ಕೋವಿಡ್-19 ಹಣ ದುರ್ಬಳಕೆ ಆರೋಪ; ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಅಮಾನತು
ಸರ್ಕಾರದ ವರ್ಗಾವಣೆ ಆದೇಶದ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ಭಜಂತ್ರಿ ಕೋರ್ಟ್ ಮೂಲಕ ಮತ್ತೆ ಅದೆ ಸ್ಥಳಕ್ಕೆ ವಾಪಸ್ ಆಗಿದ್ದರು. ವಾಪಸ್ ಬಂದಾಗಿನಿಂದಲೂ ಸ್ಥಳೀಯ ಶಾಸಕ ಐಹೋಳೆ ಹಾಗೂ ಭಜಂತ್ರಿ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿತ್ತು.
news18-kannada Updated:November 13, 2020, 3:56 PM IST

ಅಮಾನತುಗೊಂಡ ತಹಶೀಲ್ದಾರ
- News18 Kannada
- Last Updated: November 13, 2020, 3:56 PM IST
ಬೆಳಗಾವಿ(ನ.13): ಕೊರೋನಾ ಸಂದರ್ಭದಲ್ಲಿ ಯಾವುದೇ ಲೆಕ್ಕಾಚಾರ ಇಡದೆ ಮನಸ್ಸೋ ಇಚ್ಚೆ ಸರ್ಕಾರದ ಹಣವಮ್ನ ಖರ್ಚು ಮಾಡಿದ್ದಾರೆ ಎನ್ನುವ ಆರೋಪದ ಹಿನ್ನಲೆ ಬೆಳಗಾವಿ ಜಿಲ್ಲೆಯ ರಾಯಭಾಗ ತಹಶಿಲ್ದಾರ ಚಂದ್ರಕಾಂತ ಭಜಂತ್ರಿಯನ್ನ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾಡಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಚಂದ್ರಕಾಂತ ಭಜಂತ್ರಿ ರಾಯಬಾಗ ತಹಶಿಲ್ದಾರ ಆಗಿ ಬಂದಾಗಿನಿಂದಲೂ ಸರಿಯಾಗಿ ಕೆಲಸ ಮಾಡದೆ ಹಣ ದುರ್ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಮಾಡಿ ಕುಡಚಿ ಶಾಸಕ ಪಿ ರಾಜೀವ ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯನ್ನ ಮಂಡನೆ ಮಾಡಿದ್ದರು. ತಾಲೂಕಿನಲ್ಲಿ ಕೋವಿಡ್-19 ರ ನಿರ್ವಹಣೆಯ ಸಂದರ್ಭದಲ್ಲಿ ಯಾವ ಯಾವ ಕಾರಣಕ್ಕಾಗಿ ಮತ್ತು ಯಾವ ಸಂದರ್ಭದಲ್ಲಿ ಚಿಕಿತ್ಸೆ ಹಣವನ್ನ ಎಷ್ಟು ವೆಚ್ಚವನ್ನ ಭರಿಸಲಾಗಿದೆ. ಟಾಸ್ಕ್ ಫೋರ್ಸ್ ಸಮಿತಿಯ ಅನುಮೋದನೆ ಪಡೆಯದೆ ತಹಶೀಲ್ದಾರ ಅವರು ಲಕ್ಷಾಂತರ ಹಣವನ್ನ ದುರುಪಯೋಗ ಮಾಡಿದ್ದಾರೆ. ಇವರ ವಿರುದ್ದ ಯಾವ ಕ್ರಮ ಕೈಗೊಳ್ಳುತ್ತಿರಿ ಎಂದು ನಿಲುವಳಿಯನ್ನ ಮಂಡನೆ ಮಾಡಿದ್ದರು.
ಈ ಹಿನ್ನಲೆ ಸೆಪ್ಟೆಂಬರ್ 22 ರಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಚಿಕ್ಕೋಡಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಸಮಿತಿ ರಚನೆ ಮಾಡಿ ಆದೇಶ ಮಾಡಿದ್ದರು. ತನಿಖೆ ವೇಳೆ ತಹಶಿಲ್ದಾರ ಚಂದ್ರಕಾಂತ ಭಜಂತ್ರಿ ಕೋವಿಡ್-19 ಸೋಂಕು ನಿರ್ವಹಣೆ ವೇಳೆ ಬಂದ ಹಣವನ್ನು ಅಧಿಕಾರದ ದುರ್ಬಳಕೆ ಮಾಡಿಕೊಂಡು ಖರ್ಚು ಮಾಡಿದ ಹಣಕ್ಕೆ ಸರಿಯಾಗಿ ಯಾವುದೇ ಲೆಕ್ಕಪತ್ರಗಳನ್ನ ನಿರ್ವಹಣೆ ಮಾಡದೆ ಟಾಸ್ಕ್ ಫೋರ್ಸ್ ಕಮಿಟಿ ಗಮನಕ್ಕೂ ತರದೆ ಮನಸ್ಸೋ ಇಚ್ಚೆ ಹಣವನ್ನು ಖರ್ಚು ಮಾಡಿ ಕರ್ತವ್ಯ ಲೋಪವನ್ನ ಎಸಗಿರುವುದು ಕಂಡುಬಂದಿದೆ. ತಹಶಿಲ್ದಾರ ಮೇಲೆ ಶಿಸ್ತುಕ್ರಮ ಜರುಗಿಸಬಹುದು ಎಂದು ಸಮಿತಿ ಶಿಫಾರಸ್ಸು ಮಾಡಿ ಅಕ್ಟೋಬರ್ 21 ರಂದು ವರದಿ ನೀಡಿತ್ತು. ವರದಿ ಆಧರಿಸಿ ತಹಶಿಲ್ದಾರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕೂಡ ಆದೇಶ ಮಾಡಿದ್ರು. ಜಿಲ್ಲಾಧಿಕಾರಿ ವರದಿ ಆಧರಿಸಿ ತಹಶಿಲ್ದಾರ ಚಂದ್ರಕಾಂತ ಭಜಂತ್ರಿಯನ್ನ ತಕ್ಷಣಕ್ಕೆ ಜಾರಿಗೆ ಬರುವಂತೆ ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತ್ತು ಮಾಡಿ ಸರ್ಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿಆದೇಶ ಹೊರಡಿಸಿದ್ದಾರೆ.
ದಯವಿಟ್ಟು ಗಮನಿಸಿ! ಆನ್ಲೈನ್ನಲ್ಲಿ ಬಟ್ಟೆ ಖರೀದಿ ಮಾಡಿದ ನಂತರ ಹೀಗೂ ಆಗ್ಬೋದು!
ಶಾಸಕರ ಜೊತೆ ಕಿರಿಕ್ ಮಾಡಿಕೊಂಡಿದ್ದ ತಹಶೀಲ್ದಾರ
ಇನ್ನು ಇದಕ್ಕೂ ಮೊದಲು ರಾಯಬಾಗ ಶಾಸಕ ದುರ್ಯೋಧನ ಐಹೋಳೆ ಜೊತೆ ತಾಲೂಕಿನ ಕಂಕಣವಾಡಿ ಗ್ರಾಮದ ಸರ್ಕಾರಿ ಜಾಗ ಒತ್ತುವರಿ ಕುರಿತು ಕಿರಿಕ್ ಮಾಡಿಕೊಂಡಿದ್ದರು. ಒತ್ತುವಾರಿ ಆದ ಜಾಗವನ್ನ ತೆರವು ಗೊಳಿಸಲು ಮುಂದಾಗಿದ್ದ ತಹಶೀಲ್ದಾರರಿಗೆ ತೆರುವುಗೊಳಿಸದಂತೆ ಶಾಸಕರು ಹೇಳಿದ್ರು. ಆದ್ರೆ ತಹಶೀಲ್ದಾರ ಮಾತ್ರ ಒತ್ತುವರಿ ತೆರವಿಗೆ ಮುಂದಾಗಿದ್ದರಿಂದ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಭಜಂತ್ರಿಯನ್ನ ವರ್ಗಾವಣೆ ಮಾಡುವಂತೆ ಶಾಸಕ ಐಹೊಳೆ ಪತ್ರ ಬರೆದ ಹಿನ್ನಲೆ, ತಹಶೀಲ್ದಾರ ಭಜಂತ್ರಿಯನ್ನ ಸರ್ಕಾರ ವರ್ಗಾವಣೆ ಮಾಡಿತ್ತು.
ಕೋರ್ಟ್ ಮೊರೆ ಹೋಗಿ ವಾಪಸ್ ಬಂದಿದ್ದ ತಹಶೀಲ್ದಾರಇನ್ನು ಸರ್ಕಾರದ ವರ್ಗಾವಣೆ ಆದೇಶದ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ಭಜಂತ್ರಿ ಕೋರ್ಟ್ ಮೂಲಕ ಮತ್ತೆ ಅದೆ ಸ್ಥಳಕ್ಕೆ ವಾಪಸ್ ಆಗಿದ್ರು. ವಾಪಸ್ ಬಂದಾಗಿನಿಂದಲೂ ಸ್ಥಳೀಯ ಶಾಸಕ ಐಹೋಳೆ ಹಾಗೂ ಭಜಂತ್ರಿ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿತು. ಆದ್ರೆ ಕೊನೆಗೆ ಒಂದೆ ತಿಂಗಳ ಅವಧಿಯಲ್ಲಿ ಈಗ ಮತ್ತೆ ಸರ್ಕಾರದಿಂದ ತಹಶೀಲ್ದಾರ ಅಕ್ರಮ ಆರೋಪದಡಿ ಅಮಾನತುಗೊಂಡಿದ್ದಾರೆ.
ಒಟ್ಟಿನಲ್ಲಿ ಶಾಸಕರು ಮತ್ತು ತಹಶೀಲ್ದಾರರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ, ನನ್ನ ಬಳಿ ಎಲ್ಲಾ ದಾಖಲಾತಿಗಳು ಇವೆ. ನಾನು ಯಾವುದೇ ತಪ್ಪು ಮಾಡಿಲ್ಲ, ಸರ್ಕಾರದ ಆದೇಶ ಪ್ರಶ್ನಿಸಿ ಮತ್ತೆ ಕೆ.ಎ.ಟಿ ಮೊರೆ ಹೋಗುವುದಾಗಿ ತಹಶೀಲ್ದಾರ ಭಜಂತ್ರಿ ಹೇಳಿದ್ದಾರೆ.
ಈ ಹಿನ್ನಲೆ ಸೆಪ್ಟೆಂಬರ್ 22 ರಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಚಿಕ್ಕೋಡಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಸಮಿತಿ ರಚನೆ ಮಾಡಿ ಆದೇಶ ಮಾಡಿದ್ದರು. ತನಿಖೆ ವೇಳೆ ತಹಶಿಲ್ದಾರ ಚಂದ್ರಕಾಂತ ಭಜಂತ್ರಿ ಕೋವಿಡ್-19 ಸೋಂಕು ನಿರ್ವಹಣೆ ವೇಳೆ ಬಂದ ಹಣವನ್ನು ಅಧಿಕಾರದ ದುರ್ಬಳಕೆ ಮಾಡಿಕೊಂಡು ಖರ್ಚು ಮಾಡಿದ ಹಣಕ್ಕೆ ಸರಿಯಾಗಿ ಯಾವುದೇ ಲೆಕ್ಕಪತ್ರಗಳನ್ನ ನಿರ್ವಹಣೆ ಮಾಡದೆ ಟಾಸ್ಕ್ ಫೋರ್ಸ್ ಕಮಿಟಿ ಗಮನಕ್ಕೂ ತರದೆ ಮನಸ್ಸೋ ಇಚ್ಚೆ ಹಣವನ್ನು ಖರ್ಚು ಮಾಡಿ ಕರ್ತವ್ಯ ಲೋಪವನ್ನ ಎಸಗಿರುವುದು ಕಂಡುಬಂದಿದೆ.