ರಾಯಚೂರು ವಿಶ್ವವಿದ್ಯಾಲಯ ಆರಂಭಕ್ಕೆ ಹಲವಾರು ವಿಘ್ನ; ಜಿಲ್ಲೆಯ ಜನರಿಗೆ ನಿರಾಸೆ

ಯಡಿಯೂರಪ್ಪ ರಾಯಚೂರು ವಿವಿಗೆ ಈ ಬಜೆಟ್ ನಲ್ಲಿ ಹಣ ನೀಡುತ್ತಾರೆ ಎನ್ನುವ ಭರವಸೆಯನ್ನು ಇಟ್ಟುಕೊಂಡಿದ್ದರು, ಆದರೆ ಬಜೆಟ್ ನಲ್ಲಿ ಬಿಡಿಗಾಸು ನೀಡಿಲ್ಲ.ಈ ಮಧ್ಯೆ ಆರ್ ಟಿಪಿಎಸ್, ವೈಟಿಪಿಎಸ್ ಹಾಗು ಹಟ್ಟಿ ಚಿನ್ನದ ಗಣಿಯಲ್ಲಿ ಸ್ಥಳೀಯರು ಕೆಲಸ ಮಾಡಲು ಮೈನಿಂಗ್ ಕೋರ್ಸ್ ಗಳ ಆರಂಭಕ್ಕೆ ಹಣ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಈ ಯಾವುದು ಬಜೆಟ್ ನಲ್ಲಿ ಘೋಷಣೆಯಾಗಿಲ್ಲ.

ಯೂನಿವರ್ಸಿಟಿ

ಯೂನಿವರ್ಸಿಟಿ

  • Share this:
ರಾಯಚೂರು(ಮಾ.14): ಶೈಕ್ಷಣಿಕವಾಗಿ, ಮೂಲಭೂತ ಸೌಲಭ್ಯಗಳಿಂದ ದೂರವಿರುವ ರಾಯಚೂರು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಆರಂಭಕ್ಕೆ ಹಲವಾರು ವಿಘ್ನಗಳು ಎದುರಾಗಿವೆ. ಇದೇ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯ ಆರಂಭಿಸಲು ಆರಂಭಿಕವಾಗಿ 100 ಕೋಟಿ ರೂಪಾಯಿಯನ್ನು ಇದೇ ಬಜೆಟ್ ನಲ್ಲಿ ನೀಡುತ್ತಾರೆ ಎನ್ನುವ ಭರವಸೆ ಇತ್ತು. ಆದರೆ ಮಾರ್ಚ್​​ 8 ರಂದು ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ, ಇದರಿಂದಾಗಿ ಜಿಲ್ಲೆಯ ಶಿಕ್ಷಣ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ರಾಯಚೂರು ಹಾಗು ಯಾದಗಿರಿ ಜಿಲ್ಲೆ ವ್ಯಾಪ್ತಿಯನ್ನು ಒಳಗೊಂಡ ವಿಶ್ವವಿದ್ಯಾಲಯವನ್ನು ರಾಯಚೂರಿನಲ್ಲಿ ಆರಂಭಿಸಲಾಗುವುದು ಎಂದು ಘೋಷಿಸಿದ್ದರು.

ರಾಯಚೂರು ಜನತೆ ಬೇಡಿಕೆಯಾದ ವಿಶ್ವವಿದ್ಯಾಲಯ ಆರಂಭಕ್ಕೆ ಸ್ಪಂದಿಸಿ ರಾಯಚೂರಿನಲ್ಲಿ  2016 ಡಿಸೆಂಬರ್ ತಿಂಗಳಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಘೋಷಣೆ ಮಾಡಿದ್ದರು. ಆಗಿನಿಂದ ರಾಯಚೂರು ಜನತೆ ವಿಶ್ವವಿದ್ಯಾಲಯ ಕನಸು ಕಾಣುತ್ತಾ ಹೋಗುತ್ತಿದ್ದಾರೆ. ವಿಶ್ವವಿದ್ಯಾಲಯ ಆರಂಭಕ್ಕೆ ಹೊಸ ಶಿಕ್ಷಣ ನೀತಿ ಅನ್ವಯ ತಿದ್ದುಪಡಿ ಮಂಡಿಸುವಾಗ ವಿಳಂಬವಾಯಿತು. ಬೇರೆ ಬೇರೆ ಕಾರಣಕ್ಕೆ ವಿಳಂಬವಾಗುತ್ತಾ ಹೋಯಿತು.

ಈ ಮಧ್ಯೆ ಸಿದ್ದರಾಮಯ್ಯ 2018ರ ಬಜೆಟ್ ನಲ್ಲಿ ವಿವಿ ಘೋಷಣೆ ಮಾಡಿ ಅವರ ಅಧಿಕಾರಾವಧಿ ಮುಗಿಯುವ ವೇಳೆ ವಿಶೇಷಾಧಿಕಾರಿ ನೇಮಕ ಮಾಡಿದ್ದರು. ಮುಜಾಫರ್ ಅಸಾದಿ ವಿಶೇಷಾಧಿಕಾರಿಯಾಗಿ ನೇಮಕವಾದರೂ ಸರಕಾರದಿಂದ ವಿವಿ ಆರಂಭಕ್ಕೆ ಗ್ರೀನ್​​ ಸಿಗ್ನಲ್ ಸಿಕ್ಕಿರಲಿಲ್ಲ, ಸಮ್ಮಿಶ್ರ ಸರಕಾರದಲ್ಲಿಯೂ ರಾಯಚೂರು ವಿವಿಗೆ ಅನುದಾನ, ಆರಂಭವಾಗಲಿಲ್ಲ, ಈ ಮಧ್ಯೆ ಕಳೆದ ವರ್ಷ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ಮೂಲಕ ರಾಯಚೂರು ವಿವಿಗೆ ಆರಂಭಕ್ಕೆ ಸೂಚನೆ ನೀಡಲಾಗಿದೆ, ಈ ಮಧ್ಯೆ ಇತ್ತೀಚಿಗೆ ಅಧಿಕೃತ ವಾಗಿ ರಾಯಚೂರು ವಿಶ್ವವಿದ್ಯಾಲಯ ಘೋಷಣೆಯಾಗಿದೆ, ಡಾ ಹರೀಶ ರಾಮಸ್ವಾಮಿ ಯವರನ್ನು ಪ್ರಥಮ ಉಪಕುಲಪತಿಗಳನ್ನಾಗಿ ನೇಮಕ ಮಾಡಲಾಗಿದೆ.

Coronavirus: ರಾಜ್ಯದಲ್ಲಿ ಕೊರೋನಾ ಹೆಚ್ಚಳ: ನಾಳೆ ಸಿಎಂ ಮಹತ್ವದ ಸಭೆ; ಮತ್ತೆ ಜಾರಿಯಾಗುತ್ತಾ ಲಾಕ್​ಡೌನ್​?

ಗುಲಬುರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಯಾದಗಿರಿ ಹಾಗು ರಾಯಚೂರು ಜಿಲ್ಲೆಯ 224 ಕಾಲೇಜುಗಳೊಂದಿಗೆ ವಿವಿ ಆರಂಭವಾಗಲಿದೆ. ಇದೇ ವೇಳೆ ವಿವಿಯಲ್ಲಿ 27 ಕೋರ್ಸ್ ಗಳು, ಈ ಭಾಗದ ಜನರಿಗೆ ಉದ್ಯೋಗ ನೀಡುವ ವೃತ್ತಿ ಸರ್ಟಿಫಿಕೇಟ್ ಕೋರ್ಸ್ ಗಳು, ಈಗಿರುವ ಭೂಮಿಯೊಂದಿಗೆ ಇನ್ನಷ್ಟು ಭೂಮಿ ಖರೀದಿಸಿ ಮೂಲಭೂತ ಸೌಲಭ್ಯ ಒದಗಿಸುವ ಸೇರಿದಂತೆ ಹಲವಾರು ಕಾರ್ಯಗಳಿಗಾಗಿ ಒಟ್ಟು 650 ಕೋಟಿ ರೂಪಾಯಿ ಅವಶ್ಯವಿದೆ. ಇದೇ ವರ್ಷ ವಿಶ್ವವಿದ್ಯಾಲಯ ಆರಂಭವಾಗುವದರಿಂದ ಕನಿಷ್ಠ 100 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಯಡಿಯೂರಪ್ಪ ರಾಯಚೂರು ವಿವಿಗೆ ಈ ಬಜೆಟ್ ನಲ್ಲಿ ಹಣ ನೀಡುತ್ತಾರೆ ಎನ್ನುವ ಭರವಸೆಯನ್ನು ಇಟ್ಟುಕೊಂಡಿದ್ದರು, ಆದರೆ ಬಜೆಟ್ ನಲ್ಲಿ ಬಿಡಿಗಾಸು ನೀಡಿಲ್ಲ.ಈ ಮಧ್ಯೆ ಆರ್ ಟಿಪಿಎಸ್, ವೈಟಿಪಿಎಸ್ ಹಾಗು ಹಟ್ಟಿ ಚಿನ್ನದ ಗಣಿಯಲ್ಲಿ ಸ್ಥಳೀಯರು ಕೆಲಸ ಮಾಡಲು ಮೈನಿಂಗ್ ಕೋರ್ಸ್ ಗಳ ಆರಂಭಕ್ಕೆ ಹಣ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಈ ಯಾವುದು ಬಜೆಟ್ ನಲ್ಲಿ ಘೋಷಣೆಯಾಗಿಲ್ಲ.

ಈ ಮಧ್ಯೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮಣ ಸವದಿ ರಾಯಚೂರು ವಿವಿ ಆರಂಭಕ್ಕೆ ಅಗತ್ಯ ಹಣಕಾಸು ವ್ಯವಸ್ಥೆಯಲ್ಲಿ ಸಚಿವ ಸಂಪುಟ ದ ಚರ್ಚಿಸಿ ನೀಡುವುದಾಗಿ ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ. ಶೈಕ್ಷಣಿಕ ಪ್ರಗತಿಗಾಗಿ ಐದು ವರ್ಷಗಳಿಂದ ರಾಯಚೂರು ವಿವಿ ಆರಂಭವಾಗುತ್ತದೆ ಎಂದುಕೊಂಡಿದ್ದ ಜನತೆಗೆ ಆಶಾಭಾವನೆಗಿಂತ ಅಧಿಕವಾಗಿ ನಿರಾಸೆ ಹೆಚ್ಚಾಗಿದೆ.
Published by:Latha CG
First published: