ಬೆಂಬಲ ಬೆಲೆಗೆ ತೊಗರಿ ಮಾರಬೇಕೆಂದರೆ ಅವಧಿಮೀರಿದ ಚಹಾ ಕೊಳ್ಳುವುದು ರೈತರಿಗೆ ಅನಿವಾರ್ಯ?

ಸರ್ಕಾರದ ವತಿಯಿಂದ ಇಲ್ಲಿನ ತೊಗರಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ರೈತರು ಕೂಡ 6,100 ರೂ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟಕ್ಕೆ ಮುಗಿಬಿದ್ದಿದ್ದಾರೆ. ಇದನ್ನೇ ಲಾಭವಾಗಿ ಮಾಡಿಕೊಂಡ ಅಧಿಕಾರಿಗಳು, ಅವಧಿ ಮೀರಿದ ಚಹಾ ಪುಡಿಯನ್ನು ಖರೀದಿಸಿದರೆ ಮಾತ್ರ, ತೊಗರಿ ಖರೀದಿಸುವುದು ಎಂದು ನಿಯಮ ವಿಧಿಸಿದ್ದಾರೆ.

ಅವಧಿ ಮೀರಿದ ಚಹಾಪುಡಿ

ಅವಧಿ ಮೀರಿದ ಚಹಾಪುಡಿ

  • Share this:
 ರಾಯಚೂರು (ಜ. 17): ಸರ್ಕಾರದ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟ ಮಾಡಬೇಕು ಎಂದರೇ, ಅವಧಿ ಮೀರಿದ ಚಹಾಪುಡಿಯನ್ನು ರೈತರು ಖರೀದಿಸುವುದು ಅನಿವಾರ್ಯ. ಇಲ್ಲವಾದಲ್ಲಿ ತೊಗರಿ ಮಾರಾಟ ಅಸಾಧ್ಯ ಎನ್ನುತ್ತಿದ್ದಾರೆ ಅಧಿಕಾರಿಗಳು. 

ಸರ್ಕಾರದ ವತಿಯಿಂದ ಇಲ್ಲಿನ ತೊಗರಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ರೈತರು ಕೂಡ 6,100 ರೂ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟಕ್ಕೆ ಮುಗಿಬಿದ್ದಿದ್ದಾರೆ. ಇದನ್ನೇ ಲಾಭವಾಗಿ ಮಾಡಿಕೊಂಡ ಅಧಿಕಾರಿಗಳು, ಅವಧಿ ಮೀರಿದ ಚಹಾ ಪುಡಿಯನ್ನು ಖರೀದಿಸಿದರೆ ಮಾತ್ರ, ತೊಗರಿ ಖರೀದಿಸುವುದು ಎಂದು ನಿಯಮ ವಿಧಿಸಿದ್ದಾರೆ.

ನಫೆಡ್​ ಎಂಬ ಚಹಾ ಪಾಕೆಟ್​ ಅನ್ನು ಮಾರಾಟ ಮಾಡಲಾಗುತ್ತಿದ್ದು, ಪ್ರತಿ ಪ್ಯಾಕೆಟ್​​ 25 ರೂಪಾಯಿಯಂತೆ ಎರಡು ಪ್ಯಾಕೆಟ್​ ಕೊಳ್ಳಲೇಬೇಕು ಎಂದು ಅಧಿಕಾರಿಗಳು ನಿಯಮವಿಧಿಸಿದ್ದಾರೆ. ಇದನ್ನು ಪ್ರಶ್ನಿಸಿದ ರೈತರಿಗೆ ತೊಗರಿ ಖರೀದಿಯಾಗಬೇಕು ಎಂದರೇ ಚಹಾ ಕೊಳ್ಳಲೇಬೇಕು ಎಂಬ ನಿಯಮವಿಧಿಸಿದ್ದರಿಂದ ಬೇರೆ ವಿಧಿಯಿಲ್ಲದೇ ರೈತರು ಕೊಳ್ಳಬೇಕಾದ ಅನಿವಾರ್ಯತೆ ತಲೆದೋರಿದೆ.

ಇಷ್ಟೆ ಅಲ್ಲದೇ,  ಪಹಣಿಯಲ್ಲಿದ್ದ ಒಬ್ಬರಿಗೆ 10 ಕ್ವಿಂಟಾಲ್ ಮಾತ್ರ ಖರೀದಿ ಮಾತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಕ್ಟರ್ ಗೆ ಸರಿಸುಮಾರು 10 ಕ್ವಿಂಟಾಲ್ ತೊಗರಿ ಬೆಳೆದ ರೈತರು ಈ ನಿಯಮದಿಂದ ಕಂಗಲಾಗಿದ್ದು ಅಲ್ಪ ತೊಗರಿಯನ್ನೇ ಮಾರಾಟ ಮಾಡುತ್ತಿದ್ದಾರೆ.

ಇದನ್ನು ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಆರೋಪ: ಹೈಕೋರ್ಟ್​ನಲ್ಲಿ ಪ್ರಕರಣ ವಜಾ

ಇನ್ನು ರೈತರಿಗೆ ಬಲವಂತವಾಗಿ  ತೊಗರಿ ಮಾರಾಟ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾರಾಟ ಮಂಡಳಿ ಕಾರ್ಯದರ್ಶಿ, ಚಹಾ ಪುಡಿ ಸ್ಟಾಕ್ ಇದ್ದವು. ಹೀಗಾಗಿ ರೈತರು ಆಸಕ್ತಿಯಿಂದ ಖರೀದಿಸಿದರೆ,  ಮಾತ್ರ ಮಾರಾಟ ಮಾಡುತ್ತಿದ್ದೇವೆ.  ಅವಧಿ ಮುಗಿದ ಬಗ್ಗೆ ತಿಳಿದಿಲ್ಲ. ಈ ತಕ್ಷಣದಿಂದಲೇ ಚಹಾ ಪುಡಿ ಮಾರಾಟ ನಿಲ್ಲಿಸುತ್ತೇವೆ ಎಂದು ತಿಳಿಸಿದರು.
First published: