Union Budget 2020 - ಬೆಂಗಳೂರಿಗೆ ಸಿಹಿ ಸುದ್ದಿ: ಸಬರ್ಬನ್ ರೈಲು ಯೋಜನೆಗೆ ಬಜೆಟ್​ನಲ್ಲಿ ಅನುದಾನ

ಬೆಂಗಳೂರು ಹೊರವರ್ತುಲ ರಸ್ತೆಯಂತೆ ನಗರದ ಸುತ್ತಲೂ 148 ಕಿಮೀ ರೈಲು ಮಾರ್ಗ ನಿರ್ಮಾಣ ಮಾಡುವುದು ಈ ಸಬರ್ಬನ್ ರೈಲು ಯೋಜನೆಯಾಗಿದೆ. ಒಟ್ಟಾರೆ, 148 ಕಿಮೀ ಮಾರ್ಗದಲ್ಲಿ 55 ಕಿಮೀಯಷ್ಟು ಮಾರ್ಗವು ಎಲಿವೇಟೆಡ್ ಆಗಿರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಫೆ. 01): ನಗರದ ಬಹುನಿರೀಕ್ಷಿತ ಉಪನಗರ ರೈಲು (ಸಬರ್ಬನ್ ರೈಲು) ಯೋಜನೆಗೆ ಕೇಂದ್ರ ಸರ್ಕಾರ ಶೇ. 60ಷ್ಟು ಅನುದಾನ ಕೊಡುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ಇದನ್ನು ಪ್ರಕಟಿಸಿದ್ಧಾರೆ. 18,600 ಕೋಟಿ ಮೊತ್ತದ ಸಬರ್ಬನ್ ರೈಲು ಯೋಜನೆಯ ಶೇ. 60 ವೆಚ್ಚವನ್ನು ಕೇಂದ್ರವೇ ಭರಿಸಲಿದೆ.

  ವಾಹನ ದಟ್ಟನೆ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರಿಗರಿಗೆ ಈ ಸಬರ್ಬನ್ ರೈಲು ಯೋಜನೆ ತುಸು ಆಶಾಕಿರಣವೆನಿಸಿದೆ. ಬೆಂಗಳೂರು ಹೊರವಲಯ ಮತ್ತು ತುಸು ದೂರದಲ್ಲಿರುವ ಪ್ರದೇಶಗಳಿಂದ ಜನರು ನಗರಕ್ಕೆ ಸುಲಭ ಓಡಾಟ ನಡೆಸಲು ಸಬರ್ಬನ್ ರೈಲು ವ್ಯವಸ್ಥೆ ಅನುಕೂಲ ಮಾಡಿಕೊಡಲಿದೆ.

  ಇದನ್ನೂ ಓದಿ: Budget 2020: ಕೃಷಿ ಮತ್ತು ರೈತರ ಸಂಕಷ್ಟ ನೀಗಿಸಲು ಬಜೆಟ್​ನಲ್ಲಿ 16 ಅಂಶಗಳ ಯೋಜನೆ

  ಬೆಂಗಳೂರು ಹೊರವರ್ತುಲ ರಸ್ತೆಯಂತೆ ನಗರದ ಸುತ್ತಲೂ 148 ಕಿಮೀ ರೈಲು ಮಾರ್ಗ ನಿರ್ಮಾಣ ಮಾಡುವುದು ಈ ಸಬರ್ಬನ್ ರೈಲು ಯೋಜನೆಯಾಗಿದೆ. ಒಟ್ಟಾರೆ, 148 ಕಿಮೀ ಮಾರ್ಗದಲ್ಲಿ 55 ಕಿಮೀಯಷ್ಟು ಮಾರ್ಗವು ಎಲಿವೇಟೆಡ್ ಆಗಿರಲಿದೆ. ಅಂದರೆ ಮೇಲ್ಸೇತುವೆಯಾಗಿರಲಿದೆ. ಈ ಯೋಜನೆಯಲ್ಲಿ 57 ರೈಲು ನಿಲ್ದಾಣಗಳಿರಲಿವೆ.

  ಸಬರ್ಬನ್ ರೈಲು ಯೋಜನೆಯಲ್ಲಿ ನಾಲ್ಕು ಪ್ರಮುಖ ಮಾರ್ಗಗಳಿವೆ:
  1) ಬೈಯಪ್ಪನಹಳ್ಳಿ-ಬಾಣಸವಾಡಿ-ಯಶವಂತಪುರ – 25.1 ಕಿಮೀ
  2) ಕೆಂಗೇರಿ-ಕಂಟೋನ್ಮೆಂಟ್-ವೈಟ್​ಫೀಲ್ಡ್ - 35.52 ಕಿಮೀ
  3) ಮಾಗಡಿ ರಸ್ತೆ-ಯಶವಂತಪುರ-ಯಲಹಂಕ-ವಿಮಾನ ನಿಲ್ದಾಣ – 41.4 ಕಿಮೀ
  4) ಹೆಲ್ಲಳಿಗೆ-ಬೈಯಪ್ಪನಹಳ್ಳಿ-ಯಲಹಂಕ-ರಾಜಾನುಕುಂಟೆ – 46.24 ಕಿಮೀ)

  ಇದನ್ನೂ ಓದಿ: Union Budget 2020: ಶಿಕ್ಷಣ ಕ್ಷೇತ್ರದಲ್ಲೂ ವಿದೇಶಿ ಬಂಡವಾಳದ ನೇರ ಹೂಡಿಕೆಗೆ ಅವಕಾಶ; ನಿರ್ಮಲಾ ಸೀತಾರಾಮನ್

  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರ ಬಜೆಟ್​ನಲ್ಲಿ ಬೆಂಗಳೂರು-ಚೆನ್ನೈ ಮಧ್ಯೆ ಎಕ್ಸ್​ಪ್ರೆಸ್​ವೇ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ್ದಾರೆ. ಶೀಘ್ರದಲ್ಲೇ ಇದರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಹಾಗೆಯೇ ದೆಹಲಿ-ಮುಂಬೈ ಎಕ್ಸ್​ಪ್ರೆಸ್ ವೇ ಕೂಡ ಪೂರ್ಣಗೊಳ್ಳಲಿದೆ. 2 ಸಾವಿರ ಕಿಮೀ ಕರಾವಳಿ ರಸ್ತೆ ಅಭಿವೃದ್ಧಿ, 9 ಸಾವಿರ ಕಿಮೀ ಆರ್ಥಿಕ ಕಾರಿಡಾರ್ ನಿರ್ಮಾಣವಾಗಿದೆ.

  ಇನ್ನು, ರೈಲ್ವೆ ಮಾಲಿಕತ್ವದ ನೆಲದ ಮೇಲಿರುವ ರೈಲ್ವೆ ಟ್ರ್ಯಾಕ್​ಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಮಾಡಲಾಗುವುದು; ಹಲವು ನಿಲ್ದಾಣಗಳ ಮರುಅಭಿವೃದ್ಧಿ; ತೇಜಸ್​ನಂತಹ ರೈಲುಗಳ ಸಂಖ್ಯೆ ಹೆಚ್ಚಿಸುವುದು; ಅಹ್ಮದಾಬಾದ್-ಮುಂಬೈ ಮಾರ್ಗದಲ್ಲಿರುವ ಹೈಸ್ಪೀಡ್ ರೈಲುಗಳನ್ನು ದೇಶದ ವಿವಿಧೆಡೆ ತರುವುದು ಇತ್ಯಾದಿ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ತಿಳಿಸಿದ್ಧಾರೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: