HOME » NEWS » State » RAICHUR COTTON FARMER IN PROBLEM MAK

ರಾಯಚೂರಿನಲ್ಲಿ ಹತ್ತಿ ಬೆಳೆದ ರೈತ ಮಾರಾಟವಾಗದೆ ಕಂಗಾಲಾಗಿದ್ದಾನೆ; ಸರ್ಕಾರ ತುರ್ತಾಗಿ ಇತ್ತ ಗಮನಿಸಬೇಕಿದೆ

ರಾಯಚೂರು ಜಿಲ್ಲೆಯಲ್ಲಿ ಈ ವರ್ಷ ಒಟ್ಟು 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಒಣಭೂಮಿ ಪ್ರದೇಶದಲ್ಲಿ ಪ್ರತಿ ಹೆಕ್ಟರ್ ಗೆ 15-20 ಕ್ವಿಂಟಾಲ್ ಹಾಗೂ ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟರ್ ಗೆ 25 ಕ್ವಿಂಟಾಲ್ ಇಳುವರಿ ಬರುತ್ತಿದೆ.

news18-kannada
Updated:May 7, 2020, 4:22 PM IST
ರಾಯಚೂರಿನಲ್ಲಿ ಹತ್ತಿ ಬೆಳೆದ ರೈತ ಮಾರಾಟವಾಗದೆ ಕಂಗಾಲಾಗಿದ್ದಾನೆ; ಸರ್ಕಾರ ತುರ್ತಾಗಿ ಇತ್ತ ಗಮನಿಸಬೇಕಿದೆ
ಹತ್ತಿ ಬೆಳೆ
  • Share this:
ರಾಯಚೂರು: ಲಾಕ್ ಡೌನ್ ನಿಂದಾಗಿ ಹತ್ತಿ ಬೆಳೆದ ರೈತರು ಸಂಕಷ್ಷಕ್ಕೆ ಸಿಲುಕಿದ್ದಾರೆ, ರಾಯಚೂರು ಜಿಲ್ಲೆಯ ಹತ್ತಿ ಬೆಳೆಗಾರರು ತಾವು ಬೆಳೆದ ಹತ್ತಿ ಮಾರಾಟ ಮಾಡಲು ಅಗದೆ ನಷ್ಟ ಅನುಭವಿಸುತ್ತಿದ್ದಾರೆ, ಏಷ್ಯಾದಲ್ಲಿಯೇ ಅತೀ ದೊಡ್ಡ ಹತ್ತಿ ಮಾರುಕಟ್ಟೆಯಾಗಿರುವ ರಾಯಚೂರು ಹತ್ತಿ ಮಾರುಕಟ್ಟೆಯೂ ಕೊರೋನಾ ತಡೆಗಾಗಿ ಮಾಡಿದ ಲಾಕ್ ಡೌನ್ ಹಿನ್ನಲೆ ಕಳೆದ ಒಂದುವರೆ ತಿಂಗಳನಿಂದ ಬಂದ್ ಆಗಿದೆ. ಪರಿಣಾಮ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ರಾಯಚೂರು ಜಿಲ್ಲೆಯಲ್ಲಿ ಈ ವರ್ಷ ಒಟ್ಟು 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಒಣಭೂಮಿ ಪ್ರದೇಶದಲ್ಲಿ ಪ್ರತಿ ಹೆಕ್ಟರ್ ಗೆ 15-20 ಕ್ವಿಂಟಾಲ್ ಹಾಗೂ ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟರ್ ಗೆ 25 ಕ್ವಿಂಟಾಲ್ ಇಳುವರಿ ಬರುತ್ತಿದೆ. ಡಿಸೆಂಬರ್ ನಿಂದ ಇಳುವರಿ ಆರಂಭವಾಗಿ ಮಾರ್ಚ್‌-ಏಪ್ರಿಲ್ ವರೆಗೂ ಐದು ಕಟಾವಿನಲ್ಲಿ ಹತ್ತಿ ಇಳುವರಿ ಬರುತ್ತದೆ.

ಈ ಮಧ್ಯೆ ಆರಂಭದಲ್ಲಿ ಬಂದ ಹತ್ತಿಯನ್ನು ರೈತ ಮಾರಾಟ ಮಾಡಿದ್ದಾನೆ. ನಾಲ್ಕು ಮತ್ತು ಐದನೆಯ ಕಟಾವು ಮಾಡಿದ ಹತ್ತಿ ಮಾರಾಟ ಮಾಡಿಲ್ಲ. ಇದರಿಂದ ಇಳುವರಿಯ ಶೇ 30 ರಷ್ಟು ಹತ್ತಿ ಮಾರಾಟವಾಗದೆ ರೈತನ ಬಳಿಯಲ್ಲಿಯೇ ಉಳಿದಿದೆ. ಮಾರ್ಚ 22 ರಿಂದ ಮಾರುಕಟ್ಟೆ ಸ್ಥಗಿತಗೊಂಡಿದ್ದರಿಂದ ಹತ್ತಿ ಮಾರಾಟ ಮಾಡಲು ಆಗಿಲ್ಲ. ಈ ಮಧ್ಯೆ ಜಿಲ್ಲಾಡಳಿತವು ಬೆಂಬಲ ಬೆಲೆಯಲ್ಲಿ 5005 ಹಾಗು 5335 ರೂಪಾಯಿಯಲ್ಲಿ ಖರೀದಿಸಲು ಮೂರು ಮಿಲ್ ಗಳಿಗೆ ಪರವಾನಿಗೆ ನೀಡಿದೆ.

ಮಿಲ್ ಗಳಲ್ಲಿ ಸಿಸಿಐನಿಂದ ಖರೀದಿಸಲು ಒಂದು ವಾರದ‌ ಹಿಂದೆಯೇ ಆರಂಭಿಸಲು ಪರವಾನಿಗೆ ನೀಡಿದ್ದರೂ ಕಳೆದ ಮೂರು ದಿನಗಳ ಹಿಂದೆ ಭುವಾಲ್ ಇಂಡಸ್ಟ್ರೀಸ್ ಮಿಲ್ ಮಾತ್ರ ಆರಂಭವಾಗಿದೆ. ಸಿಸಿಐಯಲ್ಲಿ ಹತ್ತಿ ಮಾರಾಟ ಮಾಡಲು ಸಾವಿರಾರು ರೂಪಾಯಿ ಖರ್ಚು ಮಾಡಿ ಮಾರಾಟಕ್ಕೆ ತಂದರೆ ಇಲ್ಲಿ ಹತ್ತಿಯಲ್ಲಿ ತೇವಾಂಶ ಅಧಿಕವಾಗಿದೆ. ಹತ್ತಿಯು ನಿಗಿದಿ ಪ್ರಮಾಣದ ನೂಲ ಬರುವುದಿಲ್ಲ ಎಂದು ರಿಜೆಕ್ಟ್ ಮಾಡುತ್ತಿದ್ದಾರೆ.

ಇದರಿಂದಾಗಿ ಮಾರಾಟಕ್ಕೆ‌ ತಂದ ಹತ್ತಿಯನ್ನು ವಾಪಸ್ಸು ತೆಗೆದುಕೊಂಡು ಹೋಗಬೇಕು, ಇಲ್ಲವೇ ಕೊನೆಗೆ ಮಿಲ್ ಮಾಲೀಕನಿಗೆ ದುಂಬಾಲು ಬಿದ್ದು ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಕೇವಲ ಒಂದೇ ಕಡೆ ಮಾರಾಟವಾಗುತ್ತಿರುವ ಸಿಸಿಐನಲ್ಲಿ ಹತ್ತಿ ರಿಜೆಕ್ಟ್ ಆದರೆ ಮಾರಾಟಕ್ಕೆ ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಇದರಿಂದ ಲಕ್ಷಗಟ್ಟಲೆ ಕ್ವಿಂಟಾಲ್ ಹತ್ತಿ ಮಾರಾಟವಾಗದೆ ರೈತನ ಬಳಿ ಉಳಿದಿದೆ.

ಈಗ ಮಳೆಗಾಲ ಆರಂಭವಾಗುತ್ತಿದೆ. ಮಳೆಗಾಲದ ಮುನ್ನ ಹತ್ತಿ ಮಾರಾಟ ಮಾಡಬೇಕು. ಈ ಹಿನ್ನಲೆ ಹತ್ತಿ ಮಾರಾಟಕ್ಕೆ ಜಿಲ್ಲಾಡಳಿತ ಅನುಕೂಲ ಮಾಡಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : Killer Hornets - ಕೊರೋನಾ ಆಯ್ತು, ಅಮೆರಿಕ ಪ್ರವೇಶಿಸಿದ ಚೀನಾದ ಮಾರಕ ಕಿಲ್ಲರ್ ಕಡಜಗಳು
Youtube Video
First published: May 7, 2020, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories