐ ವರದಿಯ ಪ್ರಕಾರ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬೆಂಗಳೂರಿಗೆ ಹೆಚ್ಚುವರಿ ರೈಲುಗಳನ್ನು ಅನುಮೋದಿಸಲು ಜುಲೈ 18 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯಲ್ಲಿ ಸಂಪರ್ಕಿಸಿ ಮಾತುಕತೆ ನಡೆಸಿದ್ದರು ಮತ್ತು ಕೇಂದ್ರ ಸಚಿವರು ಶೀಘ್ರವೇ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ನಿರಂತರ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದ ನಂತರ ಸಾರ್ವಜನಿಕರು ಹೆಚ್ಚುವರಿ ರೈಲುಗಳಿಗಾಗಿ ಒತ್ತಾಯಿಸಿದ್ದರು. ಸಾರ್ವಜನಿಕ ಒತ್ತಡಕ್ಕೆ ಮಣಿದ ಇಲಾಖೆ ಜನರಿಗೆ ಅನುಕೂಲವಾಗುವಂತೆ ಹೆಚ್ಚುವರಿ ರೈಲುಗಳನ್ನು ಪ್ರಾರಂಭಿಸಿದೆ.

ಗಣೇಶನ ಹಬ್ಬಕ್ಕೂ ವಿಶೇಷ ರೈಲು
ಈ ಬಾರಿ ಮಂಗಳೂರಿಗೆ ಗಣೇಶನ ಹಬ್ಬಕ್ಕೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಹ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಈ ಹಿಂದೆ ಅಂದರೆ ಜುಲೈ 2021ರಲ್ಲಿ, ಭಾರತೀಯ ರೈಲ್ವೆಯು ಪ್ರಯಾಣಿಕರು ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ಮಂಗಳೂರು-ಬೆಂಗಳೂರು ರೈಲಿಗೆ ವಿಶೇಷ ವಿಸ್ಟಾಡೋಮ್ (ಪಾರದರ್ಶಕ ಗಾಜಿನ ಸೀಲಿಂಗ್) ಕೋಚ್ ಅನ್ನು ಜೋಡಿಸಿತ್ತು.
Published by:Ashwini Prabhu
First published: