Student Missing: ರಾಯಚೂರಿನಲ್ಲಿ ನಾಲ್ಕು ಜನ ವಿದ್ಯಾರ್ಥಿನಿಯರು ನಾಪತ್ತೆ

ಇಂದು ಕಾಲೇಜಿಗೆ DySP ವೆಂಕಟೇಶ್, ಪೊಲೀಸ್ ಇನ್​ಸ್ಪೆಕ್ಟರ್ ಗುಂಡೂರಾವ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಪ್ರಾಂಶುಪಾಲರನ್ನು ಭೇಟಿಯಾಗಿರುವ ಪೊಲೀಸರು ವಿದ್ಯಾರ್ಥಿಗಳ ಹಾಜರಾತಿ ಮತ್ತು ದಾಖಲಾತಿ ಕುರಿತು ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು (Raichur) ನಗರದ ಸರ್ಕಾರಿ ಪಿಯು ಕಾಲೇಜಿನ (PU College) ನಾಲ್ವರು ವಿದ್ಯಾರ್ಥಿನಿಯರು (Students) ಕಾಣೆಯಾಗಿದ್ದಾರೆ. ಶನಿವಾರ ಕಾಲೇಜಿಗೆ ತೆರಳೋದಾಗಿ ಹೊರಟ ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗಿಲ್ಲ. ಎರಡು ದಿನಗಳಿಂದ ಪೋಷಕರು ಮಕ್ಕಳನ್ನು ಹುಡುಕುತ್ತಿದ್ದಾರೆ. ಈ ಸಂಬಂಧ ವಿದ್ಯಾರ್ಥಿನಿಯರ ಪೋಷಕರು ರಾಯಚೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ (Police Station) ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಇಂದು ಕಾಲೇಜಿಗೆ DySP ವೆಂಕಟೇಶ್, ಪೊಲೀಸ್ ಇನ್​ಸ್ಪೆಕ್ಟರ್ ಗುಂಡೂರಾವ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಪ್ರಾಂಶುಪಾಲರನ್ನು ಭೇಟಿಯಾಗಿರುವ ಪೊಲೀಸರು ವಿದ್ಯಾರ್ಥಿಗಳ ಹಾಜರಾತಿ ಮತ್ತು ದಾಖಲಾತಿ ಕುರಿತು ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಶನಿವಾರ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ ಎಂದು ಪ್ರಾಂಶುಪಾಲರಾದ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣ ಬೆನ್ನಲ್ಲೇ ಕಾಲೇಜಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಪ್ರಾಂಶುಪಾಲರು ಮುಂದಾಗಿದ್ದಾರೆ.

ಆಲಮಟ್ಟಿ ಜಲಾಶಯಕ್ಕೆ ನುಗ್ಗಲೆತ್ನಿಸಿದ ಬುರ್ಖಾಧಾರಿ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ನಿಷೇಧಿತ ಆಲಮಟ್ಟಿ ಜಲಾಶಯಕ್ಕೆ ನುಗ್ಗಲು ಯತ್ನಿಸಿದ ತೃತೀಯ ಲಿಂಗಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಲಮಟ್ಟಿ ಜಲಾಶಯ ಸುತ್ತಮುತ್ತ ಬುರ್ಖಾಧಾರಿ ಸಂಶಯಾಸ್ಪದವಾಗಿ ಓಡಾಟ ನಡೆಸಿದ್ದನು. ಮೊದಲು ಬುರ್ಖಾದೊಳಗೆ ಇರೋದು ಮಹಿಳೆ ಅಲ್ಲ ಎಂಬುದನ್ನು ಪತ್ತೆ ಮಾಡಿದ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:  Mysuru News: ಮಂಡ್ಯ ರಮೇಶ್ ಬಳಿ ನಟನೆ ಕಲಿಯಿರಿ! ಹೀಗೆ ಅರ್ಜಿ ಸಲ್ಲಿಸಿ

ಹಾಸನ ಮೂಲದ ಕಿಶೋರ್ ಎಂಬಾತ ಬುರ್ಖಾಧರಿಸಿ ಓಡಾಡುತ್ತಿದ್ದ ತೃತೀಯ ಲಿಂಗಿ. ಮನೆಯಲ್ಲಿ ಮದುವೆ ಮಾಡುತ್ತಿರುವ ಕಾರಣ ಜಗಳ ಮಾಡಿ ಬಂದಿರೋದಾಗಿ ಕಿಶೋರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆಲಮಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್ ತಂತಿಗೆ ಸಿಲುಕಿ ಎರಡು ಕಾಡಾನೆ ಸಾವು

ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಗ್ರಾಮದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಎರಡು ಕಾಡಾನೆ ಸಾವನ್ನಪ್ಪಿವೆ. ನೆಲ್ಯಹುದಿಕೇರಿ ಗ್ರಾಮದ ಪ್ರಕಾಶ್ ಹಾಗೂ ಸುಮನ್ ಚಂಗಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಇಂದು ಬೆಳಗಿನ ಜಾವ ಘಟನೆ ನಡೆದಿದೆ.

11 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿತ್ತು. ಆದ್ದರಿಂದ ವಿದ್ಯುತ್ ಲೈನ್  ಕೆಳಗೆ ಜೋತಾಡುತ್ತಿದ್ದವು. ತೋಟದಲ್ಲಿ ಕಾಡಾನೆಗಳು ಹಾದು ಹೋಗುವಾಗ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಒಂದು ಗಂಡು ಮತ್ತೊಂದು ಹೆಣ್ಣಾನೆ ಸಾವನ್ನಪ್ಪಿವೆ. ಸ್ಥಳಕ್ಕೆ ಅರಣ್ಯ‌ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Suicide: ಪ್ರೀತಿಸಿದ ಹುಡುಗಿ ಸಿಗಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ

ಪ್ರೀತಿಸಿದ ಯುವತಿ (Girl) ಕೈಕೊಟ್ಟಳು, ಮೋಸ ಮಾಡಿದಳು ಅಂತ ನೊಂದು ಯುವಕನೋರ್ವ (Boy) ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಮಡಿವಾಳ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Madiwala Station Limit) ನಡೆದಿದೆ. ಮಣಿಕಂಠ ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ.

ಈತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾ ಇದ್ದು, ಇತ್ತೀಚಿಗೆ ಆಕೆ ಈತನನ್ನು ತೊರೆದು ಹೋಗಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ನೊಂದಿದ್ದ ಮಣಿಕಂಠ ತನ್ನ ರೂಮ್‌ನಲ್ಲೇ ನೇಣಿಗೆ (Hanging) ಶರಣಾಗಿದ್ದಾನೆ. ಸಾಯುವ ಮುನ್ನ ಆಡಿಯೋ (Audio) ಮಾಡಿದ್ದು, ಅದರಲ್ಲಿ ತನ್ನ ದುಃಖವನ್ನು ತೋಡಿಕೊಂಡಿದ್ದಾನೆ.

ಇದನ್ನೂ ಓದಿ:  Cabinet Expansion: ರಮೇಶ್ ಜಾರಕಿಹೊಳಿ, ಈಶ್ವರಪ್ಪಗೆ ಸಚಿವ ಸ್ಥಾನ ಸಿಗುತ್ತಾ? ದೆಹಲಿಯಲ್ಲಿ ಸಂಪುಟ ಕಸರತ್ತು

Zameer Ahmed Khan ಮುಂದೆ ಸಿಎಂ ಆಗುವ ನಾಯಕ: ಪಂಚಾಕ್ಷರಿ ಸ್ವಾಮೀಜಿ ಆರ್ಶಿವಚನ

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Congress MLA Zameer Ahmed Khan) ಮುಂದೆ ಸಿಎಂ ಆಗೋವವರು ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಕ್ಕುಂಡಿ (Yakkundi) ಗ್ರಾಮದ ಕುಮಾರೇಶ್ವರ ವಿರಕ್ತಮಠದ ಪಂಚಾಕ್ಷರಿ ಸ್ವಾಮೀಜಿ (Panchakshari Swamiji) ಭವಿಷ್ಯ ನುಡಿದಿದ್ದಾರೆ.
Published by:Mahmadrafik K
First published: