ಇದ್ದೂ ಇಲ್ಲದಂತೆ ಇರುವ ಸಿರವಾರದ ಆಸ್ಪತ್ರೆ; ಸಚಿವರಿಂದ ಉದ್ಘಾಟನೆಗಾಗಿ ಎರಡು ವರ್ಷದಿಂದ ಕಾದು ಕುಳಿತ ಕಟ್ಟಡಗಳು

ಕ್ಷೇತ್ರದ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರಿಂದ ಆಸ್ಪತ್ರೆ ಉದ್ಘಾಟನೆ ಮಾಡಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಕ್ಷೇತ್ರದ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರಿಂದ ಆಸ್ಪತ್ರೆ ಉದ್ಘಾಟನೆ ಮಾಡಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಕ್ಷೇತ್ರದ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರಿಂದ ಆಸ್ಪತ್ರೆ ಉದ್ಘಾಟನೆ ಮಾಡಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

  • Share this:
ರಾಯಚೂರು : ಅತ್ಯಂತ ಹಿಂದುಳಿದಿರುವ ಹಣೆಪಟ್ಟಿ ಹೊಂದಿರುವ ಜಿಲ್ಲೆಗೆ ಮೂಲಸೌಲಭ್ಯಗಳು ಲಭ್ಯವಾದರೂ ಜನರಿಗೆ ಸಿಗುವುದು ಮಾತ್ರ ತಡವಾಗಿಯೇ. ಇದಕ್ಕೆ ಉದಾಹರಣೆ ಎಂಬಂತೆ ಸಿರವಾರ ತಾಲೂಕಿನ ಎರಡಯ ಆಸ್ಪತ್ರೆಗಳು ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಇನ್ನು ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ. ಇದರಿಂದಾಗಿ ಜನರು ಇನ್ನು ಕೂಡ ವೈದ್ಯಕೀಯ ಸೌಲಭ್ಯದಿಂದಾಗಿ ವಂಚಿತರಾಗಿದ್ದಾರೆ.  ಸಿರವಾರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕಲ್ಲೂರಿನ ಸಮುದಾಯ ಆರೋಗ್ಯ ಕೇಂದ್ರಗಳ ಕಟ್ಟಡಗಳು ನಿರ್ಮಾಣವಾಗಿ ಎರಡು ವರ್ಷಗಳಾಗಿವೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಕಾಗುವಷ್ಟು ಸಲಕರಣೆಗಳು, ಹಾಸಿಗೆ, ಯಂತ್ರೋಪಕರಣಗಳನ್ನು ನೀಡಲಾಗಿದೆ, ಸುಮಾರು ಒಂದೊಂದು ಕಟ್ಟಡ ತಲಾ 3 ಕೋಟಿ ರೂಪಾಯಿಯಲ್ಲಿ ಪೂರ್ಣಗೊಂಡಿವೆ, ಆದರೆ ಈ ಕಟ್ಟಡಗಳಿಗೆ ಉದ್ಘಾಟನೆಯ ಭಾಗ್ಯವಿಲ್ಲ. ಕಟ್ಟಡಗಳ ಉದ್ಘಾಟನೆಗೆ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಆಗಮನಕ್ಕಾಗಿ ಕಾಯುತ್ತಿದ್ದು, ಇದಕ್ಕೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. 

ಸಿರವಾರ ಈಗ ತಾಲೂಕಾ ಕೇಂದ್ರವಾಗಿದ್ದು, ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇದೆ. ಈ ಕೇಂದ್ರಕ್ಕೆ ಸುತ್ತಲಿನ ಸುಮಾರು 35 ಕ್ಕೂ ಹೆಚ್ಚು ಹಳ್ಳಿ ಜನರು ಆಶ್ರಯಿಸಿದ್ದಾರೆ.   ಪ್ರಸ್ತುತ  ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಒಬ್ಬರು ಎಂಎಂಬಿಎಸ್ ಹಾಗೂ ಒಬ್ಬರು ಆಯುಷ್ ವೈದ್ಯರಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರವಾದರೆ ನಾಲ್ಕು ಜನ ತಜ್ಙ ವೈದ್ಯರು ನೇಮಕವಾಗುತ್ತಾರೆ. ಸ್ಕಾನಿಂಗ್, ಎಕ್ಸ ರೇ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗುತ್ತವೆ. ಇದರಿಂದ ಜನರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಸಿಗಲಿದೆ ಎಂ ಉದ್ದೇಶದಿಂದ ಇಲ್ಲಿ  ಸರ್ಕಾರಿ ಆಸ್ಪತ್ರೆ ನಿರ್ಮಾಣಮಾಡಲಾಗಿದೆ.  ಆದರೆ, ಈ ಆಸ್ಪತ್ರೆಗೆ ಉದ್ಘಾಟನೆಯ ಭಾಗ್ಯ ಮಾತ್ರ ದೊರೆತಿಲ್ಲ.

ಇದೇ ರೀತಿ ಕಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಸುತ್ತಲಿನ  10 ಕ್ಯಾಂಪುಗಳು, ಗಣದಿನ್ನಿ, ಕಪ್ಪಗಲ್ ಸೇರಿದಂತೆ ಸುಮಾರು 20 ಗ್ರಾಮಗಳು  ಆರೋಗ್ಯ ಸೇವೆ ಪಡೆಯಲು ಬರುತ್ತಾರೆ. ಜನರಿಗೆ ಅನುಕೂಲವಾಗಲಿ ಎಂದು ನಿರ್ಮಾಣವಾಗಿರುವ ಆಸ್ಪತ್ರೆ ಮಾತ್ರ ಇದ್ದು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಓದಿ: ಹುಲಕೋಟಿ ಗ್ರಾಮ ದೇಶಕ್ಕೆ ನಂಬರ್‌ ಒನ್; ಕೇಂದ್ರ ಸರ್ಕಾರದ ಅಂತ್ಯೋದಯ ಸಮೀಕ್ಷೆಯಲ್ಲಿ ನಂಬರ್‌ ಶ್ರೇಣಿ

ಸರ್ಕಾರದಿಂದ ಸಿಕ್ಕ ಅನುದಾನದಲ್ಲಿ ಉತ್ತಮವಾಗಿ ಎಲ್ಲ ಸೌಕರ್ಯಗಳೊಂದಿಗೆ ಆಸ್ಪತ್ರೆಯನ್ನು ನಿರ್ಮಾಣಮಾಡಲಾಗಿದೆ. ಉತ್ತಮ ಕಟ್ಟಡ, ಸಲಹರಣೆಗಳು ಎಲ್ಲವೂ ಇದ್ದು, ಉದ್ಘಾಟನೆ ಭಾಗ್ಯ ಕಾಣದೇ ತುಕ್ಕು ಹಿಡಿದು ಹಾಳಾಗುವಂತೆ ಆಗಿದೆ. ಕಣ್ಣಮುಂದೆ ಸುಸಜ್ಜಿತ ಕಟ್ಟಡಗಳಿದ್ದರು ಬಳಕೆಯಾಗದೆ ಇರುವುದಕ್ಕೆ ಜನರು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಮೊದಲು ರಾಯಚೂರು ಜಿಲ್ಲಾ ಉಸ್ತುವಾರಿಯನ್ನು ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು  ವಹಿಸಿಕೊಂಡಿದ್ದರು. ಅವರಿಂದಲೇ ಆಸ್ಪತ್ರೆ ಉದ್ಗಾಟನೆ ಮಾಡಿಸಲು ಇಲ್ಲಿನ ಅಧಿಕಾರಿಗಳು ನಿರ್ಧರಿಸಿದ್ದರು.ಈಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಿಸಿಎಂ ಲಕ್ಷ್ಮಣ ಸವದಿ  ಅವರಿಂದ ಕಟ್ಟಡ ಉದ್ಘಾಟನೆ ಮಾಡಿಸಲು ನಿರ್ಧಾರ ಮಾಡಲಾಗಿದೆ. ಆದರೆ, ಅವರು, ಕ್ಷೇತ್ರಕ್ಕೆ ಬರುವುದು ಅಪರೂಪ. ಅವರು ಬಂದಾಗ ಉದ್ಗಾಟನೆ ಮಾಡಿಸೋಣ ಎಂದು ನಿರ್ಧಾರಿಸಲಾಗಿದೆಯಾದರೂ, ಇದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಒಟ್ಟಾರೆ ಸೌಲಭ್ಯ ಸಿಕ್ಕರೂ ಜಿಲ್ಲೆಯ ಜನರಿಗೆ ಅನುಭವಿಸುವ ಭಾಗ್ಯ ಮಾತ್ರ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಜನರು ಮಾತ್ರ ಹೈರಾಣಾಗಿದ್ದಾರೆ.
Published by:Seema R
First published: