ಟ್ರ್ಯಾಕ್​​​​ ಬಿಟ್ಟು ಮೈದಾನಕ್ಕೆ ಬಂದ ಚುಕುಬುಕು ರೈಲು; ಬೋಗಿಯೇ ವಿದ್ಯಾರ್ಥಿಗಳಿಗೆ ಕೊಠಡಿ..!

ಇದು ನಿರುಪಯುಕ್ತವಾದ ಬೋಗಿಯಾಗಿದ್ದು, ಇದಕ್ಕೆ ಹೈಟೆಕ್ ಟಚ್ ಕೊಟ್ಟು, ಬೋಗಿಯೋಳಗೆ ಶಾಲೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಬೋಗಿ ಪಕ್ಕದಲ್ಲೇ  ಇ ಟಾಯ್ಲೆಟ್ ವ್ಯವಸ್ಥೆಯನ್ನು ಮಾಡಿದ್ದು, ಈ ಹೊಸ ಪ್ರಯೋಗಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದಾರೆ

news18-kannada
Updated:January 14, 2020, 7:07 PM IST
ಟ್ರ್ಯಾಕ್​​​​ ಬಿಟ್ಟು ಮೈದಾನಕ್ಕೆ ಬಂದ ಚುಕುಬುಕು ರೈಲು; ಬೋಗಿಯೇ ವಿದ್ಯಾರ್ಥಿಗಳಿಗೆ ಕೊಠಡಿ..!
ರೈಲು ಬೋಗಿಯ ಸರ್ಕಾರಿ ಶಾಲೆ
  • Share this:
ಮೈಸೂರು(ಜ.14) : ಬಹುಶ ಇದು ಸರ್ಕಾರಿ ಶಾಲೆಯ ಇತಿಹಾಸದಲ್ಲೆ ಮೊದಲ ಪ್ರಯತ್ನವಾಗಿ ಸರ್ಕಾರಿ ಶಾಲೆಯನ್ನ ರೈಲು ಬೋಗಿಯಲ್ಲಿ ಮಾಡಲಾಗುತ್ತಿದೆ. ಇಡೀ ಭಾರತದಲ್ಲಿ ಈ ಪ್ರಯೋಗ ಮೊದಲಾಗಿದ್ದು, ರೈಲ್ವೆ ಇಲಾಖೆಯ ನೇತೃತ್ವದಲ್ಲಿ ಸಿದ್ದವಾದ ಸರ್ಕಾರಿ ಶಾಲೆ ಇದಾಗಿದೆ. 

ಈ ರೈಲ್ವೆ ಬೋಗಿ ಮೇಲೆ ಅ.ಆ.ಇ.ಈ ಅಕ್ಷರಗಳು, ಅಲ್ಲೆ ಪಕ್ಕದಲ್ಲಿ ಕನ್ನಡ ನಂಬರ್​​ಗಳು ಇಂತಹ ಬರಹಗಳು ರೈಲ್ವೆ ಬೋಗಿ ಮೇಲೆ ಕಂಡಾಕ್ಷಣ ಎಲ್ಲರು ಅಂದುಕೊಳ್ಳೋದು ಕನ್ನಡದ ಬಗ್ಗೆ ಯಾರಾದ್ರು ಕೊಟ್ಟ ಜಾಹೀರಾತು ಫಲಕವೇ ಇರಬೇಕು ಅಂತ. ಹಾಗೆ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪಾಗುತ್ತೆ. ಯಾಕಂದ್ರೆ ಇದು ನೂತನವಾಗಿ ನಿರ್ಮಾಣಗೊಂಡ ರೈಲು ಬೋಗಿ ಸರ್ಕಾರಿ ಶಾಲೆ. ಅಚ್ಚರಿ ಆದರೂ ಇದು ಸತ್ಯ.

ಮೈಸೂರಿನ ಅಶೋಕಪುರಂನ ರೈಲ್ವೆಗಾರದಲ್ಲಿ ನಿರ್ಮಾಣಗೊಂಡ ಭಾರತದ ಮೊದಲ ರೈಲು ಬೋಗಿ ಶಾಲೆ ಇದಾಗಿದೆ. ಈ ರೈಲು ಬೋಗಿ ಶಾಲೆ ನಿರ್ಮಾಣಕ್ಕೆ ಬರೋಬ್ಬರಿ 45 ದಿನಗಳ ಕಾಲ ರೈಲ್ವೆ ಇಲಾಖೆಯ ಸಿಬ್ಬಂದಿಗಳು ಶ್ರಮಿಸಿದ್ದು, ಕಷ್ಟಪಟ್ಟು ಸಿದ್ದ ಮಾಡಿರೋ ಹೈಟೆಕ್ ಕಂಪಾರ್ಟಮೆಂಟ್ ಸದ್ಯಕ್ಕೆ ಸರ್ಕಾರಿ ಶಾಲೆಯಾಗಿದೆ. ಈಗಾಗಲೇ ಎರಡು ರೈಲು ಬೋಗಿಯಲ್ಲಿ ಶಾಲೆ ಪ್ರಾರಂಭವಾಗಿದ್ದು, ಎರಡು ಬೋಗಿಯಲ್ಲಿ ನಾಲ್ಕು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ಸಿದ್ದತೆ ಮಾಡಲಾಗಿದೆ.

ವಿದ್ಯಾರ್ಥಿಗಳು ಕೂಡ ಈ ಹೊಸ ಶಾಲೆಯಲ್ಲಿ ಸಖತ್ ಖುಷಿಯಾಗಿದ್ದು, ನಮಗೆ ರಜೆಯೇ ಬೇಡ ನಾವು ಎಲ್ಲ ದಿನವೂ ಶಾಲೆಗೆ ಬರಬೇಕಿನಿಸುತ್ತಿದೆ ಅಂತಿದ್ದಾರೆ.

ಇನ್ನೂ ವಿಶೇಷ ಅಂದ್ರೆ, ಇದು ನಿರುಪಯುಕ್ತವಾದ ಬೋಗಿಯಾಗಿದ್ದು, ಇದಕ್ಕೆ ಹೈಟೆಕ್ ಟಚ್ ಕೊಟ್ಟು, ಬೋಗಿಯೋಳಗೆ ಶಾಲೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಬೋಗಿ ಪಕ್ಕದಲ್ಲೇ ಇ ಟಾಯ್ಲೆಟ್ ವ್ಯವಸ್ಥೆಯನ್ನು ಮಾಡಿದ್ದು, ಈ ಹೊಸ ಪ್ರಯೋಗಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದಾರೆ.

ಈ ಪ್ರಯೋಗದಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನ ಹೆಚ್ಚಾಗಿ ಬರುವಂತೆ ಮಾಡಿ, ಹಾಜರಾತಿ ಸಮಸ್ಯೆ ನಿವಾರಣೆ ಮಾಡಿ ಟ್ರೈನ್ನಲ್ಲಿ ಸಂಚರಿಸುತ್ತಲೇ  ಪಾಠ ಕೇಳುವ ಹೊಸ ಅನುಭವ ವಿದ್ಯಾರ್ಥಿಗಳಿಗೆ ನೀಡಲಾಗಿದೆ  ಎಂದು ಶಿಕ್ಷಕರು ಹೇಳುತ್ತಾರೆ.

ಇದು ಮಕ್ಕಳನ್ನ ಆಕರ್ಷಣೆ ಮಾಡಲು ನಾವು ಕಂಡುಕೊಂಡಿರುವ ಹೊಸ ವಿಧಾನ ಅನ್ನೋದು ಶಿಕ್ಷಕರ ಅಭಿಪ್ರಾಯವಾಗಿದೆ. ಅಲ್ಲದೆ ಇಲ್ಲಿನ ಸರ್ಕಾರಿ ಶಾಲೆ ಮಳೆಯಿಂದಾಗಿ ಒಂದೆರಡು ಕ್ಲಾಸ್ ರೂಮ್​​​​​​​ ಶಿಥಿಲಾವಸ್ಥೆ ಕಂಡಿದೆ. ಇದಕ್ಕೆ ಮಾರ್ಗೋಪಾಯವಾಗಿ ಈ ಬೋಗಿ ಶಾಲೆ ನಿರ್ಮಾಣಗೊಂಡಿದ್ದು, ಟ್ರೈನ್‌ ಶಾಲೆಯಿಂದ ಮಕ್ಕಳು ಫುಲ್ ಖುಷ್ ಆಗಿದ್ದಾರೆ.ಇದನ್ನೂ ಓದಿ :  ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಬಿಟ್ಟು ಕೊಡೋ ಮನಸ್ಸಿಲ್ಲ - ಮಕ್ಕಳ ಪ್ರಗತಿಗಾಗಿ ಕುಟುಂಬ ಸಮೇತ ದುಡೀತೀವಿ ; ಭವಾನಿ ರೇವಣ್ಣ

ಜೊತೆಯಲ್ಲಿ ಸರ್ಕಾರಿ ಶಾಲೆ ಪಕ್ಕದಲ್ಲೇ ಇದ್ದರು ಈ ಬೋಗಿ ಶಾಲೆಯಲ್ಲೇ ಮಕ್ಕಳು ನಮ್ಮ ತರಗತಿಯನ್ನು ಮಾಡಿ ಎಂದು ಬೇಡಿಕೆ ಇಟ್ಟಿದ್ದು, ನಮ್ಮ ಅಕ್ಕಪಕ್ಕದ ಶಾಲೆ ಬಿಟ್ಟ ಸಹಪಾಠಿಗಳು ಹಾಗೂ ಸ್ನೇಹಿತರಿಗೆ ಇಲ್ಲಿಯೇ ಸೇರಿಕೊಳ್ಳಲು ಹೇಳುತ್ತಿದ್ದೇವೆ. ಎಲ್ಲ ಶಾಲೆಗಿಂತ ನಮ್ಮ ಶಾಲೆ ಸೂಪರ್ ಅಂತ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸುತ್ತಾರೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳ ಹಾಜರಾತಿ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ರೀತಿಯ ಟ್ರೈನ್‌ ಶಾಲೆ ಮಕ್ಕಳನ್ನ ಆಕರ್ಷಿಸುತ್ತಿರೋದಂತು ಸುಳ್ಳಲ್ಲ , ಸರ್ಕಾರಿ ಶಾಲೆಗೆ ಬರಲು ಹಿಂದೇಟು ಹಾಕೋರಿಗೆ ಟ್ರೈನ್ ಸ್ಕೂಲ್ ಸಖತ್ ಹೈಟೆಕ್ ಕಾಣುತ್ತಿದ್ದು ಯಾವ ಖಾಸಗಿ ಸಂಸ್ಥೆಯೂ ಮಾಡದ ವಿಭಿನ್ನ ಪ್ರಯತ್ನ ಇದಾಗಿದೆ. ಇಂತಹ ಹೊಸ ಪ್ರಯತ್ನಗಳ ಮೂಲಕ ಮಕ್ಕಳನ್ನ ಶಾಲೆಯತ್ತ ಕರೆತರುವಲ್ಲಿ ಶಿಕ್ಷಣ ಇಲಾಖೆ ಜೊತೆಗೆ ರೈಲ್ವೆ ಇಲಾಖೆಯೂ ಸಾಥ್ ನೀಡಿರೋದು ಸಂತಸದ ಸಂಗತಿಯಾಗಿದೆ.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ