Raichur: ಅಪ್ರಾಪ್ತೆಯ ಪ್ರೀತಿಯಲ್ಲಿ ಬಿದ್ದ 2 ಮಕ್ಕಳ ತಂದೆ; ಮನೆಯವರು ವಿರೋಧಿಸಿದ್ದಕ್ಕೆ ಯುವತಿ ಆತ್ಮಹತ್ಯೆ

Raichur Crime: ಮದುವೆಯಾಗಿ ಎರಡು ಮಕ್ಕಳಿದ್ದರೂ 17 ವರ್ಷದ ಯುವತಿಯನ್ನು ಪ್ರೀತಿಸಿದ್ದ ನರಸಪ್ಪ ಆಕೆಯನ್ನು ಕರೆದುಕೊಂಡು ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದ. ವಿಷ ಸೇವಿಸಿದ ಯುವತಿ ಸಾವನ್ನಪ್ಪಿದ್ದಾಳೆ. ನರಸಪ್ಪ ಯುವತಿಗೆ ವಿಷ ಕುಡಿಸಿ, ತಾನು ಸಾರಾಯಿ ಕುಡಿದಿದ್ದಾನೆ ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.

ಸಾಯುವಾಗ ಕೈಯಲ್ಲಿ ಪ್ರೇಮಿಯ ಹೆಸರು ಬರೆದುಕೊಂಡ ಯುವತಿ

ಸಾಯುವಾಗ ಕೈಯಲ್ಲಿ ಪ್ರೇಮಿಯ ಹೆಸರು ಬರೆದುಕೊಂಡ ಯುವತಿ

  • Share this:
2 ಮಕ್ಕಳ ತಂದೆಯ ಪ್ರೀತಿಯ ಬಲೆಗೆ ಬಿದ್ದ ಅಪ್ರಾಪ್ತೆ: ಮನೆಯವರು ವಿರೋಧಿಸಿದ್ದಕ್ಕೆ ಆತ್ಮಹತ್ಯೆರಾಯಚೂರು (ಡಿ. 13): 17 ವರ್ಷದ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತನಿಗೆ ಮನೆಯವರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಆ ಯುವತಿಯೊಂದಿಗೆ ವಿಷ ಸೇವಿಸಿ ವಿವಾಹಿತ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಪೈದೊಡ್ಡಿ ಬಳಿ ನಡೆದಿದೆ. ಜಾಲಹಳ್ಳಿದೊಡ್ಡಿಯ ಯುವತಿಗೆ ಯರಜಂತಿಯ ನರಸಪ್ಪ ಎಂಬುವವರೊಂದಿಗೆ ಸಂಬಂಧವಿತ್ತು. ನರಸಪ್ಪನಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಆದರೂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ಬಗ್ಗೆ ಮನೆಯವರ ವಿರೋಧ ವ್ಯಕ್ತವಾಗಿತ್ತು. ಇದರಿಂದ ಬೇಸತ್ತು ಪೈದೊಡ್ಡಿ ಬಳಿಯಲ್ಲಿ ವಿಷ ಸೇವಿಸಿದ್ದಾರೆ.

ನರಸಪ್ಪನ ಕೈ ಮೇಲೆ ಮಹಾದೇವಿ ಎಂದು, ಮಹಾದೇವಿ ಕೈ ಮೇಲೆ ನರಸಪ್ಪ ಎಂದು ಬರೆದುಕೊಂಡಿದ್ದಾರೆ ವಿಷ ಸೇವಿಸಿದ ಯುವತಿ ಸಾವನ್ನಪ್ಪಿದ್ದು, ನರಸಪ್ಪನ ಸ್ಥಿತಿ ಗಂಭೀರವಾಗಿದೆ. ಆತನನ್ನು ಲಿಂಗಸಗೂರು ಆಸ್ಪತ್ರೆಗೆ ಸೇರಿಸಲಾಗಿದೆ. ಅಪ್ರಾಪ್ತ ಯುವತಿ ಸಾವಿಗೂ ಮುನ್ನ ಚೀಟಿ ಬರೆದಿದ್ದು, ನಮ್ಮ ಸಾವಿಗೆ ನಾವೇ ಕಾರಣ. ನಮ್ಮ ಶವಗಳನ್ನು ಯರಜಂತಿಯ ಮಾವಿನ ಗುಡಿಯ ಬಳಿ ಹೂಳಿ. ನಮ್ಮಲ್ಲಿಯ ಹಣ, ಬಂಗಾರ ಎಟಿಎಂ ನಮ್ಮ ಮಕ್ಕಳಿಗೆ ನೀಡಿ. ಪ್ರೀತಿಸೋದು ತಪ್ಪಾ? ಎಂದು ಬರೆದು ವಿಷ ಸೇವಿಸಿದ್ದಾಳೆ.

ನಿನ್ನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಪೈದೊಡ್ಡಿ ಬಳಿ ಅಪ್ರಾಪ್ತ ಅಪ್ರಾಪ್ತ ಯುವತಿ ಹಾಗೂ ವಿವಾಹಿತ ವಿಷ ಸೇವಿಸಿದ್ದು, ಅದರಲ್ಲಿ ಯುವತಿ ಸಾವನ್ನಪ್ಪಿದ್ದಾಳೆ. ವಿವಾಹಿತನನ್ನು ರಾಯಚೂರಿನ ರಿಮ್ಸ್ ಗೆ ದಾಖಲಿಸಲಾಗಿದ್ದು, ಈ ಘಟನೆಯಲ್ಲಿ ನರಸಪ್ಪ ಯುವತಿಗೆ ವಿಷ ಕುಡಿಸಿ, ತಾನು ಸಾರಾಯಿ ಕುಡಿದಿದ್ದಾನೆ ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ. ಯರಜಂತಿಯ ನರಸಪ್ಪ ಎಂಬ 37 ವರ್ಷದ ವಿವಾಹಿತ ಜಾಲಹಳ್ಳಿದೊಡ್ಡಿಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಪ್ರೇಮ ಪಾಶಕ್ಕೆ ಎಳೆದುಕೊಂಡಿದ್ದ. ನರಸಪ್ಪನಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ, ಆತ ನಿತ್ಯ ಆಟೋ ಓಡಿಸುತ್ತಿದ್ದ. ಜಾಲಹಳ್ಳಿದೊಡ್ಡಿಯಿಂದ ಬಾಲಕಿ ಗುರುಗುಂಟ ಹೈಸ್ಕೂಲಿಗೆ ಹೋಗುವಾಗ ಆಕೆಯೊಂದಿಗೆ ಸ್ನೇಹ ಬೆಳೆಸಿ ಪ್ರೀತಿಸಿದ್ದ. ಹದಿಹರೆಯದಲ್ಲಿರುವ ಬಾಲಕಿ ಆತನ ಪ್ರೇಮಪಾಶಕ್ಕೆ ಒಳಗಾಗಿದ್ದಳು.

ಇದನ್ನೂ ಓದಿ: ಬಿಕ್ಕಟ್ಟು ಬಗೆಹರಿಸುವುದು ಸದನದಲ್ಲಿ ರೋಮಾಂಚನಕಾರಿ ಚಿತ್ರ ನೋಡಿದ ಹಾಗಲ್ಲ; ಲಕ್ಷ್ಮಣ ಸವದಿಗೆ ಕಾಂಗ್ರೆಸ್ ಲೇವಡಿ

ಇಬ್ಬರೂ ಒಂದು ಬಾರಿ ಮನೆ ಬಿಟ್ಟು ಓಡಿ ಹೋಗಿದ್ದರು. ಈ ಸಂದರ್ಭದಲ್ಲಿ ನರಸಪ್ಪನ ವಿರುದ್ದ ಹಟ್ಟಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಬಾಲಕಿಯನ್ನು ರಾಯಚೂರಿನ ಬಾಲಮಂದಿರದಲ್ಲಿರಿಸಿದ್ದರು. ಈ ಮಧ್ಯೆ ಅಲ್ಲಿಯೂ ನಿತ್ಯ ಬಾಲಕಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ. ಕೊನೆಗೆ ಪಾಲಕರು ತಮ್ಮ ಮಗಳು ತಮ್ಮೊಂದಿಗೇ ಇರಲಿ ಎಂದುಕೊಂಡು ದುಡಿಯಲು ಹೋದ ಅವರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿಂದ ಡಿಸೆಂಬರ್ 8ರಂದು ಸಾಯಂಕಾಲ ನರಸಪ್ಪ ಬಾಲಕಿಯನ್ನು ಕರೆದುಕೊಂಡು ಬಂದಿದ್ದ. ಅಲ್ಲಿ ಕರೆದುಕೊಂಡು ಬರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಬೆಂಗಳೂರಿಗೆ ಬಂದ ನಂತರ ಲಿಂಗಸಗೂರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಾಲಕಿ ಬಂದಿದ್ದಳು. ಈ ಸಂದರ್ಭದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಮೇಲ್ವಿಚಾರಕಿ ಅನುರಾಧ ಎಂಬುವವರು ಬಾಲಕಿಯ ಕುಟುಂಬದವರಿಗೆ ಫೋನು ಮಾಡಿದ್ದರು. ಆಕೆಯನ್ನು ನಿಮ್ಮಲ್ಲಿಟ್ಟಿಕೊಳ್ಳಿ ಎಂದು ಹೇಳಿದ್ದರೂ ಮಹಿಳಾ ಸಾಂತ್ವನದವರು ನರಸಪ್ಪನೊಂದಿಗೆ ಕಳುಹಿಸಿದ್ದಾರೆ. ಇಬ್ಬರು ಸೇರಿ ಪೈದೊಡ್ಡಿ ಬಳಿಯಲ್ಲಿ ವಿಷ ಸೇವಿಸಿದ್ದಾರೆ. ಆದರೆ ಯುವತಿಗೆ ವಿಷ ಕುಡಿಸಿ ತಾನು ಸಾರಾಯಿ ಕುಡಿದು ವಿಷ ಕುಡಿಯುವ ನಾಟಕ ಮಾಡಿದ್ದಾನೆ ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ. ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ, ನರಸಪ್ಪನಿಗೆ ಚಿಕಿತ್ಸೆ ನಡೆದಿದೆ. ಈಗಾಗಲೇ 2 ವರ್ಷಗಳಿಂದ ಅಪ್ರಾಪ್ತೆಯ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮಹಿಳಾ ಸಾಂತ್ವನದವರು ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಠವಾಗಿದೆ. ಈ ಕುರಿತು ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
Published by:Sushma Chakre
First published: