ರಾಯಚೂರು ಸ್ಥಳೀಯ ಸಂಸ್ಥೆ ಮೂರೂ ಪಕ್ಷಗಳಿಗು ಪ್ರತಿಷ್ಠೆಯ ಕಣ

news18
Updated:August 29, 2018, 11:27 AM IST
ರಾಯಚೂರು ಸ್ಥಳೀಯ ಸಂಸ್ಥೆ ಮೂರೂ ಪಕ್ಷಗಳಿಗು ಪ್ರತಿಷ್ಠೆಯ ಕಣ
news18
Updated: August 29, 2018, 11:27 AM IST
ಶರಣಪ್ಪ ಬಾಚಲಾಪುರ, ನ್ಯೂಸ್ 18 ಕನ್ನಡ

ರಾಯಚೂರು (ಆ.29): ರಾಜಕಾರಣದ ಮೊದಲು ಮೆಟ್ಟಿಲು ಎನ್ನುವ ಸ್ಥಳೀಯ ಸಂಸ್ಥೆಗಳ  ಚುನಾವಣೆಗೆ ರಾಯಚೂರು ಜಿಲ್ಲೆ ಸಜ್ಜುಗೊಂಡಿದೆ. ಜಿಲ್ಲೆಯಲ್ಲಿ ಮೂರು ಪಕ್ಷಗಳ ಮಧ್ಯೆ ಪೈಪೋಟಿ ನಡೆಯುತ್ತಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ನಾನಾ ಕಸರತ್ತು ಆರಂಭಿಸಿವೆ.

ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿ ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ 2 ನಗರಸಭೆ, 4 ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯತಿಗೆ ಚುನಾವಣೆ ನಡೆಯುತ್ತಿದೆ. ರಾಯಚೂರಿನ 35 ಸ್ಥಾನ, ಸಿಂಧನೂರು ನಗರಸಭೆಯ 31 ಸ್ಥಾನಗಳಲ್ಲಿ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ‌ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾನವಿ ಪುರಸಭೆಯ 27, ಲಿಂಗಸಗೂರು ಹಾಗೂ ಮುದಗಲ್ 23 ಸ್ಥಾನಗಳು ಹಾಗು ದೇವದುರ್ಗಾ ಪುರಸಭೆಯ 23 ಸ್ಥಾನಗಳಲ್ಲಿ ಒಂದು ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದ್ದು, ಈಗ 22 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಹಟ್ಟಿ ಪಟ್ಟಣ ಪಂಚಾಯತಿಯ 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ, 7 ನಗರ ಸ್ಥಳೀಯ ಚುನಾವಣೆಯಲ್ಲಿ ಒಟ್ಟು 7 ಸ್ಥಳೀಯ ಸಂಸ್ಥೆಗಳಲ್ಲಿ 4.06 ಲಕ್ಷ ಮತದಾರರು ತಮ್ಮ ಹಕ್ಜು ಚಲಾಯಿಸಲಿದ್ದಾರೆ. ಒಟ್ಟು 175 ಸ್ಥಾನಗಳಲ್ಲಿ 3 ಸ್ಥಾನ ಅವಿರೋಧ ಆಯ್ಕೆಯಾಗಿದ್ದರಿಂದ 172 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 172 ಸ್ಥಾನಗಳಿಗೆ 716 ಅಭ್ಯರ್ಥಿಗಳು‌ ಕಣದಲ್ಲಿದ್ದಾರೆ, ಈಗಾಗಲೇ ಎರಡು‌ ಸ್ಥಾನ ಗೆದ್ದಿರುವ ಕಾಂಗ್ರೆಸ್ ಆರಂಭಿಕ ಗೆಲುವು ಸಾಧಿಸಿದೆ, ಆದರೆ ಎಲ್ಲಾ ಕಡೆ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಈಗಾಗಲೇ ಬಹಿರಂಗಗೊಂಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದಲ್ಲಿ 8 ಜನ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮಾಜಿ ಶಾಸಕ ಸೈಯದ್ ಯಾಸೀನ್ ಹಾಗು ವಿಧಾನಪರಿಷತ್ ಸದಸ್ಯ ಎನ್ ಎಸ್ ಬೋಸರಾಜು ಬೆಂಬಲಿಗರ ಮಧ್ಯೆದ ಭಿನ್ನಾಭಿಪ್ರಾಯ ‌ಸ್ಪೋಟಗೊಂಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕ್ಷೇತ್ರದಲ್ಲಿ‌ ಗೆಲುವು ಸಾಧಿಸಿರುವ ಬಿಜೆಪಿ ನಗರ ಸ್ಥಳೀಯ ಸಂಸ್ಥೆಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಈ ಬಾರಿಯಲ್ಲಿ ಜಿಲ್ಲೆ ನಗರಸ್ಥಳೀಯ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಅದರಲ್ಲಿ ರಾಯಚೂರು ನಗರ ಶಾಸಕರು ಬಿಜೆಪಿಯವರಾಗಿದ್ದು, ಈ ಬಾರಿ ರಾಯಚೂರು ನಗರಸಭೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

ಈ ಮಧ್ಯೆ ಸಿಂಧನೂರು ಹಾಗು ಮಾನವಿಯಲ್ಲಿ ಜೆಡಿಎಸ್ ಶಾಸಕರಿದ್ದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಜೆಡಿಎಸ್ ನವರಾಗಿದ್ದರಿಂದ ಹೆಚ್ಚು ಸ್ಥಾನ ಗೆದ್ದು ತನ್ನ ಪ್ರಾಬಲ್ಯ ಮೆರೆಯಬೇಕಾಗಿದೆ. ಕುಮಾರಸ್ವಾಮಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಗರದ ಜನತೆ ನಮ್ಮನ್ನು ಬೆಂಬಲಿಸಲಿದ್ದಾರೆ ಎನ್ನುವುದು ಜೆಡಿಎಸ್ ವಾದವಾಗಿದೆ.

ಕಳೆದ ಬಾರಿ ರಾಯಚೂರು, ದೇವದುರ್ಗಾ, ಮಾನವಿ ಮುದಗಲ್ ಕಾಂಗ್ರೆಸ್, ದೇವದುರ್ಗಾದಲ್ಲಿ ಬಿಜೆಪಿ‌ ಹಾಗು ಲಿಂಗಸಗೂರಿನಲ್ಲಿ‌ ಜೆಡಿಎಸ್ ಅಧಿಕಾರದಲ್ಲಿತ್ತು. ಈಗ ಮೂರು ಪಕ್ಷಗಳು ಪ್ರತಿಷ್ಠೆಯಾಗಿ ಚುನಾವಣೆ ಎದುರಿಸುತ್ತಿವೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...