ಕೊರೋನಾ ಆತಂಕ ಹಿನ್ನಲೆ; ರಾಯಚೂರಿನ ಪ್ರಸಿದ್ಧ ಅಂಬಾಮಠ ಜಾತ್ರೆ ರದ್ದು

ಬನದ ಹುಣ್ಣಿಮೆಯ ನಂತರ ದೇವಿಗಳ ಜಾತ್ರೆ ನಡೆಯುವುದು ವಾಡಿಕೆ. ಅದರಂತೆ ಸಿಂಧನೂರು ತಾಲೂಕಿನ ಸೋಮಲಾಪುರ ಬಳಿಯಲ್ಲಿರುವ ಸಿದ್ದ ಪರ್ವತವು ಅಂಬಾಮಠವೆಂದೆ ಖ್ಯಾತಿ ಹೊಂದಿದೆ. ಅಂಬಾ ಮಠವು ಈ ಭಾಗದಲ್ಲಿ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿದೆ.

ರಾಯಚೂರಿನ ಪ್ರಸಿದ್ಧ ಅಂಬಾಮಠ

ರಾಯಚೂರಿನ ಪ್ರಸಿದ್ಧ ಅಂಬಾಮಠ

  • Share this:
ರಾಯಚೂರು(ಜ.27): ರಾಯಚೂರು ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಅಂಬಾಮಠವು, ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಅವಧೂತ ಸಂಸ್ಕೃತಿಯ ಮಠವಾಗಿರುವ ಅಂಬಾಮಠದಲ್ಲಿ ಬನದ ಹುಣ್ಣಿಮೆಯಂದು ಪ್ರತಿ ವರ್ಷ ವಾರ್ಷಿಕ ಜಾತ್ರೆ ನಡೆಯುತ್ತಿದೆ. ಆದರೆ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಅಂಬಾಮಠದ ಜಾತ್ರೆಯನ್ನು ರಾಯಚೂರು ಜಿಲ್ಲಾಡಳಿತವು ರದ್ದುಗೊಳಿಸಿದೆ. ಇದರಿಂದಾಗಿ ಲಕ್ಷಾಂತರ ಭಕ್ತರಿಗೆ ನಿರಾಸೆಯಾಗಿದೆ.

ಸಾಮಾನ್ಯವಾಗಿ ಕಾರ್ತಿಕ ಮಾಸದ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ದೇವರ ಜಾತ್ರೆಗಳು ನಡೆಯುತ್ತವೆ. ರೈತರ ಸುಗ್ಗಿಯ ಕಾಲ ಹಾಗೂ ಸುಗ್ಗಿಯ ನಂತರ ದೇವರಿಗಾಗಿ ಜಾತ್ರೆಗಳು ನಡೆಯುತ್ತಿವೆ. ಅಂಥದರಲ್ಲಿ ಬನದ ಹುಣ್ಣಿಮೆಯ ನಂತರ ದೇವಿಗಳ ಜಾತ್ರೆ ನಡೆಯುವುದು ವಾಡಿಕೆ. ಅದರಂತೆ ಸಿಂಧನೂರು ತಾಲೂಕಿನ ಸೋಮಲಾಪುರ ಬಳಿಯಲ್ಲಿರುವ ಸಿದ್ದ ಪರ್ವತವು ಅಂಬಾಮಠವೆಂದೆ ಖ್ಯಾತಿ ಹೊಂದಿದೆ. ಅಂಬಾ ಮಠವು ಈ ಭಾಗದಲ್ಲಿ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿದೆ. ಅಂಬಾಮಠವು ಸಾಕ್ಷತ್ ಪಾರ್ವತಿಯ ಅವತಾರ ಎನ್ನಲಾಗುತ್ತಿದೆ. ಈ ದೇವಸ್ಥಾನದಲ್ಲಿ ಸಾಕ್ಷಾತ್ ಪರಮಾತ್ಮನು ದೇವಿಯೊಂದಿಗೆ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ.

ಕಾಂಗ್ರೆಸ್ ಪಕ್ಷ​​ ರೈತರ ಪರ ಡೋಂಗಿ ರಾಜಕಾರಣ ಮಾಡುತ್ತಿದೆ; ಸಚಿವ ಬಿ.ಶ್ರೀರಾಮುಲು

ಇದೇ ಕಾರಣಕ್ಕೆ 18ನೆಯ ಶತಮಾನದಲ್ಲಿ ದೇವಿ ಪುರಾಣ ಬರೆದಿರುವ ಚಿದಾನಂದ ಅವಧೂತರು ಪುರಾಣವನ್ನು ನಾಡಿನಾದ್ಯಂತ ಪಠಿಸುತ್ತಾರೆ. ಚಿದಾನಂದ ಅವಧೂತರಿಗೆ ದೇವಿ ಪುರಾಣ ಬರೆಯಲು ಪ್ರೇರಣೆ ನೀಡಿದ ಅಂಬಾಮಠವು ಪ್ರಸಿದ್ದಿ ಪಡೆದ ಮಠವಾಗಿದೆ. ಅಂಬಾಮಠಕ್ಕೆ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಬರುತ್ತಾರೆ. ಅಂಬಾಮಠಕ್ಕೆ ಬಹಳಷ್ಟು ಸಾಧು ಸಂತರು ಆಗಮಿಸುತ್ತಾರೆ. ಅವಧೂತ ಸಂಸ್ಕೃತಿಯ ಸಾಧು ಸಂತರು ಬರುತ್ತಿರುವುದರಿಂದ ಇಲ್ಲಿ ಸಾಧುಗಳು ಗಾಂಜಾ ಸೇದುತ್ತಾರೆ ಎನ್ನಲಾಗುತ್ತಿದೆ. ಪೊಲೀಸರ ನಿರ್ಬಂಧದ ಮಧ್ಯೆಯೂ ಸಾಧು ಸಂತರು ಗಾಂಜಾ ಸೇದುವದನ್ನು ತಡೆದಿದ್ದರೂ ಅಲ್ಲಲ್ಲಿ ಕದ್ದು ಮುಚ್ಚಿ ಗಾಂಜಾ ಸೇವನೆ ನಡೆಯುತ್ತಿದೆ ಎನ್ನಲಾಗಿದೆ.

ಈ ಮಧ್ಯೆ ಬನದ ಹುಣ್ಣಿಮೆಯ ದಿನದಂದು ಅಂಬಾದೇವಿ ರಥೋತ್ಸವ ನಡೆಯುತ್ತಿದೆ.  ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ರಥೋತ್ಸವದ ನಂತರ ಸುಮಾರು ಹದಿನೈದು ದಿನಗಳ ನಂತರವೂ ಇಲ್ಲಿ ಜಾತ್ರೆಯ ಪರಸೆ ಸೇರಿರುತ್ತದೆ.  ಇಂಥ ಜಾತ್ರೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಜನ ಒಂದೆಡೆ ಸೇರಿದರೆ ಸೋಂಕು ಹರಡುವ ಭೀತಿ ಇದೆ. ಇವುಗಳ ಮಧ್ಯೆ ಜಾತ್ರೆಗೆ ಹೊರ ರಾಜ್ಯದಿಂದ ಭಕ್ತರು ಬರುತ್ತಾರೆ, ಇಲ್ಲಿ ಸಾಮಾಜಿಕ ಅಂತರ, ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಕಷ್ಟ ಸಾಧ್ಯ. ಈ ಕಾರಣಕ್ಕಾಗಿ ಈ ಬಾರಿ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

ದೇವಿಯ ಭಕ್ತರು ಈ ಬಾರಿ ಜಾತ್ರೆಗಾಗಿ ಬರಬೇಡಿ. ಮುಂದೆ ಕೊರೋನಾ ಕಡಿಮೆಯಾದ ನಂತರ ಮುಂದಿನ‌ ವರ್ಷ ಜಾತ್ರೆಗೆ ಜನ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಜಾತ್ರೆ ರದ್ದುಗೊಳಿಸಿದ್ದರಿಂದ ಭಕ್ತರು ಸಹಕರಿಸಬೇಕೆಂದು ಸಿಂಧನೂರು ತಹಸೀಲ್ದಾರ ಮನವಿ ಮಾಡಿಕೊಂಡಿದ್ದಾರೆ. ದೇವಿ ಜಾತ್ರೆಯನ್ನು ಇದೇ ಪ್ರಥಮ ಬಾರಿಗೆ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಭಕ್ತರಿಗೆ ನಿರಾಸೆಯಾಗಿದೆ. ಕೊರೋನಾವು ಭಕ್ತರಿಗೆ ನಿರಾಸೆ ಮೂಡಿಸಿದೆ.
Published by:Latha CG
First published: