ಈರುಳ್ಳಿ ಬೆಳೆದು ಕಣ್ಣೀರು ಹಾಕುತ್ತಿರುವ ಬೆಳೆಗಾರ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಪ್ರತಿ ಎಕರೆಗೆ 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದು ಈಗ ಖರ್ಚಿಗೂ ಈರುಳ್ಳಿ ಬೆಳೆ ಇಲ್ಲ. ಲಕ್ಷಾಂತರ ಸಾಲ ಮಾಡಿಕೊಂಡು ಲಾಭದ ನಿರೀಕ್ಷೆಯಲ್ಲಿ 3 ಎಕರೆಯಿಂದ 15 ಎಕರೆವರೆಗೂ ರೈತರು ಬೆಳೆ ಹಾಕಿಕೊಂಡಿದ್ದರು. ಎಲ್ಲದೂ ಮಳೆ ಪಾಲಾಗಿದ್ದರಿಂದ ರೈತಾಪಿ ವರ್ಗವನ್ನು ಚಿಂತೆಗೀಡು ಮಾಡಿದೆ.

ಈರುಳ್ಳಿ ಬೆಳೆ

ಈರುಳ್ಳಿ ಬೆಳೆ

  • Share this:
ರಾಯಚೂರು(ಸೆ.16): ಈರುಳ್ಳಿ ಈಗ ರೈತನಿಗೆ ಕಣ್ಣೀರು ತರಿಸುತ್ತಿದೆ, ಕಷ್ಟ ಪಟ್ಟು ದುಡಿದು ಬೆಳೆದ ಈರುಳ್ಳಿ ಮಳೆಯಿಂದಾಗಿ ಕೊಳತೆ ಹೋಗಿದೆ.  ಇಳುವರಿಯೂ ಇಳಿಕೆಯಾಗಿದೆ.  ಮಾರುಕಟ್ಟೆಯಲ್ಲಿ ಈರುಳ್ಳಿ ತಂದರೆ ಗುಣಮಟ್ಟ ಸರಿ ಇಲ್ಲವೆಂದು ಈರುಳ್ಳಿ ಖರೀದಿಸುತ್ತಿಲ್ಲ. ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಮಾಡಲು ಮಾರುಕಟ್ಟೆಗೆ ತಂದರೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿದೆ ಇದರಿಂದಾಗಿ ಹೊಲದಲ್ಲಿಯೇ ಈರುಳ್ಳಿ ಕೊಳೆಯುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 1263 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಬಹುತೇಕ ಬೆಳೆಯು ಮಳೆಯಿಂದಾಗಿ ಹಾಳಾಗಿದೆ. ಅದರಲ್ಲಿಯೂ ಸಿಂಧನೂರು, ಲಿಂಗಸಗೂರು ಹಾಗು ಮಸ್ಕಿ ತಾಲೂಕಿನಲ್ಲಿ ಅತ್ಯಧಿಕ ಮಳೆಯೂ ಆಗಿದೆ, ಬೆಳೆಯು ಹಾಳಾಗಿದೆ. ಇದಕ್ಕೆ ಉದಾಹರಣೆಯಾಗಿ ತುಂಗಭದ್ರಾ ಎಡದಂಡೆ ನಾಲೆಯ ಕೆಳ ಭಾಗದಲ್ಲಿ ಸಂಪೂರ್ಣ ಭತ್ತ ಬೆಳೆದರೆ, ತುಂಗಭದ್ರಾ ಎಡದಂಡೆ ಮೇಲ್ಭಾಗದಲ್ಲಿ ಈರುಳ್ಳಿ ಸೇರಿದಂತೆ ಇತರ ಬೆಳೆ ಬೆಳೆದುಕೊಳ್ಳುತ್ತಾರೆ. ಈ ಬಾರಿ ಸತತ ಮಳೆಯಿಂದ ತುರ್ವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 80 ಹೇಕ್ಟರ್ ಪ್ರದೇಶ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದ್ದು ರೈತರು ನಿತ್ಯ ಕಣ್ಣೀರಿಡುತ್ತಿದ್ದಾರೆ.

ತಾಲೂಕಿನ ತುರ್ವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಲ್ಮಂಗಿ, ಗುಂಡ, ಗೊರಲೂಟಿ, ಹೊಗರನಾಳ,  ಗುಡಿಹಾಳ, ಹತ್ತಿಗುಡ್ಡ, ಹಿರೇಬೇರ‌್ಗಿ, ಚಿಕ್ಕಬೇ‌ರಿಗ, ಭೋಗಾಪುರ, ಕರುಡಚಿಲುಮೆ ಸೇರಿ ತುಂಗಭದ್ರಾ ಎಡದಂಡೆ ಮೇಲ್ಭಾಗದಲ್ಲಿ ಈರುಳ್ಳಿ ಬೆಳೆಯನ್ನು ರೈತರು ಹಾಕಿಕೊಂಡಿದ್ದು ಈ ಬಾರಿ ಮುಂಗಾರು ಆರಂಭದ ಮುಂಚೆಯೇ ಪ್ರಾರಂಭಗೊಂಡ ಮಳೆ ನಿರಂತರ ಆಗಾಗ ಸುರಿಯುತ್ತಿರುವುದು ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

Karnataka Weather: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಇಂದಿನಿಂದ 4 ದಿನ ಭಾರೀ ಮಳೆ ಸಾಧ್ಯತೆ

ಇತ್ತೀಚಿಗೆ ಬಿದ್ದ ಮಳೆಯೂ ಸಂಪೂರ್ಣ ಬೆಳೆ ಹಾಳಾಗಲು ಕಾರಣವಾಗಿದ್ದು ಈಗ ರೈತರ ಹೊಲದಲ್ಲಿ ಈರುಳ್ಳಿ ಕೊಳೆಯುತ್ತಿದೆ. ಇದನ್ನು ನೋಡಿಕೊಂಡ ರೈತರು ನಿತ್ಯಲೂ ಕಣ್ಣೀರಿಡುತ್ತಿದ್ದಾರೆ. ಪ್ರತಿ ಎಕರೆಗೆ 30 ರಿಂದ 40 ಸಾವಿರ ರೂ. ಖರ್ಚು ಮಾಡಿದ್ದು ಈಗ ಖರ್ಚಿಗೂ ಈರುಳ್ಳಿ ಬೆಳೆ ಇಲ್ಲ. ಲಕ್ಷಾಂತರ ಸಾಲ ಮಾಡಿಕೊಂಡು ಲಾಭದ ನಿರೀಕ್ಷೆಯಲ್ಲಿ 3 ಎಕರೆಯಿಂದ 15 ಎಕರೆವರೆಗೂ ರೈತರು ಬೆಳೆ ಹಾಕಿಕೊಂಡಿದ್ದರು. ಎಲ್ಲದೂ ಮಳೆ ಪಾಲಾಗಿದ್ದರಿಂದ ರೈತಾಪಿ ವರ್ಗವನ್ನು ಚಿಂತೆಗೀಡು ಮಾಡಿದೆ. ದುರಂತ ಎಂದರೆ ಬೆಳೆಗಳು ನಷ್ಟ ಹೊಂದಿದಾಗ ಬೆಳೆ ವಿಮೆ ಕೈ ಹಿಡಿಯುತ್ತದೆ.

ನೀರಾವರಿ ಪ್ರದೇಶವೆಂದಾಗಿರುವುದರಿಂದ ಬೆಳೆ ವಿಮೆಯ ಲಾಭವೂ ಇಲ್ಲ. ತೋಟಗಾರಿಕೆ ಬೆಳೆ ಅಭಿವೃದ್ಧಿಪಡಿಸುವ ಸರ್ಕಾರ ಬೆಳೆ ವಿಮೆ ಯೋಜನೆಯ ಲಾಭ ರೈತರಿಗೆ ಸಿಗದಂತಾಗಿರುವುದು ನೋವಿನ ಸಂಗತಿಯಾಗಿದೆ. ಬೆಳೆ ವಿಮೆ ಇದ್ದರೆ ಕನಿಷ್ಠ ರೈತರು ಖರ್ಚು ಮಾಡಿದ ಹಣವಾದರೂ ಸಿಗುತ್ತಿತ್ತು ಎನ್ನುವುದು ರೈತರ ಅಳಲಾಗಿದೆ. ರೈತರ ನೆರವಿಗೆ ಜನಪ್ರತಿನಿಧಿಗಳು ಬಾರದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನೂ ಸಹ ರೈತರು ನೀಡುತ್ತಿದ್ದಾರೆ.
Published by:Latha CG
First published: