Raichur: ಅಕ್ರಮ ಮದ್ಯ ನಿಷೇಧ; ಗರಿಗೆದರದ ಜಿಲ್ಲಾ ಪಂಚಾಯತ್​ಗಳ ನಡೆ

ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್​​ ಸಿಇಒ ಸಂಗಪ್ಪ ಮಾರ್ಚ್​ 8ರಂದು ಗ್ರಾಮ ಪಂಚಾಯತಿಗಳಲ್ಲಿ ಕಾವಲು ಸಮಿತಿ ರಚಿಸಲು ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ. ಇದು ಮದ್ಯ ನಿಷೇಧ ಆಂದೋಲನಾ ಸಂಘಟನೆಗೆ ಆಶಾಭಾವನೆ ಮೂಡಿದೆ. ಇದೇ ರೀತಿ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಧರಣಿ ಸತ್ಯಾಗ್ರಹ

ಧರಣಿ ಸತ್ಯಾಗ್ರಹ

  • Share this:
ರಾಯಚೂರು(ಮಾ.20): ಇಂದು ಗ್ರಾಮೀಣ ಸೇರಿದಂತೆ ಬಹುತೇಕ ಕಡೆ ಯುವಕರು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಮದ್ಯ ವ್ಯಸನದಿಂದ ಕೌಟುಂಬಿಕ  ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅದರಲ್ಲಿಯೂ ನಿತ್ಯ ದುಡಿದು ಅಂದಿನ‌ ದುಡಿಮೆಯಿಂದ ಅಂದಿನ ಊಟ ಮಾಡುವ ಬಡ ಕುಟುಂಬಗಳಲ್ಲಿ ಮದ್ಯ ವ್ಯಸನ ಅವರ ಬದುಕನ್ನೇ ನಾಶ ಮಾಡಿದೆ. ಜನಸಾಮಾನ್ಯರ ಬದುಕಿಗೆ ನಾಶ ಮಾಡುವ ಮದ್ಯ ನಿಷೇಧವಾಗಬೇಕೆನ್ನುವ ಹೋರಾಟ ನಡೆಯುತ್ತಿದೆ, ಮದ್ಯ ನಿಷೇಧ ಆಂದೋಲನಾ ಸಮಿತಿ ಎರಡು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಆದರೆ ಆಡಳಿತ ನಡೆಸುವ ಸರಕಾರಗಳು ಮದ್ಯ ನಿಷೇಧ ಮಾಡಲು ಮುಂದಾಗಿಲ್ಲ.

ಈ ಮಧ್ಯೆ ಗ್ರಾಮೀಣ ಪ್ರದೇಶದಲ್ಲಿ ಚಿಕ್ಕ-ಚಿಕ್ಕ ಅಂಗಡಿಗಳಲ್ಲಿ, ಕೆಲವರು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಈ ಹಿಂದೆ ಹೆಂಡ, ಸಾರಾಯಿ ಮಾರಾಟ ಮಾಡುತ್ತಿದ್ದವರಲ್ಲಿ ಕೆಲವರು ಈ ದಂಧೆಯನ್ನು ಇನ್ನೂ ಮುಂದುವರಿಸಿದ್ದಾರೆ.  ಚಿಕ್ಕ ಚಿಕ್ಕ ಸ್ಯಾಸೆಗಳಲ್ಲಿ ಈಗ ಮದ್ಯ ಸಿಗುತ್ತಿರುವದರಿಂದ ಅಂಗಡಿಗಳಲ್ಲಿ ಸರಳವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ರೀತಿಯ ಮದ್ಯ ಮಾರಾಟದಿಂದ ಯುವಕರು ಹಾಗೂ ಮದ್ಯವ್ಯಸನಿಗಳಿಗೆ ಸರಳವಾಗಿ ಮದ್ಯ ಸಿಗುತ್ತಿರುವುದರಿಂದ ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಿ ಎಂದು ಮದ್ಯ ನಿಷೇಧ ಆಂದೋಲನಾ ಸಂಘಟನೆಯವರು ದಾಖಲೆ ಸಮೇತವಾಗಿ ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಎಂಬುಬದನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ ಅಕ್ರಮ ದಂಧೆ ನಿಲ್ಲಿಸಿ ಎಂದು ಆಗ್ರಹಿಸುತ್ತಿದ್ದಾರೆ.  ಫೆಬ್ರವರಿ 11 ರಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಮಹಿಳೆಯರು ಆಹೋರಾತ್ರಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಸಕ್ರಿಯಗೊಂಡ ಖದೀಮರ ಗ್ಯಾಂಗ್; ಅಶ್ಲೀಲ ವಿಡಿಯೋ ಜೋಡಿಸಿ ಬ್ಲ್ಯಾಕ್​ಮೇಲ್​

ಹೋರಾಟದ ತೀವ್ರತೆಗೆ ಜಿಲ್ಲಾಡಳಿತಗಳು ಬೆಚ್ಚಿ ಬಿದ್ದಿವೆ. ರಾಯಚೂರು ಜಿಲ್ಲೆಯೊಂದರಲ್ಲಿ 231 ಕಡೆ ಅಕ್ರಮ ಮದ್ಯ ಮಾರಾಟವಾಗುವುದನ್ನು ಪಟ್ಟಿ ಮಾಡಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಈ ಪಟ್ಟಿ ಆಧರಿಸಿ ಆಗಾಗ ದಾಳಿಗಳನ್ನು ಮಾಡಿ ಅಕ್ರಮ ತಡೆಯಲು ಮುಂದಾಗಿದ್ದಾರೆ. ಈ ಮಧ್ಯೆ ಗ್ರಾಮಗಳಲ್ಲಿಯ ಅಕ್ರಮ ಮದ್ಯ ತಡೆಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಳೀಯ ಮಹಿಳೆಯರನ್ನೊಳಗೊಂಡ ಕಾವಲು ಸಮಿತಿ ರಚಿಸಲು ಆಗ್ರಹಿಸಲಾಗಿದೆ.

ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್​​ ಸಿಇಒ ಸಂಗಪ್ಪ ಮಾರ್ಚ್​ 8ರಂದು ಗ್ರಾಮ ಪಂಚಾಯತಿಗಳಲ್ಲಿ ಕಾವಲು ಸಮಿತಿ ರಚಿಸಲು ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ. ಇದು ಮದ್ಯ ನಿಷೇಧ ಆಂದೋಲನಾ ಸಂಘಟನೆಗೆ ಆಶಾಭಾವನೆ ಮೂಡಿದೆ. ಇದೇ ರೀತಿ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಮದ್ಯ ನಿಷೇಧಕ್ಕಾಗಿ ಮದ್ಯ ನಿಷೇಧ ಆಂದೋಲನಾ ಕರ್ನಾಟಕ ಸಂಘಟನೆ ನಿರಂತರ ಹೋರಾಟ ನಡೆಸಿದ್ದು, 2015 ರಲ್ಲಿ ಬೆಂಗಳೂರಿನಲ್ಲಿ ಸುಮಾರು 45 ಸಾವಿರ ಮಹಿಳೆಯರು ಸೇರಿ ಮದ್ಯ ನಿಷೇಧಿಸಲು ಆಗ್ರಹಿಸಿದ್ದರು. 2019ರಲ್ಲಿ ಬೆಂಗಳೂರುವರೆಗೂ ಬೃಹತ್ ಪಾದಯಾತ್ರೆ ಮಾಡಿದ್ದರು. 2019ರಲ್ಲಿಯೇ ಕೂಡಲಸಂಗಮದಲ್ಲಿ ಜಲ ಸತ್ಯಾಗ್ರಹ ಮಾಡಿ ಕೃಷ್ಣಾ ನದಿಯಲ್ಲಿ ಇಳಿದು ಮಹಿಳೆಯರು ಹೋರಾಟ ಮಾಡಿದ್ದಾರೆ. ಇದೇ ಹಲವು ಬಾರಿ, ಹಲವು ಕಡೆ ಹೋರಾಟ ಮಾಡುತ್ತಲೆ ಬಂದಿದ್ದಾರೆ. ಈ ಮಧ್ಯೆ 2020 ಡಿಸೆಂಬರ್ 1 ರಂದು ಹೈಕೋರ್ಟ್ ರಾಜ್ಯದಲ್ಲಿಯ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಸರಕಾರಕ್ಕ ಸೂಚನೆ ನೀಡಿದೆ.

ಈ ಸೂಚನೆಯ ಹಿನ್ನಲೆಯಲ್ಲಿ ಜಿಲ್ಲಾಡಳಿತಗಳು ಈಗ ಅಕ್ರಮ ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ.ಈಗ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಕಾವಲು ಸಮಿತಿ ಮಾಡಿರುವುದು ಒಂದು ಕ್ರಮವಾಗಿದೆ. ಇದೇ ರೀತಿ ಎಲ್ಲಾ ಜಿಲ್ಲಾ ಪಂಚಾಯತ್​ಗಳು ಆದೇಶ ಹೊರಡಿಸಬೇಕಾಗಿದೆ. ಈ ಮಧ್ಯೆ ಹೆಸರಿಗಷ್ಟೆ ಕಾವಲು ಸಮಿತಿಯಾಗದೆ ಅಕ್ರಮ ಮದ್ಯ ತಡೆಗೆ ಕಾವಲು ಸಮಿತಿಗೆ ನೈತಿಕ, ಸಮಾಜಿಕ, ಕಾನೂನಾತ್ಮಕ ಬೆಂಬಲ ನೀಡಬೇಕಾಗಿದೆ.
Published by:Latha CG
First published: