ಪೊಲೀಸ್ ಅಧಿಕಾರಿಯ ಪರಿಸರ ಪ್ರೇಮ: ರಾಯಚೂರು ಎಸ್​ಪಿಯಿಂದ 5 ಲಕ್ಷ ಮರ ಬೆಳೆಸಲು ಸಿದ್ದತೆ

ಎಸ್ಪಿಯವರ ಈ ಕಾರ್ಯಕ್ಕೆ ಗ್ರಿನ್ ರಾಯಚೂರು ಸಂಸ್ಥೆಯ ಸದಸ್ಯರು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ರಾಯಚೂರಿನ ಹೊಟೆಲ್ , ಕಿರಾಣಿ ಅಂಗಡಿಗಳು, ಮನೆ ಮನೆಯಲ್ಲಿರುವ ಹಾಲಿನ ಪಾಕೇಟ್, ದಿನಸಿಯ ಪಾಕೇಟ್ ಗಳನ್ನು ಸಂಗ್ರಹಿಸುತ್ತಾರೆ.

ರಾಯಚೂರು ಎಸ್​ ಪಿ ಡಾ. ವೇದಮೂರ್ತಿ

ರಾಯಚೂರು ಎಸ್​ ಪಿ ಡಾ. ವೇದಮೂರ್ತಿ

  • Share this:
ರಾಯಚೂರು(ಜ. 27): ಸಾಮಾನ್ಯವಾಗಿ ಪೊಲೀಸರೆಂದರೆ ದರ್ಪ ತೋರುವವರು ಎಂಬ ಕಲ್ಪನೆ ಬರುವುದು ಸಹಜ. ಆದರೆ, ಇಲ್ಲೊಬ್ಬ ಪೊಲೀಸ್ ಅಧಿಕಾರಿ ಪರಿಸರ ರಕ್ಷಣೆಗಾಗಿ 5 ಲಕ್ಷ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ಬಳಕೆ ಮಾಡಿ ಸಸಿಗಳನ್ನು ಬೆಳೆಸುತ್ತಿದ್ದಾರೆ.

ರಾಯಚೂರಿನ ಪೊಲೀಸ್ ಮೈದಾನದ ಆವರಣಕ್ಕೆ ಹೋದರೆ ಅಲ್ಲಿ ಪ್ಲ್ಯಾಸ್ಟಿಕ್​​​ ಚೀಲದಲ್ಲಿ ಮಣ್ಣು ತುಂಬಿ ಹೊಂಗೆ, ಬೇವು, ಸಪೋಟಾ, ನೆರಳೆ ಗಿಡಗಳ ಬೆಳೆಸಲು ಬೀಜಗಳನ್ನು ಹಾಕಲಾಗುತ್ತಿದೆ. ವಿದ್ಯಾರ್ಥಿಗಳೇ ಈ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ಇದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿರುವ ಐಪಿಎಸ್ ಅಧಿಕಾರಿ ಡಾ| ಸಿಬಿ ವೇದಮೂರ್ತಿಯವರ ಕನಸಿನ ಯೋಜನೆಯಾಗಿದೆ.

ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಪರಿಸರ ರಕ್ಷಣೆಗಾಗಿ ಬಾವಿಗಳನ್ಜು ಸ್ವಚ್ಛ ಮಾಡಿಸುವ, ಪ್ಲ್ಯಾಸ್ಟಿಕ್ ಮುಕ್ತ ಮಾಡಲು ನಿತ್ಯ ಸ್ಥಳೀಯರೊಂದಿಗೆ ಶ್ರಮಿಸುತ್ತಿರುವ ಇವರು, ಬಿಸಿಲನಾಡು ರಾಯಚೂರು ಜಿಲ್ಲೆಯನ್ನು ಹಸಿರಿನಿಂದ ಕಂಗೊಳಿಸುವಂತೆ  ಮಾಡುವ ಉದ್ದೇಶದಿಂದ ಈ ವರ್ಷ 5 ಲಕ್ಷ ಸಸಿಗಳನ್ನು ನಾಟಿ ಮಾಡುತ್ತಿದ್ದಾರೆ.

ಎಸ್ಪಿಯವರ ಈ ಕಾರ್ಯಕ್ಕೆ ಗ್ರಿನ್ ರಾಯಚೂರು ಸಂಸ್ಥೆಯ ಸದಸ್ಯರು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ರಾಯಚೂರಿನ ಹೊಟೆಲ್ , ಕಿರಾಣಿ ಅಂಗಡಿಗಳು, ಮನೆ ಮನೆಯಲ್ಲಿರುವ ಹಾಲಿನ ಪಾಕೇಟ್, ದಿನಸಿಯ ಪಾಕೇಟ್ ಗಳನ್ನು ಸಂಗ್ರಹಿಸುತ್ತಾರೆ. ಈಗಾಗಲೇ 7 ಸಾವಿರಕ್ಕೂ ಅಧಿಕ ಪ್ಲ್ಯಾಸ್ಟಿಕ್ ಬ್ಯಾಗಗಳನ್ನು ಸಂಗ್ರಹಿಸಿ ಅವುಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಸಸಿಗಳಿಗಾಗಿ ಬೀಜಗಳನ್ನು ಹಾಕುತ್ತಿದ್ದಾರೆ. ಎಸ್ಪಿಯವರ ಈ ಕಾರ್ಯಕ್ಕೆ ಹಲವರು ಸಹಕಾರ ನೀಡಿ ನಿತ್ಯ ಗಿಡಗಳನ್ನು ಬೆಳೆಸಲು ತಮ್ಮ ಸಹಾಯ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲುರಿಂದ 5 ಲಕ್ಷ ಸಸಿಗಳ ವಿತರಣೆಗೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ : ಟೊಮೆಟೊ ಬೆಲೆಯಲ್ಲಿ ದಿಢೀರ್​ ಕುಸಿತ; ಕಿಲೋಗೆ 2 ರೂ.; ಬೆಳೆ ಬೆಳೆದ ರೈತ ಕಂಗಾಲು

ರಾಜ್ಯದಲ್ಲೇ ಅಧಿಕ ವಾಯುಮಾಲಿನ್ಯ ಹೊಂದಿರುವ ರಾಯಚೂರಿನಲ್ಲಿ ಈಗ ಮಾಲಿನ್ಯ ಕಡಿಮೆ‌ ಮಾಡಿ, ನೆರಳು ನೀಡಿ ಬಿಸಿಲು ಕಡಿಮೆ ಮಾಡುವ ಕಾರ್ಯ ಆರಂಭವಾಗಿದ್ದು, ಅದಕ್ಕೆ ಜಿಲ್ಲಾ‌ಪೊಲೀಸ್ ವರಿಷ್ಠಾಧಿಕಾರಿ ಸೇರಿ ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ. ಪೊಲೀಸರಲ್ಲಿ ಇಂಥ ಗುಣವಿದ್ದವರು ಇರುತ್ತಾರೆ ಎನ್ನುವುದಕ್ಕೆ ಐಪಿಎಸ್ ಅಧಿಕಾರಿ ಡಾ ಸಿ ಬಿ ವೇದಮೂರ್ತಿ ಮಾದರಿಯಾಗಿದ್ದಾರೆ.
First published: