ಹೋಂವರ್ಕ್ ಮಾಡದ ವಿದ್ಯಾರ್ಥಿನಿಗೆ ಗುಂಡುಪಿನ್​ನಿಂದ 40 ಬಾರಿ ಚುಚ್ಚಿದ ರಾಯಚೂರು ಶಿಕ್ಷಕಿ

ರಾಯಚೂರಿನ ಲಿಂಗಸುಗೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಕೈಗಳಿಗೆ ಶಿಕ್ಷಕಿ 40 ಬಾರಿ ಗುಂಡುಪಿನ್​ನಿಂದ ಚುಚ್ಚಿ ಹಿಂಸೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Sushma Chakre | news18-kannada
Updated:January 10, 2020, 10:56 AM IST
ಹೋಂವರ್ಕ್ ಮಾಡದ ವಿದ್ಯಾರ್ಥಿನಿಗೆ ಗುಂಡುಪಿನ್​ನಿಂದ 40 ಬಾರಿ ಚುಚ್ಚಿದ ರಾಯಚೂರು ಶಿಕ್ಷಕಿ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಜ. 10): ವಿದ್ಯಾರ್ಥಿಯೊಬ್ಬ ಸರಿಯಾಗಿ 'ಪಕ್ಕೆಲುಬು' ಎಂದು ಹೇಳಲು ಬಾರದೆ ಒದ್ದಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆ ವಿದ್ಯಾರ್ಥಿಗೆ ಹೊಡೆದು ವಿಡಿಯೋ ಮಾಡಿದ ಶಿಕ್ಷಕನ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ತನಿಖೆ ನಡೆಸಿ, ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು.

ಇದೀಗ ಅದೇರೀತಿಯ ಮತ್ತೊಂದು ಘಟನೆ ನಡೆದಿದ್ದು, ರಾಯಚೂರಿನ ಲಿಂಗಸುಗೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಕೈಗಳಿಗೆ ಶಿಕ್ಷಕಿ 40 ಬಾರಿ ಗುಂಡುಪಿನ್​ನಿಂದ ಚುಚ್ಚಿ ಹಿಂಸೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಿಂಗಸುಗೂರಿನ ಎಕ್ಸ್​ಪರ್ಟ್​ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಅನುಶ್ರೀ ಎಂಬ ವಿದ್ಯಾರ್ಥಿನಿಯ ಮೇಲೆ ಈ ರೀತಿ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ: ಪಕ್ಕೆಲುಬು ಪದ ತಪ್ಪು ಉಚ್ಚಾರಣೆ ಮಾಡುವ ಬಾಲಕನ ವಿಡಿಯೋ ವೈರಲ್; ಶಿಕ್ಷಕನ ವಿರುದ್ಧ ಕ್ರಮಕ್ಕೆ ಸಚಿವ ಸುರೇಶ್ ಕುಮಾರ್ ಸೂಚನೆ

ಅನುಶ್ರೀ ಶಾಲೆಯಲ್ಲಿ ಶಿಸ್ತು ಕಾಪಾಡುತ್ತಿಲ್ಲ, ಸರಿಯಾಗಿ ಹೋಂವರ್ಕ್ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಆಕೆಗೆ ಶಿಕ್ಷೆ ನೀಡಲಾಗಿತ್ತು. ಆಕೆಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂಬ ಕಾರಣಕ್ಕೆ ಗುಂಡುಪಿನ್​ನಿಂದ ಆಕೆಯ ಕೈಗಳಿಗೆ ಗುಂಡುಪಿನ್​ನಿಂದ 40 ಬಾರಿ ಚುಚ್ಚಿದ್ದ ಶಿಕ್ಷಕಿ ಹಿಂಸೆ ನೀಡಿದ್ದರು. ತಮಿಳುನಾಡು ಮೂಲದ ಪ್ರಸನ್ನ ಎಂಬ ಶಿಕ್ಷಕಿ ನೀಡಿದ ಹಿಂಸೆಯಿಂದ ಕೈ ತುಂಬ ಗುಳ್ಳೆಗಳಾಗಿದ್ದವು.

ಶಾಲೆ ಮುಗಿಸಿ ಮನೆಗೆ ಬಂದ ಮಗಳ ಕೈಯಲ್ಲಿನ ಗಾಯವನ್ನು ನೋಡಿ ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ಆಕೆ ಅಪ್ಪ-ಅಮ್ಮನಿಗೆ ತಿಳಿಸಿದ್ದಳು. ತಾನಿನ್ನು ಶಾಲೆಗೆ ಹೋಗುವುದಿಲ್ಲ ಎಂದು ಆಕೆ ಹಠ ಹಿಡಿದಿದ್ದಳು. ಈ ಬಗ್ಗೆ ಶಾಲೆಗೆ ಹೋಗಿ ಆಕೆಯ ಪೋಷಕರು ವಿಚಾರಿಸಿದಾಗ ಆ ಶಿಕ್ಷಕಿ ಎಲ್ಲ ಮಕ್ಕಳಿಗೂ ಗುಂಡು ಪಿನ್​ನಿಂದ ಚುಚ್ಚಿ ಶಿಕ್ಷೆ ನೀಡುತ್ತಾರೆಂಬ ವಿಷಯ ಗೊತ್ತಾಗಿತ್ತು. ಶಿಕ್ಷಕಿಯ ಈ ವರ್ತನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ