• Home
  • »
  • News
  • »
  • state
  • »
  • ಆರಂಭವಾಗದ ಭತ್ತ ಖರೀದಿ ಕೇಂದ್ರ; ರಾಶಿಯಲ್ಲಿಯೇ ಮೊಳಕೆಯೊಡೆಯುತ್ತಿರುವ ಭತ್ತ

ಆರಂಭವಾಗದ ಭತ್ತ ಖರೀದಿ ಕೇಂದ್ರ; ರಾಶಿಯಲ್ಲಿಯೇ ಮೊಳಕೆಯೊಡೆಯುತ್ತಿರುವ ಭತ್ತ

ಭತ್ತ

ಭತ್ತ

ಪ್ರಸ್ತುತ ಜಿಲ್ಲೆಯ ಮಾರುಕಟ್ಟೆಯೊಂದರಲ್ಲಿಯೇ ಪ್ರತಿ ಚೀಲಕ್ಕೆ 1000-1200 ರೂಪಾಯಿಗೆ ಮಾರಾಟವಾಗುತ್ತಿದೆ. ಇಷ್ಟು ಕಡಿಮೆ ದರಕ್ಕೆ ಭತ್ತವನ್ನು ಮಾರಾಟ ಮಾಡುವುದರಿಂದ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ

  • Share this:

ರಾಯಚೂರು (ಡಿ. 28): ರಾಜ್ಯದಲ್ಲಿ ಅಧಿಕ ಭತ್ತ ಬೆಳೆಯುವ ಪ್ರದೇಶಗಳಲ್ಲಿ ರಾಯಚೂರು  ಪ್ರಮುಖ ಜಿಲ್ಲೆಯಾಗಿದೆ. ಕೃಷ್ಣ ಹಾಗು ತುಂಗಭದ್ರಾ ನಾಲೆಗಳಿಂದ ಇಲ್ಲಿ ಉತ್ಕೃಷ್ಟ ವಾದ ಸೋನಾ ಮಸೂರಿ ಭತ್ತವನ್ನು ಬೆಳೆಯಲಾಗುತ್ತಿದೆ. ಸಾವಿರಾರು ರೂಪಾಯಿ ಖರ್ಚು, ಕಷ್ಟ ಪಟ್ಟು ಬೆಳೆದ ಭತ್ತಕ್ಕೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬುದು ಇಲ್ಲಿನ ರೈತರ ಅಳಲು. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಬೆಂಬಲ ಬೆಲೆ ಕೇಂದ್ರಗಳು ಆರಂಭವಾಗಿಲ್ಲ ಇದು ರೈತರನ್ನು ಇನ್ನಷ್ಟು ಕಂಗೆಡಿಸಿದೆ. ಈ ವರ್ಷ ಅಧಿಕ ಮಳೆಯಾಗಿದ್ದರಿಂದ ಭತ್ತದಲ್ಲಿ ತೇವಾಂಶದಿಂದಾಗಿ,  ಭತ್ತದ ರಾಶಿಯಲ್ಲಿಯೇ ಭತ್ತ ಮೊಳಕೆಯೊಡೆದು ಹಾಳಾಗುತ್ತಿದೆ.  ಸರಕಾರ ಬೇಗನೆ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಕೃಷ್ಣಾ ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು 1. 62 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗಿದೆ. ಪ್ರತಿ ಎಕರೆಗೆ 20-25 ಕ್ವಿಂಟಲ್​ ಭತ್ತದ ಇಳುವರಿ ಬಂದಿದೆ. ಅಧಿಕ ಮಳೆ ಹಾಗೂ ಕೃಷ್ಣಾ ನದಿ ಪ್ರವಾಹದ ಮಧ್ಯೆಯೂ ಉತ್ತಮ ಇಳುವರಿ ಬಂದಿದೆ.  ರೈತರು ಕಳೆದ ಎರಡೂವರೆ ತಿಂಗಳ ಹಿಂದೆ ಭತ್ತವನ್ನು ಕಟಾವು ಮಾಡಿದ್ದು, ಮಾರಾಟ ಮಾಡಲು ಉತ್ತಮ ದರಕ್ಕಾಗಿ ಕಾಯುತ್ತಿದ್ದಾರೆ.


ಪ್ರಸ್ತುತ ಜಿಲ್ಲೆಯ ಮಾರುಕಟ್ಟೆಯೊಂದರಲ್ಲಿಯೇ ಪ್ರತಿ ಚೀಲಕ್ಕೆ 1000-1200 ರೂಪಾಯಿಗೆ ಮಾರಾಟವಾಗುತ್ತಿದೆ. ಇಷ್ಟು ಕಡಿಮೆ ದರಕ್ಕೆ ಭತ್ತವನ್ನು ಮಾರಾಟ ಮಾಡುವುದರಿಂದ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ.  ಭತ್ತ ಬೆಳೆಯಲು ದುಬಾರಿ ರಸಗೊಬ್ಬರ, ಔಷಧಿ, ಕೂಲಿಗಳನ್ನು ನೀಡಿ,ದ್ದು ಅಲ್ಲದೆ ಕಟಾವು ಮಾಡಲು ಪ್ರತಿ ಎಕರೆಗೆ ಕಟಾವು ಯಂತ್ರಕ್ಕೆ 2. 500 ರಿಂದ  3 ಸಾವಿರ ರೂಪಾಯಿ ಬಾಡಿಗೆ ನೀಡಿದ್ದಾರೆ, ಈ ಎಲ್ಲಾ ಖರ್ಚುಗಳು ಸೇರಿ ಪ್ರತಿ ಎಕರೆಗೆ 25-30 ಸಾವಿರ ರೂಪಾಯಿ ಖರ್ಚು ಬಂದಿದೆ.  ಪ್ರತಿ ಎಕರೆಗೆ 20-25 ಕ್ವಿಂಟಾಲ್ ಭತ್ತ ಇಳುವರಿ ಬಂದಿದ್ದು, ಮಾರಾಟ ಮಾಡಿದರೆ ಬೆಳೆಯಲು ಮಾಡಿದ ಖರ್ಚು ಮರಳುವುದಿಲ್ಲ. ಹೀಗಾಗಿ ರೈತ ಉತ್ತಮ ದರದ ನಿರೀಕ್ಷೆಯಲ್ಲಿದ್ದಾನೆ.


ಇದನ್ನು ಓದಿ: ಹೊಸ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕಿಲ್ಲ ಪ್ರವೇಶ; ಹೊರನಾಡು, ಶೃಂಗೇರಿ, ಉಡುಪಿಯಲ್ಲಿ ಭಕ್ತರಿಗಿಲ್ಲ ಅಡ್ಡಿ


ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲಿಗೆ 1291-1397 ರೂಪಾಯಿ ದರದಲ್ಲಿ ಡಿಸೆಂಬರ್ ತಿಂಗಳಲ್ಲಿ ಒಟ್ಟು 2.89 ಲಕ್ಷ ಕ್ವಿಂಟಾಲ್ ಮಾರಾಟವಾಗಿದೆ.  ಜಿಲ್ಲಾ ಮಾರುಕಟ್ಟೆಗೆ ಆಂಧ್ರ ಹಾಗೂ ತೆಲಂಗಾಣದಿಂದ ರೈತರು ಭತ್ತ ಮಾರಾಟ ಮಾಡಿದ್ದಾರೆ. ರಾಜ್ಯದ ರೈತರ ಪೈಕಿ ಶೇ 10 ರಷ್ಟು ಮಾತ್ರ ರೈತರು ಮಾರಾಟ ಮಾಡಿದ್ದಾರೆ. ಈ ಮಧ್ಯೆ ಕಳೆದ ವಾರ ರಾಯಚೂರು ಮಾರುಕಟ್ಟೆಯಲ್ಲಿ ಮಾರುಕಟ್ಟೆ ಶುಲ್ಕ ಹೆಚ್ಚಳದ ಹಿನ್ನಲೆಯಲ್ಲಿ ಮಾರುಕಟ್ಟೆ ಬಂದಾಗಿ ಒಂದು ವಾರ ವಹಿವಾಟು ಸ್ಥಗಿತಗೊಂಡಿತ್ತು, ಇದು ಸಹ ರೈತರು ಮಾರುಕಟ್ಟೆಯಲ್ಲಿ ಭತ್ತ ಮಾರಾಟ ಮಾಡಲು ಆಗಿಲ್ಲ. ಕಟಾವು ಮಾಡಿ ಎರಡೂವರೆ ತಿಂಗಳಿನಿಂದ ರಾಶಿ ರಾಶಿಯಾಗಿ ಭತ್ತವನ್ನು ಕೂಡಿ ಹಾಕಿದ್ದು, ಈ ಬಾರಿ ಅಧಿಕ ಮಳೆಯಾಗಿದ್ದರಿಂದ ಭತ್ತದಲ್ಲಿ ತೇವಾಂಶ ಅಧಿಕವಾಗಿದ್ದು ಹಾಕಿರುವ ಭತ್ತದ ರಾಶಿಯಲ್ಲಿಯೇ ಭತ್ತದ ಕಾಳು ಮೊಳಕೆಯೊಡಿದಿದೆ. ಇದರಿಂದ ರೈತ ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ.


ಸರಕಾರ ಡಿಸೆಂಬರ್ 1 ರಿಂದ ಭತ್ತವನ್ನು 1868 ಹಾಗೂ 1888 ರೂಪಾಯಿ  ಬೆಂಬಲ ಬೆಲೆಯಲ್ಲಿ ಖರೀದಿಸಲು ರೈತರು ನೊಂದಾಯಿಸಿಕೊಳ್ಳಲು ಸೂಚಿಸಿದೆ.  ರಾಯಚೂರು ಜಿಲ್ಲೆಯಲ್ಲಿ ಇಲ್ಲಿಯವರೆಗೂ 1.50 ಲಕ್ಷ ಕ್ವಿಂಟಾಲ್ ಭತ್ತ ಮಾರಾಟ ಮಾಡಲು 2260 ಜನ ರೈತರು ನೊಂದಾಯಿಸಿದ್ದಾರೆ. ಸರಕಾರವು ಬೆಂಬಲ‌ ಬೆಲೆಯಲ್ಲಿ ಖರೀದಿಸಲು ಇರುವ ನಿಯಮಗಳಿಂದಾಗಿ ರೈತರು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಹಿಂಜರಿಯುತ್ತಿದ್ದಾರೆ, ಭತ್ತವನ್ನು ಬೆಳೆದು ಮಾರಾಟ ಮಾಡಲು ಆಗದೆ ರೈತ ಸಂಕಷ್ಟ ಅನುಭವಿಸುವಂತಾಗಿದೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು