ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಬೀದಿಗಿಳಿದು ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು

ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆ ಮಾಡಿರಬಹುದು ಎಂದು ಆಕೆಯ ತಂದೆ ನಾಗರಾಜ ನೇತಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • News18
  • Last Updated :
  • Share this:
ರಾಯಚೂರು (ಏ.18) : ಇಂಜಿನಿಯರಿಂಗ್​ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಫಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ಸಾವನ್ನಪ್ಪಿರುವ ಮಧು ಪತ್ತಾರ  ಅವಳನ್ನು ಆತ್ಮಹತ್ಯೆ ಮಾಡಿಕೊಂಡವಳಂತೆ ಬಿಂಬಿಸಲಾಗಿದೆ. ಅದು ಆತ್ಮಹತ್ಯೆ ಅಲ್ಲ ಕೊಲೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಬೀದಿಗಿಳಿದಿದ್ದಾರೆ.

ಎಪ್ರಿಲ್ 16 ರಂದು ರಾಯಚೂರಿನ ಮಾಣಿಕ್ ಪ್ರಭು ದೇವಸ್ಥಾನದ ಗುಡ್ಡದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಬಹುತೇಕ ಕೊಳತೆ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು, ಈ ಶವವು ರಾಯಚೂರು ನಗರದ ಐಡಿಎಸ್ಎಂಟಿ ಬಡಾವಣೆಯಲ್ಲಿರುವ ನಾಗರಾಜ ಪತ್ತಾರ ಎಂಬುವವರ ಮಗಳು ಎಂದು ಗುರುತಿಸಲಾಗಿತ್ತು. ಈ ವಿದ್ಯಾರ್ಥಿನಿಯು ನಗರದ ನವೋದಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು. ಎಪ್ರಿಲ್ 15 ರಂದು ಮುಂಜಾನೆ ಕಾಲೇಜಿಗೆ ಹೋಗುತ್ತೇನೆ ಎಂದು ಹೋದವಳು ನಾಪತ್ತೆಯಾಗಿದ್ದಳು. ಮೂರು ದಿನಗಳ ಕಾಲ ಆಕೆ ಮನೆಗೆ ಬಾರದಿದ್ದಾಗ ತಂದೆ ತಾಯಿ ಹುಡುಕುತ್ತಾರೆ. ಆಗ ಗುಡ್ಡದಲ್ಲಿ ಆ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.

ಗಿಡಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಪತ್ತೆಯಾಗಿದ್ದಳು. ನೇಣು ಹಾಕಿರುವ ಸ್ಥಿತಿ ಹಾಗು ಆಕೆ ದೇಹದಲ್ಲಿ ಸುಟ್ಟಿರುವಂತೆ ಕಲೆ ಇರುವದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆ ಮಾಡಿರಬಹುದು ಎಂದು ಆಕೆಯ ತಂದೆ ನಾಗರಾಜ ನೇತಾಜಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಘಟನೆಯ ನಂತರ ವಿದ್ಯಾರ್ಥಿ ಸಂಘಟನೆಗಳು ಈಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಮಧು ಸಾವಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿ ಇಂದು ಕಾಲೇಜು ಮಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಈ ಘಟನೆಯು ದೆಹಲಿಯ ನಿರ್ಭಯ ಪ್ರಕರಣದಂತೆ ಇದೆ. ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಸಾಧ್ಯತೆ. ಈ ಪ್ರಕರಣದಿಂದಾಗಿ ರಾಯಚೂರಿನಲ್ಲಿ ಮಹಿಳೆಯರಲ್ಲಿ ಭಯ ಉಂಟಾಗಿದೆ. ಅದಕ್ಕಾಗಿ ಪೊಲೀಸರು ತನಿಖೆ ಮಾಡಿ ಈ ಪ್ರಕರಣ ಭೇದಿಸಬೇಕು ಎಂದು ವಿದ್ಯಾರ್ಥಿ ಗಳು ಆಗ್ರಹಿಸಿದ್ದಾರೆ. ಈ ಮಧ್ಯೆ, ಸುದರ್ಶನ ಯಾದವ್ ಎಂಬುವರ ಹೆಸರು ಪ್ರಕರಣದಲ್ಲಿ ಥಳುಕು ಹಾಕಿಕೊಂಡಿದೆ.

ಇಂಜಿನಿಯರಿಂಗ್​​ ವಿದ್ಯಾರ್ಥಿನಿ ಅಸನುಮಾನಸ್ಪದ ಸಾವಿನ ಬಗ್ಗೆ  ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟಿಸ್​​ ಫಾರ್​​ ಮಧು ಎನ್ನುವ ಅಭಿಯಾನ ಪ್ರಾರಂಭಿಸಲಾಗಿದೆ"ನಿನ್ನ ಸಾವು ಅಂಕ ಕಡಿಮೆ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಿ ಎಂದು ಹೇಳುತ್ತಿದ್ದಾರೆ, ಆದರೆ ಇದು ಸತ್ಯವಲ್ಲ, ನೀನು ಎಲ್ಲಾ ವಿಷಯಗಳಲ್ಲಿ ಪಾಸಾಗಿದ್ದೆ. ಈ ಘಟನೆಯ ಹಿಂದೆ ಸುದರ್ಶನ ಯಾದವ್ ಇದ್ದಾರೆ" ಎಂದು ಮಧುಳ ಅಕ್ಕ ತನ್ನ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಪ್ರೊಬೇಷನರಿ ಪಿಎಸ್ಐ ಅನುಮಾನಾಸ್ಪದ ಸಾವು; ತಲಾ 10 ಸಾವಿರ ನೆರವು ಘೋಷಿಸಿ ಮಾನವೀಯತೆ ಮೆರೆದ ಪ್ರಶಿಕ್ಷಣಾರ್ಥಿಗಳು

ಈ ಮಧ್ಯೆ ಈ ಪ್ರಕರಣದಲ್ಲಿ ಒಬ್ಬರನ್ನು ಪೊಲೀಸರು  ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ರಾಯಚೂರಿನಲ್ಲಿ ಈ ಪ್ರಕರಣವು ಈಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಪೊಲೀಸರು ಪ್ರಕರಣಕ್ಕೆ ಬೇಗ ತೆರೆ ಎಳೆಯಬೇಕಾಗಿದೆ. 
First published: