ಸಿನಿಮೀಯ ಶೈಲಿಯಲ್ಲಿ ರಾಡ್, ಪಿಸ್ತೂಲ್ ಬಳಸಿ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಈಗ ಪೊಲೀಸ್ ಲಾಕಪ್​ನಲ್ಲಿ

ಕೂಲಿಗಾಗಿ ಜನರನ್ನು ಕರೆದುಕೊಂಡು ಹೋಗುವವರು ಯಾವ ರೀತಿಯಾಗಿ ರಾಕ್ಷಸರಂತೆ ವರ್ತಿಸುತ್ತಾರೆ ಎನ್ನುವುದಕ್ಕೆ ಲಿಂಗಸಗೂರು ಪಟ್ಟಣ ಶನಿವಾರ ಸಾಕ್ಷಿಯಾಗಿತ್ತು. ಪೊಲೀಸರು 24 ಗಂಟೆಗಳಲ್ಲಿ ಈ ಪ್ರಕರಣ ಭೇದಿಸಿದ್ದಾರೆ.

news18
Updated:November 18, 2019, 7:19 AM IST
ಸಿನಿಮೀಯ ಶೈಲಿಯಲ್ಲಿ ರಾಡ್, ಪಿಸ್ತೂಲ್ ಬಳಸಿ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಈಗ ಪೊಲೀಸ್ ಲಾಕಪ್​ನಲ್ಲಿ
ಸಾಂದರ್ಭಿಕ ಚಿತ್ರ
 • News18
 • Last Updated: November 18, 2019, 7:19 AM IST
 • Share this:
ರಾಯಚೂರು(ನ. 18): ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಶನಿವಾರ ಹಾಡುಹಗಲೇ ನಾಲ್ಕು ಜನರ ತಂಡವೊಂದು ಬಸ್ ನಿಲ್ದಾಣದ ಬಳಿ ರಾಡು ಹಾಗು ಪಿಸ್ತೂಲ್ ತೋರಿಸಿ ಕಾರಿನಲ್ಲಿ ಅಪಹರಿಸಿತ್ತು. ಈ ಪ್ರಕರಣವು ಇಡೀ ಲಿಂಗಸಗೂರು ಪಟ್ಟಣವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಪ್ರಕರಣದ ಬೆನ್ನತ್ತಿದ ರಾಯಚೂರು ಪೊಲೀಸರು ಅಪಹರಣ ಮಾಡಿದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕೂಲಿಕಾರರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವ ಹಿನ್ನೆಲೆಯಲ್ಲಿ ನಡೆದ ಘಟನೆ ಇದಾಗಿದೆ. ಮಾರಲದಿನ್ನಿ ತಾಂಡದಲ್ಲಿ ಸಿಂದಗಿ ತಾಲೂಕಿನಲ್ಲಿ ಕಬ್ಬು ಕಡಿಯಲು ಕೂಲಿಗಳಿಗಾಗಿ ಕೃಷ್ಣಪ್ಪ ಎಂಬುವವರಿಗೆ 8 ಲಕ್ಷ ರೂಪಾಯಿ ಮುಂಗಡ ನೀಡಿದ್ದರು. ಆದರೆ ಕೃಷ್ಣಪ್ಪ ಕೂಲಿಗಳನ್ನು ಕಳುಹಿಸದೇ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಈ ಮಧ್ಯೆ ಐದು ಜನರು ಲಿಂಗಸಗೂರಿಗೆ ಬಂದು ಕೃಷ್ಣಪ್ಪನ ಸಹೋದರ ಶರಣಪ್ಪರನ್ನು ಪಿಸ್ತೂಲ್, ರಾಡುಗಳಿಂದ ಹೆದರಿಸಿ‌ ಕರೆದುಕೊಂಡು ಹೋಗಿದ್ದರು. ನಾವು ರೊಕ್ಕ ವಾಪಸ್ಸು ಕೊಡಲು ಸಿದ್ದವಿದ್ದೆವು. ಆದರೂ ಇವರು ನನ್ನನ್ನು ಕರೆದುಕೊಂಡು ಹೋಗಿದ್ದರು ಎಂದು ಅಪಹರಣಗೊಳಗಾದ ಶರಣಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಡಿ. 1 ರಿಂದ ಆಲಮಟ್ಟಿ, ನಾರಾಯಣಪುರ ಜಲಾಷಯಗಳಿಂದ ವಾರಾ ಬಂದಿ ಪದ್ಧತಿಯಡಿ ಹಿಂಗಾರು ಹಂಗಾಮಿಗೆ ನೀರು ಬಿಡುಗಡೆ: ಡಿಸಿಎಂ ಗೋವಿಂದ ಕಾರಜೋಳ

ಪೊಲೀಸರು ನಾಲ್ಕು ತಂಡದಲ್ಲಿ ಕಾರ್ಯಾಚರಣೆ ಮಾಡಿ ಆರೋಪಿಗಳಾದ ಚಂದನಸಾಬ್, ರಮೇಶ್, ಸಂತೋಷ್, ಮಿರಾಜ್ ಮತ್ತು ಶಬ್ಬೀರ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಂದ ರಾಡ್, ಕಾರ್ ಹಾಗು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಸವಾಲಾಗಿದ್ದ ಈ ಪ್ರಕರಣವನ್ನು 24 ಗಂಟೆಯಲ್ಲಿ ಪತ್ತೆ ಮಾಡಿ ಅಪಹರಣಕ್ಕೊಳಗಾದವನನ್ನು ಬಿಡಿಸಿರುವ ಪೊಲೀಸರ ಕಾರ್ಯವನ್ನು ರಾಯಚೂರು ಎಸ್​ಪಿ ಡಾ. ಸಿ.ಬಿ. ವೇದಮೂರ್ತಿ ಶ್ಲಾಘಿಸಿದ್ದಾರೆ.

ರಾಯಚೂರು ಜಿಲ್ಲೆಯ ಕೂಲಿಕಾರರು ಗುಳೇ ಹೋಗುವುದು ಸಾಮಾನ್ಯವಾಗಿದೆ. ಗುಳೆ ಹೋಗುವವರ ಪರಿಸ್ಥಿತಿಯ ಕರಾಳತೆಗೆ ಈ ಪ್ರಕರಣ ಸಾಕ್ಷಿಯಾಗಿದೆ.

(ವರದಿ: ಶರಣಪ್ಪ ಬಾಚಲಾಪುರ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,203,128

   
 • Total Confirmed

  1,677,664

  +74,012
 • Cured/Discharged

  372,939

   
 • Total DEATHS

  101,597

  +5,905
Data Source: Johns Hopkins University, U.S. (www.jhu.edu)
Hospitals & Testing centres