ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ಇಲ್ಲ ನೀರು; ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಜಲಾಶಯದಲ್ಲಿ 34 ಟಿಎಂಸಿ ಯಷ್ಟು ಹೂಳು ತುಂಬಿದ್ದರಿಂದ ಕೇವಲ 100 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಅದರಲ್ಲಿ ಶೇ 30 ರಷ್ಟು ಆಂಧ್ರ ಹಾಗೂ ತೆಲಂಗಾಣ ರಾಜ್ಯಕ್ಕೆ ನೀಡಬೇಕು. ಇದರಿಂದಾಗಿ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನಿಗಿದಿತ ಪ್ರಮಾಣದ ಪ್ರದೇಶಕ್ಕೆ ನೀರು ಹರಿಯುತ್ತಿಲ್ಲ

ಕಾಲುವೆಯಲ್ಲಿ ನೀರಲ್ಲದೆ ಇರುವುದು

ಕಾಲುವೆಯಲ್ಲಿ ನೀರಲ್ಲದೆ ಇರುವುದು

  • Share this:
ರಾಯಚೂರು (ಮಾ. 5): ತುಂಗಭದ್ರಾ ಜಲಾಶಯದಿಂದ  ರಾಯಚೂರು, ವಿಜಯನಗರ, ಬಳ್ಳಾರಿ ಹಾಗು ಕೊಪ್ಪಳ ಜಿಲ್ಲೆ, ಆಂಧ್ರ ಹಾಗು ತೆಲಂಗಾಣದ ಸುಮಾರು 12ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.  ಆದರೆ ಜಲಾಶಯದಿಂದ ನೀರು ಹರಿಸುವ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಕ್ರಮ ನೀರಾವರಿಯಿಂದಾಗಿ ಕೊನೆಯ ಭಾಗಕ್ಕೆ ನೀರು ದೊರೆಯುತ್ತಿಲ್ಲ, ನೀರಿಗಾಗಿ ಈಗ ಕೊನೆಯ ಭಾಗದ ರೈತರು ಪರದಾಡುವಂತಾಗಿದ್ದು ಹೋರಾಟಕ್ಕೆ ಸಿದ್ದವಾಗಿದ್ದಾರೆ. ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ಮಧ್ಯೆ ಇರುವ ತುಂಗಭದ್ರಾ ಜಲಾಶಯದಲ್ಲಿ ಒಟ್ಟು 134 ಟಿಎಂಸಿ ನೀರು ಸಂಗ್ರಹವಾಗಬೇಕಿತ್ತು, ಆದರೆ ಈಗ ಜಲಾಶಯದಲ್ಲಿ 34 ಟಿಎಂಸಿ ಯಷ್ಟು ಹೂಳು ತುಂಬಿದ್ದರಿಂದ ಕೇವಲ 100 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಅದರಲ್ಲಿ ಶೇ 30 ರಷ್ಟು ಆಂಧ್ರ ಹಾಗೂ ತೆಲಂಗಾಣ ರಾಜ್ಯಕ್ಕೆ ನೀಡಬೇಕು. ಇದರಿಂದಾಗಿ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನಿಗಿದಿತ ಪ್ರಮಾಣದ ಪ್ರದೇಶಕ್ಕೆ ನೀರು ಹರಿಯುತ್ತಿಲ್ಲ. ಈ ಮಧ್ಯೆ ನಾಲೆಗಳಿಂದ ಅಕ್ರಮವಾಗಿ ನೀರು ಕದಿಯುವವರು ಸಂಖ್ಯೆಯೂ ಅಧಿಕವಾಗಿದೆ. ಈ ಅಕ್ರಮವನ್ನು ತಡೆಯಲು ರಾಯಚೂರು ಹಾಗೂ ಕೊಪ್ಪಳ ಜಿಲ್ಲಾಡಳಿತಗಳು ವಿಫಲವಾಗಿವೆ.

ತುಂಗಭದ್ರಾ ಜಲಾಶಯದಿಂದ ಎಡದಂಡೆಯೂ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು. ಆದರೆ, ಈಗ ನಾಲೆಯ ಕೊನೆಯ ಭಾಗವಾಗಿರುವ ರಾಯಚೂರು ತಾಲೂಕಿಗಿರಲಿ, ಮಾನವಿ ಮಸ್ಕಿ ತಾಲೂಕಿನ ರೈತರ ಭೂಮಿ ನೀರು ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ನಾಲೆಯ ಮೇಲ್ಭಾಗದ ಗಂಗಾವತಿ, ಕಾರಟಗಿ, ಸಿಂಧನೂರು ತಾಲೂಕಿನಲ್ಲಿ ನಾಲೆಯಿಂದ ನೀರು ಕದಿಯಲಾಗುತ್ತಿದೆ. ಸಾಕಷ್ಟು ರೈತರು ಅನಧಿಕೃತ ವಾಗಿ ಕೆರೆಗಳನ್ನು ನಿರ್ಮಿಸಿಕೊಂಡು ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಾಲೆಯಿಂದ 104 ವಿತರಣಾ ನಾಲೆಯವರೆಗೂ ಹರಿಯಬೇಕಾದ ನೀರು ಈಗ ಕೇವಲ 56ನೇಯ ವಿತರಣಾ ನಾಲೆಗೆ ಸೀಮಿತವಾಗಿದೆ. ಮುಂದಿನ ಭಾಗಕ್ಕೆ ನೀರು ಬಾರದೆ ರೈತರು ಕಂಗಾಲಾಗಿದ್ದಾರೆ.

Raichuru manvi Farmers are not getting from water from tungabhadra upper project
ರೈತ ಮುಖಂಡರು
ಈ ವರ್ಷ ಉತ್ತಮ ಮಳೆಯಾಗಿದೆ. ಇದರಿಂದ ಎರಡು ಅವಧಿಗೂ ನೀರು ನೀಡುವ ಭರವಸೆಯನ್ನು ತುಂಗಭದ್ರಾ ನೀರು ನಿರ್ವಹಣಾ ಸಲಹಾ ಸಮಿತಿಯಿಂದ ನೀಡಿದೆ, ಮಾರ್ಚ ಅಂತ್ಯದವರೆಗೂ ನೀರು ಸಿಗುತ್ತದೆ ಎಂದು ಹೇಳಿದ್ದರಿಂದ ರೈತರು ಭತ್ತ, ಮೆಣಸಿನಕಾಯಿಯನ್ನು ನಾಟಿ ಮಾಡಿದ್ದಾರೆ. ಈಗ ಕಾಳು ಕಟ್ಟುವ ಹಂತದಲ್ಲಿರುವಾಗ ನಾಲೆಗೆ ನೀರು ಸಿಗದೆ ಬೆಳೆಯುತ್ತಿರುವ ಬೆಳೆಯು ಸಂಪೂರ್ಣವಾಗಿ ನಾಶವಾಗುತ್ತಿದೆ, ಈ ಕಾರಣಕ್ಕಾಗಿ ನಿಗಿದಿಯಂತೆ ನಾಲೆಗೆ ನೀರು ಹರಿಸಿ ನಮ್ಮ ಬೆಳೆಯನ್ನು ಉಳಿಸಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.

Raichuru manvi Farmers are not getting from water from tungabhadra upper project
ತುಂಗಾಭದ್ರ ಅಣೆಕಟ್ಟು


ಮಾರಚ್​​ ತಿಂಗಳ ನಂತರ ನಾಲೆಯಿಂದಲೇ ಕುಡಿವ ನೀರು ಪಡೆಯುವ ರಾಯಚೂರು, ಮಾನವಿ, ಮಸ್ಕಿ ಪಟ್ಟಣ ಹಾಗು ಗ್ರಾಮೀಣ ಪ್ರದೇಶಗಳಿಗೂ ಈಗ ನೀರು ಸಿಗುತ್ತಿಲ್ಲ. ಗಣೇಕಲ್ ಬಳಿಯಲ್ಲಿರುವ ಬಂಗಾರಪ್ಪ ಕೆರೆಯೂ ಸಹ ಬರಿದಾಗಿದೆ, ಈಗ ಸಧ್ಯ ಕುಡಿವ ನೀರು ಹಾಗು ಸ್ಟಾಂಡಿಂಗ್ ಕ್ರಾಪ್ ಗೆ ನೀರು ಅವಶ್ಯವಿದೆ. ಈ ಮಧ್ಯೆ ಜಲಾಶಯದಲ್ಲಿ ಈಗ 26.25 ಟಿಎಂಸಿ ನೀರು ಇದೆ. ಇದರಲ್ಲಿ ಆಂಧ್ರ, ತೆಲಂಗಾಣ ಪಾಲು, ಕುಡಿವ ನೀರು, ಹಾಗೂ ಡೆಡ್ ಸ್ಟೋರೇಜ್ ಗಾಗಿ ನೀರು ಉಳಿಸಿದರೆ ನೀರಾವರಿಗಾಗಿ ನೀರು ಸಿಗುವುದು ಕಡಿಮೆ. ಈ ಕಾರಣಕ್ಕಾಗಿ ಈಗ ನಾಲೆಯಲ್ಲಿ ನೀರು ಹರಿವಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಇದರಿಂದಾಗಿ ಕೊನೆಯ ಭಾಗಕ್ಕೆ ನೀರು ಸಿಗುವುದು ಅಸಾಧ್ಯ ಎನ್ನುವಂತಾಗಿದೆ.

ಈ ಮಧ್ಯೆ ಐಸಿಸಿ ಸಭೆಯಲ್ಲಿ ಮಾರ್ಚ ಅವಶ್ಯ ಬಿದ್ದರೆ ಭದ್ರಾದಿಂದ ನೀರು ಪಡೆಯುವ ಭರವಸೆ ನೀಡಿದ್ದರು. ಆದರೆ ಈಗ ಭದ್ರಾದಿಂದ ನೀರು ಬರುತ್ತಿಲ್ಲ. ಏನಾದರೂ ಮಾಡಿ ನಮ್ಮ ಬೆಳೆಗೆ ನೀರು ಕೊಡಿ ಎಂದು ಇಂದು ಮಾನ್ವಿ ಹಾಗೂ ಸಿರವಾರ ತಾಲೂಕಿನ ರೈತರು ಪಕ್ಷಾತೀತವಾಗಿ ಮುಖಂಡರು ರಾಯಚೂರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ನೀರು ಸಿಗದಿದ್ದರೆ, ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ, ಸಕಾಲದಲ್ಲಿ ಅಕ್ರಮ ತಡೆಯಲು ಆಗದ ಅಧಿಕಾರಿಗಳು ಈಗ ರೈತರ ಆಕ್ರೋಶ ವ್ಯಕ್ತಪಿಸಿದ್ದಾರೆ.
Published by:Seema R
First published: