ನೆರೆ ಸಂತ್ರಸ್ತರಿಗೆ ನೀಡಿದ್ದ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿದ ರಾಯಚೂರು ಶಾಲಾ ಮುಖ್ಯ ಶಿಕ್ಷಕ; ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ನೊಟೀಸ್

ಪರಿಹಾರ ಕೇಂದ್ರ ಬಂದ್ ಮಾಡಿದ ಬಳಿಕ ದಾಸ್ತಾನನ್ನು ಹಾಗೇ ಉಳಿಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ದಾನಿಗಳು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿ ಅಕ್ಕಿ, ಬೆಳೆ, ಸೀರೆ, ಹಾಸಿಗೆ ಹೊದಿಕೆ ಸೇರಿದಂತೆ ಇತರೆ ದಿನಸಿ ಸಾಮಗ್ರಿ ನೀಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಶಾಲೆ ಮುಖ್ಯ ಶಿಕ್ಷಕ ವಿಜಯಕುಮಾರ್ ಎಸ್ ಬಿ ದಾಸ್ತುನಿನ ಬಗ್ಗೆ ತಪ್ಪು ಮಾಹಿತಿಯನ್ನು ಪಾಲಕರಿಗೆ ನೀಡಿ ಈಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

news18-kannada
Updated:January 11, 2020, 7:41 PM IST
ನೆರೆ ಸಂತ್ರಸ್ತರಿಗೆ ನೀಡಿದ್ದ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿದ ರಾಯಚೂರು ಶಾಲಾ ಮುಖ್ಯ ಶಿಕ್ಷಕ; ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ನೊಟೀಸ್
ಅಕ್ರಮ ದಾಸ್ತಾನನ್ನು ಪರಿಶೀಲನೆ ನಡೆಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ.
  • Share this:
ರಾಯಚೂರು (ಜನವರಿ 11); ಇಲ್ಲಿನ ಜಾಲಹಳ್ಳಿ ಜಾಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ್​ ನೆರೆ ಸಂದರ್ಭದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಕ್ಕಿಯನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಇಂದು ಪರಿಶೀಲನೆ ನಡೆಸಿರುವ ದೇವದುರ್ಗಾ ಶಿಕ್ಷಣಾದಿಕಾರಿ ಎಸ್ ಎಂ ಹತ್ತಿ ದಾಸ್ತಾನು ಕುರಿತಂತೆ  ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ದೇವದುರ್ಗ ತಾಲೂಕಿನ ಜಾಲಹಳ್ಳಿ ಕನ್ಯಾ ಸರ್ಕಾರಿ ಪ್ರೌಡ ಶಾಲೆಯಲ್ಲಿ ಅನಧಿಕೃತವಾಗಿ 70 ಕ್ವಿಂಟಾಲ್ ಅಕ್ಕಿ ದಾಸ್ತಾನು ಇರುವುದು ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ. ನೆರೆ ಪ್ರವಾಹ ಸಂದರ್ಭದಲ್ಲಿ ಇದೇ ಶಾಲೆಯಲ್ಲಿ ಪರಿಹಾರ ಕೇಂದ್ರ ಪ್ರಾರಂಬಿಸಿ ನೆರೆ ಪೀಡಿತ ಸಂತ್ರಸ್ತರಿಗೆ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗಿತ್ತು.

ಪರಿಹಾರ ಕೇಂದ್ರ ಬಂದ್ ಮಾಡಿದ ಬಳಿಕ ದಾಸ್ತಾನನ್ನು ಹಾಗೇ ಉಳಿಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ದಾನಿಗಳು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿ ಅಕ್ಕಿ, ಬೆಳೆ, ಸೀರೆ, ಹಾಸಿಗೆ ಹೊದಿಕೆ ಸೇರಿದಂತೆ ಇತರೆ ದಿನಸಿ ಸಾಮಗ್ರಿ ನೀಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಶಾಲೆ ಮುಖ್ಯ ಶಿಕ್ಷಕ ವಿಜಯಕುಮಾರ್ ಎಸ್ ಬಿ ದಾಸ್ತುನಿನ ಬಗ್ಗೆ ತಪ್ಪು ಮಾಹಿತಿಯನ್ನು ಪಾಲಕರಿಗೆ ನೀಡಿ ಈಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪರಿಹಾರ ಕೇಂದ್ರದಲ್ಲಿದ್ದ ದಾಸ್ತಾನು ಎಲ್ಲವೂ ಖಾಲಿ ಎಂದು ಕಂದಾಯ ನಿರೀಕ್ಷಕ ದೇವರೆಡ್ಡಿ ಅವರಿಗೆ ಈ ಹಿಂದೆಯೇ ಲಿಖಿತ ಪತ್ರ ನೀಡಿದ್ದಾರೆ ಎಂದು ಕಂದಾಯ ಮೂಲಗಳು ತಿಳಿಸಿವೆ. ಆದರೆ, ಪರಿಹಾರ ಕೇಂದ್ರಕ್ಕೆ ಸರಬರಾಜಾಗಿದ್ದ ದಾಸ್ತಾನು ಶಾಲೆಯಲ್ಲಿಯೇ ಇಡಲಾಗಿತ್ತು. ಈಗಾಗಲೇ ಹಾಸಿಗೆ, ಹೊದಿಕೆ ,ಅಕ್ಕಿ, ಬೇಳೆ ಸೇರಿದಂತೆ ದವಸ ಧಾನ್ಯಗಳನ್ನು ಆತ್ಮಿಯರಿಗೆ ನೀಡಿರುವ ಆರೋಪಿಗಳು ಕೇಳಿ ಬರುತ್ತಿವೆ. ಪರಿಹಾರ ಕೇಂದ್ರದಲ್ಲಿ ಇದ್ದ 70 ಕ್ವಿಂಟಾಲ್ ದಾಸ್ತಾನು ಇರುವು ಕಳೆದ 3 ದಿನಗಳಿಂದ ಸಾರ್ವಜನಿಕರು ನೋಡಿದ್ದಾರೆ.

ಇದನ್ನು ಪ್ರಶ್ನಿಸಿದ್ದ ಕೆಲವರಿಗೆ ಮುಖ್ಯ ಶಿಕ್ಷಕ ಬಿಸಿಯೂಟದ ಅಕ್ಕಿ ಎಂದು ಸಾಬೂಬು ಹೇಳಿದ್ದಾರೆ. ಪ್ರಕರಣ ಗಂಭೀರತೆ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ವಿಜಯಕುಮಾರ್ ದಾಸ್ತಾನು ಬೇರೆ ಕಡೆ ರವಾನಿಸಿದ್ದಾರೆ. ಈ ಕುರಿತು ಗ್ರಾಮ ಪಂಚಾಯತಿ ಸದಸ್ಯ ನರಸಣ್ಣ ನಾಯಕ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದ ಬೆನ್ನಲ್ಲೇ ಇಂದು ಶಿಕ್ಷಣಾದಿಕಾರಿ ಎಸ್.ಎಂ. ಹತ್ತಿ ಶಾಲೆಗೆ ಬೇಟಿ ನೀಡಿ ದಾಸ್ತಾನು ಕೊಠಡಿ ಪರಿಶೀಲಿಸಿದ್ದು, ಈ ಬಗ್ಗೆ ತಾಲೂಕು ದಂಡಾಧಿಕಾರಿಗಳಿಗೆ 3 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ : ಚಪಕ್ ಸಿನಿಮಾ ಪಾಲಿಟಿಕ್ಸ್​; ಚಿತ್ರವನ್ನು ಬಹಿಷ್ಕರಿಸಿದ ಬಿಜೆಪಿಗರು, ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿ ಶುಭಕೋರಿದ ಯುವ ಕಾಂಗ್ರೆಸ್​
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ