ಉತ್ತಮ ಬೆಳೆ ಕೈಸೇರಿದ್ದರೂ ಬೆಲೆ ಇಲ್ಲದೆ ಕಂಗಾಲಾದ ರಾಯಚೂರು ರೈತ; ಶೀಘ್ರ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ

ಈ ವರ್ಷ ಉತ್ತಮ ಮಳೆಯಾಗಿದ್ದರಿಂದ 62,666 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಪ್ರತಿ ಹೆಕ್ಟರ್ ಗೆ 3.72 ಕ್ವಿಂಟಾಲ್ ತೊಗರಿ ಇಳುವರಿ ಬರಲಿದೆ. ಇದರಿಂದಾಗಿ 2.33 ಲಕ್ಷ ಕ್ವಿಂಟಾಲ್ ತೊಗರಿ ಬೆಳೆಯನ್ನು ಅಂದಾಜಿಸಲಾಗಿದೆ. ಹೀಗಾಗಿ ಸಾಮಾನ್ಯವಾಗಿ ಈ ಭಾಗದ ರೈತರು ಈ ಬಾರಿ ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ದುರಾದೃಷ್ಟವಶಾತ್​ ಈಗಾಗಲೇ ಭತ್ತ ಮತ್ತು ತೊಗರಿಯನ್ನು ಕಟಾವು ಮಾಡಿ 2 ತಿಂಗಳೇ ಕಳೆದಿದ್ದರೂ ಬೆಳೆಗೆ ತಕ್ಕ ಬೆಲೆ ಮಾತ್ರ ಸಿಗುತ್ತಿಲ್ಲ.

news18-kannada
Updated:January 14, 2020, 6:13 PM IST
ಉತ್ತಮ ಬೆಳೆ ಕೈಸೇರಿದ್ದರೂ ಬೆಲೆ ಇಲ್ಲದೆ ಕಂಗಾಲಾದ ರಾಯಚೂರು ರೈತ; ಶೀಘ್ರ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ
ಪ್ರಾತಿನಿಧಿಕ ಚಿತ್ರ.
  • Share this:
ರಾಯಚೂರು (ಜನವರಿ 14); ಕಳೆದ ಮೂರು ವರ್ಷ ಭೀಕರ ಬರ ಅನುಭವಿಸಿದ್ದ ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ತಡವಾಗಿಯಾದರೂ ಉತ್ತಮ ಮಳೆಯಾಗಿದೆ. ಕೃಷ್ಣಾ ಹಾಗೂ ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿದ್ದರೂ ರೈತನಿಗೆ  ಉತ್ತಮ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದೆ. ಇದರಿಂದ ಅತ್ತ ಬರ ಉತ್ತಮ ಬೆಳೆಬಂದರೂ ರೈತನಿಗೆ ಮಾತ್ರ ಬೆಲೆಯೂ ಇಲ್ಲ ಲಾಭವೂ ಇಲ್ಲ ಎಂಬಂತಾ ಸ್ಥಿತಿ ನಿರ್ಮಾಣವಾಗಿದೆ.

ಕೃಷ್ಣೆ ಹಾಗೂ ತುಂಗಭದ್ರಾ ನದಿಗಳ ಮಧ್ಯೆ ಇದ್ದರೂ ರಾಯಚೂರು ಜಿಲ್ಲೆ ಸದಾ ಬರಗಾಲವನ್ನು ಅನುಭವಿಸುವ ಜಿಲ್ಲೆಗಳಲ್ಲೊಂದು. ನಾರಾಯಣಪುರ ಹಾಗು ತುಂಗಭದ್ರಾ ಜಲಾಶಯದಿಂದ ನೀರಾವರಿ ಸೌಲಭ್ಯವಿದ್ದರೂ ಸಮರ್ಪಕ ಮಳೆ ಇಲ್ಲದೆ ಜಲಾಶಯಗಳು ನೀರಿಲ್ಲದೆ ಒಣಗಿದ್ದವು. ಇದರಿಂದಾಗಿ ಕಳೆದ ಮೂರು ವರ್ಷ ಇಲ್ಲಿನ ರೈತರು ನಿರಂತರ ಬರ ಅನುಭವಿಸಿದ್ದರು. ಆದರೆ, ಈ ಬಾರಿ ತಡವಾಗಿಯಾದರೂ ಉತ್ತಮ ಮಳೆಯಾಗಿತ್ತು. ಮಹಾಪ್ರವಾಹದಿಂದಾಗಿ ನಾಲೆಗೆ ನೀರು ಹರಿದುಬಂದಿತ್ತು.

ಇದರಿಂದಾಗಿ ಹರ್ಷಗೊಂಡಿದ್ದ ಜಿಲ್ಲೆಯ ರೈತ ಭತ್ತ ಮತ್ತು ತೊಗರಿಯನ್ನು ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತವನ್ನು ಬಿತ್ತನೆ ಮಾಡುವ ಗುರಿ ಇದ್ದು ಈಗ 1.08 ಲಕ್ಷ ಹೆಕ್ಟರ್ ಭತ್ತವನ್ನು ಬಿತ್ತನೆ ಮಾಡಲಾಗಿದೆ.  ಪ್ರತಿ ಹೆಕ್ಟರ್ 42.31 ಕ್ವಿಂಟಾಲ್ ಭತ್ತದ ಇಳುವರಿ ಬರುತ್ತಿದೆ. 7.6 ಲಕ್ಷ ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ.

ಇದೇ ರೀತಿ ಈ ವರ್ಷ ಉತ್ತಮ ಮಳೆಯಾಗಿದ್ದರಿಂದ 62,666 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಪ್ರತಿ ಹೆಕ್ಟರ್ ಗೆ 3.72 ಕ್ವಿಂಟಾಲ್ ತೊಗರಿ ಇಳುವರಿ ಬರಲಿದೆ. ಇದರಿಂದಾಗಿ 2.33 ಲಕ್ಷ ಕ್ವಿಂಟಾಲ್ ತೊಗರಿ ಬೆಳೆಯನ್ನು ಅಂದಾಜಿಸಲಾಗಿದೆ. ಹೀಗಾಗಿ ಸಾಮಾನ್ಯವಾಗಿ ಈ ಭಾಗದ ರೈತರು ಈ ಬಾರಿ ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ದುರಾದೃಷ್ಟವಶಾತ್​ ಈಗಾಗಲೇ ಭತ್ತ ಮತ್ತು ತೊಗರಿಯನ್ನು ಕಟಾವು ಮಾಡಿ 2 ತಿಂಗಳೇ ಕಳೆದಿದ್ದರೂ ಬೆಳೆಗೆ ತಕ್ಕ ಬೆಲೆ ಮಾತ್ರ ಸಿಗುತ್ತಿಲ್ಲ.

ಮಾರುಕಟ್ಟೆಯಲ್ಲಿ ಭತ್ತ ಹಾಗು ತೊಗರಿ ದರ ಅತ್ಯಂತ ಕಡಿಮೆ ಇದೆ. ರೈತ ಉತ್ತಮ ಬೆಲೆಗಾಗಿ ಕಾಯುತ್ತಿದ್ದಾನೆ. ಇನ್ನೂ ಸರ್ಕಾರ ಸಕಾಲಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನೂ ತೆರೆದಿಲ್ಲ. ಹೀಗಾಗಿ ರೈತರು ತಮ್ಮ ಬೆಳೆಯನ್ನು ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ರೈತರು ಖರೀದಿ ಕೇಂದ್ರಕ್ಕಾಗಿ ಕಾಯಿಯುತ್ತಿದ್ದಾರೆ. ಈ ಮಧ್ಯೆ ಬೆಂಬಲ ಬೆಲೆಯಲ್ಲಿ ಭತ್ತ ಹಾಗು ತೊಗರಿಯನ್ನು ಖರೀದಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ತೊಗರಿಗೆ ಕೇಂದ್ರ ಸರಕಾರ 4,800 ರೂ ಹಾಗೂ ಈ ಮೊತ್ತಕ್ಕೆ ರಾಜ್ಯ ಸರಕಾರ 300 ರೂಪಾಯಿ ಸಹಾಯಧನ ನೀಡಲು ನಿರ್ಧರಿಸಿ ರೈತರಿಂದ ನೊಂದಣಿ ಕಾರ್ಯ ಆರಂಭಿಸಬೇಕಾಗಿದೆ. ಇನ್ನೂ ಭತ್ತವನ್ನು 1815 ಹಾಗೂ 1835 ರೂ ಪ್ರತಿ ಕ್ವಿಂಟಾಲ್ ಖರೀದಿಸಲು ಭತ್ತದ ಖರೀದಿ ಕೇಂದ್ರ ಈಗಾಗಲೇ ಆರಂಭಿಸಲಾಗಿದೆ. ಆದರೆ, ಮಾರುಕಟ್ಟೆಯಲ್ಲೂ ಇದೇ ದರವಿದೆ. ಅಲ್ಲದೆ, ಖರೀದಿ ಕೇಂದ್ರಕ್ಕೆ ತಂದು ದಾಖಲೆಗಳನ್ನು ನೀಡಬೇಕಾಗಿರುವದರಿಂದ ರೈತರು ಖರೀದಿ ಕೇಂದ್ರದತ್ತ ಸುಳಿಯುತ್ತಿಲ್ಲ. ಈ ಮಧ್ಯೆ ಭತ್ತವನ್ನು ಪ್ರತಿ ಕ್ವಿಂಟಾಲಿಗೆ 2,500 ರೂಪಾಯಿಯಂತೆ ಖರೀದಿಸಲು ಒತ್ತಾಯಿಸಿದ್ದು ಅದಕ್ಕೆ ರಾಜ್ಯ ಸರಕಾರ 2000 ರೂಪಾಯಿಯಂತೆ ಖರೀದಿಸುವ ಭರವಸೆ ನೀಡಿದೆ.

ಆದರೆ, ಇನ್ನೂ ಆದೇಶ ಬಂದಿಲ್ಲ ಈ ಗೊಂದಲದ ಮಧ್ಯೆ ರೈತರು ಎಪಿಎಂಸಿ ಗಳಲ್ಲಿ ಅನಿವಾರ್ಯವಾಗಿ ತಮ್ಮ ಬೆಳೆಯನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಮುಂದೆ ಖರೀದಿ ಕೇಂದ್ರಗಳು ಆರಂಭವಾದರು ಅವುಗಳು ರೈತರಿಗಿಂತ ವ್ಯಾಪಾರಿಗಳಿಗೆ ಅನುಕೂಲ ಎನ್ನಲಾಗುತ್ತಿದೆ.ರಾಯಚೂರು ಎಪಿಎಂಸಿಗೆ ನಿತ್ಯ 10 ಸಾವಿರ ಕ್ವಿಂಟಾಲ್ ತೊಗರಿ ಮಾರಾಟಕ್ಕಾಗಿ ಬರುತ್ತಿದೆ. ಈಗ ಮಾರುಕಟ್ಟೆಯಲ್ಲಿ ತೊಗರಿಯ ದರ ಸರಾಸರಿ 5,220 ರೂ ಇದೆ. ಭತ್ತಕ್ಕೆ 1,753 ರೂ. ಇದೆ. ಸರಕಾರದ ಗೊಂದಲ ನೀತಿಯಿಂದಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಆರಂಭವಾಗದೆ ರೈತ ಸಂಕಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ : ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಪ್ರತ್ಯೇಕ ಸಮಿತಿ ರಚಿಸಿ - ವ್ಯಾಜ್ಯ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಿ ; ಶಂಕರ್ ಅಂಬಲಿ ಆಗ್ರಹ
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ