ರಾಯಚೂರು ಪ್ರವಾಹ ಸಂತ್ರಸ್ತರ ಬಗ್ಗೆ ತಲೆಕೆಡಿಸಿಕೊಳ್ಳದ ರಾಜ್ಯ ಸರ್ಕಾರ: ಒಂದೊತ್ತು ಊಟಕ್ಕೂ ಪರದಾಡುತ್ತಿರುವ ಜನ

ಹೌದು, ಪ್ರವಾಹ ಸಂದರ್ಭದಲ್ಲಿ ಮಾತ್ರ ಈ ಗ್ರಾಮಸ್ಥರ ಸ್ಥಳಾಂತರಿಸುವ ಜಿಲ್ಲಾಡಳಿತ ಅಧಿಕಾರಿಗಳು ನಂತರ ಇತ್ತ ಮುಖ ಮಾಡುವುದಿಲ್ಲ. ಈ ಬಾರಿಯೂ ಅದೇ ರೀತಿ ಜಿಲ್ಲಾಡಳಿತ ನಿರ್ಲಕ್ಷ್ಯ ಕಾರಣದಿಂದಾಗಿ ಇಲ್ಲಿನ ಕುಟುಂಬಗಳು ಕಾಡು ಮನುಷ್ಯರಂತೆ ಬದುಕುವಂತಾಗಿದೆ.ಇವರು ತಮ್ಮ ವಾಸ ಸ್ಥಳಕ್ಕೆ ಹೋಗಬೇಕೆಂದರೆ  ನಾಡದೋಣಿಯನ್ನು ಹಾಕಿಕೊಂಡು ನದಿ‌ ದಾಟಬೇಕಾಗಿದೆ.

ಯಡಿಯೂರಪ್ಪ- ಶ್ರೀರಾಮುಲು

ಯಡಿಯೂರಪ್ಪ- ಶ್ರೀರಾಮುಲು

  • Share this:
ರಾಯಚೂರು(ಡಿ.28): ಕಳೆದ ಆಗಸ್ಟ್​​ನಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾದ ಕಾರಣದಿಂದ ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚಾಗಿತ್ತು. ಇದರಿಂದ ನದಿಪಾತ್ರದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದರು. ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಮುಂಜಾಗ್ರತಾ ಕ್ರಮವಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿತ್ತು. ಆದರೀಗ ಅದೇ ಜನ ಮತ್ತೆ ಆತಂಕದಲ್ಲಿ ಬದುಕುತ್ತಿದ್ದಾರೆ.

ಹೌದು, ಪ್ರವಾಹ ಸಂದರ್ಭದಲ್ಲಿ ಮಾತ್ರ ಈ ಗ್ರಾಮಸ್ಥರ ಸ್ಥಳಾಂತರಿಸುವ ಜಿಲ್ಲಾಡಳಿತ ಅಧಿಕಾರಿಗಳು ನಂತರ ಇತ್ತ ಮುಖ ಮಾಡುವುದಿಲ್ಲ. ಈ ಬಾರಿಯೂ ಅದೇ ರೀತಿ ಜಿಲ್ಲಾಡಳಿತ ನಿರ್ಲಕ್ಷ್ಯ ಕಾರಣದಿಂದಾಗಿ ಇಲ್ಲಿನ ಕುಟುಂಬಗಳು ಕಾಡು ಮನುಷ್ಯರಂತೆ ಬದುಕುವಂತಾಗಿದೆ.ಇವರು ತಮ್ಮ ವಾಸ ಸ್ಥಳಕ್ಕೆ ಹೋಗಬೇಕೆಂದರೆ  ನಾಡದೋಣಿಯನ್ನು ಹಾಕಿಕೊಂಡು ನದಿ‌ ದಾಟಬೇಕಾಗಿದೆ.

ರಾಯಚೂರು ನಡುಗಡ್ಡೆಯಲ್ಲಿ ಬೆಳೆಯಲ್ಲಾ ನಾಶವಾಗಿದೆ. ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡ ಜನ ತಮ್ಮ ಮಕ್ಕಳನ್ನು ಓದಿಸಲಾಗದೆ ಪರದಾಡುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳು ಕಾಣುತ್ತಿರುವುದು ಲಿಂಗಸಗೂರು ತಾಲೂಕಿನ ಕರಕಲ ಗಡ್ಡೆ ಮತ್ತು ಓಂಕಾರಮ್ಮನಗಡ್ಡೆ ಹಾಗೂ ಮಾದರಗಡ್ಡೆಯಲ್ಲಿ. ಕೃಷಿಯನ್ನೇ ನಂಬಿ ಬದುಕುತ್ತಿದ್ದ ಜನರ ಬದುಕು ಈಗ ಹೀನಾಯ ಸ್ಥಿತಿಯಲ್ಲಿದೆ. ಸರ್ಕಾರವೂ ಇತ್ತ ತಲೆ ಹಾಕದೆ ಜನ ಭಯಭೀತರಾಗಿದ್ದಾರೆ.

ಕೃಷ್ಣಾ ನದಿ ಸಮೀಪ ಪ್ರವಾಹ ಬಂದಾಗ ಜಿಲ್ಲಾಡಳಿತ ಹರಸಾಹಸ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುತ್ತಾರೆ. ಆಗ ನಿಮಗೆ ತಕ್ಷಣ ಭೂಮಿ ಮನೆ ನೀಡುತ್ತವೆ ಎಂದು ಭರವಸೆ ನೀಡುತ್ತಾರೆ. ಆದರೆ ಪ್ರವಾಹದ ನಂತರ ಇವರನ್ನು ಮರೆತುಬಿಡುತ್ತಾರೆ. ನಿಮಗೆ ಮನೆ ಭೂಮಿ ಭರವಸೆ ನೀಡಿ ಕರೆದುಕೊಂಡು ಹೋದವರು, ಈಗ ನಾಲ್ಕು ತಿಂಗಳಾದರೂ ಪರಿಹಾರ ನೀಡಿಲ್ಲ.

ಇದನ್ನೂ ಓದಿ: ‘ಕನ್ನಡ ಭಾಷೆ ಮತ್ತು ಸಂಸ್ಕೃತಿ ಗೌರವಿಸುವುದು ನಮ್ಮ ಜವಾಬ್ದಾರಿ‘: ಖಾಸಗಿ ಸಂಸ್ಥೆಗಳಿಗೆ ಹೈಕೋರ್ಟ್​​​ ಛೀಮಾರಿ

ಇವರನ್ನು ಸರ್ಕಾರ ಗಂಜಿ ಕೇಂದ್ರದಲ್ಲಿದ್ದ ಇರಿಸಿತ್ತು. ಈಗ ಗಂಜಿಕೇಂದ್ರ ಬಂದ್​ ಆಗಿದ್ದು, ಮತ್ತೆ ಗಡ್ಡೆಗೆ ಮರಳಿದ್ದಾರೆ. ಗಡ್ಡೆಗಳಲ್ಲಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ತಿನ್ನಲು ಏನು ಇಲ್ಲದ ಸ್ಥಿತಿ ಇದರಿಂದ ಸುಮಾರು ಕುಟುಂಬಗಳು ಗುಳೇ ಹೋಗಬೇಕಾಗಿದೆ. ಬೆಳೆ ಪರಿಹಾರ ಸೇರಿದಂತೆ ಯಾವುದೇ ಪರಿಹಾರ ನೀಡದ ಹಿನ್ನಲೆಯಲ್ಲಿ ಅವರೆಲ್ಲೆರೂ ದಿಕ್ಕು ಕಾಣದಂತಾಗಿದ್ದಾರೆ. ಗಡ್ಢೆಗಳಲ್ಲಿ ಪ್ರವಾಹವಿರುವ ಹಿನ್ನೆಲೆಯಲ್ಲಿ ಸುಮಾರು 20 ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಈ ಬಗ್ಗೆ ಲಿಂಗಸಗೂರು ತಹಸೀಲ್ದಾರ ಕೇಳಿದರೆ ಬೆಳೆ ಪರಿಹಾರ ನೀಡಲು ಸಮಿಕ್ಷೆ ಪೂರ್ಣವಾಗಿ ಹಣ ಬಿಡುಗಡೆಯಾಗುತ್ತದೆ. ಈ ಗಡ್ಡೆಗಳ ಸ್ಥಳಾಂತರಕ್ಕೆ ಭೂ ಸ್ವಾದೀನ ಪಡಿಸಿಕೊಳ್ಳಲು ಅವರಿಗೆ ಭೂಮಿ ನೀಡುವ ಕುರಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಅಲ್ಲದೇ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು, ನೆರೆ ಪರಿಹಾರ ವಿಳಂಭವಾಗಿದೆ. ಸರ್ಕಾರ ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.
Published by:Ganesh Nachikethu
First published: