ಬೆಂಗಳೂರು(ಡಿಸೆಂಬರ್. 04): ಬೆಂಗಳೂರಿನಲ್ಲಿ ನಿಮ್ಮದೊಂದು ಸೈಟ್ ಇದಿಯಾ ಹಾಗಾದ್ರೆ ನಿಮ್ಮ ದಾಖಲೆ ಒಮ್ಮೆ ಪರಿಶೀಲಿಸಿಕೊಳ್ಳಿ. ಯಾಕೆಂದರೆ ಅಸಲಿ ದಾಖಲೆಗಳನ್ನು ಬಳಸಿ ಬೇರೆಯವರಿಗೆ ಅಕ್ರಮವಾಗಿ ಮಾರುವ ದೊಡ್ಡ ಜಾಲ ಇಂದು ದಾಳಿಯಿಂದ ಹೊರಬಿದ್ದಿದೆ. ಅಷ್ಟಕ್ಕೂ ಇದನ್ನೆಲ್ಲ ಮಾಡುತ್ತಿದ್ದವರು ಬೇರಾರು ಅಲ್ಲ ಬಿಡಿಎ ಅಧಿಕಾರಿ, ಸಿಬ್ಬಂದಿಗಳೇ. ಇಂದು ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದ ಜಾಲದ ಮೇಲೆ ಬಿಡಿಎ ದಾಳಿ ಮಾಡಲಾಗಿದೆ. ಬಿಡಿಎ ಜಾಗೃತ ದಳ ಹಾಗೂ ನಗರ ಪೋಲಿಸರಿಂದ ಜಂಟಿ ಕಾರ್ಯಾಚರಣೆಯಲ್ಲಿ ಬಿಡಿಎ ಸೈಟ್ಗಳಿಗೆ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಗುಳುಂ ಮಾಡಲು ಮುಂದಾಗಿದ್ದರು. ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ರೆಧನ್ ದಿ ಸೆನೆಮಾ ಪೀಪಲ್ ಕಂಪನಿಯಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಬೇಕಿದ್ದ ನಿವೇಶನಗಳನ್ನ ಖಾಸಗಿ ವ್ಯಕ್ತಿಗಳು ನೀಡುತ್ತಿದ್ದರು. ಅದೂ ಬಿಡಿಎ ಆಯುಕ್ತರ ಲೆಟರ್ ಹೆಡ್ ನಲ್ಲಿ ನಕಲಿ ಫಲಾನುಭವಿಗಳಿಗೆ ಸ್ವಾಧೀನ ಪತ್ರ ನೀಡಲಾಗುತ್ತಿತ್ತು. ಇದಕ್ಕೆ ಬಿಡಿಎ ಉಪ ಕಾರ್ಯದರ್ಶಿ -3 DS3 - ಶಿವೇಗೌಡ, ತಹಶೀಲ್ದಾರ್ ಕಮಲಮ್ಮ, ಗುಮಾಸ್ತರಾದ ಪವಿತ್ರ, ಸಂಪತ್ ಶಾಮೀಲಾಗಿರುವುದು ಖಚಿತವಾಗಿದೆ.
ಬಿಡಿಎ ಸಿಬ್ಬಂದಿಯೇ ಅಕ್ರಮದಲ್ಲಿ ಭಾಗಿಯಾಗಿದ್ದು ಅವರ ಮನೆ, ಕಚೇರಿಗಳ ಮೇಲೂ ದಾಳಿ ಮಾಡಲಾಗಿದೆ. 60 ನಕಲಿ ಫಲಾನುಭವಿಗಳಿಗೆ ಸ್ವಾಧೀನ ಪತ್ರ ನೀಡಲು ಸಿದ್ಧತೆನೂ ನಡೆದಿತ್ತು. ದಾಳಿಯಿಂದಾಗಿ ಸಾವಿರಾರು ಕೋಟಿ ಆಸ್ತಿ ಉಳಿಸಿದಂತಾಗಿದೆ ಎಂದು ಬಿಡಿಎ ಆಯುಕ್ತ ಮಹದೇವ್ ಮಾಹಿತಿ ನೀಡಿದರು.
ಇಂದರ್ ಎಂಬ ವ್ಯಕ್ತಿ ಏಜೆಂಟ್ ಗಳ ಜೊತೆ ಸೇರಿ ಬಿಡಿಎನ ಐವರು ನಕಲಿ ದಾಖಲೆ ಸೃಷ್ಟಿಸಿ ಅಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಕಚೇರಿಯಲ್ಲಿ ಮಾಡುವ ಕೆಲಸವನ್ನೆ ಖಾಸಗಿ ಸ್ಥಳಗಳಲ್ಲಿ ಮಾಡಿ ಅಲ್ಲಿಯೇ ಅಕ್ರಮವೆಸಗುತ್ತಿದ್ದರು. ಖಾಸಗಿ ವ್ಯಕ್ತಿ ಸಾಕ್ಷಿ ಸಮೇತ ದೂರು ನೀಡಿದ ಹಿನ್ನೆಲೆ ಕಳೆದ ಹದಿನೈದು ದಿನಗಳಿಂದ ಗಮನಹರಿಸಿ ಇಂದು ದಾಳಿ ಮಾಡಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಬಿಡಿಎ ಐವರು ಸಿಬ್ಬಂದಿ ಮನೆ, ಏಜೆಂಟ್ ಕಚೇರಿ, ಮನೆ ಮೇಲೂ ಪೊಲೀಸರು ದಾಳಿ ಪರಿಶೀಲನೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಹತ್ತು ವರ್ಷ ಯಾರೇ ವಾಸವಿದ್ದರೂ ಅವರೆಲ್ಲರೂ ಕನ್ನಡಿಗರು: ಡಿಸಿಎಂ ಅಶ್ವತ್ಥನಾರಾಯಣ
ಹೊರಗಡೆ ಶತ್ರು ಎದುರಿಸಬಹುದು. ಆದರೆ ಒಳಗಡೆಯವರನ್ನು ಹೆದರಿಸುವುದು ಕಷ್ಟ. ಬಿಡಿಎ ಅಧಿಕಾರಿಗಳೇ ಶಾಮೀಲಾಗಿರುವುದು ನೋವು ತಂದಿದೆ. ಇವರೆಲ್ಲ ಬಿಡಿಎ ಸಂಸ್ಥೆಗೆ ದ್ರೋಹ ಮಾಡಿದ್ದಾರೆ. ಪರಿಶೀಲನೆ ವೇಳೆ 60 ಒರಿಜಿನಲ್ ಅಲಾಟ್ಮೆಂಟ್ ಲೆಟರ್ ಸಿಕ್ಕಿದ್ದು, ಕೋಟ್ಯಾಂತರ ರೂಪಾಯಿ ಬಿಡಿಎಗೆ ನಷ್ಟ ಮಾಡುವುದಕ್ಕೆ ಹೊರಟಿದ್ದರು. ಈಗ ಅಕ್ರಮ ಎಸಗಿರುವವರನ್ನ ಕೂಡಲೇ ಸಸ್ಪೆಂಡ್ ಮಾತ್ರವಲ್ಲ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ