ಶಿಕ್ಷಕಿಯೇ ಇಲ್ಲದಿದ್ದರೂ ವೇತನ; ಸರ್ಕಾರಕ್ಕೆ ವಂಚಿಸಿದ ಬಿಇಒ, ಗುಮಾಸ್ತ

ದೇವದುರ್ಗ ತಾಲೂಕಿನ ಗಡ್ಡಿತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಶರಣಬಸಮ್ಮ ಹಾಗು ವಿಜಯಲಕ್ಷ್ಮಿ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇವರ ಹೊರತಾಗಿ ಮತ್ತೊಬ್ಬ ಶಿಕ್ಷಕಿ ಕೂಡ ಇಲ್ಲಿದ್ದು, ಇವರು ಕೇವಲ ದಾಖಲೆಗಷ್ಟೇ ಸೀಮಿತವಾಗಿದ್ದಾರೆ. ಸಂಬಳ ಪಡೆಯುವ ಈ ಶಿಕ್ಷಕಿಯನ್ನು ಈ ಶಾಲೆಯಲ್ಲಿ ಕಂಡವರಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು (ಜ.22): ಇಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿದೆ. ಅದಕ್ಕಾಗಿ ಪ್ರತಿತಿಂಗಳು ವೇತನವನ್ನು ಕೂಡ ನೀಡಲಾಗುತ್ತಿದೆ. ಆದರೆ, ವಿಪರ್ಯಾಸ ಎಂದರೆ ಆ ಶಿಕ್ಷಕರು ಒಂದು ದಿನವೂ ಮಕ್ಕಳಿಗೆ ಪಾಠ ಮಾಡಿಲ್ಲ. ಆದರೆ, ತಿಂಗಳಾಯಿತು ಎಂದರೇ ಸಂಬಳ ಏಣಿಸುವುದನ್ನು ಮರೆಯುವುದಿಲ್ಲ. 

ವಿಚಿತ್ರ ಈ ಎಲ್ಲಾ ಘಟನೆಯ ಸೂತ್ರಧಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅವರ ಗುಮಾಸ್ತ. ಸರ್ಕಾರಕ್ಕೆ ಯಾವ ರೀತಿ ವಂಚಿಸಿ ವ್ಯವಸ್ಥೆಯನ್ನು ದುರುಪಯೋಗ ಪಡಿಸಬಹುದು ಎಂಬುದಕ್ಕೆ ಸಾಕ್ಷಿ ಈ ಘಟನೆಯಾಗಿದೆ.

 

ದೇವದುರ್ಗ ತಾಲೂಕಿನ ಗಡ್ಡಿತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಶರಣಬಸಮ್ಮ ಹಾಗು ವಿಜಯಲಕ್ಷ್ಮಿ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇವರ ಹೊರತಾಗಿ ಮತ್ತೊಬ್ಬ ಶಿಕ್ಷಕಿ ಕೂಡ ಇಲ್ಲಿದ್ದು, ಇವರು ಕೇವಲ ದಾಖಲೆಗಷ್ಟೇ ಸೀಮಿತವಾಗಿದ್ದಾರೆ. ಸಂಬಳ ಪಡೆಯುವ ಈ ಶಿಕ್ಷಕಿಯನ್ನು ಈ ಶಾಲೆಯಲ್ಲಿ ಕಂಡವರಿಲ್ಲ.ಶರಣಮ್ಮ ಎಂಬ ಈ ಮಹಿಳೆ 2019ರಿಂದ ನಾಲ್ಕು ತಿಂಗಳು ಕಾಲ ಸಂಬಳ ಪಡೆಯುತ್ತಿದ್ದಾರೆ. ಈ ಕುರಿತು ಶಿಕ್ಷಕರಿಗೆ ಕೇಳಿದರೆ, ಆ ಹೆಸರಿನ ಯಾವುದೇ ಶಿಕ್ಷಕರಿಲ್ಲ ಎನ್ನುತ್ತಾರೆ. ಇನ್ನು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕೇಳಿದರೆ ಸಿಡಿಮಿಡಿಗೊಳ್ಳುತ್ತಾರೆ. ಸಂಬಳ ನೀಡುವ ನಿಮಗೆ ಮಾಹಿತಿ ಇಲ್ಲ ಎಂದರೇ ಕೇಳಲು ಬಂದವರ ಮೇಲೆ ದೌರ್ಜನ್ಯ ತೋರುತ್ತಾರೆ.

ಯಾರೀ ಶಿಕ್ಷಕಿ? 

ನಾಲ್ಕು ತಿಂಗಳಿನಿಂದ ಸಂಬಳ ಪಡೆಯುತ್ತಿರುವ ಶರಣಮ್ಮ ಅಸಲಿಗೆ ಬಿಇಒ ಕಚೇರಿ ಗುಮಾಸ್ತನ ಹೆಂಡತಿ ಹೆಸರು. ಶಿಕ್ಷಕಿಯಲ್ಲದಿದ್ದರೂ ಅವರು ಸದ್ಯ ಶಿಕ್ಷಕಿ. ಬಿಇಒ ಎಸ್​ಎಂ ಹತ್ತಿ ಸಹಾಯದಿಂದ ಗುಮಾಸ್ತ ಈ ಹುದ್ದೆಯನ್ನು ಸೃಷ್ಟಿಸಿದ್ದು, ಈ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ವಂಚನೆ ಎಸಗುತ್ತಿದ್ದಾರೆ.

ಶಿಕ್ಷಕರ ಹಾಜರಾತಿ ಕುರಿತು ಬಿಇಒ ಕಚೇರಿಯೇ ದಾಖಲೆ ನೀಡಬೇಕಾದ ಹಿನ್ನೆಲೆ ಈ ರೀತಿ ಸಂಚು ರೂಪಿಸಿದ್ದಾರೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ದಾಖಲೆಗಳೊಂದಿಗೆ ಬಿಇಒ ಹಾಗು ಡಿಡಿಪಿಐಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ.

ಇದನ್ನು ಓದಿ: ಹಕ್ಕುಪತ್ರ ವಿತರಿಸುವಲ್ಲಿ ತಾರತಮ್ಯ; ಶಾಸಕ ಡಿಸಿ ತಮ್ಮಣ್ಣಗೆ ಘೇರಾವ್

ಪ್ರಕರಣ ಬಯಲಾಗುತ್ತಿದ್ದಂತೆ ಗುಮಾಸ್ತ ಬಸವರಾಜ ಎರಡು ದಿನಗಳಿಂದ ಕಚೇರಿಗೆ ಬಂದಿಲ್ಲ.  ಪ್ರಕರಣವನ್ನು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿ ಇದರಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿ ಇಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ.
First published: