ಕೃಷಿ ಕಾಯ್ದೆ ವಿರೋಧಿಸಿ ಇಂದು ರಾಜ್ಯಾದ್ಯಂತ ರೈಲು ತಡೆ; ಮೆಜೆಸ್ಟಿಕ್, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ

ರೈತರು ಈ ರೈಲು ತಡೆ ಚಳುವಳಿಯಿಂದ 3 ಗಂಟೆಗಳ ಕಾಲ ರೈಲು ಸೇವೆ ಬಂದ್ ಆಗಲಿದೆ ಎನ್ನಲಾಗುತ್ತಿದೆ. ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ರೈಲು ತಡೆ ಚಳವಳಿಗೆ ಕರೆ ನೀಡಲಾಗಿದೆ. ರಾಜ್ಯದ ಹಲವೆಡೆ ರೈತ ಸಂಘಟನೆಗಳು ರೈಲು ತಡೆ ಚಳುವಳಿಗೆ ಕರೆ ನೀಡಿವೆ.

ಸಾಂದರ್ಭಿಕ ಚಿತ್ರ (ರೈತರ ಪ್ರತಿಭಟನೆ).

ಸಾಂದರ್ಭಿಕ ಚಿತ್ರ (ರೈತರ ಪ್ರತಿಭಟನೆ).

 • Share this:
  ಬೆಂಗಳೂರು(ಫೆ.18): ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ರೈತ ಹೋರಾಟಕ್ಕೆ ರಾಜ್ಯದಲ್ಲೂ ಅನ್ನದಾತರು ಬೆಂಬಲ ನೀಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ರೈತರ ಆಕ್ರೋಶ ಭುಗಿಲೆದ್ದಿದ್ದು, ಇಂದು ರಾಜ್ಯಾದ್ಯಂತ ರೈಲು ಬಂದ್ ಮಾಡಲು ನಿರ್ಧರಿಸಿದ್ದಾರೆ. ಅನ್ನದಾತರು ಇಂದು ರೈಲು ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಇಂದು ರಾಜ್ಯಾದ್ಯಂತ ರೈಲು ತಡೆ ಚಳುವಳಿಗೆ ಕರೆ ನೀಡಲಾಗಿದೆ.

  ದೆಹಲಿ ರೈತರ ಹೋರಾಟವನ್ನ ಬೆಂಬಲಿಸಿ ರಾಜ್ಯಾದ್ಯಂತ 3 ಗಂಟೆಗಳ ಕಾಲ ರೈಲು ತಡೆ ಚಳುವಳಿಯನ್ನು ಮಾಡಲಿದ್ದಾರೆ.  ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ರೈತ ಹೋರಾಟ ಬೆಂಬಲಿಸಿ ರೈಲು ತಡೆ ಚಳುವಳಿ ಮಾಡಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರ ರೈತ ಚಳುವಳಿಯನ್ನ ಹತ್ತಿಕ್ಕಲು ಹೆಚ್ಚು ಒತ್ತು ನೀಡುತ್ತಿದೆ ಎಂದೂ ಸಹ ರೈತರು ಆರೋಪಿಸಿದ್ದಾರೆ. ಇದನ್ನು ಖಂಡಿಸಿ ದೇಶಾದ್ಯಂತ ಇಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ತನಕ ರೈಲು ತಡೆ ಚಳುವಳಿ ನಡೆಯಲಿದೆ.

  ಮೂರು ಗಂಟೆಗಳ ಕಾಲ ಬಂದ್ ಆಗಲಿದೆಯಾ ರೈಲು ಸೇವೆ..?

  ರೈತರು ಈ ರೈಲು ತಡೆ ಚಳುವಳಿಯಿಂದ 3 ಗಂಟೆಗಳ ಕಾಲ ರೈಲು ಸೇವೆ ಬಂದ್ ಆಗಲಿದೆ ಎನ್ನಲಾಗುತ್ತಿದೆ. ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ರೈಲು ತಡೆ ಚಳವಳಿಗೆ ಕರೆ ನೀಡಲಾಗಿದೆ. ರಾಜ್ಯದ ಹಲವೆಡೆ ರೈತ ಸಂಘಟನೆಗಳು ರೈಲು ತಡೆ ಚಳುವಳಿಗೆ ಕರೆ ನೀಡಿವೆ.

  ಹಾರ್ವರ್ಡ್​ ಯೂನಿವರ್ಸಿಟಿ ಲಂಡನ್​​ನಲ್ಲಿದೆ!; ವಿಚಿತ್ರ ಹೇಳಿಕೆ ನೀಡಿ ಟ್ರೋಲ್ ಆದ ತ್ರಿಪುರ ಸಿಎಂ

  ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈಲು ತಡೆ ಚಳುವಳಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ರೈಲು ತಡೆ ಚಳುವಳಿ ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ.

  ಬಿಗಿ ಪೊಲೀಸ್ ಬಂದೋಬಸ್ತ್​

  ಇಂದು ರೈತರಿಂದ ರೈಲ್ ರೊಕೊ ಚಳುವಳಿ ಹಿನ್ನೆಲೆ,  ಮೆಜೆಸ್ಟಿಕ್ ಕೆಎಸ್ಆರ್ ರೈಲು ನಿಲ್ದಾಣ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರೈಲು ನಿಲ್ದಾಣ ಬಳಿ ಕಾಟನ್ ಪೇಟೆ ಪೊಲೀಸರನ್ನು ನಿಯೋಜಿಸಲಾಗಿದೆ. ಬಂದೋಬಸ್ತ್ ಗಾಗಿ ಒಂದು ಕೆಎಸ್ಆರ್ ಪಿ ತುಕಡಿ ಹಾಗೂ ಎರಡು ಬಿಎಂಟಿಸಿ ಬಸ್ ಗಳ ನಿಯೋಜನೆ ಮಾಡಲಾಗಿದೆ.

  ರೈಲ್ ರೊಕೊ ಚಳುವಳಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರತಿಭಟನಾಕಾರರನ್ನ ರೈಲ್ವೆ ಸ್ಟೇಷನ್ ಒಳಭಾಗಕ್ಕೆ ಬಿಡದಂತೆ ತಡೆಯಲು ಪೊಲೀಸರು ಸಜ್ಜಾಗಿದ್ದಾರೆ. ಹೀಗಾಗಿ ರೈಲು ನಿಲ್ದಾಣದ ಎಂಟ್ರಿಯಲ್ಲಿಯೇ ಪೊಲೀಸರು ಬ್ಯಾರಿಕೇಡ್ ಹಾಕಿ ಹಗ್ಗ ಕಟ್ಟಿದ್ದಾರೆ. ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲು ತಡೆಯಲು ಪ್ರತಿಭನಾಕಾರರು ನಿರ್ಧರಿಸಿದ್ದಾರೆ. ಮುನ್ನೆಚ್ಚರಿಕೆ ಸಲುವಾಗಿ ಮೆಜೆಸ್ಟಿಕ್ ಕೆಎಸ್ಆರ್ ರೈಲು ನಿಲ್ದಾಣದಲ್ಲೂ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಪಶ್ಚಿಮ ವಿಬಾಗದ ಪೊಲೀಸರ ಜೊತೆಗೆ ಕೆಎಸ್ಆರ್ ಪಿ ತುಕಡಿಯನ್ನೂ ನಿಯೋಜನೆ ಮಾಡಲಾಗಿದೆ. ಯಶವಂತಪುರ ಎಂದು ಹೇಳಿ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೂ ಪ್ರತಿಭಟನಾಕಾರರು ಬರುವ ಸಾಧ್ಯತೆ ಇದೆ.

  ಕೇಂದ್ರದ ಮೂರು ಕೃಷಿ ಮಸೂದೆ ವಿರೋಧಿಸಿ ದೇಶಾದ್ಯಂತ ರೈತರಿಂದ ರೈಲ್ ರೊಕೊ ಚಳುವಳಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಹ ರೈಲು ತಡೆದು ಪ್ರತಿಭಟನೆ ನಡೆಸಲು ರೈತ ಸಂಘ ಕರೆ ನೀಡಿದೆ. ಹೀಗಾಗಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ರೈಲು ತಡೆದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.

  (ವರದಿ: ಶರಣು ಹಂಪಿ, ಮುನಿರಾಜು)
  Published by:Latha CG
  First published: